ವಿಷಯಕ್ಕೆ ಹೋಗು

ಬಾಳೆ ಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಳೆ ಗಿಡ

ಬಾಳೆ ಗಿಡದ ಬಗ್ಗೆ

[ಬದಲಾಯಿಸಿ]

ಹಬ್ಬ ಹರಿದಿನಗಳೆಂದರೆ ದೇವರು ಭಕ್ತಿ , ಪೂಜೆ ಒಂದು ಕಡೆಯಾದರೇ, ದೇವರ ನೈವೇದ್ಯದ ಹೆಸರಿನಲ್ಲಿ ಬಗೆ ಬಗೆಯ ಭಕ್ಷ್ಕಗಳನ್ನು ತಯಾರಿಸಿ ದೇವರಿಗೆ ನಿವೇದಿಸಿ ನಂತರ ಪ್ರಸಾದ ರೂಪದಲ್ಲಿ ಅದನ್ನು ಸೇವಿಸುವುದು ನಡೆದು ಬಂದ ಸಂಪ್ರದಾಯ. ದಿನ ನಿತ್ಯ ತಟ್ಟೆಗಳಲ್ಲಿ ಸೇವಿಸಿದರೆ ವಿಶೇಷ ದಿನಗಳಂದು ಬಾಳೆಎಲೆಯ ಮೇಲೆ ಊಟಊಟ ಮಾಡುವುದೇ ಒಂದು ವಿಸಿಷ್ಟ ಅನುಭವ. ಮದುವೆ ಮುಂಜಿ , ನಾಮಕರಣ ಮುಂತಾದ ಶುಭ ಕಾರ್ಯಕ್ರಮವಿರಲೀ ಇಲ್ಲವೇ ತಿಥಿಯಂತ ಅಶುಭ ಕಾರ್ಯಕ್ರಮಗಳಲ್ಲಿ ಹಲವಾರು ಜನರಿಗೆ ಊಟ ಬಡಿಸಲು ಅಷ್ಟೊಂದು ತಟ್ಟೆಗಳನ್ನು ಎಲ್ಲಿಂದ ತರಲು ಸಾಧ್ಯ? ಅಂತಹ ಸಮಯದಲ್ಲಿ ಬಾಳೆಎಲೆ ಸುಲಭವಾಗಿ ಸಿಗುವ ಸಾಧನವಾಗಿದೆ. ಬಿಸಿ ಬಿಸಿಯಾದ ಆಹಾರವನ್ನು ಬಾಳೆ ಎಲೆಯಬಾಳೆ ಎಲೆ ಮೇಲೆ ಹರಡಿ ಅದರ ಮೇಲೆ ಒಂದು ಮಿಳ್ಳೆ ತುಪ್ಪಾ ಜೊತೆಗೆ ಸಾರು ಇಲ್ಲವೇ ಹುಳಿಯನ್ನು ಕಲಿಸಿ ಸೊರ್ ಸೊರ್ ಎಂದು ತಿನ್ನುವಾಗ ಆಗುವ ಮಜವೇ ಬೇರೆ.ಆ ಮಜವನ್ನು ರಸವತ್ತಾಗಿ ವಿವರಿಸುವುದಕ್ಕಿಂತ ಅನುಭವಿಸಿದರೇ ಹೆಚ್ಚಿನ ಖುಷಿ ಕೊಡುತ್ತದೆ. ಅದಕ್ಕಾಗಿಯೇ ಇಂದು ಅನೇಕ ಹೋಟೆಲ್ಗಳಲ್ಲಿ ತಟ್ಟೆಯ ಮೇಲೆ ಅಲಂಕಾರಿಕವಾಗಿ ಬಾಳೇ ಎಲೆಗಳನ್ನು ಕತ್ತರಿಸಿ ಹರಡಿ ತಮ್ಮ ಗ್ರಾಹಕರಿಗೆ ಬಾಳೇ ಎಲೆ ಊಟದ ಅನುಭವವನ್ನು ಕೊಟ್ಟರೇ, ಇನ್ನೂ ಅನೇಕ ಹೋಟೇಲ್ಗಳು ಬಾಳೇಎಲೆಯ ಊಟದ ಹೋಟೆಲ್ ಹೋಟೆಲ್ ಎಂದೇ ಖ್ಯಾತಿ ಪಡೆದು ಕೊಂಡಿವೆ. ಈ ರೀತಿಯಾಗಿ ಗ್ರಾಹಕರನ್ನು ಮರಳು ಮಾಡಿ ಸ್ವಾಮಿ ಕಾರ್ಯದ ಜೊತೆಗೆ ಸ್ವಹಿತಾಸಕ್ತಿಯ ಕಾರ್ಯವನ್ನು ಸಾಧಿಸುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಆದರೆ ಈ ಬಾಳೇ ಎಲೆಯ ಊಟ ಕೇವಲ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ, ನಮ್ಮ ದೇಹಕ್ಕೆ ಆರೋಗ್ಯಕರವೂ ಹೌದು. ಇದರ ಇತರೇ ಅನುಕೂಲಗಳು ಈ ರೀತಿಯಾಗಿವೆ. ಸಾಮಾನ್ಯವಾಗಿ ಬಾಳೆ ಎಲೆಯ ಮೇಲೆ ಬಿಸಿ ಬಿಸಿಯಾದ ಆಹಾರವನ್ನು ಬಡಿಸಿದಾಗ ಬಾಳೆ ಎಲೆ ಕಪ್ಪಾಗುವುದನ್ನು ಗಮನಿಸಿರಬಹುದು. ಬಾಳೆ ಎಲೆಯ ಮೇಲ್ಪದರದಲ್ಲಿ ನೈಸರ್ಗಿಕವಾದ ಕ್ಯಾಟೆಚಿನ್‌ ಗ್ಯಾಲೆಟ್‌ ಎಂಬ ಪಾಲಿಫಿನಾಲ್‌ ಅಂಶ ಆವರಿಸಿರುತ್ತದೆ. ಬಿಸಿಯಾದ ಆಹಾರವನ್ನು ಇದರ ಮೇಲೆ ಹಾಕಿದಾಗ ಇದು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅದೇ ರೀತಿ ಬಾಳೆಎಲೆಯಲ್ಲಿ ಬ್ಯಾಕ್ಟೀರಿಯಾಬ್ಯಾಕ್ಟೀರಿಯ ವಿರೋಧಿ ಗುಣವಿದ್ದು, ಎಲೆಯ ಮೇಲಿನ ಮೇಣದ ರೀತಿಯ ಪದರವಿದ್ದು , ಜಲನಿರೋಧಕ ಶಕ್ತಿಯನ್ನು ಹೊಂದಿದ್ದು, ಎಲೆ ಕೊಳಕಾಗದಂತೆ ನೋಡಿಕೊಳ್ಳುವುದಲ್ಲದೇ, ಕೀಟಾಣುಗಳನ್ನು ಕೊಲ್ಲುವ ಕೆಲಸವನ್ನೂ ಮಾಡುತ್ತದೆ. ಇದರಿಂದಾಗಿ ಊಟ ಮಾಡುವರರ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಾಳೆ ಎಲೆಯಲ್ಲಿ ಅನೇಕ ಪೌಷ್ಠಿಕಪೌಷ್ಟಿಕ ಸತ್ವವಿದ್ದು ಎಲೆಯಲ್ಲಿ ಎಲೆಗೆ ಬಿಸಿ ಆಹಾರ ಹಾಕುವುದರಿಂದ ಆ ಸತ್ವಗಳು ಆಹಾರದ ಜೊತೆ ಬೆರೆತು ಆರೋಗ್ಯ ವೃದ್ಧಿಯಾಗುತ್ತದೆ.

