ವಿಷಯಕ್ಕೆ ಹೋಗು

ಬಿ.ವಿ.ಎಸ್. ಅಯ್ಯಂಗಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಂಡಿಗನವಿಲ್ಲೆ (Bindiganavile),ವೀರರಾಘವ ಸುಂದರರಾಜ ಅಯ್ಯಂಗಾರ್, ಬಿ.ವಿ.ಎಸ್.ಅಯ್ಯಂಗಾರ್, (೧೯೦೦-೧೯೭೭)
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿಪ್ರಮುಖವಾಗಿ ಭಾರತೀಯ ಶೈಲಿ. ಮಕ್ಕಳು : ರಂಗರಾಜ್, ಕೃಪಾಳು,ಪ್ರಸಾದ್, ದೀನ, ಪರಿಮಳ, ಶ್ರೀದೇವಿ.
ಸ್ಥಳಮುಂಬಯಿ, ಭಾರತ
ನಿರ್ಮಾಣ ಪ್ರಾರಂಭವಾದ ದಿನಾಂಕ
  • ವಾರ್ಡನ್ ಇನ್ಸೂರೆನ್ಸ್ ಬಿಲ್ಡಿಂಗ್, * ಯುನೈಟೆಡ್ ಇನ್ಸೂರೆನ್ಸ್ ಬಿಲ್ಡಿಂಗ್, * ಕೊ-ಆಪರೇಟೀವ್ ಇನ್ಸೂರೆನ್ಸ್ ಬಿಲ್ಡಿಂಗ್, * ಕಸ್ತೂರಿ ಬಿಲ್ಡಿಂಗ್, * ಮೈಸೂರ್ ಹೌಸಿಂಗ್ ಕಾಲೋನಿ, * ಮೈಸೂರ್ ಅಸೋಸಿಯೇಷನ್, ಮುಂಬಯಿ, * ನ್ಯಾಷನಲ್ ಕನ್ನಡ ಎಜುಕೇಷನ್ ಸೊಸೈಟಿ, ವಡಾಲ, ಮುಂಬಯಿ, * ಎನ್.ಕೆ.ಇ.ಎಸ್, * ಎಸ್.ಐ.ಇ.ಎಸ್. * ಶಣ್ಮುಗಾನಂದ ಹಾಲ್, * ಭಜನ್ ಸಮಾಜ್,
Design and construction
ಮುಖ್ಯ ಗುತ್ತಿಗೆದಾರಅಯ್ಯಂಗಾರ್ ಅಂಡ್ ಕಂಪೆನಿ, ಮುಂಬಯಿ,ಚಾಮುಂಡಿ ಕನ್ಸ್ಟ್ರಕ್ಷನ್ ಕಂ,
ಜಾಲ ತಾಣ
mysoreassociation.in

ಬಿಂಡಿಗನವಿಲ್ಲೆ (Bindiganavile),[] ವೀರರಾಘವ ಸುಂದರರಾಜ ಅಯ್ಯಂಗಾರ್(೧೯೦೦-೧೯೭೭) ತಮ್ಮ ಗೆಳೆಯರಿಗೆ, ಹಾಗೂ ಮುಂಬಯಿಕರ್ ಗಳಿಗೆ ಬಿ.ವಿ.ಎಸ್.ಅಯ್ಯಂಗಾರ್,[] ಎಂದು ಹೆಸರಾಗಿದ್ದರು. ಅವರು ಮುಂಬಯಿಗೆ ಬಂದ ಸಮಯದಲ್ಲಿ ಅವರ ಒಡನಾಟಕ್ಕೆ ಬಂದ ಹಲವು ಇಂಜಿನಿಯಗಳು, ಉದ್ಯೋಗಪತಿಗಳು, ಗಣ್ಯ ಅಧಿಕಾರಿಗಳು, ವೈದ್ಯರು, ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕರು, ಪ್ರಾಚಾರ್ಯರು, ಸಮಾಜಸೇವಾಧುರೀಣರೆಲ್ಲಾ, ಒಟ್ಟಾಗಿ ಸೇರಿ, ಹಲವಾರು ಸಂಘ-ಸಂಸ್ಥೆಗಳನ್ನು, ಶಾಲಾ-ಕಾಲೇಜುಗಳನ್ನೂ ಹುಟ್ಟುಹಾಕಿದರು. ಅವರಲ್ಲಿ ಪ್ರಮುಖರು :

