ಭಾರತದ ಕೆಂಪು ಇರುವೆ ಅಥವಾ ಚಿಗುಳಿ
ಗೋಚರ
- ಕರ್ನಾಟಕದ ಮಲೆನಾಡಿನಲ್ಲಿ‘ವೀವರ್ ಯ್ಯಾಂಟ್’ ಎನ್ನುವ ಪುಟ್ಟ ಇರುವೆಗಳು ಕುತೂಹಲವನ್ನು ಉಂಟುಮಾಡುತ್ತವೆ. ಮಲೆನಾಡಿನಲ್ಲಿ ಇವನ್ನು ಚಿಗಳಿ, ಚಿಗುಳಿ, ಚವುಳಿ ಎಂದು ಕರೆಯುತ್ತಾರೆ. ಮರಗಳಲ್ಲಿ ಎಲೆಗಳನ್ನು ಒಟ್ಟು ಸೇರಿಸಿ ಗೂಡು ಕಟ್ಟಿ ವಾಸ ಮಾಡುತ್ತವೆ. ಇವು ನಮ್ಮಲ್ಲಿ ಮಾತ್ರವಲ್ಲದೆ ಶ್ರೀಲಂಕಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಆಸ್ಟ್ರೇಲಿಯಾಗಳಲ್ಲೂ ಕಂಡುಬರುತ್ತವೆ, ಆದರೆ ಅವು ಹೆಚ್ಚು ಉಗ್ರವಾದವು. ಚಿಗಳಿಗಳು ಗೂಡು ಕಟ್ಟುವ ಬಗೆ ಕುತೂಹಲಕರ. ತಮ್ಮ ದೇಹದಿಂದ ಉತ್ಪತ್ತಿಯಾಗುವ ಒಂದು ಬಗೆಯ ರೇಷ್ಮೆಯನ್ನು ಉಪಯೋಗಿಸಿ, ಎಲೆಗಳನ್ನು ಎಳೆದು ಅಂಟು ಹಾಕಿ ಇವು ಗೂಡು ಕಟ್ಟುತ್ತವೆ. ಇವನ್ನು ಕೆಲವರು ಆಹಾರವಾಗಿಯೂ ಉಪಯೋಗಿಸುತ್ತಾರೆ. ಕಚ್ಚಿದರೆ ಸಾಮಾನ್ಯಕ್ಕೆ ಬಿಡುವುದಿಲ್ಲ. ಇವು ಬೇರೆ ದೇಶಗಳ ಇರುವೆಗಳಂತೆ ಮನುಷ್ಯರಿಗೆ ಇವುಗಳಿಂದ ಪ್ರಾಣಾಪಾಯವಿಲ್ಲ, ಮತ್ತು ಸ್ವಲ್ಪ ದದ್ದುಗಳು ಏಳುತ್ತವೆ ಬೇಗ ಗುಣವಾಗುತ್ತವೆ. ಹುಳಿವಾಸನೆ ರುಚಿ ಇರುತ್ತವೆ. [೧][೨]
- ಗೂಡು ಕಟ್ಟುತ್ತಿರುವ ಫೋಟೋ-:[೧]
ಜೀವಿವರ್ಗೀಕರಣ
[ಬದಲಾಯಿಸಿ]- ಮುಖ್ಯ ಕಾರ್ಯಕರ್ತ ಚಿಗಳಿಗಳು ಸುಮಾರು 8-10-15 ಮಿಮೀ (0.31-0.79 ಇಂಚು) ಉದ್ದವಿರುತ್ತವೆ. ಮತ್ತು ಕಿರಿಯ ಇರುವೆಗಳು ದೊಡ್ಡವುಗಳ ಅರ್ಧದಷ್ಟು ಉದ್ದವಿರುತ್ತವೆ..
