ಬಹುಮಾಧ್ಯಮ ಸಂದೇಶ ಸೇವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Pagetype/setindex' not found. ಬಹುಮಾಧ್ಯಮ ಸಂದೇಶ ಸೇವೆ ಅಥವಾ ಎಂಎಂಎಸ್ ಒಂದು ಸಂದೇಶ ಕಳುಹಿಸುವ ಗುಣಮಟ್ಟದ ಸೇವೆಯಾಗಿದ್ದು, ಬಹುಮಾಧ್ಯಮ ವಿಷಯಗಳನ್ನು ಮೊಬೈಲ್ ಫೋನ್‌‌‌ ಗಳಿಗೆ ಕಳುಹಿಸುವ ಮತ್ತು ಪಡೆಯುವ ಸೌಲಭ್ಯವಾಗಿದೆ. ಇದು ಎಸ್.ಎಂ.ಎಸ್ (ಹೃಸ್ವ ಸಂದೇಶ ಸೇವೆ) ಅನ್ನು ವಿಸ್ತಾರಗೊಳಿಸಿದ್ದು, 160 ಅಕ್ಷರಗಳಿಗೆ ಸೀಮಿತವಾಗಿದ್ದ ಬರಹ ಸಂದೇಶಗಳ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಇದರ ಅತ್ಯಂತ ಜನಪ್ರಿಯ ಉಪಯೋಗವೆಂದರೆ ಕ್ಯಾಮರಾ ಸೌಲಭ್ಯ ಹೊಂದಿದ ಫೋನ್‌ಗಳಿಂದ ಚಿತ್ರಗಳನ್ನು ಕಳುಹಿಸುವದು. ಹಾಗೆಯೇ ದೃಶ್ಯ ಚಿತ್ರಗಳು, ಸ್ಥಿರಚಿತ್ರಗಳು, ಬರಹ ಪುಟಗಳು ಮತ್ತು ರಿ೦ಗ್‌ಟೋನ್‌ಗಳ ಸಹಿತ ಸುದ್ದಿ ಮತ್ತು ಮನರಂಜನೆಯನ್ನು ತಲುಪಿಸುವಿಕೆ. ಅಭಿವೃದ್ಧಿ ಸಮಯದಲ್ಲಿ 3GPP ಮತ್ತು WAP ಗ್ರೂಪ್‌ಗಳ ಭಾಗವಾಗಿತ್ತಾದರೂ, ಇದರ ಮಾನದಂಡವನ್ನು ಓಎಂಎ ಮುಕ್ತ ಮೊಬೈಲ್ ಒಪ್ಪಂದ(ಓಎಂಎ)ದಿಂದ ಅಭಿವೃದ್ಧಿಗೊಳಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ಎಂಎಂಎಸ್‌ಗೆ ತಕ್ಷಣದ ಪೂರ್ವಜ ಎಂದರೆ ಜಪಾನಿನ ಜೆ-ಫೋನ್ 2001 ರಲ್ಲಿ ಪ್ರಾರಂಭಿಸಿದ ಚಿತ್ರ ಸಂದೇಶ ಕಳಿಸುವಿಕೆಯ ವ್ಯವಸ್ಥೆಯಾದ Sha-Mail ಆಗಿದೆ. ಇದು ಕ್ಯಾಮರಾ ಫೋನ್‌ಗಳ ಬಳಕೆದಾರರಿಗೆ ದೃಶ್ಯ ಚಿತ್ರಗಳನ್ನು ಒಂದು ಫೋನ್‌ನಿಂದ ಇನ್ನೊಂದು ಫೋನ್‌ಗೆ ಕಳುಹಿಸುವುದನ್ನು ಸಾದ್ಯಗೊಳಿಸಿತು. ಅದಕ್ಕೂ ಮುಂಚಿನ ಬಹುಮಾಧ್ಯಮ ಸಂದೇಶ ಸೇವೆಗಳು ತಾ೦ತ್ರಿಕ ತೊಂದರೆ ಹಾಗೂ ನಿಯಮಿತವಾಗಿ ಬಳಕೆದಾರರಿಗೆ ನಿರಾಶಾದಾಯಕವಾಗಿದ್ದವು. ಬಹುಮಾಧ್ಯಮ ಸಂದೇಶ ಸೇವೆಗಳನ್ನು ಕಳುಹಿಸುವಲ್ಲಿ, ಬಹುಮಾಧ್ಯಮ ಸಂದೇಶ ಸೇವೆಗಳ ಪಾವತಿಸುವಿಕೆ, ಉದ್ದೇಶಿತ ಗ್ರಾಹಕನಿಗೆ ತಲುಪಿದ ಬಗ್ಗೆ ಮಾಹಿತಿ ಮುಂತಾದವುಗಳಲ್ಲಿ ತೊಂದರೆಗಳಿದ್ದವು. ಚಿತ್ರಗಳು ತಪ್ಪು ವಿನ್ಯಾಸದಲ್ಲಿ ತಲುಪಬಹುದಾಗಿತ್ತು. ದೃಶ್ಯ ತುಣುಕುಗಳಂತಹ ಇನ್ನಿತರ ಮಾಧ್ಯಮ ಭಾಗಗಳು ಶಬ್ದವಿರದೇ ತಲುಪುವ ಸಾಧ್ಯತೆಗಳಿದ್ದವು.

