ವಿಷಯಕ್ಕೆ ಹೋಗು

ಬಾರ್ಬರಾ ಆಸ್ಕಿನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾರ್ಬರಾ ಆಸ್ಕಿನ್ಸ್

ಬಾರ್ಬರಾ ಆಸ್ಕಿನ್ಸ್ ಅವರು ಅಮೆರಿಕನ್ ರಸಾಯನಶಾಸ್ತ್ರಜ್ಞೆ .

ಬಾಲ್ಯ ಮತ್ತು ಶಿಕ್ಷಣ

[ಬದಲಾಯಿಸಿ]

ಬಾರ್ಬರಾ ಎಸ್. ಆಸ್ಕಿನ್ಸ್ ರವರು ೧೯೩೯ ರಲ್ಲಿ ಉತ್ತರ ಅಮೇರಿಕಾದ ಯುನೈಟೆಡ್ ಸ್ಟೇಟ್ಸ್ ಬೆಲ್ ಫ಼ಾಸ್ಟ್ ಟೆನೆಸ್ಸೀ ಯಲ್ಲಿ ಜನಿಸಿದರು. ಸಂಶೋಧಕರ ಪ್ರಕಾರ ಬಾರ್ಬರಾ ಆಸ್ಕಿನ್ಸ್ ರವರ ಹುಟ್ಟು, ಅವರ ಬಾಲ್ಯ, ಎಲ್ಲಿ ವಾಸವಾಗಿದ್ದರು ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲಾ. ಬಾರ್ಬರಾ ಆಸ್ಕಿನ್ಸ್ ರವರು " ಮಾರ್ಷಲ್ ಪ್ಲೈಟ್ ಸೆಂಟರ್ " ನೆಲೆಸಿರುವ ಅಲಬಾಮಾದಲ್ಲಿ ಕೆಲ ಕಾಲ ವಾಸವಾಗಿದ್ದರೆಂದು ಊಹಿಸಲಾಗಿದೆ. ಮೂಲತಃ ಶಿಕ್ಷಕಿ ಯಾದ ಅವರು ವೈಜ್ಞಾನಿಕ ವೃತ್ತಿ ಜೀವನವನ್ನು ತಮ್ಮ ಮಗ ಮತ್ತು ಮಗಳ ಜನನದ ಬಳಿಕ ಪ್ರಾರಂಭಿಸಿದರು. ಮಕ್ಕಳು ಶಾಲೆಗೆ ಹೋಗುವ ತನಕ ಕಾದು ನಂತರ ತಮ್ಮ ವಿಜ್ಞಾನ ಪದವಿ ಶಿಕ್ಷಣ ಮತ್ತು ಸ್ನಾತಕೋತ್ತರ ಶಿಕ್ಷಣ ವನ್ನು ಹಂಟ್ಸ್ವಿಲ್ಲೆಯ ಅಲಬಾಮಾ ವಿಶ್ವವಿದ್ಯಾನಿಲಯದಿಂದ ೧೯೭೫ ರಲ್ಲಿ ಗಳಿಸಿದರು. ಶಿಕ್ಷಣದ ಬಳಿಕ ಅವರು ಅಮೇರಿಕಾದ ಪ್ರಖ್ಯಾತ "ರಸಾಯನ ಶಾಸ್ತ್ರಜ್ಞ ರೆನಿಸಿಕೊಂಡರು". ಅಂಡರ್ ಎಕ್ಸ್ಪೋಸ್ಡ್ ಛಾಯಾಗ್ರಹಣದ ನಿರಾಕರಣೆಗಳನ್ನು ವರ್ಧಿಸುವ ಒಂದು ವಿಧಾನದ ಆವಿಷ್ಕಾರಕ್ಕೆ ಬಾರ್ಬರಾ ಆಸ್ಕಿನ್ಸ್ ರವರು ಅತ್ಯಂತ ಹೆಸರುವಾಸಿಯಾಗಿದ್ದಾರೆ.

