ಬಾಲಬೋಧ
ಗೋಚರ
ಮರಾಠಿ ಬರೆಯಲು ಬಳಸುವ ದೇವನಾಗರಿ ವರ್ಣಮಾಲೆಯು ಹಿಂದಿ ಮತ್ತು ಇತರ ಭಾಷೆಗಳ ದೇವನಾಗರಿ ವರ್ಣಮಾಲೆಗಿಂತ ಕೊಂಚ ಬೇರೆಯಾಗಿದೆ. ಮರಾಠಿ ವರ್ಣಮಾಲೆಯಲ್ಲಿ ಒಂದೆರಡು ಹೆಚ್ಚುವರಿ ಅಕ್ಷರಗಳು ಇವೆ, ಮತ್ತು ಪಾಶ್ಚಾತ್ಯ ವಿರಾಮ ಚಿಹ್ನೆಗಳನ್ನು ಬಳಸಲಾಗುತ್ತದೆ. ಈ ಮರಾಠಿ ದೇವನಾಗರಿ ವರ್ಣಮಾಲೆಯನ್ನು ಬಾಲಬೋಧ (बाळबोध) ಎಂದು ಕರೆಯಲಾಗುತ್ತದೆ.
ಹಿಂದೆ ಉತ್ತರ ಕರ್ನಾಟಕದಲ್ಲಿ ಮಕ್ಕಳಿಗೆ ಕಲಿಸುವ ಮರಾಠಿ ಶಿಕ್ಷಣಕ್ಕೆ ಬಾಲಬೋಧೆಯ ಶಿಕ್ಷಣ ಎನ್ನುತ್ತಿದ್ದರು.