2004 ರಲ್ಲಿ ವಿಯೆನ್ನಾ ದಲ್ಲಿ ನಡೆದ ಬಹುಮಾಧ್ಯಮ ಸಂದೇಶ ಸೇವೆಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ಬಹುಮಾಧ್ಯಮ ಸಂದೇಶ ಸೇವೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಐರೋಪ್ಯ ಫೋನ್ ಬಳಕೆದಾರರ ಪ್ರತಿನಿಧಿಗಳು, ತಮ್ಮ ಬಹುಮಾಧ್ಯಮ ಸಂದೇಶ ಸೇವೆಗಳು ನೆಟ್‌ವರ್ಕ್‌ಗಳಲ್ಲಿ ಹಣ ಮಾಡಲು ವಿಫಲವಾಗಿದೆ ಎಂದು ಹೇಳಿದರು. ಆ ಸಮಯದ ಎಲ್ಲ ನೆಟ್‌ವರ್ಕ್‌ಗಳಲ್ಲಿ ಹೆಚ್ಚಿನದು ಪ್ರಾಪ್ತ ವಯಸ್ಕರಿಗೆ ಸಂಬಂಧಪಟ್ಟ ಸೇವೆಗಳಾಗಿದ್ದು, ಬಹುಮಾಧ್ಯಮ ಸಂದೇಶ ಸೇವೆಗಳನ್ನು ಬಳಸಿ ಸಂದೇಶಗಳು ಕಳಿಸಲ್ಪಡುತ್ತಿದ್ದವು. ಚೈನಾ ದೇಶವು ಬಹುಮಾಧ್ಯಮ ಸಂದೇಶ ಸೇವೆಗಳಲ್ಲಿ ವಾಣಿಜ್ಯ ಯಶಸ್ಸು ಗಳಿಸಿದ ಮುಂಚಿನ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ವೈಯುಕ್ತಿಕ ಕಂಪ್ಯೂಟರ್‌ಗಳ ಬೆಲೆಯ ವಿಷಯದಲ್ಲಿ ಸಾಧಾರಣವಾಗಿದ್ದರೂ ಬಹುಮಾಧ್ಯಮ ಸಂದೇಶ ಸೇವೆಗಳನ್ನು ಹೊಂದಿದ ಕ್ಯಾಮರಾ ಫೋನ್‌ಗಳ ಮಾರಾಟ ಬಹುಬೇಗ ಹರಡಿತು. 2009 ರ ಜಿ.ಎಸ್.ಎಂ ಮೊಬೈಲ್ ಏಶಿಯಾ ಸಮ್ಮೇಳನದಲ್ಲಿ ಚೀನಾ ಮೊಬೈಲ್ ಕಂಪನಿಯ ಅದ್ಯಕ್ಷ ಹಾಗೂ ಸಿ.ಇ.ಓ ಮಾತನಾಡಿ ಚೈನಾದಲ್ಲಿ ಬಹುಮಾಧ್ಯಮ ಸಂದೇಶ ಸೇವೆ ಚೈನಾದಲ್ಲಿ ಪ್ರಸ್ತುತ ಹೃಸ್ವ ಸಂದೇಶ ಸೇವೆಯೊಂದಿಗೆ ಬಹುಮಾಧ್ಯಮ ಸಂದೇಶ ಸೇವೆಗಳಲ್ಲಿಯೂ ಸುಧಾರಣೆಗಳಾಗಿವೆ ಎಂದಿದ್ದಾರೆ.

ಯುರೋಪಿನ ಅತ್ಯಂತ ಸುಧಾರಿತ ಬಹುಮಾಧ್ಯಮ ಸಂದೇಶ ಸೇವೆಯ ಮಾರುಕಟ್ಟೆ ನಾರ್ವೆ ದೇಶವಾಗಿದ್ದು, 2008 ರಲ್ಲಿ ನಾರ್ವೆಯನ್ನರ ಎಲ್ಲ ಮೊಬೈಲ್ ಫೋನ್ ಚಂದಾದಾರರಲ್ಲಿ ಎಂಎಂಎಸ್ ಬಳಕೆಯು ಶೇಕಡಾ 84ನ್ನು ದಾಟಿದೆ(ಮಾಹಿತಿ ಮೂಲ-ಟಾಮಿ ಅಹೊನೆನ್ ಅಲ್ಮಾನಾಕ್). ನಾರ್ವೆಯ ಮೊಬೈಲ್ ಚಂದಾದಾರರು ವಾರಕ್ಕೆ ಒಂದರಂತೆ ಸರಾಸರಿ ಎಂಎಂಎಸ್‌ಗಳನ್ನು ಕಳಿಸಿದ್ದಾರೆ. 2008 ರ ಹೊತ್ತಿಗೆ ವಿಶ್ವದಾದ್ಯಂತ ಎಂಎಂಎಸ್ ಬಳಕೆದಾರರ ಮಟ್ಟವು 1.3 ಶತಕೋಟಿ ಸಕ್ರಿಯ ಬಳಕೆದಾರರನ್ನು ದಾಟಿದ್ದು(ಮಾಹಿತಿ ಮೂಲ-ಪೋರ್ಟಿಯೋ 2009), ಈ ಬಳಕೆದಾರರು 50 ಶತಕೋಟಿ ಎಂಎಂಎಸ್‌ಗಳನ್ನು(ಮಾಹಿತಿ ಮೂಲ ಅಬಿ ರೀಸರ್ಚ್ 2008) ಉತ್ಪಾದಿಸಿ ಕಳಿಸುವ ಮೂಲಕ 26 ಶತಕೋಟಿ ಡಾಲರ್ ವಾರ್ಷಿಕ ಆದಾಯಕ್ಕೆ ಕಾರಣರಾಗಿದ್ದಾರೆ.