ಪ್ರಯೋಜನಗಳು

[ಬದಲಾಯಿಸಿ]

ಒಂದು ಕಾಲದಲ್ಲಿ ಯಥೇಚ್ಚವಾಗಿ ಸಿಗುತ್ತಿದ್ದ ನೀರಿಗೆ ಇಂದು ಹಾಹಾಕಾರವೆದ್ದಿದ್ದು, ಅನೇಕ ಕಡೆಯಲ್ಲಿ ಕುಡಿಯಲು ನೀರೇ ಸಿಗದಿರುವಂತಹ ಸಂಧರ್ಭದಲ್ಲಿ ಇನ್ನು ಪಾತ್ರೆ ಪಡಗಗಳನ್ನು ಹೇಗೆ ತೊಳೆಯಲು ಎಲ್ಲಿಂದ ನೀರು ತರಲು ಸಾಧ್ಯ? ತಟ್ಟೆಗಳನ್ನು ಶುದ್ಧೀಕರಿಸಲು ಮಾರ್ಜಕಗಳನ್ನು ಬಳೆಸುವುದು ಸಹಜ. ಒಂದು ಪಕ್ಷ ಆ ಮಾರ್ಜಕಗಳನ್ನು ನೀರಿನ ಅಭಾವದಿಂದಾಗಿ ಸರಿಯಾಗಿ ತೊಳೆಯದಿದ್ದ ಪಕ್ಷದಲ್ಲಿ ಅದು ನೇರವಾಗಿ ಊಟ ಮಾಡುವವರ ಹೊಟ್ಟೆಗೆ ಸೇರಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅದರೆ ಅದೇ ಬಾಳೆ ಎಲೆಗಳು ಕೇವಲ ಒಮ್ಮೆ ಬಳೆಸಿ ಬಿಸಾಡುವುದರಿಂದ ತೊಳೆಯುವ ಸಮಸ್ಯೆಗಳೂ ಇರುವುದಿಲ್ಲ. ತಿಂದು ಬಿಸಾಡಿದ ಅದೇ ಬಾಳೇ ಎಲೆಗಳನ್ನೇ ದನಕರುಗಳಿಗೆ ಹಾಕಿದಲ್ಲಿ ಉತ್ತಮ ಮೇವು ಆಗಬಲ್ಲದು. ಇಲ್ಲವೇ ಅದೇ ಎಲೆಗಳನ್ನು ತಿಪ್ಪೆಯಲ್ಲಿ ಬಿಸಾಡಿದರೇ ಕೆಲವೇ ಕೆಲವು ದಿನಗಳಲ್ಲಿ ಜೈವಿಕವಾಗಿ ಕರಗಿ ಹೋಗಿ ಉತ್ತಮ ರಸಗೊಬ್ಬರವಾಗಬಲ್ಲದು. ಇದೇ ಕಾರಣಕ್ಕಾಗಿಯೇ ಹಿಂದೆಲ್ಲಾ ಎಲ್ಲರ ಮನೆಯ ಹಿತ್ತಲಿನಲ್ಲಿ ಬಾಳೇಗಿಡಗಳನ್ನು ನೆಟ್ಟು ತಮ್ಮ ಮನೆಯಲ್ಲಿ ಬಳೆಸಿದ ಅಷ್ಟೂ ತ್ರಾಜ್ಯ ನೀರು ನೇರವಾಗಿ ಆ ಬಾಳೇಗಿಡಗಳಿಗೇ ತಲುಪುವಂತೆ ವ್ಯವಸ್ಥೆ ಮಾಡಿರುತ್ತಿದ್ದರು. ಬಾಳೆಯ ಮರದಲ್ಲಿ ಒಂದು ಸಲ ಹಣ್ಣು ಬಿಟ್ಟರೆ ಅಲ್ಲಿಗೆ ಅದರ ಆಯಸ್ಸು ಮುಗಿದಂತೆ ಆಗ ಆ ಗಿಡದ ಮೃದುವಾದ ಕಾಂಡವನ್ನು ಕತ್ತರಿಸಿ ತೆಗೆದು ಅದರ ನಟ್ಟ ನಡುವೆ ದೊರೆಯುವ ಕೆನೆ ಹಾಲಿನ ಬಣ್ಣದ ವಸ್ತುವೇ ಬಾಳೆಯ ದಿಂಡು. ಈಗಲೂ ಎಷ್ಟೋ ಜನರಿಗೆ ಬಾಳೆದಿಂಡು ಬಾಳೆ ದಿಂಡುಕೇವಲ ಅಲಂಕಾರಕ್ಕೆ ಪೂಜೆಗೆ ಚಪ್ಪರಕ್ಕೆ ಮಾತ್ರ ಬಳಸುತ್ತಾರೆ ಎಂದು ತಿಳಿದಿದ್ದಾರೆ. ಆ ಬಾಳೆದಿಂಡಿನ ಒಳ ತಿರುಳಿನಲ್ಲಿ ಎಷ್ಟು ಒಳ್ಳೆಯ ಆರೋಗ್ಯ (Healthy life) ಪೂರಕ ಅಂಶಗಳಿವೆ ಎಂದು ಗೊತ್ತೇ ಇಲ್ಲಾ.

ಮಲೆನಾಡು ಹಾಗೂ ಕೆಲವು ಹವ್ಯಕರ ಮನೆಗಳಲ್ಲಿ ಮಾತ್ರ ಈ ಬಾಳೆ ದಿಂಡಿನ[]ಬಳಕೆಯಪದ್ಧತಿ ಹಿಂದಿನ ಕಾಲದಿಂದ ಕಾಣಬಹುದಿತ್ತು

ಉಲ್ಲೇಖ

[ಬದಲಾಯಿಸಿ]
  1. "ವಾರಕ್ಕೆರಡು ಬಾರಿ ಬಾಳೆ ದಿಂಡನ್ನು ತಿನ್ನಿ; ಈ ಎಲ್ಲಾ ಸಮಸ್ಯೆಗಳನ್ನು ಹೊಡೆದೊಡಿಸಿ!". 12 June 2024.