ಸಂಶೋಧನೆ ಮತ್ತು ವೃತ್ತಿ ಜೀವನ

[ಬದಲಾಯಿಸಿ]

ಬಾರ್ಬರಾ ಆಸ್ಕಿನ್ಸ್ ರವರು ಮೊಟ್ಟ ಮೊದಲು ರಸಾಯನ ಶಾಸ್ತ್ರಜ್ಞೆ ಯಾಗಿ " ನಾಸಾದ ಮಾರ್ಷಲ್ ಸ್ಪೇಸ್ ಫ್ಲೈಟ್ " ನಲ್ಲಿ ಭೌತಿಕ ರಸಾಯನ ಶಾಸ್ತ್ರಜ್ಞೆ ಯಾಗಿದ್ದರು. ಇವರು "ಪ್ರಕ್ರಿಯೆಯ ಛಾಯಾ ಚಿತ್ರದ" ಮೇಲಿನ ಬೆಳವಣಿಗೆಯನ್ನು, ಅವರು ಛಾಯಾಗ್ರಹಣದ ಎಮಲ್ಶನ್ ಗಳಿಂದ ತೀಕ್ಷ್ಣ ಗೊಳಿಸಿ, ಛಾಯಾಚಿತ್ರವನ್ನು ಬೆಳ್ಳಿರೇಡಿಯೋ ವಿ-ಕಿರಣದ ಮತ್ತು ಎರಡನೇ ಎಮಲ್ಶನ್ ಅನ್ನು ಈ ವಿಕಿರಣಕ್ಕೆ ಒಡ್ದುವ ಮೂಲಕ ಪ್ರಕ್ರಿಯೆಯ ಪ್ರವರ್ತಕ ಆವಿಷ್ಕಾರವನ್ನು ಹೊರ ತಂದರು. ಈ ವಿ-ಕಿರಣದ ಫಲಿತಾಂಶವೇ "ಆಟೋರೇಡಿಯೋಗ್ರಾಫ್". ಇದು ಸಾಂದ್ರತೆಯನ್ನು ಮತ್ತು ವೈ ದೃಶ್ಯ ಗಳಲ್ಲಿ ಗಮನಾರ್ಹ ಹೆಚ್ಚಳದೊಂದಿಗೆ ಚಿತ್ರವನ್ನು ಪುನಃ ಉತ್ಪಾದಿಸುತ್ತದೆ. ಬಾರ್ಬರಾ ಆಸ್ಕಿನ್ಸ್ ರವರ "ಗ್ರೌಂಡ್ ಬ್ರೇಕಿಂಗ್"(ನೆಲಗಮನ) ವಿಧಾನದಿಂದ ವರ್ಧಿತ ಕಡಿಮೆ ಒಡ್ಡು ಎಮಲ್ಶನ್ ಗಳನ್ನು ಹೆಚ್ಚಿಸುವುದರಿಂದ ಛಾಯಾಗ್ರಹಣವನ್ನು ಪತ್ತೆಹಚ್ಚ ಬಹುದಾಗಿದೆ. ಇದರ ಅರ್ಥವೇನೆಂದರೆ, ಯಾವುದು ಕಣ್ಣಿಗೆ ಕಾಣುವುದಿಲ್ಲವೋ ಅಥವಾ ಅದೃಶ್ಯವಾದುದನ್ನು ಕಾಣುವಂತೆ ಛಾಯಾಚಿತ್ರಣದಲ್ಲಿ ಮಾಡುವುದು. ಬಾರ್ಬರಾ ಆಸ್ಕಿನ್ಸ್ ರವರ ಈ ನೂತನ ಸೃಜನಾತ್ಮಕ ವಿಧಾನದಿಂದ ಖಗೋಳ ವಿಜ್ಞಾನ ಮತ್ತು ಭೌಗೋಳಿಕ ಛಾಯಾಚಿತ್ರಗಳನ್ನು ತೆಗೆಯುವಲ್ಲಿ ಸಂಶೋಧಕರಿಗೆ ನೆರವಾಯಿತು. ಈ ವಿಧಾನವು ತುಂಬಾ ವಿಧಗಳಿಂದ ಉಪಯುಕ್ತವಾಗಿದೆ. "ಅಂಡರ್ ಎಕ್ಸ್ ಪೋಸ್ಡ್" ಬಾಹ್ಯಾಕಾಶ ಛಾಯಾಚಿತ್ರಗಳ ಮಾಹಿತಿಯನ್ನು ಎಕಾಗ್ರತೆಯಿಂದ ಗ್ರಹಿಸುವುದನ್ನು ಒಳಗೊಂಡಿರುತ್ತದೆ. ಬಾಹ್ಯಾಕಾಶಕ್ಕೆ ಆಳವಾದ ಪಿಯರಿಂಗ್ ಮತ್ತು ನಮ್ಮ ಸೌರವ್ಯೂಹದ ಇತರ ಶರೀರಗಳ ಭೂ ವಿಜ್ಞಾನವನ್ನು ಎತ್ತಿ ತೋರಿಸುವಂತಹ ಅನಿಯಂತ್ರಿತ ಬಾಹ್ಯಾಕಾಶ ಚಿತ್ರಗಳ ದತ್ತಾಂಶವನ್ನು ಸಹಕರಿಸುವುದು ಸೇರಿದಂತೆ ಹಲವಾರು ಅನ್ವಯಿಕೆಗಳಿಗೆ ಇದು ತುಂಬಾ ಉಪಯುಕ್ತವಾಗಿದೆ. ಬಾರ್ಬರಾ ಆಸ್ಕಿನ್ಸ್ ರವರಿಗೆ ಛಾಯಾಚಿತ್ರಗಳನ್ನು ಭೂಮಿಯ ಮೇಲಿನಿಂದ ತೆಗೆಯ ಬಹುದಾಗಿದ್ದರೂ ಅದರಲ್ಲಿನ ವಿಷಯಗಳು ಮಂದವಾಗಿಯೂ ಹಾಗು ವಿವರಿಸಲು ಸಾಧ್ಯವಾಗದಂತ್ತಿದ್ದ ಚಿತ್ರಗಳನ್ನು