ಬಾಲಘಾಟ್ ಶ್ರೇಣಿ
ಗೋಚರ
ಬಾಲಘಾಟ್ ಶ್ರೇಣಿಯು ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿನ ಕಡಿಮೆ ಎತ್ತರದ ಪರ್ವತ ಶ್ರೇಣಿಯಾಗಿದೆ. [೧] ಬಾಲಘಾಟ್ ಶ್ರೇಣಿಯು ಹರಿಶ್ಚಂದ್ರ ಶ್ರೇಣಿಯಲ್ಲಿ ಪಶ್ಚಿಮ ಘಟ್ಟಗಳಿಂದ ಆಗ್ನೇಯಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿಯವರೆಗೆ ಸಾಗುತ್ತದೆ. ಇದು ಸುಮಾರು ೩೨೦ ಕಿಲೋಮೀಟರ್‌ನಷ್ಟು ವಿಸ್ತಾರವಾಗಿದೆ. ಈ ಶ್ರೇಣಿಯು ಮಹಾರಾಷ್ಟ್ರದ ಅಹಮದ್‌ನಗರ, ಬೀಡ್, ಲಾತೂರ್, ಒಸ್ಮಾನಾಬಾದ್ ಮತ್ತು ಸೊಲ್ಲಾಪುರ ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ.
ಪರ್ವತ ಶ್ರೇಣಿಯು ಐದರಿಂದ ಒಂಬತ್ತು ಕಿಲೋಮೀಟರ್ ಅಗಲವನ್ನು ಹೊಂದಿದೆ. ಪಶ್ಚಿಮದ ಅಂಚಿನಲ್ಲಿರುವ ಬಾಲಘಾಟ್ ಬೆಟ್ಟಗಳು ೫೫೦-೮೨೫ ಮೀಟರ್‌ಗಳಷ್ಟು ಎತ್ತರವನ್ನು ಹೊಂದಿವೆ, ಇದು ಪೂರ್ವದ ಅಂಚಿಗಿಂತ ಹೆಚ್ಚು ಎತ್ತರದಲ್ಲಿದೆ. ಈ ಬೆಟ್ಟಗಳು ಸಮತಟ್ಟಾದ ಶಿಖರಗಳನ್ನು ಹೊಂದಿವೆ. ಈ ಶ್ರೇಣಿಯು ಉತ್ತರದಲ್ಲಿ ಗೋದಾವರಿ ನದಿ ಜಲಾನಯನ ಪ್ರದೇಶವನ್ನು ದಕ್ಷಿಣದಲ್ಲಿ ಭೀಮಾ ನದಿಯ ಜಲಾನಯನ ಪ್ರದೇಶದಿಂದ ಪ್ರತ್ಯೇಕಿಸುತ್ತದೆ. [೨] [೩] [೪]
ಉಲ್ಲೇಖಗಳು
[ಬದಲಾಯಿಸಿ]- ↑ Kakade, R. G.; Maharashtra Central Famine Relief Committee (1955). Report of the survey of Ghost valley (PDF). p. 5.
- ↑ "Balaghat range in Hindi - Hindi Water Portal". Hindi.indiawaterportal.org. Archived from the original on 27 November 2016. Retrieved 14 December 2018.
- ↑ "Balaghat Range - hills, India". Encyclopedia Britannica. Retrieved 14 December 2018.
- ↑ "Balaghat Range". Universalium.academic.ru. Retrieved 14 December 2018.