ಬೀಸುವ ಕಲ್ಲು
Jump to navigation
Jump to search
ಬೀಸುವ ಕಲ್ಲುಗಳು ಎಂದರೆ ಗೋಧಿ ಅಥವಾ ಇತರ ಧಾನ್ಯಗಳನ್ನು ಬೀಸಲು ಹಿಟ್ಟಿನ ಗಿರಣಿಯಲ್ಲಿ ಬಳಸಲಾಗುವ ಕಲ್ಲುಗಳು.
ಬೀಸುವ ಕಲ್ಲುಗಳು ಜೋಡಿಗಳಲ್ಲಿ ಬರುತ್ತವೆ. ಆಧಾರ ಕಲ್ಲು ನಿಶ್ಚಲವಾಗಿರುತ್ತದೆ. ಆಧಾರ ಕಲ್ಲಿನ ಮೇಲೆ ತಿರುಗುವ ಚಾಲಕ ಕಲ್ಲು ಇರುತ್ತದೆ, ಇದು ವಾಸ್ತವವಾಗಿ ಧಾನ್ಯವನ್ನು ಬೀಸುತ್ತದೆ. ಚಾಲಕ ಕಲ್ಲು ನಿಶ್ಚಲ ಆಧಾರ ಕಲ್ಲಿನ ಮೇಲೆ ತಿರುಗಿ ಕಲ್ಲುಗಳ ಕತ್ತರಿಸುವಿಕೆ ಅಥವಾ ಬೀಸುವ ಕಾರ್ಯವನ್ನು ಸೃಷ್ಟಿಸುತ್ತದೆ. ಚಾಲಕ ಕಲ್ಲು ಸಾಮಾನ್ಯವಾಗಿ ಸ್ವಲ್ಪ ನಿಮ್ನವಾಗಿದ್ದರೆ ಆಧಾರಕಲ್ಲು ಸ್ವಲ್ಪ ಪೀನವಾಗಿರುತ್ತದೆ. ಇದು ಬೀಸಿದ ಹಿಟ್ಟನ್ನು ಕಲ್ಲುಗಳ ಹೊರ ಅಂಚಿನ ಕಡೆಗೆ ನಿರ್ದೇಶಿಸಲು ನೆರವಾಗುತ್ತದೆ ಮತ್ತು ಅಲ್ಲಿ ಹಿಟ್ಟನ್ನು ಸಂಗ್ರಹಿಸಬಹುದು.
ಮುಖ್ಯ ಕೋಲು ಅಥವಾ ಆಸರೆಗಂಬಿ ಮೇಲಿನ ದಂಡದ ತಲೆಗೆ ಜೋಡಣೆಗೊಂಡ ಶಿಲುಬೆಯಾಕಾರದ ಲೋಹದ ತುಂಡು ಚಾಲಕ ಕಲ್ಲಿಗೆ ಆಧಾರವಾಗಿರುತ್ತದೆ. ಇದು ಗಿರಣಿಯ ಚಾಲಕ ಕಾರ್ಯವಿಧಾನಕ್ಕೆ (ಗಾಳಿ, ಜಲ ಅಥವಾ ಇತರ ಸಾಧನ) ಜೋಡಣೆಯಾಗಿರುತ್ತದೆ.