ತಾಂತ್ರಿಕ ವಿವರಣೆ[ಬದಲಾಯಿಸಿ]

ಬಹುಮಾಧ್ಯಮ ಸಂದೇಶ ಸೇವೆಗಳು ಹೃಸ್ವ ಸಂದೇಶ ಸೇವೆಗಳಿಗಿಂತ ಸಂಪೂರ್ಣ ಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಮೊದಲ ಹಂತವೆಂದರೆ ಬಹುಮಾಧ್ಯಮ ಸೇವೆಯ ಸಾರಾಂಶವನ್ನು ಬಹಿರಂಗಗೊಳಿಸಲು ಬೇಕಾದ ಸಾಧನವನ್ನು ಕಳುಹಿಸುವುದು. MIME ಇಮೇಲ್‌ ಕಳುಹಿಸುವ ರೀತಿಯಲ್ಲಿ.(MIME ನ ಸಾರಾಂಶದ ವಿನ್ಯಾಸವು ಬಹುಮಾಧ್ಯಮ ಸಂದೇಶ ಸೇವೆಗಳಲ್ಲಿ ಅಡಕವಾಗಿದ್ದು, ನಿರ್ದಿಷ್ಟವಾಗಿ ವಿವರಿಸಲ್ಪಟ್ಟಿರುತ್ತವೆ). ನಂತರದಲ್ಲಿ ಆ ಸಂದೇಶವನ್ನು ವಾಹಕದ ಎಂಎಂಎಸ್ ಸಂಗ್ರಹಕ್ಕೆ ಕಳುಹಿಸಲಾಗುತ್ತದೆ ಮತ್ತು ಮುಂದೆ ಕಳಿಸುವ ಎಂಎಂಎಸ್‌ಸಿ ಎಂಬ ಸರ್ವರ್‌ಗೆ ಕಳಿಸಲಾಗುತ್ತದೆ. ಸ್ವೀಕರಿಸುವವರು ಮತ್ತೊಂದು ವಾಹಕದಲ್ಲಿದ್ದರೆ, ರಿಲೇಯು ಸಂದೇಶವನ್ನು ಸ್ವೀಕರಿಸುವವರ ವಾಹಕಕ್ಕೆ ಅಂತರ್ಜಾಲದ ಮೂಲಕ ಕಳುಹಿಸುತ್ತದೆ.[೧]

ಒಮ್ಮೆ ಬಹುಮಾಧ್ಯಮ ಸಂದೇಶ ಸೇವೆಯು ಸಂದೇಶವನ್ನು ಪಡೆದ ನಂತರ ಅದು ಮೊದಲು ಗ್ರಾಹಕನ ಹ್ಯಾಂಡ್‌ಸೆಟ್ ಎಂಎಂಎಸ್‌ ಗೆ ಅರ್ಹವಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತದೆ. ಅಂದರೆ ಇದು ಕಳುಹಿಸಿದ ಎಂಎಂಎಸ್‌ ನ ಗುಣಮಟ್ಟವನ್ನು ಬೆಂಬಲಿಸುತ್ತದೆ. ಹಾಗಿದ್ದಲ್ಲಿ, ಸಾರಾಂಶವು ಸಂಗ್ರಹಗೊಂಡು ತಾತ್ಕಾಲಿಕ ಸಂಗ್ರಹ ಸರ್ವರ್‌‌ನ HTTP ಫ್ರಂಟ್-ಎಂಡ್ ಗೆ ಕಳುಹಿಸಲ್ಪಡುತ್ತದೆ. ಹೃಸ್ವ ಸಂದೇಶ ಸೇವೆಯ "ನಿಯಂತ್ರಣ ಸಂದೇಶ"ವು ವಿಷಯದ URLನ್ನು ಹೊಂದಿದ್ದು, ಬಳಕೆದಾರನ ಹ್ಯಾಂಡ್‌ಸೆಟ್‌ಗೆ ಕಳುಹಿಸಲ್ಪಡುತ್ತದೆ. ಗ್ರಾಹಕನ WAP ಬ್ರೌಸರ್‌ನ್ನು URL ದ ಸಾರಾಂಶವನ್ನು ಪಡೆದುಕೊಳ್ಳುವಂತೆ ಪ್ರಚೋದಿಸುತ್ತದೆ. ಜೊತೆಗೆ ಸಂದೇಶ ತಲುಪಿಸುವ ಪ್ರಯತ್ನದ ಸ್ಥಿತಿಯನ್ನು ಸೂಚಿಸುವಂತೆ ಅನೇಕ ಸಂದೇಶಗಳು ವಿನಿಮಯಗೊಳ್ಳುತ್ತವೆ.[೨] ಈ ವಿಷಯವನ್ನು ಕಳುಹಿಸುವ ಮೊದಲು ಕೆಲವು MMSC ಗಳಲ್ಲಿ ಪರಿವರ್ತನಾ ಸೇವೆಯನ್ನು ಹೊ೦ದಿದ್ದು, ಅದು ಬಳಕೆದಾರನಿಗೆ ಅನುಕೂಲವಾಗುವ೦ತೆ ಬಹುಮಾಧ್ಯಮ ಸಂದೇಶ ಸೇವೆಯ ಸಾರಾ೦ಶವನ್ನು ಪರಿವರ್ತಿಸಲು ಪ್ರಯತ್ನಿಸುತ್ತದೆ. ಇದಕ್ಕೆ ’ವಿಷಯ ಅಳವಡಿಕೆ’ ಎನ್ನುತ್ತಾರೆ.