  • ದಿವಾನ್ ಬಹದ್ದೂರ್ ರಾಮಸ್ವಾಮಿ,
  • ಆರ್. ಡಿ. ಚಾರ್, ಉದ್ಯೋಗಪತಿ-ಸ್ಟಾಂಡರ್ಡ್ ಬ್ಯಾಟರಿ ಕಂಪೆನಿ ಸ್ಥಾಪಕರು,
  • ಎಂ.ಆರ್.ವರದರಾಜನ್- ಮುಖ್ಯ ಅಭಿಯಂತರರು, ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪೆನಿ (ನಿಯಮಿತ),
  • ವಿದ್ವಾನ್ ಗೋಪಾಲಾಚಾರ್ಯ- ಕುಲಪತಿಗಳು, ಸತ್ಯಧ್ಯಾನ ವಿದ್ಯಾಪೀಠ
  • ಆರ್.ವಿ.ಮೂರ್ತಿ, ಸಂಪಾದಕರು, ಈಸ್ಟರ್ನ್ ಎಕೊನಾಮಿಸ್ಟ್,
  • ಬಿ.ನಾರಾಯಣಸ್ವಾಮಿ,ನ್ಯಾಯವಾದಿಗಳು, ಮುಂಬಯಿ ಉಚ್ಚನ್ಯಾಯಾಲಯ,
  • ಕೆ.ಸುಬ್ರಮಣಿಯಮ್,ಇಂಜಿನಿಯರ್,
  • ಎನ್.ಎನ್.ಹುಬ್ಬಿ,
  • ಬಿ.ಎಮ್.ಮೂರ್ತಿ,
  • ಗುಬ್ಬಿ,

ಆ ಸಂಸ್ಥೆಗಳಿಗೆ ಬೇಕಾದ ಆವಶ್ಯಕ ಸುಂದರ ಕಟ್ಟಡಗಳನ್ನು ನಿರ್ಮಾಣಮಾಡಿಕೊಡುವ ಕೆಲಸವನ್ನು ಬಿ.ವಿ.ಎಸ್.ಅಯ್ಯಂಗಾರ್ ರು, ಸಮರ್ಥವಾಗಿ ನಿಭಾಯಿಸಿದರು.

ಜನನ, ವಿದ್ಯಾಭ್ಯಾಸ, ವೃತ್ತಿಜೀವನ

[ಬದಲಾಯಿಸಿ]
  • ಸುಂದರರಾಜ್,, ೧೯೦೦ ರಲ್ಲಿ ಅಡ್ವೊಕೇಟ್ 'ವೀರರಾಘವಾಚಾರ್' ರವರ ಎರಡನೆಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಇನ್ನೂ ಚಿಕ್ಕ ಚಿಕ್ಕವಯಸ್ಸಿನಲ್ಲಿದ್ದಾಗಲೇ ಸುಂದರರಾಜ್ ರ, ತಾಯಿ ತೀರಿಕೊಂಡರು. ಅವರು ತಂದೆಯವರ ಪ್ರೀತಿವಾತ್ಸಲ್ಯಗಳ ಹಾಗೂ ಅತ್ಯಂತ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಮೈಸೂರಿನಲ್ಲಿ ಬೆಳೆದರು. ಅವರಿಗೆ ಒಬ್ಬ ಅಣ್ಣ, ಮತ್ತು ೪ ಜನ ಸೋದರಿಯರಿದ್ದರು. ಕಲೆ,ಸಂಸ್ಕೃತಿ, ಸುಂದರ ಪರಿಸರಗಳಿಗೆ ನೆಲೆವೀಡಾಗಿದ್ದ ಮೈಸೂರುನಗರ ಒಳ್ಳೆಯ ಶಾಲಾ ಕಾಲೇಜುಗಳಿಗೂ ಹೆಸರಾಗಿತ್ತು.
  • ೨೦ ನೆಯ ಶತಮಾನದ ಮೊದಲ ದಶಕದಲ್ಲಿ ಮೈಸೂರು ಸಂಸ್ಥಾನದಲ್ಲಿ ಹಲವು ಆಧುನಿಕ ಕಟ್ಟದ ನಿರ್ಮಾಕರ ಪರಂಪರೆಯೇ ಮೇಳೈಸಿತ್ತು. ಸರ್.ಎಂ. ವಿಶ್ವೇಶ್ವರಯ್ಯನವರ ಮಹತ್ವದ ಕಾರ್ಯಾಚರಣೆಗಳಿಂದ ಪ್ರೇರಣೆಗಳಿಸಿದ ಆಗಿನ ಕಾಲದ ಹಲವಾರು ಯುವ ಇಂಜಿನಿಯರ್ ಗಳು ಮತ್ತು ಅವರಿಗೆಲ್ಲಾ ಆಶ್ರಯದಾತ್ರಾಗಿದ್ದ ಮೈಸೂರಿನ ಅರಸ, ಕೃಷ್ಣರಾಜವೊಡೆಯರ ಕೃಪಾಪೋಶಿತ ಆಧುನಿಕ ಮೈಸೂರಿನ ಶಿಲ್ಪಿಗಳೆಂದು ಜನತೆಗೆ ಪರಿಚಿತರಾದ ಒಂದು ತಂಡವೇ ಶ್ರಮಿಸುತ್ತಿತ್ತು. ಆಧುನಿಕ ಮೈಸೂರಿನ ನಿರ್ಮಾಪಕರಲ್ಲಿ ಪ್ರಮುಖರು :

