ವಿಷಯಕ್ಕೆ ಹೋಗು

ಬಿ. ಆರ್. ಪಾಟೀಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೋಜರಾಜ್ ರಾಮಚಂದ್ರಪ್ಪ ಪಾಟೀಲ್
ಮತಕ್ಷೇತ್ರ ಆಳಂದ
ವೈಯಕ್ತಿಕ ಮಾಹಿತಿ
ಜನನ (೧೯೪೯-೧೧-೧೫)೧೫ ನವೆಂಬರ್ ೧೯೪೯
ಸರಸಂಬಾ ಗ್ರಾಮ, ಆಳಂದ ತಾಲೂಕು, ಕಲಬುರಗಿ, ಕರ್ನಾಟಕ
ರಾಜಕೀಯ ಪಕ್ಷ INC
ವಾಸಸ್ಥಾನ ಕಲಬುರಗಿ

ಭೋಜರಾಜ್ ರಾಮಚಂದ್ರಪ್ಪ ಪಾಟೀಲ್(ಬಿ. ಆರ್. ಪಾಟೀಲ್)ರವರು ಕರ್ನಾಟಕ ರಾಷ್ಟ್ರೀಯ ಒಬ್ಬ ರಾಜಕಾರಣಿಯಾಗಿದ್ದಾರೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಸ್ತುತವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರು ರಾಜ್ಯ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಜಾತ್ಯತೀತ ಜನತಾದಳದ ರಾಜ್ಯ ಕಾರ್ಯಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ರಾಮಕೃಷ್ಣ ಹೆಗ್ಡೆ ಅವರ ಲೋಕಶಕ್ತಿ ದಳ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರರಾಗಿ ಕಾರ್ಯನಿರ್ವಹಿಸಿದರು

ವೃತ್ತಿಜೀವನ

[ಬದಲಾಯಿಸಿ]
ಕಲಬುರ್ಗಿ ಜಿಲ್ಲೆಯ ನಕ್ಷೆ.