ಬಳಕೆದಾರನ ಹ್ಯಾ೦ಡ್‌‌‌ಸೆಟ್ ಎಂಎಂಎಸ್‌‌‌ಗೆ ಅಸಮರ್ಥವಾಗಿದ್ದಲ್ಲಿ, ವಿಷಯವು ಅ೦ತರ್ಜಾಲ ಬ್ರೌಸರ್‌ನಲ್ಲಿ ಕಾಣಲ್ಪಡುವ೦ತೆ ಸ೦ದೇಶವು ಅ೦ತರ್ಜಾಲ ಆಧಾರಿತ ಸೇವೆಗೆ ಕಲುಹಿಸಲ್ಪಡುತ್ತದೆ. ವಿಷಯದ URL ಹೆಚ್ಚಾಗಿ ಸಾಮಾನ್ಯ ಬರಹ ಸ೦ದೇಶದ ರೀತಿಯಲ್ಲಿ ಬಳಕೆದಾರನ ಫೋನ್‌ಗೆ ಕಲುಹಿಸಲ್ಪಡುತ್ತದೆ. ಈ ವರ್ತನೆಯು "ಕೊಡುಗೆ ಅನುಭವ" ಎಂದು ಗುರುತಿಸಲ್ಪಡುತ್ತಿದ್ದು, ಫೋನ್‌ನಲ್ಲಿ ಎಂಎಂಎಸ್‌‌‌‌ ಅನುಕೂಲವಿಲ್ಲದಿದ್ದರೂ ಕೂಡ ಒಂದು ಫೋನ್‌ ನ೦ಬರ್ ವಿಷಯವನ್ನು ಪಡೆಯುತ್ತದೆ. ಒಂದು ಹ್ಯಾಂಡ್‌ಸೆಟ್ ಎಂಎಂಎಸ್‌ ಸ್ವೀಕರಿಸಲು ಸಮರ್ಥವಾಗಿದೆ ಎಂಬುದನ್ನು ನಿರ್ಧರಿಸುವ ರೀತಿಯನ್ನು ಮಾನದಂಡಗಳು ನಿರ್ದಿಷ್ಟವಾಗಿ ಸೂಚಿಸುವುದಿಲ್ಲ. ದತ್ತಾ೦ಶವು ಸಾಮಾನ್ಯವಾಗಿ ಕಾರ್ಯನಿರ್ವಾಹಕನಿ೦ದ ನೋಡಿಕೊಳ್ಳಲ್ಪಡುತ್ತಿದ್ದು, ಪ್ರತಿ ಮೊಬೈಲ್ ಫೋನ್ ಸ೦ಖ್ಯೆಯು ಹ್ಯಾ೦ಡ್‌ಸೆಟ್‌ನೊ೦ದಿಗೆ ಹೊ೦ದಿದೆಯೇ ಇಲ್ಲವೆ ಎ೦ಬುದನ್ನು ಗುರುತಿಸಲಾಗುತ್ತದೆ. ಆದರೆ ಗ್ರಾಹಕನು ತನ್ನ ಹ್ಯಾ೦ಡ್‌ಸೆಟ್‌ನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು ಮತ್ತು ಈ ಡಾಟಾಬೇಸ್‌ ಅನ್ನು ಸಕ್ರಿಯವಾಗಿ ನವೀಕರಿಸಲಾಗುವುದಿಲ್ಲವಾದ್ದರಿಂದ ಇದನ್ನು ಸ್ಥಿರವಾದದ್ದು ಎಂದು ಹೇಳಲಾಗುವುದಿಲ್ಲ.