ಮೈಸೂರು ಸಂಸ್ಥಾನದ ದಿವಾನರು

[ಬದಲಾಯಿಸಿ]

[]

  • ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್,
  • ಎನ್. ಮಾಧವರಾವ್,
  • ಸರ್.ಮಿರ್ಜಾ ಇಸ್ಮಾಯಿಲ್,
  • ಸರ್.ಮೋಕ್ಷಗುಂಡಂ ವಿಶ್ವೇಶ್ವರಯ್ಯ
  • ಮೇಲಿನ ಗುಂಪಿನಲ್ಲಿ ಸರ್.ಎಂ.ವಿ.ರವರ ಕೊಡುಗೆ ಅಪಾರ. ಉಕ್ಕು, ಸಿಮೆಂಟ್, ಪೇಪರ್, ಸೋಪ್ ತಯಾರಿಕೆ, ರೇಷ್ಮೆಬಟ್ಟೆ ತಯಾರಿಕೆ, ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ, ಬೆಂಗಳೂರಿನ ಜಯಚಾಮರಾಜೇಂದ್ರ ಆಕ್ಯುಪೇಶನ್ ಇನ್ ಸ್ಟಿ ಟ್ಯೂಟ್ ಸ್ಥಾಪನೆ, ಮೈಸೂರ್ ಬ್ಯಾಂಕ್ ಸ್ಥಾಪನೆ, ಇತ್ಯಾದಿ. ಈ ಮಹನೀಯರು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ಬಹುಮೂಲ್ಯಕೊಡುಗೆಗಳನ್ನು ಕೊಟ್ಟರು. 'ಸುಂದರರಾಜ್', ಮೈಸೂರಿನಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲಾಭ್ಯಾಸ ನಡೆಸಿ, ಮಹಾರಾಜ ಕಾಲೇಜ್,ಮೈಸೂರಿನಲ್ಲಿ ಓದು ಮುಂದುವರೆಸಿದರು. *ಮುಂದೆ, ಬೆಂಗಳೂರಿಗೆ ಬಂದು ಸರಕಾರಿ ಇಂಜಿನಿಯರಿಂಗ್ ಕಾಲೇನಲ್ಲಿ ಸಿವಿಲ್ ಇಂಜಿನಿಯರಿಂಗ್ ಗೆ ಸೇರಿದರು. ಆಗ ಮೊದಲನೆಯ ಮಹಾಯುದ್ಧದಸಮಯ. ಆಧುನಿಕ ಭಾರತದ ನಿರ್ಮಾಣದಲ್ಲಿ ಆಸಕ್ತರಾದ ಹಲವಾರು ಯುವಕರು ಸರ್.ಎಂ.ವಿಶ್ವೇಶ್ವರಯ್ಯನವರ ಆದರ್ಶ ವ್ಯಕ್ತಿತ್ವಕ್ಕೆ ಮಾರುಹೋಗಿ ತಾವೂ ತಮ್ಮ ಆಯ್ದ ವಿಷಯಗಳಲ್ಲಿ ಏನನ್ನಾದರೂ ಸಾಧಿಸುವ ಬಗ್ಗೆ ತವಕದಲ್ಲಿದ್ದ ಯುವಕರಲ್ಲಿ ಸುಂದರರಾಜ್ ಕೂಡಾ ಒಬ್ಬರು. ಇಂಜಿನಿಯರಿಂಗ ಪದವಿಯ ನಂತರ, ಸುಂದರರಾಜ್, ೧೯೨೪ ರಲ್ಲಿ ಮುಂಬಯಿಗೆ ಪಾದಾರ್ಪಣೆಮಾಡಿದರು.
  • ಆ ಸಮಯದಲ್ಲಿ ಅವರಿಗೆ ಪರಿಚಿತರಾಗಿದ್ದ ಹಿರಿಯ ಗೆಳೆಯರು ಮೈಸೂರಿನಿಂದ ಮುಂಬಯಿ ನಗರಕ್ಕೆ ಬಂದು ಅಲ್ಲಿನ ಹೆಸರಾಂತ ಕಾರ್ಖಾನೆಗಳಲ್ಲಿ ವೃತ್ತಿಪರರಾಗಿದ್ದರು. ಹಾಗೆ ಮುಂಬಯಿನಗರಕ್ಕೆ ಪಾದಾರ್ಪಣೆ ಮಾಡಿದ ಬಿ.ವಿ.ಎಸ್.ಅಯ್ಯಂಗಾರ್. ಮೊದಲು 'ಇಂಜಿನಿಯರಿಂಗ್ ಫರ್ಮ್' ವೊಂದರಲ್ಲಿ ನೌಕರಿ ಹಿಡಿದರು. ನಂತರ, ಕೆಲವು ವರ್ಷಗಳಲ್ಲಿ ತಮ್ಮದೇ ಆದ ಸ್ವಂತ ಕಂಪೆನಿಯನ್ನು ಒಬ್ಬ ಭಾಗಿದಾರ ಗೆಳೆಯ 'ಮೆನ್ಸೆಸ್' ಎಂಬುವರ ಜೊತೆಸೇರಿ ತೆರೆದರು.