- ಚಿಗುಳಿಗಳು ಎರಡು ಹತ್ತಿರದ ನಿಕಟವಾದ ಜೀವಂತ ಜಾತಿಗಳನ್ನು ಹೊಂದಿವೆ. ಇರುವೆ ಜಾತಿಯ ಓಕೋಫಿಲ್ಲಾ (ಉಪಕುಟುಂಬ ಫಾರ್ಮಿನೀನೆ) ಗೆ ಸೇರಿವೆ. ಈ ಪ್ರಭೇದದ ಸಾಮಾನ್ಯ ಲಕ್ಷಣಗಳೆಂದರೆ ಉದ್ದನೆಯ ಮೊದಲ ಫಂನಿಕ್ಯುಲಾರ್ ವಿಭಾಗ, ಪ್ರೊಪೊಡಲ್ ಲೋಬ್ಗಳು ಇರುವಿಕೆ, ಕಿಬ್ಬೊಟ್ಟೆಯ ಉಪಕಾಂಡ (ಸೆಗ್ಮೆಂಟ್) 3ನೆಯ ಮಿಡ್ಹೈಟ್ನಲ್ಲಿರುವ ಹೆಲ್ಸಿಯಂ ಮತ್ತು ಮೆಸೊಸೊಮಾದ ಮೇಲೆ ಪ್ರತಿಫಲಿಸುವ ಗಾಸ್ಟರ್ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಗಂಡು ಉಗುರುಗಳುಳ್ಳ ಕಾಲುಗವಸುಗಳನ್ನು ಹೊಂದಿರುತ್ತವೆ. [೩]
ವಿತರಣೆ ಮತ್ತು ಆವಾಸಸ್ಥಾನ
[ಬದಲಾಯಿಸಿ]- ಈ ಚಗಳಿ ಕುಟುಂಬ - ಒ-ಲಾಂಗಿನೊಡಾವು ಉಷ್ಣವಲಯ (ಆಫ್ರೋಟ್ರೋಪಿಕ್ಸ್) ಮತ್ತು ದಕ್ಷಿಣ ಏಷ್ಯಾದಲ್ಲಿ, ಭಾರತ ಮತ್ತು ಶ್ರೀಲಂಕಾದಿಂದ- ಸ್ಮಾರಾಗ್ಡಿನಾದಲ್ಲಿ, ಆಗ್ನೇಯ ಏಷಿಯಾದಿಂದ ಉತ್ತರ ಆಸ್ಟ್ರೇಲಿಯಾ ಮತ್ತು ಮೆಲನೇಶಿಯಾದವರೆಗೆ ಹರಡಿದೆ. ಆಸ್ಟ್ರೇಲಿಯಾದಲ್ಲಿ, ಒಕೊಫೈಲ್ಲಾ ಸ್ಮಾರಾಗ್ಡಿನಾ ಉಷ್ಣವಲಯದ ಕರಾವಳಿ ಪ್ರದೇಶಗಳಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಬ್ರೂಮ್ ಮತ್ತು ಉತ್ತರ ಪ್ರದೇಶದ ಕರಾವಳಿ ಉಷ್ಣವಲಯದಲ್ಲಿ ಕ್ವೀನ್ಸ್ಲ್ಯಾಂಡ್ನ ಯಪ್ಪೂನ್‍ವರೆಗೂ ಕಂಡುಬರುತ್ತದೆ. [೪]
ಗೂಡುಕಟ್ಟುವ ವರ್ತನೆ
[ಬದಲಾಯಿಸಿ]- ಗೂಡಿನ ನಿರ್ಮಾಣದಲ್ಲಿ ತೊಡಗುವ ಚಿಗುಳಿ (ಒಕೊಫಿಲ್ಲಾ ವೀವರ್) ಇರುವೆಗಳು ತಮ್ಮ ಸಹಕಾರ ವರ್ತನೆಗೆ ಹೆಸರುವಾಸಿಯಾಗಿದೆ. 1768 ರಲ್ಲಿ ಕ್ಯಾಪ್ಟನ್ ಜೇಮ್ಸ್ ಕುಕ್ ಅವರ ಆಸ್ಟ್ರೇಲಿಯಾದ ಪ್ರಯಾಣಕ್ಕೆ ಪಾದಾರ್ಪಣೆ ಮಾಡಿದ ಇಂಗ್ಲಿಷ್‍ನ ನೈಸರ್ಗಿಕವಾದಿ- ಜೋಸೆಫ್ ಬ್ಯಾಂಕ್ಸ್ ಅವರು ಈ ಚಿಗಳಿಗಳ ಗೂಡಿನ ಕಟ್ಟಡದ ಅಥವಾ ರಚನೆಯ ಕ್ರಮ - ವರ್ತನೆಯ ಮೊದಲ ವಿವರಣೆಯನ್ನು ಮಾಡಿದ್ದಾರೆ. ಜೋಸೆಫ್ ಬ್ಯಾಂಕ್ಸ್‍ನ ಜರ್ನಲ್‍ನಿಂದ (ಹೋಲ್ಡೊಬ್ಲರ್ ಮತ್ತು ವಿಲ್ಸನ್ 1990 ರಲ್ಲಿ ಉಲ್ಲೇಖಿಸಲಾಗಿದೆ) ಆಯ್ದ ಭಾಗಗಳು ಕೆಳಕಂಡಂತಿವೆ:
- ಚಿಗಳಿ ಇರುವೆಗಳು ... ಒಂದು ಹಸಿರು ಎಲೆಯಂತೆ, ಮತ್ತು ಮರಗಳ ಮೇಲೆ ವಾಸಿಸುವ, ಅದು ಒಂದು ಗೂಡನ್ನು ಕಟ್ಟಿದ್ದು, ಮನುಷ್ಯನ ತಲೆಯ ಮತ್ತು ಕೈಹಿಡಿಯ ನಡುವಿನ ಗಾತ್ರದಲ್ಲಿ, ಎಲೆಗಳನ್ನು ಒಟ್ಟಿಗೆ ಬಗ್ಗಿಸುವುದು ಮತ್ತು ಅವುಗಳನ್ನು ಹಿಡಿದಿರುವ ಬಿಳುಪು ಕಾಗದದಂತಹ ಅಂಟುವಸ್ತುಗಳು ಎಲೆಗಳನ್ನು ದೃಢವಾಗಿ ಒಟ್ಟಿಗೆ ಹಿಡಿದಿಡುವುವು. ಇದನ್ನು ನಿರ್ವಹಿಸುವುದರಲ್ಲಿ ಅವುಗಳ ನಿರ್ವಹಣೆಯು ಅತ್ಯಂತ ಕುತೂಹಲಕರವಾಗಿದೆ: ಅವು ಮನುಷ್ಯರ ಕೈಗಿಂತ ಉತ್ತಮವಾಗಿ, ನಾಲ್ಕು ಎಲೆಗಳನ್ನು ವಿಶಾಲವಾಗಿ ಬಾಗಿಸಿ, ಮತ್ತು ಅವು ಆಯ್ಕೆ ಮಾಡಿದ ಅಂತಹ ದಿಕ್ಕಿನಲ್ಲಿ ಇರಿಸುತ್ತವೆ. ಇದಕ್ಕೆ ಈ ಕೆಲಸಕ್ಕೆ ಪ್ರಾಣಿಗಳಿಗಿಂತ ಹೆಚ್ಚಿನ ಶಕ್ತಿ ಬೇಕಾಗಿದೆ; ಸಾವಿರಾರು ಇರುವೆ ಸಮೂಹ ವಾಸ್ತವವಾಗಿ ಜಂಟಿ ಕೆಲಸದಲ್ಲಿ ಕೆಲಸ ಮಾಡುತ್ತವೆ. ಅಂತಹ ಎಲೆಯೊಂದನ್ನು ಹಿಡಿದುಕೊಂಡು, ನಾನು ನೋಡಿದಾಗ, ಪ್ರತಿಯೊಂದೂ ಇರುವೆ ತನ್ನ ಎಲ್ಲಾ ಶಕ್ತಿಯಿಂದ ಕೆಳಗೆ ಬಗ್ಗಿಸುತ್ತಿತ್ತು, ಆದರೆ ಇತರ ಸದಸ್ಯರು ಒಳಗೆ ಅಂಟನ್ನು ಅಂಟಿಸಲು ಬಳಸುವ ಕೆಲಸ ಕೈಗೊಳ್ಳುತ್ತಿರುವುದನ್ನು, ಅಂದು ನಾನು ನೋಡಿದೆ. ಅವು ಅದನ್ನು ಹೇಗೆ ಬಾಗಿಸಿಟ್ಟಿದ್ದಾರೆಂದು ನಾನು ನೋಡುವ ಅವಕಾಶವನ್ನು ಹೊಂದಿರಲಿಲ್ಲ, ಆದರೆ ಮುಖ್ಯವಾಗಿ ಅಧಿಕ ಶಕ್ತಿ ಬಳಸಿದ್ದವು, ಉಳಿದ ಭಾಗದ ಬಿಡಿ ಎಲೆಗಳು ಅದರ ನೈಸರ್ಗಿಕ ಪರಿಸ್ಥಿತಿಗೆ ಹಿಂದಿರುಗಿದವು ಮತ್ತು ಅವುಗಳಲ್ಲಿ ಗೂಡಿನ ಒಂದು ಭಾಗದೆ ಎಲೆಯನ್ನು ಪ್ರಯಾಸದಿಂದ ನಾನು ಬಿಡಿಸಿದಾಗ ಅದರ ಚಿಮ್ಮವಿಕೆಯಿಂದ ನನಗೆ ಸುಲಭವಾಗಿ ಅವುಗಳ ಬಗ್ಗಿಸಿದ ಶಕ್ತಿ ಸಾಬೀತಾಯಿತು. ನನ್ನ ಬೆರಳಿನಿಂದ ಕಷ್ಟದಿಂದ ಕೂಡಿದ ಪ್ರಯತ್ನ, ಈ ಚಿಕ್ಕ ಜೀವಿಗಳ ಶಕ್ತಿಯನ್ನು ತಗ್ಗಿಸಲು ಬಳಸಬೇಕಾಗಿತ್ತು. [೫]
ಆಹಾರ ಮತ್ತು ಔಷಧವಾಗಿ ಚಿಗಳಿ
