ಬಿ.ಎನ್.ಮುನಿಯಪ್ಪ
ಟಿ.ಎನ್.ಸೀತಾರಾಂ ರವರು ನಿರ್ದೇಶಿಸುತ್ತಿರುವ 'ಮುಕ್ತಾ ಮುಕ್ತಾ' ಟೆಲಿವಿಶನ್ ಧಾರಾವಾಹಿಯಲ್ಲಿ 'ಮುನಿಯಪ್ಪ'ನವರ ಪಾತ್ರವಹಿಸಿ ಕರ್ನಾಟಕದ ಜನತೆಗೆ ಚಿರಪರಿಚಿತರಾಗಿರುವ 'ರಾಜಕಾರಣಿ'ಯ ನಿಜವಾದ ಹೆಸರು,ಬಿ.ಎನ್.ಮುನಿಯಪ್ಪಎಂದು. 'ಮುನಿಯಪ್ಪನವರು,ನಿಜಜೀವನದಲ್ಲಿ ರಾಜಕಾರಣಿ. ನಟರಲ್ಲ. ದೇವೇಗೌಡರು ಹುಟ್ಟುಹಾಕಿಬೆಳೆಸಿದ 'ಜೆ.ಡಿ.ಎಸ್. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ'ಯಾಗಿ ದುಡಿಯುತ್ತಿದ್ದಾರೆ. ಇವರು, ಅನಿಲ್ ಲಾಡ್ ರವರ ಶಿಷ್ಯ.
ಮಾಯಾಮೃಗ ಧಾರಾವಾಹಿಯಿಂದ ಆರಂಭ
[ಬದಲಾಯಿಸಿ]ನಿರ್ದೇಶಕ, ಸೀತಾರಾಂ, ಜೀವರಾಜ ಆಳ್ವ, ಹೆಗಡೆಯವರನ್ನು ಕಾಣಲು ಲೋಕಶಕ್ತಿ ಪಕ್ಷದ ಕಚೇರಿಗೆ ಆಗಾಗ ಬರುತ್ತಿದ್ದರು. ಮಾಯಾಮೃಗ ಧಾರವಾಹಿ ಪ್ರಾರಂಭವಾದ ಸಮಯದಲ್ಲಿ ಒಂದು ಗುಂಪಿನಲ್ಲಿ ನಿಲ್ಲಲು ಜನರ ದೃಷ್ಯಕ್ಕೆ ಈ ತರಹದ ವ್ಯಕ್ತಿ ಬೇಕಿತ್ತು. ಹಾಗೇ ನಿಂತಿದ್ದಾಗ ತಮಗೂ ಏನಾದರೂ ಒಂದು ಮಾತು ಕೊಡಿಯೆಂದು 'ಸೀತಾರಾಂ' ರವರನ್ನು ಕೇಳಿದರು. ಆಗ ಸೀತಾರಾಂ,ದೃಷ್ಯಕ್ಕೆ ಸರಿಹೊಂದುವ ಪಾತ್ರವನ್ನೇ ನಟಿಸಲು ಕೊಟ್ಟರು. ಹಾಗಾಗಿ ಮುನಿಯಪ್ಪನವರಿಗೆ ಅರಿವಿಲ್ಲದೆಯೇ ಮುಕ್ತಾ ಮುಕ್ತಾ ಧಾರಾವಾಹಿಯ 'ಪಾರ್ಟಿ ಅಧ್ಯಕ್ಷ ಮುನಿಯಪ್ಪನ ಪಾತ್ರ' ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿತು. ಮುಂದೆ ಮನ್ವಂತರದಲ್ಲೂ ಅವಕಾಶ ದೊರೆಯಿತು. ಮುನಿಯಪ್ಪನವರು 'ಸೀತಾರಾಂ' ರವರನ್ನು ಸ್ವಾಮಿಎಂದೇ ಸಂಬೋಧಿಸುತ್ತಾರೆ. ಪಾತ್ರಗಳ ಮಾತನ್ನು ಹೇಳಿಕೊಟ್ಟಂತೆ ಹೇಳಿ ಒಪ್ಪಿಸುವುದರಲ್ಲಿ ಅವರು ಎತ್ತಿದ ಕೈ. ಮಾಗಡಿತಾಲ್ಲೂಕು ತಾವರೇಕೆರೆ ಹೈಸ್ಕೂಲ್ ನಲ್ಲಿ ಓದುವಾಗ ವಿದ್ಯಾರ್ಥಿಗಳ ಮುಖಂಡರಾಗಿದ್ದರು. ಮುಂದೆ 'ವಿಶ್ವೇಶ್ವರಪುರಂ ಕಾಲೇಜ್' ನಲ್ಲಿ ವಿದ್ಯಾಭ್ಯಾಸಮಾಡಲು ಬಂದಾಗ ಆಳ್ವ ಸಾಹೇಬರ ಶಿಷ್ಯರಾದರು.
ಹುಟ್ಟೂರು,ಪರಿವಾರ
[ಬದಲಾಯಿಸಿ]ಚಿಕ್ಕಬಳ್ಳಾಪುರ ತಾಲ್ಲೂಕಿನದ ಬಾಲಕುಂಟನಹಳ್ಳಿ ಇವರ ಹುಟ್ಟೂರು. ತಾತ, ಮುನಿಶಾಮಪ್ಪ ಮರಣಪರ್ಯಂತ 'ಛೇರ್ಮನ್' ಆಗಿದ್ದರು. ಅಜ್ಜಿ 'ವೈಸ್ ಛೇರ್ಮನ್'. ಹಳ್ಳಿಯಲ್ಲಿ ಇಬ್ಬರು ಅಣ್ಣಂದಿರು,ವ್ಯವಸಾಯವನ್ನು ಅವಲಂಭಿಸಿದ್ದಾರೆ. ಹೆಂಡತಿ,ಲಲಿತ.ಇಬ್ಬರು ಮಕ್ಕಳು. ದೀಪಕ್ ಗೌಡ, ಮತ್ತು ಕೀರ್ತನ ಗೌಡ ಇಬ್ಬರೂ ವಿದ್ಯಾಭ್ಯಾಸಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ಮಾಡಿದ ಪಾತ್ರಗಳಿಂದ ಹಣಗಳಿಸಿದ್ದಲ್ಲದೆ ಒಳ್ಳೆಯ ಜನಪ್ರಿಯತೆಯೂ ಬೆನ್ನಹಿಂದೆ ಬಂತು.