ವಿಷಯಕ್ಕೆ ಹೋಗು

ಬಲಾತ್ಕಾರದ ಸಂಭೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಲಾತ್ಕಾರದ ಸಂಭೋಗವು (ಅತ್ಯಾಚಾರ) ಒಂದು ಬಗೆಯ ಲೈಂಗಿಕ ಅಪರಾಧವಾಗಿದೆ. ಇದರಲ್ಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮೇಲೆ ಅವನ/ಅವಳ ಸಮ್ಮತಿಯಿಲ್ಲದೆಯೇ ಸಂಭೋಗ ಅಥವಾ ಇತರ ರೂಪದ ಲೈಂಗಿಕ ಪ್ರವೇಶವನ್ನು ಎಸಗಲಾಗುತ್ತದೆ. ಈ ಕ್ರಿಯೆಯನ್ನು ಶಾರೀರಿಕ ಬಲ, ಬಲಾತ್ಕಾರ, ಅಧಿಕಾರದ ದುರುಪಯೋಗದಿಂದ ನಡೆಸಬಹುದು, ಅಥವಾ ಸಕ್ರಮ ಸಮ್ಮತಿಯನ್ನು ನೀಡಲು ಅಸಮರ್ಥವಾಗಿರುವ ವ್ಯಕ್ತಿಯ (ಉದಾಹರಣೆಗೆ ಪ್ರಜ್ಞೆ ತಪ್ಪಿದ, ಅಶಕ್ತನಾಗಿಸಿದ, ಬೌದ್ಧಿಕ ಅಶಕ್ತತೆಯಿರುವ, ಸಮ್ಮತಿಯ ವಯಸ್ಸಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿ) ವಿರುದ್ಧ ನಡೆಸಬಹುದು.[]

ಅತ್ಯಾಚಾರದ ವರದಿ ಒಪ್ಪಿಸುವ, ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮತ್ತು ಶಿಕ್ಷೆ ನೀಡುವ ಪ್ರಮಾಣ ಕಾನೂನುವ್ಯಾಪ್ತಿಗಳ ನಡುವೆ ಬದಲಾಗುತ್ತದೆ. ವಿಶ್ವಾದ್ಯಂತ, ಅತ್ಯಾಚಾರವನ್ನು ಮುಖ್ಯವಾಗಿ ಪುರುಷರು ಎಸಗುತ್ತಾರೆ.[] ವ್ಯಕ್ತಿಗೆ ತಿಳಿದಿರುವ ಜನರಿಂದ ಅತ್ಯಾಚಾರಕ್ಕಿಂತ ಅಪರಿಚಿತರಿಂದ ಅತ್ಯಾಚಾರವು ಸಾಧಾರಣವಾಗಿ ಕಡಿಮೆ ಸಾಮಾನ್ಯವಾಗಿದೆ. ಪುರುಷರ ಮೇಲೆ ಪುರುಷರ, ಹಾಗೂ ಮಹಿಳೆಯರ ಮೇಲೆ ಮಹಿಳೆಯರ ಅತ್ಯಾಚಾರ ಜೈಲುಗಳಲ್ಲಿ ಸಾಮಾನ್ಯವಾಗಿದೆ ಮತ್ತು ಅತ್ಯಾಚಾರದ ಅತಿ ಕಡಿಮೆ ವರದಿ ಮಾಡಲಾದ ರೂಪಗಳಾಗಿರಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. "Sexual violence chapter 6" (PDF). World Health Organization. 2002. Retrieved 5 December 2015. {{cite web}}: Italic or bold markup not allowed in: |publisher= (help)
  2. "Violence against women". World Health Organization (in ಬ್ರಿಟಿಷ್ ಇಂಗ್ಲಿಷ್). Retrieved 2017-09-08.