ತಮ್ಮ ಆವಿಷ್ಕಾರದಿಂದ ಸರಿ ಪಡಿಸುವ ಕೆಲಸವನ್ನು "ನಾಸಾ" ಒಪ್ಪಿಸಿತು. ಬಾರ್ಬರಾ ಆಸ್ಕಿನ್ಸ್ ರವರ ಸಂಶೋಧನೆಯು ವೈದ್ಯಕೀಯ ತಂತ್ರಜ್ಞಾನಗಳಿಗೆ ಮುನ್ನಡೆಯಾಯಿತು. ಮಾರ್ಚ್ ೧ ೧೯೭೮ ಬಾರ್ಬರಾ ಆಸ್ಕಿನ್ಸ್ ರವರು " ರೇಡಿಯೋ ಸಕ್ರಿಯ ಘಟಕ" ಗಳಿಂದ ಬಾಹ್ಯಾಕಾಶದ ಛಾಯಾ ಚಿತ್ರಣವನ್ನು ತೆಗೆಯಬಹುದೆಂಬುದನ್ನು ಕಂಡುಕೊಂಡರು. ಅವರ ಈ ವಿಧಾನನದಿಂದ ಕ್ಷ- ಕಿರಣ ಛಾಯಾಚಿತ್ರಣವನ್ನು ಅಭಿವೃದ್ಧಿಗೊಳಿಸಿತು. ನಿರ್ಧಿಷ್ಟವಾಗಿ ಹೇಳುವುದಾದರೆ ವೈದ್ಯಕೀಯ ರಂಗದ ಚಿತ್ರಣಗಳು ೯೬ ಶೇಕಡ ಕಣ್ಣಿಗೆ ಕಾಣದಂತಹ ವಿಷಯಗಳು ಕಾಣುವಂತೆ ಆದುವು. ಇದರಿಂದ ತುರ್ತು ಪರೀಕ್ಷೆಗಳನ್ನು ನಡೆಸುವಾಗ ರೋಗಿಗಳಿಗೆ ನೀಡಿದ ಕ್ಷ - ಕಿರಣದ, ವಿ ಕಿರಣದ ಪ್ರಮಾಣವನ್ನು ವೈದ್ಯರು ಗಣನೀಯವಾಗಿ ಕಡಿಮೆ ಮಾಡಬಹುದು. ಬಾರ್ಬರಾ ಆಸ್ಕಿನ್ಸ್ ರವರ ಅನ್ವೇಶಣೆಯಿಂದ ಮುಂದೆ ಛಾಯಾಚಿತ್ರದ ಪುನರ್ ಸ್ಥಾಪನೆಯಲ್ಲೂ ಉಪಯುಕ್ತವಾಯಿತು. ವಾಸ್ತವವಾಗಿ, ಬಾರ್ಬರಾ ಆಸ್ಕಿನ್ಸ್ ರವರ ಆವಿಷ್ಕಾರವು ಕ್ಷ - ಕಿರಣಗಳ ಸ್ಪಷ್ಟತೆ ಸುಧಾರಣೆ ಮತ್ತು ಹಳೆಯ ಛಾಯಾಚಿತ್ರಗಳನ್ನು ಹಲವಾರು ಇತರ ಬಳಕೆಗಳಿಗೆ ಇದನ್ನು ಅಳವಡಿಸಿಕೊಳ್ಳಲಾಯಿತು. ೧ ಜುಲೈ ೧೯೭೮ರಲ್ಲಿ ಯು.ಎಸ್. ಆವಿಷ್ಕಾರದ ಹಕ್ಕು ಸಾಮ್ಯ ವನ್ನು ಪೇಟೆಂಟ್ ನಂ. ೪,೧೦೧,೭೮೦ಯನ್ನು ಪಡೆದರು ಮತ್ತು ನಾಸಾ ತನ್ನ ಸಂಶೋಧನಾ ಕಾರ್ಯ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಇದನ್ನು ವ್ಯಾಪಕವಾಗಿ ಅಳವಡಿಸಿ ಕೊಂಡಿತು. ೧೯೭೮ ರಲ್ಲಿ "ಮೆಥೆಡ್ ಆಫ್ ಒಬ್ಟೈಂನಿಂಗ್ ಇಂಟೆಂಸಿಫೈಡ್ ಇಮೇಜ್ ಫ಼್ರಮ್ ದೆವಲಪ್ಡ್ ಫೊಟೋಗ್ರಾಫಿಕ್ ಫಿಲಿಮ್ ಅನ್ಡ್ ಪ್ಲೇಟ್ಸ್" ಅನ್ನು ಪ್ರಕಟಿಸಿದರು. ನಂತರ ತಮ್ಮ ಆವಿಷ್ಕಾರದ ಹಕ್ಕು ಪತ್ರವನ್ನು ವಿಶ್ವಕ್ಕೆ ಸಮರ್ಪಿಸಿದರು. ಬಾರ್ಬರಾ ಆಸ್ಕಿನ್ಸ್ ರವರ ಸಂಶೋಧನೆಯನ್ನು "ನಾಸಾ" ತನ್ನ ಮಾಹಿತಿ ಸಂಗ್ರಹಿಸಲು ಉಪಯೋಗಿಸಿ ಕೊಂಡಿತು. ಇವರ ಈ ಸಂಶೋಧನೆಯು ಬಾಹ್ಯಾಕಾಶದ ಅಗೋಚರ ಛಾಯಾಚಿತ್ರಣ ಮತ್ತು ಸೌರ ಮಂಡಲದ ಬಾಹ್ಯ ಘಟಕಗಳ ಅಧ್ಯಯನ ಮಾಡಲು ಸಹಕಾರಿ ಆಯಿತು. ಅವರ ಸಂಶೋಧನೆ ಇಲ್ಲಿಗೆ ಮುಗಿಯದೆ ವೈದಕೀಯ ರಂಗದಲ್ಲೂ ಮುಂದುವರಿಯಿತು.