ಮುಂಬಯಿ ನಗರದಲ್ಲಿ

[ಬದಲಾಯಿಸಿ]
  • ಆಗಿನ ಮುಂಬಯಿನಗರ ದಕ್ಷಿಣ ಮುಂಬಯಿನಿಂದ ಉತ್ತರಕ್ಕೆ 'ಮಾಟುಂಗಾ' ಹಾಗೂ ಮುಂದೆ 'ಸಯಾಂ' ವರೆಗೆ ಮಾತ್ರ ಹಬ್ಬಿತ್ತು. ಸುಂದರರಾಜರು, ಬೈಕಲ್ಲಾ, ಮುಂಬಯಿಯ ಕೋಟೆ, ಮತ್ತು ಬೆಲ್ಲಾರ್ಡ್ ಎಸ್ಟೇಟ್, ಚರ್ಚ್ ಗೇಟ್ ಹತ್ತಿರ, ಹಾಗೂ ಮುಂಬಯಿನ ಎಲ್ಲಾ ಜಿಲ್ಲೆಯಲ್ಲೆಲ್ಲಾ ಸುತ್ತಾಡಿ,'ಯೂರೋಪಿಯನ್,' 'ಗಾಥಿಕ್,' ಮತ್ತು 'ಇಂಡೋ ಸಾರ್ಸನಿಕ್' ಶೈಲಿಯ ಹಲವಾರು ಕಟ್ಟಡಗಳ ಸಾಲನ್ನು ನೋಡಿ ಆಕರ್ಷಿತರಾದರು.[][]
  • ಮೆರಿನ್ ಡ್ರೈವ್ ನ ಸುಂದರ ವಿನ್ಯಾಸದ ಬಂಗಲೆಗಳ ಸಾಲನ್ನು ವೀಕ್ಷಿಸಿ ಮೂಕ ವಿಸ್ಮಿತರಾದರು. ಆತ್ಯುತ್ತಮ ಸಾರಿಗೆ ವ್ಯವಸ್ಥೆ ಅವರನ್ನು ಆಕರ್ಶಿಸಿತು. ಬಸ್ಸುಗಳು ವಿಕ್ಟೋರಿಯ ಕುದುರೆ ಗಾಡಿಗಳು, ದಕ್ಷಿಣದಿಂದ ಉತ್ತರ ಮುಂಬಯಿಗೆ ಟ್ರಾಮ್ ಗಳು ಚಾಲ್ತಿಯಲ್ಲಿದ್ದವು. ಕಟ್ಟಡಗಳ ಶೈಲಿ ಯನ್ನು ಅಭ್ಯಾಸಮಾಡಿ ಎಲ್ಲಾ ಪ್ರಕಾರಗಳನ್ನೂ ಒಟ್ಟಾರೆ ಸೇರಿಸಿ, ತಮ್ಮದೇ ಆದ ಭಾರತೀಯ ಶೈಲಿಯಲ್ಲಿ ತಾವೂ ಕಟ್ಟಡಗಳನ್ನು ನಿರ್ಮಿಸುವ ಮಹದಾಶೆ ಅವರ ಮನಸ್ಸಿನಲ್ಲಿ ಕುಡಿ ಒಡೆಯಿತು.[]

