ಬಾವಂತಬೆಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾವಂತಬೆಟ್ಟು(Bavantabettu) ಎನ್ನುವುದು ತುಳು ಜೈನ ಇಂದ್ರರು ನೆಲೆಸಿರುವ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಕಲ್ಲೇರಿಯಿಂದ ೪ ಕಿಮೀ ದೂರವಿರುವ ಗ್ರಾಮವಾಗಿದೆ.

ಈ ಗ್ರಾಮವು ಕಲ್ಲೇರಿಯಿಂದ ಮಡಂತ್ಯಾರಿಗೆ ತೆರಳುವ ಹಾದಿಯಲ್ಲಿದ್ದು, ಈ ಪ್ರದೇಶವನ್ನು ಖಾಸಗಿ ಬಸ್‌ನವರು ಸ್ಟೋರ್ ಎಂಬ ನಿಲುಗಡೆಯ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ಮುಖ್ಯವಾಗಿ ನಾಲ್ಕು ತುಳು ಜೈನ ಇಂದ್ರರ ಕುಟುಂಬಗಳು ನೆಲೆಸಿವೆ. ಇತರ ಜನರು ಮತ್ತು ಕಾಫಿ ಮತ್ತು ಅಡಿಕೆಯ ತೋಟಗಳಿಂದ ಸುತ್ತುವರಿದ ಈ ಪ್ರದೇಶವು ಬಹು ಸುಂದರವಾಗಿದೆ.