ಬಾಲ್ ಪೆನ್ (ಚಲನಚಿತ್ರ)
ಬಾಲ್ ಪೆನ್ | |
---|---|
ನಿರ್ದೇಶನ | ಶಶಿಕಾಂತ್ |
ನಿರ್ಮಾಪಕ | ಭಾವನಾ ಬೆಳಗೆರೆ, ಶ್ರೀನಗರ ಕಿಟ್ಟಿ |
ಲೇಖಕ | ಕೆ. ಸಿ. ಮಂಜುನಾಥ್, ಮಾಸ್ತಿ ಉಪ್ಪಾರಹಳ್ಳಿ |
ಚಿತ್ರಕಥೆ | ಶಶಿಕಾಂತ್ |
ಪಾತ್ರವರ್ಗ | ಸುಚೇಂದ್ರ ಪ್ರಸಾದ್, ಮಾಸ್ಟರ್ ಸ್ಕಂದ, ಮಾಸ್ಟರ್ ಶಾಲೋಮ್ ರಾಜ್, ಮಾಸ್ಟರ್ ಸಮರ್ಥ್, ಮಿಸ್ ಚೇತನಾ |
ಸಂಗೀತ | Manikanth Kadri |
ಛಾಯಾಗ್ರಹಣ | ಸಿ. ಜೆ. Rajಕುಮಾರ್ |
ಸಂಕಲನ | Shree (Crazy Minds) |
ಬಿಡುಗಡೆಯಾಗಿದ್ದು | ೨೦೧೨ ರ ಅಕ್ಟೋಬರ್ ೨೬ |
ದೇಶ | ಭಾರತ |
ಭಾಷೆ | ಕನ್ನಡ |
ಬಾಲ್ ಪೆನ್ ಶಶಿಕಾಂತ್ ನಿರ್ದೇಶನದ 2012 ರ ಕನ್ನಡ ಚಲನಚಿತ್ರವಾಗಿದೆ. ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳಗೆರೆ ನಿರ್ಮಾಣದ ಈ ಚಿತ್ರವು ಮಕ್ಕಳ ಚಿತ್ರವಾಗಿದ್ದು, ಇದು ಮಕ್ಕಳಲ್ಲಿರುವ ಸಾಹಸ ಮನೋಭಾವ, ಭಾವನೆಗಳನ್ನು ಚಿತ್ರಿಸುತ್ತದೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಕೇಂದ್ರೀಕರಿಸುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ಸುಚೇಂದ್ರ ಪ್ರಸಾದ್
- ಮಾಸ್ಟರ್ ಸ್ಕಂದ
- ಮಾಸ್ಟರ್ ಶಾಲೋಮ್ ರಾಜ್
- ಮಾಸ್ಟರ್ ಸಮರ್ಥ್
- ಚೇತನಾ ಸುಂದರಿ
- ಶ್ರೀನಗರ ಕಿಟ್ಟಿ
ವಿಮರ್ಶೆಗಳು
[ಬದಲಾಯಿಸಿ]26 ಅಕ್ಟೋಬರ್ 2012 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ, ಬಾಲ್ ಪೆನ್ ಚಲನಚಿತ್ರ ವಿಮರ್ಶಕರಿಂದ ಸಾಮಾನ್ಯವಾಗಿ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. ಐಬಿಎನ್ ಲೈವ್ ಈ ಚಿತ್ರಕ್ಕೆ 3.5/5 ರೇಟಿಂಗ್ ನೀಡಿ ಚಿತ್ರದಲ್ಲಿನ ಮಕ್ಕಳ ಅಭಿನಯವನ್ನು ಶ್ಲಾಘಿಸಿದೆ. ತಾಂತ್ರಿಕ ವಿಭಾಗಗಳ ಪಾತ್ರವೂ ಮೆಚ್ಚುಗೆಗೆ ಪಾತ್ರವಾಯಿತು. [೧] ಚಿತ್ರಕ್ಕೆ 3.5/6 ರೇಟಿಂಗ್ ನೀಡಿದ ಸೂಪರ್‌ಗುಡ್‌ಮೂವೀಸ್, "ಬಾಲ್ ಪೆನ್ ಸಹಜವಾಗಿ ವಿವಿಧ ಅಂಶಗಳ ಮೇಲೆ ಸ್ಪರ್ಶಿಸುವ ಆಸಕ್ತಿದಾಯಕ ಕಥೆಯನ್ನು ಹೊಂದಿದೆ. ಆಸಕ್ತಿದಾಯಕ ಭಾಗವೆಂದರೆ ಮುಗ್ಧ ಮಕ್ಕಳ ಮನಸ್ಸುಗಳು