ಬ್ರಿಟಿಷ್ ವಾಸ್ತುಶಿಲ್ಪವನ್ನು ಹೋಲುವ ಕಟ್ಟಡಗಳ ಸಮೂಹ

[ಬದಲಾಯಿಸಿ]
  • ವಿಕ್ಟೋರಿಯ ರೈಲ್ವೆ ಟರ್ಮಿನಸ್,
  • ಮುಂಬಯಿ ಮ್ಯುನಿಸಿಪಾಲಿಟಿ ಕಟ್ಟಡ,
  • ಎಲ್ಫಿನ್ ಸ್ಟನ್ ಕಾಲೇಜ್,
  • ಆರ್ಮಿ ಅಂಡ್ ನೇವಿ ಕಟ್ಟಡ,
  • ಕ್ರಾಫರ್ಡ್ ಮಾರ್ಕೆಟ್,
  • ಸರ್.ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್,
  • ಜಿ.ಪಿ.ಒ ಕಟ್ಟಡ,
  • ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ,
  • ಕಾಲೇಜ್ ಆಫ್ ಸೈನ್ಸ್,
  • ಸ್ಮಾಲ್ ಕಾಸಸ್ ಕೋರ್ಟ್,
  • ಏಶಿಯಾಟಿಕ್ ಲೈಬ್ರೆರಿ ಕಟ್ಟಡ,
  • ಹಾರ್ನಿಮನ್ ಸರ್ಕಲ್ ನ ಚರ್ಚ್, ಮತ್ತು ಹಲವಾರು ಕಟ್ಟಡಗಳು,
  • ಡೇವಿಡ್ ಸಸೂನ್ ಕಟ್ಟಡ,
  • ವಿಕ್ಟೋರಿಯ ಗಾರ್ಡನ್ಸ್,
  • ವಿ.ಜೆ.ಟಿ.ಐ, ಕಾಲೇಜ್,
  • ಡಾನ್ ಬಾಸ್ಕೊ ಹೈಸ್ಕೂಲ್,
  • ಚರ್ಚ್ ಗೇಟ್ ಕಟ್ಟಡ,
  • ವಿಲ್ಸನ್ ಕಾಲೇಜ್,
  • ಗೇಟ್ವೇ ಆಫ್ ಇಂಡಿಯ,
  • ಮುಂಬಯಿ ವಿಶ್ವವಿದ್ಯಾಲಯದ ಕಟ್ಟಡಗಳು,
  • ವ್ಯಾಟ್ಸನ್ ಹೋಟೆಲ್ ಕಟ್ಟಡ,
  • ರಾಜಾ ಬಾಯಿ, ಕ್ಲಾಕ್ ಟವರ್,
  • ಬ್ರಬೋರ್ನ್ ಸ್ಟೇಡಿಯಂ,
  • ಸೇಂಟ್ ಝೇವಿಯರ್ಸ್ ಕಾಲೇಜ್,
  • ಮುಂಬಯಿ ಹೈಕೋರ್ಟ್ ಕಟ್ಟಡ,

ಮದುವೆ

[ಬದಲಾಯಿಸಿ]
  • ಬಿ.ವಿ.ಎಸ್. ಅಯ್ಯಂಗಾರ್, ೧೯೨೭ ರಲ್ಲಿ ಮೈಸೂರಿನ ಹುಡುಗಿ, 'ವಿನೋದಮ್ಮ'ನವರ ಜೊತೆ ಮದುವೆಯಾದರು. ಈ ದಂಪತಿಗಳಿಗೆ ೪ ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು. ರಂಗರಾಜ್, ಕೃಪಾಳು,ಪ್ರಸಾದ್, ದೀನ, ಪರಿಮಳ, ಶ್ರೀದೇವಿ. ಬಿ.ವಿ.ಎಸ್. ಅಯ್ಯಂಗಾರ್ ಬಹಳ ಸಂಪ್ರದಾಯಸ್ತ ಶ್ರೀವೈಷ್ಣ ಕುಟುಂಬದವರು.
  • ಹಿಂದಿನ ಸಂಪ್ರದಾಯಗಳಲ್ಲಿ ಅಪಾರ ನಂಬಿಕೆಯಿದ್ದರೂ,ಆಧುನಿಕ ಮನೋಭಾವವುಳ್ಳವರಾಗಿದ್ದರು. ಬೆಳಗಿನಜಾವ ನಸುಕಿನಲ್ಲಿ ಎದ್ದು 'ಸುಪ್ರಭಾತಂ' ಬಾಯಿಪಾಠದಲ್ಲಿ ಭಗವಂತನನ್ನು ಸ್ತುತಿಸುತ್ತಾ,ಸುಮಾರು ೬೦ ದೇವರಪಟಗಳಿಗೆ ಹೂವಿನ ಹಾರಸಲ್ಲಿಸಿ, ನಂತರ ದೇವಾತಾರ್ಚನೆಯಿಂದ ಆರಂಭವಾದ ಅವರ ದೈನಂದಿನ ಕಾರ್ಯಗಳು, ಸಾಯಂಕಾಲ 'ಮಾಹುಲಿ ಗೋಪಾಲಾಚಾರ್ಯರ ಭಗವತ್ಪ್ರವಚನ' ಕೇಳಿದಮೇಲೆಯೇ ಮುಕ್ತಾಯವಾಗುತ್ತಿದ್ದವು.