ಸಂಶೋಧದೆ ಮತ್ತು ಅಭಿವೃದ್ಧಿ

[ಬದಲಾಯಿಸಿ]

ಬಾರ್ಬರಾ ಆಸ್ಕಿನ್ಸ್ ರವರ ಸಂಶೋಧನೆ ಅಭಿವೃದ್ಧಿಯ ವಿಧಾನದ ಪಯಣ ರೋಚಕ. "ನಾಸಾ" ೧೯೬೮ ರಲ್ಲಿ ಚಂದ್ರನಲ್ಲಿ ಮಾನವನ ಅಧ್ಯಯನಕ್ಕಾಗಿ ಅಲಬಾಮಾ ಶೆಪರ್ಡ್ ಎಂಬ ಮೊಟ್ಟ ಮೊದಲ ಆಕಾಶಯಾನ ಪ್ರಯಾಣಿಕನೊಂದಿಗೆ ಕೆಲ ದಶಕಗಳು ಕಾರ್ಯ ನಿರ್ವಹಿಸಿದ ಕೆಲ ವಿಜ್ಞಾನಿಗಳ ಪೈಕಿ ಬಾರ್ಬರಾ ಆಸ್ಕಿನ್ಸ್ ರವರೂ ಒಬ್ಬರು. ಬಾರ್ಬರಾ ಆಸ್ಕಿನ್ಸ್ ರವರು ಅಮೇರಿಕಾದ ಬಾಹ್ಯಾಕಾಶ ಪರಿಸೋಧಕರಾಗಿ ಕೆಲಸ ಮಾಡಿದ ಮೊಟ್ಟ ಮೊದಲ ಮಹಿಳೆ ಎನಿಸಿ ಕೊಂಡರು. ಇವರ ನೇತ್ರತ್ವದಲ್ಲಿ ಮೊದಲ ಶೆಟಲ್ ಏಪ್ರಿಲ್ ೧೨, ೧೯೮೧ ರಲ್ಲಿ ಉಡಾವಣೆಗೊಂಡಿತು. ನಂತರ ೧೯೮೦ ರಿಂದ ೧೯೯೦ ರವರೆಗಿನ ದಶಕಗಳ ಮಹಿಳೆಯರಿಗೆ ಬಾಹ್ಯಾಕಾಶದ ವಲಯದಲ್ಲಿ ಮಾದರಿಯಾದರು. ಜನವರಿ ೧ ೧೯೮೦ ರಿಂದ ಜನವರಿ ೧, ೧೯೯೫ ರವರೆಗೆ ಬಾರ್ಬರಾ ಆಸ್ಕಿನ್ಸ್ ರವರು ನೂತನ ಸಂಶೋಧಕರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.