ಸರಿಯಾದ ದೃಷ್ಟಿಕೋನದಲ್ಲಿ ಕೆಲಸ ಮಾಡುವ ಭಾಗ" ಎಂದು ಹೇಳಿತಲ್ಲದೆ ತಾಂತ್ರಿಕ ವಿಭಾಗಗಳ ಪಾತ್ರವನ್ನು ಶ್ಲಾಘಿಸಿತು. [೨] Oneindia.in ನ ರಾಜೇಂದ್ರ ಚಿಂತಾಮಣಿ ಅವರು ಚಿತ್ರಕ್ಕೆ 3/5 ರೇಟಿಂಗ್ ನೀಡಿದರು ಮತ್ತು "ಚಿತ್ರವು ಹೃದಯ ಸ್ಪರ್ಶಿಸುವ ಕಥೆ, ಸುಮಧುರ ಹಾಡುಗಳು ಮತ್ತು ವಯಸ್ಕರಿಗೆ ಕಣ್ಣು ತೆರೆಯುವ ವಿಷಯವನ್ನು ಹೊಂದಿದೆ" ಎಂದು ಬರೆದು, "ಚಲನಚಿತ್ರವು, ಕೆಲವು ಸ್ಥಳಗಳಲ್ಲಿ, ನೀರಸ ಕ್ಷಣಗಳನ್ನು ಹೊಂದಿರುವುದಾದರೂ ಒಟ್ಟಾರೆಯಾಗಿ ನ್ಯೂನತೆಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ." [೩]
ಧ್ವನಿಮುದ್ರಿಕೆ
[ಬದಲಾಯಿಸಿ]ಚಿತ್ರದ ಸಂಗೀತವನ್ನು ಮಣಿಕಾಂತ್ ಕದ್ರಿ ಸಂಯೋಜಿಸಿದ್ದಾರೆ. ಆದಿತ್ಯ ರಾವ್ ಹಾಡಿರುವ ಚಿತ್ರದ ಮೊದಲ ಹಾಡು "ಸಾವಿರ ಕಿರಣವ ಚೆಲ್ಲಿ" ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. [೪]
ಹಾಡುಗಳ ಪಟ್ಟಿ
ಕ್ರಮಸಂಖ್ಯೆ | ಶೀರ್ಷಿಕೆ | ಹಾದುಗಾರರು | ಅವಧಿ |
---|---|---|---|
1 | "ಸಾವಿರ ಕಿರಣವ ಚೆಲ್ಲಿ" | ಆದಿತ್ಯ ರಾವ್ | 2:26 |
2 | "ಇದು ಯಾರ ಭುವಿ" | ಭೂಮಿಕಾ | 3:35 |
3 | "ಬಾಳೆಯ ತೋಟದ ಪಕ್ಕದ ಕಾಡಲಿ" | ಸಮರ್ಥ್ | 4:15 |
4 | "ತಿಳಿಯೋ ಮಾನವ" | ಆದಿತ್ಯ ರಾವ್ | 1:52 |
ಉಲ್ಲೇಖಗಳು
[ಬದಲಾಯಿಸಿ]- ↑ "Ball Pen review: It's a Kannada innocent film with a strong message". ibnlive.com. Archived from the original on 2012-10-31. Retrieved 2012-11-20.
- ↑ "Review: Ball Pen". supergoodmovies.com. Archived from the original on 30 October 2012. Retrieved 2012-11-20.
- ↑ "Review: Ball Pen". oneindia.com. Archived from the original on 2013-02-06. Retrieved 2012-11-20.
- ↑ "Audio of Ball Pen released". supergoodmovies.com. Archived from the original on 6 July 2012. Retrieved 2012-11-20.