ತಮ್ಮ ಆಪ್ತಗೆಳೆಯರ ಸಹಕಾರದೊಂದಿಗೆ ಮೇಲಿನ ಎರಡು ಕಂಪೆನಿಗಳನ್ನು ಸ್ಥಾಪಿಸಿದರು. ಮುಂಬಯಿ, ಮಹಾರಾಷ್ಟ್ರದಲ್ಲಿ, ಮದ್ರಾಸ್ ನಲ್ಲಿ ಮತ್ತು ಭಾರತದ ಕೆಲವು ನಗರಗಳಲ್ಲಿ ಹಲವಾರು ಮಹತ್ವದ ಕಟ್ಟಡಗಳನ್ನು ಬಿ.ವಿ.ಎಸ್. ಅಯ್ಯಂಗಾರರ ತಂಡ ನಿರ್ಮಿಸಿತು. ದಕ್ಷಿಣ ಮುಂಬಯಿನ ಕೋಟೆ ಪ್ರದೇಶದ 'ಫಿರೋಜ್ ಶಾ ಮೆಹ್ತಾ ರಸ್ತೆ'ಯಲ್ಲಿ ಅವರು ನಿರ್ಮಿಸಿದ ಕಟ್ಟಡಗಳು, ಇಂದಿಗೂ ಚಿರಸ್ಮರಣೀಯವಾಗಿವೆ. ಬ್ರಿಟಿಷ್ ಸರಕಾರದ ಆಫೀಸರಿಗಾಗಿಯೇ ಪಿ.ಡಬ್ಲ್ಯು ಕಟ್ಟಡಗಳು, ಮತ್ತು ಆರ್ಮಿಯಲ್ಲಿ ದುಡಿಯುವ ಧುರೀಣರಿಗಾಗಿಯೇ ನಿರ್ಮಿಸಿದ ಕಟ್ಟಡಗಳು ಅಪಾರ ಜನಪ್ರಿಯತೆಯನ್ನು ಗಳಿಸಿದವು.

  • ವಾರ್ಡನ್ ಇನ್ಸೂರೆನ್ಸ್ ಬಿಲ್ಡಿಂಗ್,
  • ಯುನೈಟೆಡ್ ಇನ್ಸೂರೆನ್ಸ್ ಬಿಲ್ಡಿಂಗ್
  • ಕೊ-ಆಪರೇಟೀವ್ ಇನ್ಸೂರೆನ್ಸ್ ಬಿಲ್ಡಿಂಗ್,
  • ಕಸ್ತೂರಿ ಬಿಲ್ಡಿಂಗ್,
  • ಮೈಸೂರ್ ಹೌಸಿಂಗ್ ಕಾಲೋನಿಯಲ್ಲಿ ಬಂಗಲೆಗಳ ನಿರ್ಮಾಣ (ಚೆಂಬೂರಿನಲ್ಲಿ)

ಮಾಟುಂಗ ಜಿಲ್ಲೆಯಲ್ಲಿ

[ಬದಲಾಯಿಸಿ]