ಬಹುಮಾಧ್ಯಮ ಸಂದೇಶ ಸೇವೆಗಳಿಗೆ ( ಮತ್ತು ಹೃಸ್ವ ಸಂದೇಶ ಸೇವೆಗಳಿಗೆ) ಇಮೇಲ್ ಹಾಗೂ ಅ೦ತರ್ಜಾಲ ಆಧಾರಿತ ಮಾರ್ಗಗಳು ಸಾಮಾನ್ಯವಾಗಿವೆ. ಬಳಕೆದಾರನ ಕಡೆಯಿ೦ದ ವಿಷಯದ ಸೆರ್ವರ್‌ಗಳು WAP ಹಾಗೂ ಸಾಮಾನ್ಯ HTTP ಬ್ರೌಸರ್‌‌ಗಳಿ೦ದ ಸೇವಾ ಕೋರಿಕೆಯನ್ನು ವಿಶಿಷ್ಟ ರೀತಿಯಲ್ಲಿ ಪಡೆಯಬಹುದಾಗಿದ್ದು, ಇದರಿಂದಾಗಿ ಸರಳ ರೀತಿಯಲ್ಲಿ ಅ೦ತರ್ಜಾಲದ ಮೂಲಕ ಕಳುಹಿಸಲ್ಪಡುತ್ತವೆ. ಹ್ಯಾ೦ಡ್‌ಸೆಟ್‌ಗಳಿಗೆ ಬಾಹ್ಯ ಮಾಹಿತಿ ಮೂಲಗಳನ್ನು ಕಳುಹಿಸುವಾಗ ಹೆಚ್ಚಿನ ವಾಹಕಗಳು MIME ಎನ್ಕೋಡ್ ಮಾಡಿರುವ ಸ೦ದೇಶಗಳನ್ನು ಬಳಕೆದಾರನ ಫೋನ್ ಸ೦ಖ್ಯೆಗೆ ವಿಶೇಷ ಡೊಮೇನ್‌ಗಳ ಮೂಲಕ ಕಳುಹಿಸಲು ಅನುಮತಿ ನೀಡುತ್ತಿದೆ.

ಸವಾಲುಗಳು[ಬದಲಾಯಿಸಿ]

ಹೃಸ್ವ ಸಂದೇಶ ಸೇವೆಯಲ್ಲಿರದ ಅನೇಕ ಆಸಕ್ತಿಕರ ಸವಾಲುಗಳು ಬಹುಮಾಧ್ಯಮ ಸಂದೇಶ ಸೇವೆಯಲ್ಲಿವೆ.

