ಬಿ.ಪಿ.ಕಾಳೆ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಬಿ.ಪಿ.ಕಾಳೆ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಇಂತಿವೆ:
ಭಿ.ಪ.ಕಾಳೆ
ಸು. ೧೮೮೯ .ಕನ್ನಡ ಗ್ರಂಥಕರ್ತ, ಪ್ರಕಾಶಕ, ಮುದ್ರಕ, ಭಿಕಾಜಿಪಂತ ಕಾಳೆ ಎಂಬುದು ಇವರ ಪೂರ್ಣನಾಮ. ಭಿ. ಪ. ಕಾಳೆ ಎಂದು ಪ್ರಸಿದ್ಧರಾಗಿದ್ದಾರೆ. ಇವರು ಕೆಲವು ಪತ್ತೇದಾರಿ ಕಾದಂಬರಿಗಳನ್ನೂ ಬರೆದಿದ್ದಾರೆ.
ಬದುಕು ಮತ್ತು ಸಾಹಿತ್ಯ
[ಬದಲಾಯಿಸಿ]ಇವರ ತಂದೆ ಪರಶುರಾಮ ಪಂತ. ಕಾಳೆ ಎಂಬುದು ಮನೆತನದ ಹೆಸರು.
ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಾಂಸಿ ಗ್ರಾಮದಲ್ಲಿ 1889ರ ಜನವರಿ 20ರಂದು ಇವರ ಜನನ. ಆಗ ಇದು ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿದ್ದು ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿಯಾಗಿದ್ದುದರಿಂದ ಅವರ ಆಡಳಿತದ ಭಾಷೆಯೂ ಮರಾಠಿಯೇ ಆಗಿತ್ತು. ಎಂತಲೇ ನೂರರಲ್ಲಿ ನೂರು ಜನ ಕನ್ನಡಿಗರಿಂದಲೇ ತುಂಬಿದ್ದ ಸಾಂಸಿ ಗ್ರಾಮವೂ ಮರಾಠಿಯ ಪ್ರಭಾವಕ್ಕೆ ಒಳಗಾಗಿತ್ತು.
ಆಡಳಿತಭಾಷೆಯ ಕಾರಣದಿಂದಲೇ ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ನೆಲಸಿತು. ಕಾಳೆಯವರ ಮನೆ ಮಾತು ಮರಾಠಿಯಾದರೂ ಅವರ ಪ್ರಾಥಮಿಕ ಶಿಕ್ಷಣ ಕನ್ನಡಭಾಷೆಯಲ್ಲೆ ಆಯಿತು. ಆ ಕಾಲದ ಪ್ರಾಥಮಿಕ ಶಾಲೆಯ ಕೊನೆಯ ಫಟ್ಟವಾದ ಮುಲಕೀ ಪರೀಕ್ಷೇಯಲ್ಲಿ ಕಾಳೆಯವರು ತೇರ್ಗಡೆ ಹೊಂದಿದರಲ್ಲದೆ, ನಾಲ್ಕನೆಯ ತರಗತಿಯವರೆಗೆ ಇಂಗ್ಲಿಷ್ ಶಾಲೆಯಲ್ಲಿ ಓದಿದರು.
ಹಾವೇರಿ ತಾಲ್ಲೂಕಿನ ಅಗಡಿಯ ಬಳಿಯ ಆನಂದವನ ಅಗ್ರಹಾರದಲ್ಲಿ, ಸದ್ಬೋಧಚಂದ್ರಿಕೆ ಮಾಸಪತ್ರಿಕೆಗಾಗಿ ಆರಂಭವಾದ ಒಂದು ಚಿಕ್ಕ ಮುದ್ರಣಾಲಯದ ವ್ಯವಸ್ಥಾಪಕರಾಗಿ ಕಾಳೆಯವರು 1909ರಲ್ಲಿ ಅಲ್ಲಿಗೆ ಹೋದರು. ಗಳಗನಾಥರ ಮೊದಮೊದಲಿನ ಪುಸ್ತಕಗಳೆಲ್ಲ ಇವರ ವ್ಯವಸ್ಥಾಪಕತ್ವದಲ್ಲಿಯೇ ಮುದ್ರಿತವಾಗುತ್ತಿದ್ದುವು. ಸದ್ಬೋಧ ಚಂದ್ರಿಕೆ ಮಾಸಪತ್ರಿಕೆಯ ವ್ಯವಸ್ಥಾಪಕರೂ ಇವರೇ ಆಗಿದ್ದರು. ಗಳಗನಾಥರು ಆನಂದವನವನ್ನು ಬಿಟ್ಟು ಹೊರಟಮೇಲೆ, ಸದ್ಬೋಧಚಂದ್ರಿಕೆಯ ಹೆಚ್ಚಿನ ಹೊಣೆಯನ್ನು ಇವರೇ ಹೊರಬೇಕಾಯಿತು. ಈ ಅವಧಿಯಲ್ಲಿ ಕಾಳೆಯವರು 20ಕ್ಕಿಂತ ಹೆಚ್ಚು ಐತಿಹಾಸಿಕ, ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಬರೆದು ಪ್ರಕಟಿಸಿದರು. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯವು ಮರಾಠಿಯಿಂದ ಭಾಷಾಂತರಿಸಿದವು; ಅನುವಾದಿಸಿದವು. ಮಹಾರಾಷ್ಟ್ರದ ಸುಪ್ರಸಿದ್ಧ ಸಾಹಿತ್ಯಿಕರಾದ ದಿ. ನ. ಚಿಂ. ಕೇಳಕರರ ಮರಾಠಾ ಆಣಿ ಇಂಗ್ರಜ ಎಂಬ ಇತಿಹಾಸ ಗ್ರಂಥವನ್ನೂ ಪ್ರಕಟಿಸಿದರು.
ಮಕ್ಕಳ ಶಿಕ್ಷಣಕ್ಕಾಗಿ ಇವರು ಆನಂದವನವನ್ನು ಬಿಡಬೇಕಾಯಿತು. ಧಾರವಾಡದ ಮದೀಹಾಳ ಭಾಗದಲ್ಲಿ ಮನೆಮಾಡಿ ಇರತೊಡಗಿದರು. ಇಲ್ಲಯೂ ಒಂದು ಚಿಕ್ಕ ಮುದ್ರಣಾಲಯವನ್ನು ಇರಿಸಿಕೊಂಡು, ಮತ್ತು ಹನ್ನೆರಡು ವರ್ಷಗಳವರೆಗೆ ತಮ್ಮ ಕೃತಿಗಳನ್ನು ಪುನರ್ಮುದ್ರಿಸುವ ಕಾರ್ಯ ನಡೆಸಿದರು. ಈಗ ಆ ಮುದ್ರಣಾಲಯವನ್ನು ಧಾರವಾಡದ ಜನತಾ ವಿದ್ಯಾಸಂಸ್ಥೆಗೆ ದಾನವಾಗಿ ಕೊಟ್ಟಿದ್ದಾರೆ. ಕಾಳೆಯವರು ತಮ್ಮ ವೃದ್ಧಾಪ್ಯ ಜೀವನವನ್ನು ಧಾರವಾಡದಲ್ಲಿಯೇ ಕಳೆಯುತ್ತಿದ್ದಾರೆ.
ಕೆಲವು ಕಾದಂಬರಿಗಳು
[ಬದಲಾಯಿಸಿ]- ಅಂಬಿಕೆ
- ಇಂದುಮುಖಿ
- ಘಾತಕ ಶಶಿಕಂಠ
- ವಿಚಿತ್ರ ಚಟ
- ಸೇಡಿನ ಯಜ್ಞ