'ಬಿ.ವಿ.ಎಸ್. ರ, ದಿನ ಚರಿ

[ಬದಲಾಯಿಸಿ]
  • ಬಿ.ವಿ.ಎಸ್. ಪ್ರತಿ ಶನಿವಾರ ಸಾಯಂಕಾಲ ಮಾಟುಂಗದ 'ಭಜನ್ ಸಮಾಜ'ದಲ್ಲಿ 'ಗೋಪಾಲಾಚಾರ್ಯ' ಮತ್ತು 'ದೇಶಿಕಾಚಾರ್' ಪ್ರವಚನ ಕೇಳಿದ ಬಳಿಕ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು. ಮೈಸೂರ್ ಅಸೋಸಿಯೇಷನ್ ನ ಫುಟ್ಬಾಲ್ ಮೈದಾನದಲ್ಲಿ ಆಗಾಗ, ಸೀತಾರಾಮ್ ಜೊತೆ (ಕೇಶವಮೂರ್ತಿಗಳ ಮಗ), ಕುಳಿತು ಆಟವನ್ನು ವೀಕ್ಷಿದುತ್ತಿದ್ದರು. ದಕ್ಷಿಣ ಮುಂಬಯಿನ ಸಿನೆಮಾ ಥಿಯೇಟರ್ ಗಳಲ್ಲಿ ಪ್ರತಿ ಶುಕ್ರವಾರ ಯಾವುದಾದರೊಂದು ಇಂಗ್ಲೀಷ್ ಚಲನ ಚಿತ್ರವನ್ನು ನೊಡುತ್ತಿದ್ದರು.
  • ತಮ್ಮಬಳಿ ಹಲವಾರು ವಿದೇಶಿ ಬ್ರಾಂಡ್ ಗಳ ಕಾರುಗಳಾದ ಹಂಸ, ಡಾಡ್ಜ್, ಚವರ್ಲೆಟ್, ಮಾರಿಸ್,ಮೊದಲಾದ ಕಾರ್ ಗಳನ್ನು ಕಲೆಹಾಕಿದ್ದರು. ತಾವೇ ಸ್ವತಃ ಡ್ರೈವ್ ಮಾಡುತ್ತಿದ್ದರು. 'ಮೈಸೂರು ಅಸೋಸಿಯೇಷನ್' ನಲ್ಲಿ ಸಾಯಂಕಾಲದವರೆಗೆ ಕಾಲಕಳೆದು, ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಮನೆಯಲ್ಲಿ ಮತ್ತು ಮದುವೆ,ಮುಂಜಿ, ಮೊದಲಾದ ಸಮಾರಂಭಗಳಲ್ಲಿ ಭಾರತೀಯ ಉಡುಗೆಯಲ್ಲಿರುತ್ತಿದ್ದರು.
  • ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 'ಸೂಟ್-ಬೂಟ್-ಟೈ' ಇಲ್ಲದೆ ಹೊರಡುತ್ತಿರಲಿಲ್ಲ. 'ಸಯಾಂ ರೈಲ್ವೆ ಸ್ಟೇಷನ್' ಹತ್ತಿರ 'ದೇವೀನಿವಾಸ್' ಎಂಬ ಮನೆಯನ್ನು ಕಟ್ಟಿಸಿದರು. ಅಸೋಸಿಯೇಷನ್ ಗೆ ಬರುವ ಯುವ ಜನಕ್ಕೆ, ವಸತಿಗಾಗಿ ಮನೆ ಸಿಗುವುದು ಬಹಳ ಕಷ್ಟವಿತ್ತು. ಬಿ.ವಿ.ಎಸ್ ಅಂಥವರಿಗೆ ಸುಲಬದರದಲ್ಲಿ ತಮ್ಮ ದೇವಿನಿವಾಸದಲ್ಲಿ ಬಾಡಿಗೆಗೆ ಕೊಡುತ್ತಿದ್ದರು. ನಂತರ ಆ ಯುವಕರು ಮದುವೆ ಮಾಡಿಕೊಂಡು ಸಂಸಾರಹೂಡಲು ಸಹಾಯವಾಗುತ್ತಿತ್ತು.