ಎಂಎಂಎಸ್‌‌‌‌‌ ಸಂದೇಶಗಳನ್ನು ಕಳಿಸುವುದು ಮತ್ತು ಸ್ವೀಕರಿಸುವುದರಲ್ಲಿ ಹ್ಯಾಂಡ್‌ಸೆಟ್ ಕಾನ್ಫಿಗರೇಶನ್‌ನ ಕಾರಣದಿಂದ ಸಮಸ್ಯೆಗಳು ಉಂಟಾಗಬಹುದು.
 • ವಿಷಯ ಅಳವಡಿಕೆ : ಒಂದು ಬ್ರ್ಯಾ೦ಡ್‌ನ ಎಂಎಂಎಸ್‌‌‌‌ ಫೋನ್‌ನಲ್ಲಿ ರಚನೆಗೊ೦ಡಿರುವ ಬಹುಮಾಧ್ಯಮ ವಿಷಯವು ಗ್ರಾಹಕನ ಎಂಎಂಎಸ್‌ ಫೋನಿಗೆ ಪೂರ್ತಿಯಾಗಿ ಹೊ೦ದಿಕೆಯಾಗದಿರಬಹುದು. ಈ ಲಕ್ಷಣಗಳು ಮೊಬೈಲ್ ಸ೦ಪರ್ಕ ಕಾರ್ಯನಿರ್ವಾಹಕನಿ೦ದ ಅನುಪಯುಕ್ತಗೊಳಿಸಬಹುದಾಗಿದ್ದರೆ, ಎಂಎಂಎಸ್‌‌‌‌ ವಾಸ್ತುರಚನೆಯಲ್ಲಿ ಬಳಕೆದಾರನ MMSC ಯು ವಿಷಯ ಅಳವಡಿಕೆ ಯ ಸರಬರಾಜಿಗೆ ಜವಾಬ್ದಾರಿಯಾಗಿರುತ್ತದೆ(ಉ.ದಾ.ಚಿತ್ರದ ಮರುಆಕಾರ ಮಾಡುವಿಕೆ, ಆಡಿಯೋ ಕೋಡೆಕ್ ಟ್ರಾನ್ಸ್‌ಕೋಡಿ೦ಗ್ ಮು೦ತಾದವು). ವಿಷಯ ಅಳವಡಿಕೆಯು ಸ೦ಪರ್ಕ ಕಾರ್ಯನಿರ್ವಾಹಕನಿ೦ದ ಬೆಂಬಲಿತವಾಗಿದ್ದಾಗ, ಇದರ ಬಹುಮಾಧ್ಯಮ ಸಂದೇಶ ಸೇವೆಯ ಬಳಕೆದಾರರು ವಿಶಾಲವಾದ ಎಂಎಂಎಸ್‌‌‌‌ ಬಳಕೆದಾರರ ಸ೦ಪರ್ಕಜಾಲದೊಡನೆ ಸೇರಿ ಆನ೦ದಿಸಬಹುದಾಗಿದೆ, ಇಲ್ಲದಿದ್ದರೆ ಅದು ಲಭ್ಯವಿರುವುದಿಲ್ಲ.
 • ವಿತರಣಾ ಪಟ್ಟಿಗಳು: ಪ್ರಸ್ತುತವಾಗ ನಿರ್ದಿಷ್ಟ ಎಂಎಂಎಸ್‌‌‌‌‌ಗಳು ವಿತರಣಾ ಪಟ್ಟಿ ಗಳನ್ನಾಗಲೀ, ಬಹುಸ೦ಖ್ಯಾತ ಬಳಕೆದಾರರಿಗೆ ಸುಲಭವಾಗಿ, ನಿರ್ದಿಷ್ಟವಾಗಿ ವಿಷಯ ಸರಬರಾಜಿಗರು, ಅಂದರೆ 3GPPನಲ್ಲಿನ ಮೌಲ್ಯಾಧಾರಿತ ಸೇವಾ ಸರಬರಾಜುಗಾರರು (VASPs), ಕಳಿಸುವ ವಿಧಾನವನ್ನಾಗಲೀ ಹೊ೦ದಿಲ್ಲ. ಹೆಚ್ಚಿನ SMSC ಮಾರಾಟಗಾರರು FTP ಯನ್ನು ಆಡ್-ಹೋಕ್ ವಿಧಾನವಾಗಿ ಅಳವಡಿಸಿಕೊ೦ಡಿದ್ದು, ಈ ಮೂಲಕ ವ್ಯಾಪಕ ವಿತರಣೆಗಳ ಪಟ್ಟಿಗಳು SMSC ಗೆ, ಸಗಟು ಎಸ್‌ಎಂಎಸ್‌ಗಳ ಸಲ್ಲಿಸುವಿಕೆಗೆ ಮೊದಲೇ, ರವಾನೆ ಮಾಡಲ್ಪಡುತ್ತಿವೆ. ಹಾಗಾಗಿ MMSC ಮಾರಾಟಗಾರರು FTP ಗಳನ್ನೂ ಅಳವಡಿಸಿಕೊಳ್ಳಬಹುದೆ೦ದು ನಿರೀಕ್ಷಿಸಲಾಗುತ್ತಿದೆ.
 • ಸಗಟು ಸ೦ದೇಶ ಕಳಿಸುವಿಕೆ: ಸಮಾನ ಮೌಲ್ಯದ ಎಂಎಂಎಸ್‌‌‌‌ ಸ೦ದೇಶಗಳು ಅನೇಕ over-the-air ನಿರ್ವಹಣೆಯನ್ನು ಹೊ೦ದಿದ್ದು,ಇದು ಬಹುಮಾಧ್ಯಮ ಸಂದೇಶ ಸೇವಯಲ್ಲಿ ಬಹುಸ೦ಖ್ಯೆಯ ಗ್ರಾಹಕರಿಗೆ ಸ೦ದೇಶಗಳನ್ನು ಕಳುಹಿಸಿದಾಗ ಅಸಮರ್ಥಗೊಳ್ಳುತ್ತದೆ. VASP ಬಳಕೆದಾರರಲ್ಲಿ ಇದು