[ಬದಲಾಯಿಸಿ]- ಚಿಗಳಿಗಳು (ವೀವರ್ ಇರುವೆಗಳು) ಮಾನವರು ತಿನ್ನುವ ಕೀಟಗಳ ಅತ್ಯುನ್ನತವಾದ ಪ್ರಭೇದಗಳಲ್ಲಿ ಒಂದಾಗಿದೆ (ಎಟೊಮೊಫ್ಯಾಗಿ). ಸಸ್ಯ ಉತ್ಪಾದನೆಯನ್ನು ಹೆಚ್ಚಿಸಲು ಜೈವಿಕ ನಿಯಂತ್ರಣ ಪ್ರತಿನಿಧಿಯಾಗಿ ಬಳಸುವುದರ ಜೊತೆಗೆ, ಇರುವೆಗಳು (ವಿಶೇಷವಾಗಿ ಇರುವೆ ಲಾರ್ವಾಗಳು- ಬಲಿತ ಮೊಟ್ಟೆ) ಮನುಷ್ಯರಿಗೆ ಖಾದ್ಯ ಮತ್ತು ಪ್ರೋಟೀನ್ ಮತ್ತು ಕೊಬ್ಬಿನ ಆಮ್ಲಗಳನ್ನು ಹೆಚ್ಚು ಉಳ್ಳವುಗಳು; ಕಾರಣ ಚಿಗಳಿ ಇರುವೆಗಳನ್ನು ನೇರವಾಗಿ ಪ್ರೋಟೀನ್ ಮತ್ತು ಆಹಾರ ಮೂಲವಾಗಿ ಬಳಸಿಕೊಳ್ಳಬಹುದು. ಕೆಲವು ರಾಷ್ಟ್ರಗಳಲ್ಲಿ ಚಿಗಳಿ ಇರುವೆ ಅಗಾಧ ಪ್ರಮಾಣದಲ್ಲಿ ಕೊಯ್ಲು ಮಾಡುವ ಬಹುದೊಡ್ಡ ಬಹುದೊಡ್ಡ ಭಕ್ಷ್ಯವಾಗಿದೆ ಮತ್ತು ಈ ರೀತಿಯಾಗಿ ಸ್ಥಳೀಯ ಸಾಮಾಜಿಕ ಆರ್ಥಿಕತೆಗೆ ಕೊಡುಗೆ ನೀಡಿದೆ. ಈಶಾನ್ಯ ಥೈಲ್ಯಾಂಡ್‍ನಲ್ಲಿ ಚಿಗಳಿ ಇರುವೆ ಲಾರ್ವಾಗಳ ಬೆಲೆ ಉತ್ತಮ ಗುಣಮಟ್ಟದ ಗೋಮಾಂಸಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಮತ್ತು ಪ್ರತಿ ವರ್ಷದಲ್ಲಿ US- $620,000(ಡಾಲರ್) ಮೌಲ್ಯದ- ಏಕೈಕ ಥಾಯ್ ಪ್ರಾಂತ್ಯದ 'ಇರುವೆ ಲಾರ್ವಾದ ಕೊಯ್ಲು' ಮಾಡಲಾಗುತ್ತದೆ. ಉಷ್ಣವಲಯದ ನೆಡುತೋಪುಗಳಲ್ಲಿನ ಕೀಟಗಳ ಜೈವಿಕ ನಿಯಂತ್ರಣಕ್ಕಾಗಿ ಇರುವ ಕೀಟ ಈ ಇರುವೆ. ಅದೇ ಸಮಯದಲ್ಲಿ ಚಿಗಳಿ ಸುಗ್ಗಿಯನ್ನು ಸಹ ನಿರ್ವಹಿಸಬಹುದು ಎಂದು ತೋರಿಸಲಾಗಿದೆ, ಏಕೆಂದರೆ ರಾಣಿ ಲಾರ್ವಾ ಮತ್ತು ಬೆಳೆದ ಮೊಟ್ಟೆ (ಪ್ಯುಪೆ) ಮೊದಲಾದವು ಸುಗ್ಗಿಯ ಪ್ರಾಥಮಿಕ ಗುರಿಯಾಗಿದ್ದು, ಇರುವೆ ಗುಂಪಿಗೆ (ಕಾಲೊನೀಗೆ) ಬದುಕುಳಿಯುವಿಕೆ ಇವು ಪ್ರಮುಖವಲ್ಲ. [೬] [೭][೮]
- ಚಿಗಳಿಗಳ (ನೇಯ್ಗೆ ಇರುವೆಗಳ) ಬೆಳೆದ ಮೊಟ್ಟೆಗಳು (ಲಾರ್ವಾಗಳು) ವಾಣಿಜ್ಯಿವಾಗಿ ಇಂಡೋನೇಷ್ಯಾದಲ್ಲಿನ ಕೀಟ-ತಿನ್ನುವ ಪಕ್ಷಿಗಳಿಗೆ ದುಬಾರಿಯ ಆಹಾರವಾಗಿ (ಫೀಡ್) ಆಗಿ ಸಂಗ್ರಹಿಸಲ್ಪಡುತ್ತವೆ ಮತ್ತು ಕಾರ್ಮಿಕ-ಇರುವೆಗಳನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಉದಾ. ಭಾರತ ಮತ್ತು ಚೀನಾಗಳಲ್ಲಿ ಉಪಯೋಗಿಸುವರು.