ಮೈಸೂರ್ ಹೌಸಿಂಗ್ ಕಾಲೋನಿ

[ಬದಲಾಯಿಸಿ]
  • ಆರ್.ವಿ.ಮೂರ್ತಿ, ಬಿ. ನಾರಾಯಣಸ್ವಾಮಿ, ವಿ.ಕೆ.ಆರ್.ವಿ.ರಾವ್, ಸುಬ್ರಹ್ಮಣ್ಯಂ, ಬಿ.ಕೆ. ಗರುಡಾಚಾರ್, ಆರ್.ಡಿ.ಚಾರ್, ಡಾ. ಆರ್.ಎಲ್.ಎನ್.ಅಯ್ಯಂಗಾರ್, ಮೊದಲಾದ ಮುಂಬಯಿನ ಗಣ್ಯ ವ್ಯಕ್ತಿಗಳು ಚೆಂಬೂರಿನ ಹತ್ತಿರದ 'ಅನಿಕ್ ವಿಲೇಜ್' ಬಳಿ, ಬಂಗಲೆಗಳ ಮಾದರಿಯ, ಒಂದು 'ದೊಡ್ಡ ಹೌಸಿಂಗ್ ಕಾಲೋನಿ'ಯನ್ನು ನಿರ್ಮಿಸಿದರು. ಅದಕ್ಕೆ 'ಮೈಸೂರ್ ಹೌಸಿಂಗ್ ಎಂದು ಹೆಸರಿಟ್ಟರು.
  • ಬಿ.ವಿ.ಎಸ್.ಅಯ್ಯಂಗಾರ್, ಆ ಭವ್ಯ ಬಂಗಲೆಗಳ ಶಿಲ್ಪಿಯಾಗಿದ್ದರು. ಮುಂಬಯಿನ, ಚೆಂಬೂರ್ ರೈಲ್ವೆ ನಿಲ್ದಾಣದಿಂದ ಕಾರಿನಲ್ಲಿ ಅನಿಕ್ ವಿಲೇಜ್ ದಾರಿಯಲ್ಲಿ ಬಂದರೆ, ಮೈಸೂರು ಕಾಲೋನಿಗೆ, ೬ ಕಿ.ಮೀ. (೩.೦೦ಮೈಲಿಗಳು) ಹೆಚ್ಚು ರೋಡ್ ನಲ್ಲಿ ವಾಹನ ಸಂಚಾರವಿಲ್ಲದಿದ್ದರೆ, ತಲುಪಲು, ೧೧ ನಿಮಿಷ ಸಮಯ ಹಿಡಿಯುತ್ತದೆ. (ಮೈಸೂರ್ ಕಾಲೋನಿ, ಶೆಲ್ ಕಾಲೋನಿಯ ಸಮೀಪದಲ್ಲಿದೆ)
' ಮದ್ವೆ ಮಾಡ್ಕೊಳ್ರೋ'

ಆಗಿನ್ನೂ ಕಿರಿಯರಾಗಿದ್ದಾಗಿನ ತಮಗೆ ಹೇಳುತ್ತಿದ್ದ ಬಿ.ವಿ.ಎಸ್.ಅಯಂಗಾರ್ ರ ಮಾತುಗಳನ್ನು ಇಂದಿನ ಹಿರಿಯರು ಕೃತಜ್ಞತೆಯಿಂದ ಇಂದಿಗೂ ನೆನೆಸಿಕೊಳ್ಳುತ್ತಾರೆ.

ಗೋಕುಲಾಷ್ಟಮಿ ಹಬ್ಬದ ಸಂಭ್ರಮ

[ಬದಲಾಯಿಸಿ]

ಪ್ರತಿವರ್ಷವೂ 'ಗೋಕುಲಾಷ್ಟಮಿ ಹಬ್ಬ'ದಂದು ಶುರುವಾಗಿ ಒಂದು ವಾರ ಪರ್ಯಂತ ತಮ್ಮ ಮನೆಯಲ್ಲಿ ಹಬ್ಬವನ್ನು ಆಚರಿಸಿ, ಬಹಳ ಗೆಳೆಯರು, ಆಪ್ತರು, ಮತ್ತು ಗುರುತಿರುವ ಕನ್ನಡಿಗರಿಗೆ ಆತಿಥ್ಯ ನೀಡುತ್ತಿದ್ದರು.

'ಬಿ.ವಿ.ಎಸ್.ಅಯ್ಯಂಗಾರರು ತಮ್ಮ ೭೭ ನೆಯ ವಯಸ್ಸಿನಲ್ಲಿ, ೧೯೭೭ ರಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]
  1. Bindiganavile, /wikiedit.org
  2. 'ನೇಸರು ಪತ್ರಿಕೆ, ಪು. 'Builders of Modern India, BVS Iyengar'-Dr.B.R.Manjunath
  3. wikipedid.org. List of Dewans of Mysore,
  4. "'Mountains of Travel Photos', 'Mumbai India Photo Gallery - Heritage Buildings'". Archived from the original on 2015-03-16. Retrieved 2015-02-12.
  5. 'A Joint Enterprise: Indian Elites and the Making of British Bombay'-By Preeti Chopra
  6. 'City of Gold: The Biography of Bombay'-By Gillian Tindall
  7. The Journey begins Hon. Architect : B. V. S. Iyengar