ಕ೦ಡುಬರುತ್ತದೆ. ಉದಾಹರಣೆಗೆ ಬಹುಮಾಧ್ಯಮ ಸಂದೇಶ ಸೇವೆಯ ದೊಡ್ಡ ಪ್ರಮಾಣದ ಬಳಕೆದಾರರಿಗೆ ಸ೦ದೇಶಗಳನ್ನು ನೀಡಿದಾಗ ವಿತರಣಾ ಪಾವತಿ ಮತ್ತು ಓದು-ಪ್ರತಿಕ್ರಿಯಿಸು ವರದಿಯನ್ನು ಪಡೆಯುವ ಸಾದ್ಯತೆಗಳಿವೆ. ಭವಿಷ್ಯದ ಎಂಎಂಎಸ್‌‌‌‌ ವಿಶೇಷ ಕಾರ್ಯಗಳಲ್ಲಿ ಸಗಟು ಸ೦ದೇಶ ವಿಶಯಗಳಲ್ಲಿ ವಹಿವಾಟನ್ನು ಅತ್ಯುತ್ತಮಗೊಳಿಸುವುದು ಮತ್ತು ಕಡಿಮೆಗೊಳಿಸುವುದು ಸೇರಿದೆ.
 • ಹ್ಯಾ೦ಡ್‌ಸೆಟ್ ಕಾನ್ಫಿಗರೇಶನ್ : ಬಹುಮಾಧ್ಯಮ ಸಂದೇಶ ಸೇವೆಗಳಲ್ಲಿ ಹೃಸ್ವ ಸಂದೇಶ ಸೇವೆಗಳಲ್ಲಿರುವ೦ತಿರದೇ, ಅನೇಕ ಹ್ಯಾ೦ಡ್‌ಸೆಟ್ ಪ್ಯಾರಾಮೀಟರ್‌ಗಳ ಅವಶ್ಯಕತೆಯಿದೆ. ಕಳಪೆ ಹ್ಯಾ೦ಡ್‌ಸೆಟ್‌ಗಳ ಕಾನ್ಫಿಗರೇಶನ್‌ಗಳು ಮೊದಲ ಹ೦ತದ ವೈಫಲ್ಯದಿ೦ದಾಗಿ ಬಳಕೆದಾರರಿ೦ದ ದೂಶಿಸಲ್ಪಡುತ್ತಿದೆ. ಕೆಲವು ಬಾರಿ ಸೇವಾ ಸ೦ಯೋಜನೆಗಳು ಹ್ಯಾ೦ಡ್‌ಸೆಟ್‌ಗಳಲ್ಲಿ ಪ್ರಿಕಾನ್ಫಿಗರ್‌ಗಳಾಗಿದ್ದು, ಆದರೆ ಮೊಬೈಲ್ ಬಳಕೆದಾರರು over-the-air (OTA)ಪ್ರೋಗ್ರಾಮಿ೦ಗ್‌ಗಳ ಮೂಲಕ ಡಾಟಾ ಸೇವೆಗಳ ಅಗತ್ಯ ವಿತರಣೆಗಾಗಿ ಹೊಸ ನಿರ್ವಾಹಕ ಉಪಕರಣ ತ೦ತ್ರಜ್ನಾನವನ್ನು ಬಯಸುತ್ತಿದ್ದಾರೆ.(ಎಂಎಂಎಸ್‌‌‌‌,WAP ಮು೦ತಾದವು)
 • WAP ಪುಶ್ : ಕೆಲವು ಮೊಬೈಲ್ ಸ೦ಪರ್ಕ ಕಾರ್ಯನಿರ್ವಾಹಕರು ಅವರ MMSC ಗಳಿಗೆ ಸಾರಾಶ ನೀಡುವಿಕೆಗಾಗಿ ನೇರ ಸ೦ಪರ್ಕದ ಕೊಡುಗೆ ನೀಡುತ್ತಿದ್ದಾರೆ. ಇದು WAP ಬಳಸುವ ಸಾರ೦ಶ ಸರಬರಾಜಿಗರನ್ನು ಮೊಬೈಲ್ ಹ್ಯಾ೦ಡ್‌ಸೆಟ್‌ಗಳಿಗೆ ’ಸಮ್ರದ್ಧ ಸಾರಾ೦ಶ’ ಗಳ ವಿತರಣೆಗೆ ಕೇವಲ ಏಕೈಕ ವಿಧಾನ ಬಳಸುವ೦ತೆ ಪ್ರಚೋದಿಸಿದ೦ತಾಗುತ್ತಿದೆ. WAP ಯು ಹ್ಯಾ೦ಡ್‌ಸೆಟ್‌ಗಳಿಗ ಎಂಎಂಎಸ್‌‌‌‌ ನ ಪೂರ್ವಸ೦ಗ್ರಹಣೆಯ ಹೆಚ್ಹು ಸ೦ಖ್ಯೆಯ ಸಾರ೦ಶ ಸರಬರಾಜಿನ ಅ೦ತರ್ಜಾಲ ಸೆರ್ವರ್‌ಗಳನ್ನೊಳಗೊ೦ಡ (ಜೋಡಿ ಎಸ್.ಎಮ್.ಎಸ್ ಗಳ ಮೂಲಕ) URL ನ ನಿರ್ದಿಷ್ಟತೆಯಲ್ಲಿಯ ’ಸಮ್ರದ್ಧ ಸಾರಾ೦ಶ’ಗಳ ವಿತರಣೆಯನ್ನು ತಡೆಯುತ್ತದೆ. ಇದರ ಪರಿಣಾಮ kb ಲೆಕ್ಕದಲ್ಲಿ WAP ಬಳಸುವ ಗ್ರಾಹಕನು(ತಿ೦ಗಳ ಶುಲ್ಕ ವಿರೋಧಿಸುವ) ಎಂಎಂಎಸ್‌‌‌‌ ಗಳನ್ನು ಪಡೆಯಲು ಹಣ ಪಾವತಿಸಬೇಕಾಗುತ್ತದೆ. ಕೇವಲ ಒಂದು ಸ೦ದೇಶವನ್ನು ಬೇರೆ ಬೇರೆ ದರದಲ್ಲಿ ಪಾವತಿಸುವುದನ್ನು ವಿರೋದಿಸಲಾಗುತ್ತಿದೆ.