ಪ್ರಶಸ್ತಿ ಮತ್ತು ವೃತ್ತಿ ಪರ ಸದಸ್ಯತ್ವ

[ಬದಲಾಯಿಸಿ]

೧೯೭೮ ರಲ್ಲಿ "ಎಸೋಸಿಯೇಷನ್ ಫಾರ್ ಅಡ್ವಾನ್ಸ್ ಮೆಂಟ್ ಅಂಡ್ ಇನೋವೇಷನ್ಸ್" ರವರು ಬಾರ್ಬರಾ ಆಸ್ಕಿನ್ಸ್ ರವರಿಗೆ ವರ್ಷದ "ರಾಷ್ಟ್ರೀಯ ಸಂಶೋಧಕಿ" ಎಂಬ ಬಿರುದನ್ನು ಪ್ರಧಾನಿಸಿತು. ಈ ಪ್ರಶಸ್ತಿಯನ್ನು ವೈಯುಕ್ತಿಕವಾಗಿ ಗಳಿಸಿದ ಪ್ರಪ್ರಥಮ ಮಹಿಳೆ ಎಂದು ಎನಿಸಿಕೊಂಡರು. "ದಿ ಅಮೇರಿಕನ್ ಕೆಮಿಕಲ್ ಸೊಸೈಟಿ", "ದಿ ಸಿಗ್ಮ ಎಕ್ಸ್ ಐ ಒನರರಿ ರಿಸರ್ಚ್ ಸೊಸೈಟಿ", "ದಿ ಅಮೇರಿಕನ್ ಎಸೋಸಿಯೇಷನ್ ಫೋರ್ ದಿ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್ ಅಂಡ್ ದಿ ವರ್ಲ್ಡ್ ಪ್ಯೂಚರ್ ಸೊಸೈಟಿ" ಇದೆಲ್ಲದರ ಸದಸ್ಯತ್ವ ವನ್ನು ಹೊಂದಿರುತ್ತಾರೆ. ಬಾರ್ಬರಾ ಆಸ್ಕಿನ್ಸ್ ರವರಿಗೆ ಐ.ಪಿ.ಒ ಎಜುಕೇಷನ್ ಫೌಂಡೇಷನ್ ರಿಂದ ಸ್ಥಾಪಿತವಾದ "ರಾಷ್ಟ್ರೀಯ ಸಂಶೋಧಕಿ" ಎಂಬ ಬಿರುದನ್ನು ೧೯೭೪ ರಲ್ಲಿ ಇವರಿಗೆ ನೀಡಿ ಗೌರವಿಸಲಾಯಿತು. ಇದರ ಉದ್ದೇಶ ಜನರಲ್ಲಿ ತಂತ್ರ ಜ್ಞಾನದ ಬಗೆಗಿನ ಅರಿವು ಮೂಡಿಸುವುದಾಗಿತ್ತು. ಈ ಬಿರುದನ್ನು ಪ್ರಥಮ ಐದು ವರ್ಷಗಳವರೆಗೆ ಯಾರಿಗೂ ಕೊಟ್ಟು ಗೌರವಿಸಿರಲಿಲ್ಲಾ. ಈ ಬಿರುದಿಗೆ ಮೊದಲು ಬಾಜೀನರಾದವರೇ ಬಾರ್ಬರಾ ಆಸ್ಕಿನ್ಸ್. ಈ ಮಹಾನ್ ಸಾಧಕಿಯ ಮರಣದ ಬಗೆಗಿನ ಯಾವುದೇ ಮಾಹಿತಿ ಸಂಶೋಧಕರಿಗೆ ಲಭ್ಯ ವಿರುವುದಿಲ್ಲಾ.[]

ಉಲ್ಲೇಖಗಳು

[ಬದಲಾಯಿಸಿ]