ಭಾಸ್ಕರ ಅನಂದ ಸಾಲೆತ್ತೂರು

ವಿಕಿಪೀಡಿಯ ಇಂದ
(ಬಿ.ಎ.ಸಾಲೆತೊರೆ ಇಂದ ಪುನರ್ನಿರ್ದೇಶಿತ)
Jump to navigation Jump to search

ಭಾಸ್ಕರ ಆನಂದ ಸಾಲೆತೊರೆ ಇವರು ಕರ್ನಾಟಕದ ಪ್ರಸಿದ್ಧ ಪ್ರಾಚ್ಯ ಸಂಶೋಧಕರು. ಇವರ ಜನನ ೧೯೦೨ನೆಯ ಇಸವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯಿತು.

ಶಿಕ್ಷಣ[ಬದಲಾಯಿಸಿ]

ಆರಂಭದ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ ಸಾಲೆತೊರೆಯವರು ಮದ್ರಾಸ ವಿಶ್ವವಿದ್ಯಾಲಯದಿಂದ ಬಿ.ಟಿ. ಪದವಿಯನ್ನು ಹಾಗು ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದರು. ೧೯೩೧ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಅಧ್ಯಯನವನ್ನು ಮಾಡಿದರು. ೧೯೩೩ರಲ್ಲಿ ಜರ್ಮನಿಯ ಗೈಸೆನ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರವನ್ನು ಅಭ್ಯಸಿಸಿದರು.

ಸಂಶೋಧನೆ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯದ ಸಾಮಾಜಿಕ ಹಾಗು ಸಾಂಸ್ಕೃತಿಕ ಜೀವನ ಇದು ಲಂಡನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್.ಡಿ ಪದವಿಗಾಗಿ ಸಾಲೆತೊರೆಯವರು ಬರೆದ ಮಹಾಪ್ರಬಂಧ. ವಿಜಯನಗರ ಸ್ಥಾಪಕರಾದ ಸಂಗಮ ವಂಶದವರ ಮೂಲವನ್ನು ಈ ಹೊತ್ತಿಗೆಯಲ್ಲಿ ಸಂಶೋಧಿಸಲಾಗಿದೆ ; ಹಾಗು ವಿಜಯನಗರ ಸಾಮ್ರಾಜ್ಯ ನಿಸ್ಸಂಶಯವಾಗಿಯೂ ಕನ್ನಡ ಸಾಮ್ರಾಜ್ಯವೆಂದು ಪ್ರಮಾಣಪೂರ್ವಕವಾಗಿ ಸಾಧಿಸಿ ತೋರಿಸಲಾಗಿದೆ.

ಸಂಶೋಧನಾ ಕೃತಿಗಳು[ಬದಲಾಯಿಸಿ]

  • ವಿಜಯ ನಗರ ಸಾಮ್ರಾಜ್ಯದ ಸಾಮಾಜಿಕ ಹಾಗು ಸಾಂಸ್ಕೃತಿಕ ಜೀವನ
  • ಪುರಾತನ ಕರ್ನಾಟಕ---ತುಳುವರ ಇತಿಹಾಸ
  • ಮಧ್ಯಯುಗೀನ ಜೈನಧರ್ಮ (ವಿಶೇಷತ: ವಿಜಯನಗರ ಸಾಮ್ರಾಜ್ಯದ ಸಂಬಂಧಗಳು)
  • ಕರ್ನಾಟಕದ ಸಾಗರೋತ್ತರ ಸಂಪರ್ಕಗಳು
  • ಗುಜರಾಥ ಇತಿಹಾಸದಲ್ಲಿಯ ಪ್ರಮುಖ ವಾಹಿನಿಗಳು
  • ಪೂರ್ವದೊಡನೆ ಭಾರತದ ರಾಜಕೀಯ ಸಂಬಂಧಗಳು


ಭಾಸ್ಕರ ಆನಂದ ಸಾಲೆತೊರೆಯವರು ೧೯೬೩ರಲ್ಲಿ ನಿಧನರಾದರು.