ವಿಷಯಕ್ಕೆ ಹೋಗು

ಬೆಟ್ಟದ ಹುಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಟ್ಟದ ಹುಲಿ (ಚಲನಚಿತ್ರ)
ಬೆಟ್ಟದ ಹುಲಿ
ನಿರ್ದೇಶನಎ. ವಿ. ಶೇಷಗಿರಿರಾವ್
ನಿರ್ಮಾಪಕಶ್ರೀ ಭಗವತಿ
ಪಾತ್ರವರ್ಗರಾಜಕುಮಾರ್ ಜಯಂತಿ ಉದಯಕುಮಾರ್, ಎಂ.ಪಿ.ಶಂಕರ್
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಕೆ.ಜಾನಕಿರಾಂ
ಬಿಡುಗಡೆಯಾಗಿದ್ದು೧೯೬೫
ಚಿತ್ರ ನಿರ್ಮಾಣ ಸಂಸ್ಥೆಭಗವತಿ ಪ್ರೊಡಕ್ಷನ್ಸ್

೧೮೭೨ ರಲ್ಲಿ ಪೋಲೀಸ್ ಸೂಪರಿಂಟೆಂಡೆಂಟ್ ಒಬ್ಬನ ಹೆಂಡತಿಯನ್ನು ಆಕೆಯ ಹಸುಗೂಸಿನ ಸಮೇತ ಡಕಾಯತ ಭೈರವ ಮೋಸದಿಂದ ಅಪಹರಿಸಿ, ಹುಟ್ಟುವ ಮಗ ರಾಜನನ್ನು ಕಳ್ಳನಾಗಿ ಬೆಳೆಸುತ್ತಾನೆ. ರಾಜನ ಹೆತ್ತ ತಾಯಿಯನ್ನು, ರಾಜನಿಗೆ ಅತ್ತೆ ಎಂದು ಪರಿಚಯಿಸಿ ನಂಬಿಸುತ್ತಾನೆ. ರಾಜನಿಗೆ ಕಳ್ಳತನದ ವೃತ್ತಿ ಒಂದಿನಿತೂ ಹಿಡಿಸದು. ಮೊದಲ ಸಲ ನಂದಪುರದಲ್ಲಿ ಕಳ್ಳತನ ಮಾಡಲು ಹೋದಾಗ್ಗ್ಗೆ, ತನ್ನ ಸ್ವಂತ ತಂದೆಯನ್ನು ಕಂಡ ರಾಜ, ಏನೋ ಅವಿನಾಭಾವ ಸಂಬಂಧದಿಂದ ಮಾತನಾಡಿಸ ಹೊರಟಾಗ, ಭೈರವ ರಾಜನನ್ನು ದೂರಕರೆದು, ಕಳ್ಳತನ ಮಾಡದೇ ಇದ್ದ ಪಕ್ಷದಲ್ಲಿ ಆತನ ಅತ್ತೆಯನ್ನು ಕೊಲ್ಲುವುದಾಗಿ ಹೆದರಿಸುತ್ತಾನೆ. ಪೋಲೀಸ್ ಸೂಪರಿಂಟೆಂಡೆಂಟ್ ಮಗಳು, ವಾಸ್ತವದಲ್ಲಿ ಭೈರವನ ಮಗಳಾಗಿರುತ್ತಾಳೆ. ರಾಜ, ತನ್ನ ನಿಜ ತಂದೆ ತಾಯಿಯರನ್ನು ಕಂಡುಕೊಳ್ಳುವ ಬಗೆಯ ಕಥೆ ಈ ಚಿತ್ರದಲ್ಲಿದೆ.

ತಾರಾಗಣ

[ಬದಲಾಯಿಸಿ]

ಬೆಟ್ಟದ ಹುಲಿ at IMDb