ಬಿಗ್ ಬ್ಯಾಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಗ್ ಬ್ಯಾಂಗ್ ವಾದ[ಬದಲಾಯಿಸಿ]

Universe expansion2.png

ನಮ್ಮ ಜಗತ್ತಿನ ಸೃಷ್ಟಿಸಲು ಕಾರಣವೇ ಬಿಗ್ ಬ್ಯಾಂಗ್ (ಇದನ್ನು ಬಿಗ್ ಬ್ಯಾಂಗ್ ಸಿದ್ಧಾಂತ ಅಥವಾ ಬಿಗ್ ಬ್ಯಾಂಗ್ ಮಾಡೆಲ್ ಎನ್ನುತ್ತಾರೆ). ಬಿಗ್ ಬ್ಯಾಂಗ್ ಪ್ರಕಾರ ನಮ್ಮ ಜಗತ್ತು ಮೊದಲು ಅತಿಯಾದ ಶಾಖದಿಂದ ಕುದಿಯುತ್ತಿದ್ದು ಹಾಗೂ ಅತಿ ಭಾರವಾದ (ಸಾಂದ್ರ) ಸ್ಥಿತಿಯಲ್ಲಿ ಇದ್ದದ್ದು ವೇಗವಾಗಿ ಹರಡಿ, ನಂತರ ತಣ್ಣಗಾಗಿ ಈಗಿನ ಸ್ಥಿತಿ ತಲುಪಿದೆಯಲ್ಲದೆ ಈಗಲೂ ಅದು ಹಾಗೆಯೇ ಹಬ್ಬುತ್ತಿದೆ. ೨೦೧೦ರ ಅಳತೆಯ ಪ್ರಕಾರ ಅಸಲಿ ವಿಶ್ವವು ಸುಮಾರು ೧೩.೭ ಬಿಲಿಯನ್ ವರ್ಷ ಹಳೆಯದು.


ಜಾರ್ಜ್ ಲೆಮಯಾತ್ರಿ "ಹೈಪಾಥಿಸಿಸ್ ಆಫ಼್ ಪ್ರೈಮ್‍ವ್ಯಾಲ್ ಆಟಮ್" ಎಂಬ ಸಿದ್ದಾಂತವು ಈಗ "ಬಿಗ್ ಬ್ಯಾಂಗ್ ಥಿಯರಿ" ಆಗಿದೆ. ಆಲ್ಬರ್ಟ್ ಐನ್‍ಸ್ಟೈನ್‍ರವರ ಜನರಲ್ ರಿಲೇಟಿವಿಟಿ ಹಾಗೂ ಹೋಮೋಜೀನಿಟಿ ಮತ್ತು ಐಸೋಟ್ರೋಪಿ ಸಿದ್ದಾಂತಗಳ ತಳಹದಿಯ ಮೇಲೆ ವಿವರಿಸಲ್ಪಟ್ಟಿದೆ.


ವೈಜ್ಞಾನಿಕ ಆಧಾರಗಳು ಮತ್ತು ಅವಲೋಕನಗಳಿಂದ ಬಿಗ್ ಬ್ಯಾಂಗ್ ವಾದವು ಸಮಗ್ರ ಮತ್ತು ನಿಖರವಾಗಿದೆಯೆಂದು ಪರಿಗಣಿಸಲಾಗುತ್ತಿದೆ.