ಪಾಟೀಲ್‍ರವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಮೂರು ಅವಧಿಯ ಸದಸ್ಯರಾಗಿದ್ದಾರೆ. 1983 ರಲ್ಲಿ ಮೊದಲ ಬಾರಿಗೆ ವಿಧಾನ ಸಭೆ ಸದಸ್ಯರಾಗಿದ್ದರು ಮತ್ತು ಅಧಿಕಾರಾವಧಿಯಲ್ಲಿ ವಿಧಾನ ಪರಿಷತ್ ಉಪಸಭಾಪತಿಯಾಗಿದ್ದರು ಮೇಲಾಗಿ ಸುಮಾರು 10 ತಿಂಗಳ ಕಾಲ ವಿಧಾನ ಪರಿಷತ್ ಹಂಗಾಮಿ ಸಭಾಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ೧೫ ನವೆಂಬರ್ ೧೯೪೯ರಂದು ಅಳಂದ ತಾಲೂಕಿನ ಪ್ರಸ್ತುತ ಕರ್ನಾಟಕ ರಾಜ್ಯದ ಸರಸಂಭಾ ಗ್ರಾಮದಲ್ಲಿ ಜನಿಸಿದರು.[೧] ಗುಲ್ಬರ್ಗ ನಗರದ ಹೊರವಲಯದಲ್ಲಿರುವ ಶಹಾಬಜಾರ್ ನಾಕಾ ಸಮೀಪ, ರಸ್ತೆ ಸಂಚಾರವನ್ನು ತಡೆಗಟ್ಟಿದ್ದರಿಂದ ಅಳಂದ ಶಾಸಕ ಬಿ ಆರ್ ಪಾಟೀಲ್ ಮತ್ತು ಸುಮಾರು ೩೦೦ ಅನುಯಾಯಿಗಳನ್ನು ಪೊಲೀಸರು ಬಂಧಿಸಿದರು. ಆಳಂದ ಕ್ಷೇತ್ರದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸದ ಕಾರಣ, ಗುತ್ತಿಗೆದಾರರಾಗಿದ್ದ ಎ. ಕೆ. ಪಾಟೀಲ್‍ರವರನ್ನು ಸರ್ಕಾರ ಕಪ್ಪುಪಟ್ಟಿ ಮಾಡಿದ್ದರಿಂದ ಪಾಟೀಲ್‍ರವರು ರಾಸ್ತಾ ರೋಕೊ ನಡೆಸಿದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಬಿ. ಆರ್. ಪಾಟೀಲ್‍ರವರು ರಾಮಚಂದ್ರಪ್ಪ ಎಂ. ಪಾಟೀಲ್ ಮತ್ತು ಗಂಗಾಬಾಯಿ ಆರ್ ಪಾಟೀಲ್ ಅವರ ಮೂರನೇ ಮಗನಾಗಿ ಹುಟ್ಟಿದರು. ಅವರ ತಂದೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಆಡಳಿತಾತ್ಮಕ ನಿಜಾಮಿನ ಕ್ರೂರ ರಝಾಕಾರ್ ಸೈನ್ಯದ ವಿರುದ್ಧದ ಹೋರಾಟದ ಭಾಗವಾಗಿದ್ದರು. ಸ್ವಾತಂತ್ರ ದೊರಕಿದ ನಂತರವೂ ನಿಜಾಮರು ತಾವು ಆಳುತ್ತಿದ್ದ ಪ್ರದೇಶವನ್ನು ತೊರೆಯದಿದ್ದರೂ ಅವರ ತಂದೆ ೧೯೪೭ರ ಆಗಸ್ಟ್ ೧೫ರಂದು ರಾಷ್ಟ್ರದ ಸ್ವಾತಂತ್ರ್ಯವನ್ನು ಆಚರಿಸಿದರು. ಆದ್ದರಿಂದ ಅವರು ನಿಜಾಮರ ಸೇನೆಯ ಗುರಿಯಾಗಿ ಮುಂಬೈಯ ಗೋಗವ್ನ್ ಗೆ ತಪ್ಪಿಸಿಕೊಳ್ಳಬೇಕಾಯಿತು. ಭೋಜರಾಜ್‍ರವರು ಕೇವಲ ಎರಡು ವರ್ಷದವರಾಗಿದ್ದಾಗ ರಾಮಚಂದ್ರಪ್ಪರವರು ನಿಧನರಾದರು. ಅವರ ತಾಯಿ ಗಂಗಾಬಾಯಿಯವರು ತನ್ನ ಮಕ್ಕಳನ್ನು ಬಹಳ ಕಷ್ಟಪಟ್ಟು ಮತ್ತು ಜವಾಬ್ದಾರಿಯಿಂದ ಬೆಳೆಸಿದರು. ಕೃಷಿ ಭೂಮಿಯ ಮೂರು ತೇಪೆಗಳು ದೂರ-ದೂರವಿದ್ದರೂ ಅದನ್ನು ನೊಡಿಕೊಳ್ಳುವುದರೊಂದಿಗೆ ಅವರು ಎದುರಿಸುತ್ತಿದ್ದ ಕಷ್ಟಗಳನ್ನು ಮತ್ತು ತನ್ನ ಕಠಿಣವಾದ ಪರಿಸ್ಥಿತಿಯನ್ನು ಅವರ ಮಕ್ಕಳಿಗೆ ಅರಿವಾಗದಂತೆ ತನ್ನ ಎರಡು ಮಕ್ಕಳಿಗೆ ಶಿಕ್ಷಣ ಸೌಲಭ್ಯವನ್ನು ದೊರಕಿಸಿಕೊಟ್ಟರು. ಗಂಗಾಬಾಯಿ ಯಾವುದೇ ಧಾರ್ಮಿಕ ಮತ್ತು ಔಪಚಾರಿಕ ಶಿಕ್ಷಣವನ್ನು ಹೊಂದಿಲ್ಲದಿದ್ದರೂ ಸಹಾ, ಪುರಾಣಗಳು ಮತ್ತು ಇತರ ಧಾರ್ಮಿಕ ಪಠ್ಯಗಳನ್ನು ನಿರಂತರವಾಗಿ ಓದುತ್ತಿದ್ದರು. ಮಹಾರಾಷ್ಟ್ರದ ಕೆಶೆಗಾಂವ್‍ನ ಗಂಗಾಬಾಯಿಯ ಸಹೋದರ ಮತ್ತು ಅವರ ಚಿಕ್ಕಪ್ಪ ಶರಣಪ್ಪ ಪಾಟೀಲ್‍ರೂ ಸಹಾ, ಬಿ. ಆರ್. ಪಾಟೀಲ್‍ರವರ ಮೇಲೆ ದೊಡ್ಡ ಪ್ರಭಾವ ಬೀರಿದರು. ಶರಣಪ್ಪ ಸ್ವಾತಂತ್ರ್ಯಕ್ಕಿಂತ ಮುಂಚೆಯೇ ರಾಮಚಂದ್ರನ ಅನುಯಾಯಿ ಮತ್ತು ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯದ ನಂತರ ರಾಜಕಾರಣಿ. ಅವರು ತಮ್ಮ ಭಾವ ರಾಮಚಂದ್ರನ ಮೂಲಕ ಕಲಿತ ನಾಯಕತ್ವದ ಗುಣಗಳನ್ನು ತನ್ನ ಸೋದರಳಿಯ ಭೋಜರಾಜ್ ಅವರಿಗೆ ಕಲಿಸಿ ಅವರ ತಂದೆಯಿಲ್ಲದ ಕೊರತೆಯನ್ನು ನೀಗಿಸಿದರು .

ಬಾಲ್ಯದ ಜೀವನ

[ಬದಲಾಯಿಸಿ]

ತನ್ನ ಬಾಲ್ಯದಲ್ಲೇ ಅತ್ಯಂತ ಸಕ್ರಿಯ ಮತ್ತು ಹಠಮಾರಿಯಾಗಿದ್ದ ಪಾಟೀಲ್‍ರವರು ತಮ್ಮ ಹಳ್ಳಿಯವರ ದಿನನಿತ್ಯದ ಪಾಡು ಮತ್ತು ಹೋರಾಟಗಳನ್ನು ನೋಡಿ ಬೆಳೆದವರು. ಹಳ್ಳಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಬದಲಾವಣೆಗಳನ್ನು ತರಲು ಅವರು ಬಯಸಿದ್ದರು. ಇದಕ್ಕೆ ಉದಾಹರಣೆ, ಅವರು ತಮ್ಮ ಪ್ರೌಢಶಾಲೆಯಲ್ಲಿ ಒಂದು ಯುವಕರ ಗುಂಪಿನ ನಾಯಕತ್ವವನ್ನು ವಹಿಸಿ ಊರಿನಲ್ಲಿ ಮದ್ಯವನ್ನು ತಯಾರಿಸಿದ ಮತ್ತು ಮಾರಾಟ ಮಾಡಿದ ಜನರನ್ನು ಹುಡುಕಿಕೊಂಡು ಹೋಗುತ್ತಿದ್ದರು ಮತ್ತು ಹಳ್ಳಿಗರಿಗೆ ಪ್ರಭಾವ ಬೀರಿದ ಮೋಸದ ಮದ್ಯವನ್ನು ತಯಾರಿಸುವ ರಚನೆಯನ್ನು ನಾಶಪಡಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. http://myneta.info/karnataka2013/candidate.php?candidate_id=459