ಬೆಂಕಿ ಇರುವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಕಿ ಇರುವೆ ಎಂದು ಕರೆಯಲ್ಪಡುವ ಕಟ್ಟಿರುವೆ ಸಮೂಹದಲ್ಲಿ ೨೮೫ ಪ್ರಭೇಧಗಳಿವೆ. ಇವುಗಳನ್ನು ಸಾಮಾನ್ಯವಾಗಿ ಬೆಳ್ಳುಳ್ಳಿ ಇರುವೆ, ಒಣ ಪ್ರದೇಶದ ಬೆಂಕಿ ಇರುವೆ ಮತ್ತು ಕೆಂಪು ಇರುವೆಗಳೆಂದು ಗುರುತಿಸಬಹುದು. ಇರುವೆ ದೇಹವನ್ನು ತಲೆ, ಎದೆ, ಹೊಟ್ಟೆ ಭಾಗವೆಂದು ಗುರುತಿಸಬಹುದು. ೨ ಮಿ.ಮೀ.ನಿಂದ ೬ಮಿ.ಮೀ ವರೆಗಿನ ದೇಹ ಗಾತ್ರದ ಇರುವೆಗಳಲ್ಲಿ ಬೆಂಕಿ ಇರುವೆ ಬಹಳ ಅಪಾಯಕಾರಿ. ಇದರ ಹೊಟ್ಟೆಯಲ್ಲಿರುವ ಟಾಕ್ಸಿಕ್ ಅಲ್ಕಾಲಾಯ್ಡ್ ವಿಷ ಇದರ ಬಾಯಿಯ ಮುಳ್ಳಿನಿಂದ ಕಚ್ಚಿದಾಗ ದೇಹ ಸೇರಿ ಭಾರಿ ಉರಿ ಊತ ಉಂಟು ಮಾಡುತ್ತದೆ. ಬೆಂಕಿ ಸುಟ್ಟಂತಹ ಅನುಭವವಾಗುವುದರಿಂದ ಇದನ್ನು ಬೆಂಕಿ ಇರುವೆ ಎಂದೇ ಗುರುತಿಸಲಾಗುತ್ತೆ. ಸಣ್ಣ ಗಾತ್ರದ ಇರು‍ವೆ ಮುಳ್ಳಿನಿಂದ ಕಡಿದ ಪಕ್ಷದಲ್ಲಿ ತಕ್ಷಣ ಚಿಕಿತ್ಸೆ ನೀಡಿದರೆ ಗುಣವಾಗುತ್ತೆ. ಆದರೆ ದೊಡ್ಡ ಗಾತ್ರದ ಬೆಂಕಿ ಇರುವೆಗಳು ಕಚ್ಚಿದರೆ ಪ್ರಾಣಕ್ಕೇ ಅಪಾಯಕಾರಿ. ಪ್ರತಿದಿನ ಬೆಂಕಿ ಇರುವೆ ಕಡಿತಕ್ಕೆ ವಿಶ್ವಾದ್ಯಂತ ಸರಾಸರಿ ೧೫ ಮಂದಿ ಸಾಯುತ್ತಾರೆ. ಪ್ರತಿವರುಷ ಕೋಟ್ಯಾಂತರ ರೂಪಾಯಿ ಬೆಳೆ ಹಾನಿಯಾಗುತ್ತಿದೆ.

ಭಾರತದ ಕೆಂಪು ಇರುವೆ ಅಥವಾ ಚಿಗುಳಿ[ಬದಲಾಯಿಸಿ]

ದ್ರವ ಆಹಾರದ ಕೊಡುಕೊಳ್ಳುವಿಕೆ (ಟ್ರೋಫೊಲಾಕ್ಸಿಸ್) ಓಕೋಫಿಲ್ಲಾ ಸ್ಮಾರಾಗ್ಡಿನಾ
  • ಕರ್ನಾಟಕದ ಮಲೆನಾಡಿನಲ್ಲಿ‘ವೀವರ್ ರೆಡ್’ ಎನ್ನುವ ಪುಟ್ಟ ಇರುವೆಗಳು ಕುತೂಹಲವನ್ನು ಉಂಟುಮಾಡುತ್ತವೆ. ಮಲೆನಾಡಿನಲ್ಲಿ ಇವನ್ನು ಚಿಗಳಿ, ಚಿಗುಳಿ, ಚವುಳಿ ಎಂದು ಕರೆಯುತ್ತಾರೆ. ಮರಗಳಲ್ಲಿ ಎಲೆಗಳನ್ನು ಒಟ್ಟು ಸೇರಿಸಿ ಗೂಡು ಕಟ್ಟಿ ವಾಸ ಮಾಡುತ್ತವೆ. ತಮ್ಮ ದೇಹದಿಂದ ಉತ್ಪತ್ತಿಯಾಗುವ ಒಂದು ಬಗೆಯ ರೇಷ್ಮೆಯನ್ನು ಉಪಯೋಗಿಸಿ, ಎಲೆಗಳನ್ನು ಎಳೆದು ಅಂಟು ಹಾಕಿ ಇವು ಗೂಡು ಕಟ್ಟುತ್ತವೆ. ಇವನ್ನು ಕೆಲವರು ಆಹಾರವಾಗಿಯೂ ಉಪಯೋಗಿಸುತ್ತಾರೆ. ಕಚ್ಚಿದರೆ ಸಾಮಾನ್ಯಕ್ಕೆ ಬಿಡುವುದಿಲ್ಲ. ಇವು ಬೇರೆ ದೇಶಗಳ ಬೆಂಕಿ ಇರುವೆಗಳಂತೆ ಮನುಷ್ಯರಿಗೆ ಇವುಗಳಿಂದ ಪ್ರಾಣಾಪಾಯವಿಲ್ಲ, ಮತ್ತು ಕಚ್ಚಿದರೆ ಸ್ವಲ್ಪ ದದ್ದುಗಳು ಏಳುತ್ತವೆ ಬೇಗ ಗುಣವಾಗುತ್ತವೆ. ಹುಳಿವಾಸನೆ ರುಚಿ ಇರುತ್ತವೆ. [೧][೨]

ಉಲ್ಲೇಖ[ಬದಲಾಯಿಸಿ]

  1. ಚಿಗಳಿ ದೋಸ್ತರು ಗೂಡು ಕಟ್ಟಿದ ಕಥೆ;ಆದಿತ್ಯ ಬೀಳೂರು;Published: 07 ಫೆಬ್ರವರಿ 2019,
  2. https://www.terminix.com/blog/home-garden/big-red-ants/ WHAT ARE THOSE BIG RED ANTS IN MY YARD?