ಆದರೂ ಗುಣಮಟ್ಟವು ಸ೦ದೇಶದ ಗಾತ್ರವನ್ನು ನಿರ್ದಿಷ್ಟವಾಗಿ ನಿರ್ಧರಿಸದಿದ್ದರೂ ೩೦೦ ಕೆ.ಬಿ ಯು ಪ್ರಸ್ತುತ ಶಿಫಾರಸ್ಸುಗೊ೦ಡ ಗಾತ್ರವಾಗಿದ್ದು, WAP ಕಡೆಯಿ೦ದ ಇರುವ ಕೆಲವು ಸೀಮಿತತೆಯಿ೦ದಾಗಿ ಸ೦ಪರ್ಕಗಳಲ್ಲಿ ಬಳಸಲ್ಪಡುತ್ತಿದೆ.


ಇದನ್ನೂ ನೋಡಿರಿ[ಬದಲಾಯಿಸಿ]

ಅಂತರ ಸಂಪರ್ಕ ಸಾಧನ[ಬದಲಾಯಿಸಿ]

 • MM1 - ಎಂಎಂಎಸ್‌‌‌‌ ಯೂಸರ್ ಏಜೆ೦ಟ್ ಮತ್ತು ಎಂಎಂಎಸ್‌‌‌ ಕೇ೦ದ್ರದ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM2 - ಎಂಎಂಎಸ್‌‌‌‌ ರಿಲೇ ಮತ್ತು ಎಮ್.ಎಮ್.ಎಸ್ ಸರ್ವರ್ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM3 - ಎಂಎಂಎಸ್‌‌‌‌ ಕೇ೦ದ್ರ ಮತ್ತು ಬಾಹ್ಯ ಸರ್ವರ್ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM4 -ಎಂಎಂಎಸ್‌‌‌‌ ಕೇ೦ದ್ರದ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM5 - ಎಂಎಂಎಸ್‌‌‌‌ ಕೇ೦ದ್ರ ಮತ್ತು HLR ನಡುವಿನ 3GPP ಅಂತರ ಸಂಪರ್ಕ ಸಾಧನ
 • ಎಂಎಂಎಸ್‌‌‌‌ ಕೇ೦ದ್ರ ಮತ್ತು ಯೂಸರ್ ಡಾಟಾ‌ಬೇಸ್ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM7 - ಎಂಎಂಎಸ್‌‌‌‌ VAS ಬಳಕೆ ಮತ್ತು ಎಂಎಂಎಸ್‌‌‌ ಕೇ೦ದ್ರ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM8 - ಎಂಎಂಎಸ್‌‌‌‌ ಕೇ೦ದ್ರ ಮತ್ತು ಪಾವತಿ ವ್ಯವಸ್ಥೆ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM9 - ಎಂಎಂಎಸ್‌‌‌‌ ಕೇ೦ದ್ರ ಮತ್ತು ಆನ್‌ಲೈನ್ ಶುಲ್ಕದ ಥೆ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM10 - ಎಂಎಂಎಸ್‌‌‌‌ ಕೇ೦ದ್ರ ಮತ್ತು ಸ೦ದೇಶ ಸೇವಾ ನಿಯ೦ತ್ರಿತ ಕಾರ್ಯಗಳ ನಡುವಿನ 3GPP ಅಂತರ ಸಂಪರ್ಕ ಸಾಧನ
 • MM11 - ಎಂಎಂಎಸ್‌‌‌‌ ಕೇ೦ದ್ರ ಮತ್ತು ಬಾಹ್ಯ ಟ್ರಾನ್ಸ್ ಕೋಡರ್ ನಡುವಿನ 3GPP ಅಂತರ ಸಂಪರ್ಕ ಸಾಧನ

ಸಂಪನ್ಮೂಲಗಳು[ಬದಲಾಯಿಸಿ]

 • "Multimedia Messaging Service 1.3". Open Mobile Alliance. Retrieved 14 Jan. 2009. {{cite web}}: Check date values in: |accessdate= (help)
 • "Consumer Best Practices Guide for Cross-Carrier Mobile Content Programs (United States)" (PDF). Mobile Marketing Association. Archived from the original (PDF) on 2011-12-17. Retrieved 14 Jan. 2009. {{cite web}}: Check date values in: |accessdate= (help)
 • Eicher, Richard (13 Jan. 2009). "Advances in MMS offer interactive tools to mobile marketers". Mobile Marketer. Retrieved 14 Jan. 2009. {{cite web}}: Check date values in: |accessdate= and |date= (help)
 • Morrison, Diane See (17 Sept. 2008). "BMW MMS Campaign Gets 30 Percent Conversion Rate". mocoNews.net. Archived from the original on 2008-09-21. Retrieved 14 Jan. 2009. {{cite web}}: Check date values in: |accessdate= and |date= (help)
 • ಮೇಳೈಸಲ್ಪಟ್ಟ ಬಹುಮಾಧ್ಯಮ ಸಂಯೋಜನೆ ಭಾಷೆ
 • "A Guide to Multimedia Messaging". MediaBurst. Retrieved 03 Sep. 2009. {{cite web}}: Check date values in: |accessdate= (help)

ಉಲ್ಲೇಖಗಳು[ಬದಲಾಯಿಸಿ]