[೯]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ ಚಿಗಳಿ ದೋಸ್ತರು ಗೂಡು ಕಟ್ಟಿದ ಕಥೆ;ಆದಿತ್ಯ ಬೀಳೂರು;Published: 07 ಫೆಬ್ರವರಿ 2019,
- ↑ https://www.terminix.com/blog/home-garden/big-red-ants/ WHAT ARE THOSE BIG RED ANTS IN MY YARD?
- ↑ Bolton, B. 2003. Synopsis and Classification of Formicidae. 370 pp. Memoirs of the American Entomological Institute, Vol. 71. Gainesville, FL.
- ↑ Lokkers, C (1986). "The Distribution of the Weaver Ant, Oecophylla smaragdina (Fabricius) (Hymenoptera, Formicidae) in Northern Australia". Australian Journal of Zoology. 34 (5)
- ↑ Hölldober, B. & Wilson, E.O. 1990. The ants. Cambridge, Massachusetts: Harvard University Press.
- ↑ Sribandit W, Wiwatwitaya D, Suksard S and Offenberg J, 2008. The importance of weaver ant (Oecophylla smaragdina Fabricius) harvest to a local community in Northeastern Thailand. Asian Myrmecology 2: 129-138.
- ↑ http://www.asian-myrmecology.org/publications/sribandit-et-al-am-2008.pdf
- ↑ The importance of weaver ant (Oecophylla smaragdina Fabricius) harvest to a local community in Northeastern Thailand
- ↑ Kusters K, Belcher B, eds), Center for International Forestry Research, Bogor, 61-77