ವಿಷಯಕ್ಕೆ ಹೋಗು

ಬಯಾಂಕಲಾ (ತ್ವಚೆಯ ಆರೈಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಯಾಂಕಲಾ
巴颜 喀拉
ಸಂಸ್ಥೆಯ ಪ್ರಕಾರಖಾಸಗಿ
ಸ್ಥಾಪನೆಜನವರಿ 1, 2008 (2008-01-01)
ಸಂಸ್ಥಾಪಕ(ರು)ಜೀನ್ ಝಿಮ್ಮರ್ಮನ್
ಮುಖ್ಯ ಕಾರ್ಯಾಲಯಶಾಂಘೈ, ಚೀನಾ
ಕಾರ್ಯಸ್ಥಳಗಳ ಸಂಖ್ಯೆ೧೯
ವ್ಯಾಪ್ತಿ ಪ್ರದೇಶಶಾಂಘೈ
ಪ್ರಮುಖ ವ್ಯಕ್ತಿ(ಗಳು)ಜೀನ್ ಝಿಮ್ಮರ್ಮನ್, ಸಿ‌ಇಒ
ಉದ್ಯಮಸೌಂದರ್ಯವರ್ಧಕಗಳು
ಉತ್ಪನ್ನತ್ವಚೆಯ ಆರೈಕೆ ಉತ್ಪನ್ನಗಳು
ಸೌಂದರ್ಯವರ್ಧಕಗಳು
ಜಾಲತಾಣwww.bayankala.com

ಬಯಾಂಕಲಾ ಎಂಬುದು ಚೀನಾದ ಶಾಂಘೈನಲ್ಲಿ ಶುರುವಾದ ನೈಸರ್ಗಿಕ ಚರ್ಮದ ಆರೈಕೆಯ ಬ್ರಾಂಡ್. ಇದನ್ನು ಫ್ರೆಂಚ್ ಉದ್ಯಮಿ ಜೀನ್ ಝಿಮ್ಮರ್ಮ್ಯಾನ್ ರೂಪಿಸಿದ್ದಾರೆ.[೧] ಝಿಮ್ಮರ್ಮ್ಯಾನ್ ಅವರು ಚೀನಾದ ಗಿಡಮೂಲಿಕೆ ತಜ್ಞರೊಂದಿಗೆ ಚರ್ಚಿಸಿ ಈ ಬ್ರಾಂಡ್ ಅನ್ನು ಸ್ಥಾಪಿಸಿದರು. ಅವರು ಚೀನಾದಲ್ಲಿ ಲೇನ್ ಕ್ರಾಫರ್ಡ್ ಡಿಪಾರ್ಟ್ಮೆಂಟ್ ಸ್ಟೋರ್‌ಗಳ ಜನರಲ್ ಮ್ಯಾನೇಜರ್ ಆಗಿದ್ದಾಗ, ಉನ್ನತ ಮಟ್ಟದ ಚೀನೀ ಬ್ರಾಂಡ್ ಅನ್ನು ರಚಿಸಲು ನಿರ್ಧರಿಸಿದರು. ಇದೇ ಬಯಾಂಕಲಾ ಎಂಬ ಬ್ರಾಂಡ್‌ಗೆ ಸ್ಫೂರ್ತಿಯಾಯಿತು.[೨]

ಹಳದಿ ನದಿ ಮೂಲವನ್ನು ಹೊಂದಿರುವ ದಕ್ಷಿಣ-ಮಧ್ಯ ಕಿಂಗ್ಹೈನಲ್ಲಿರುವ ಬಯಾನ್ ಹರ್ ಪರ್ವತಗಳ ಹೆಸರನ್ನು ಈ ಬ್ರಾಂಡ್ಗೆ ಇಡಲಾಗಿದೆ. ಈ ಬ್ರ್ಯಾಂಡ್ನ ಸಂಕೇತವೆಂದರೆ "ಹುಲು", ಸಾಂಪ್ರದಾಯಿಕವಾಗಿ ಒಂದು ಪಾತ್ರೆಯಾಗಿ ಬಳಸಲ್ಪಡುವ ಮತ್ತು ಚೀನೀ ಔಷಧಾಲಯದ ಸಂಕೇತವಾಗಿ ಮುಂಭಾಗದಲ್ಲಿ ನೇತುಹಾಕಲ್ಪಡುವ ಸೋರೆಕಾಯಿ ರೂಪದ ಚೀನೀ ಬಾಟಲಿ.[೩]

ಸಾಂಪ್ರದಾಯಿಕ ಚೀನೀ ಪದಾರ್ಥಗಳು[ಬದಲಾಯಿಸಿ]

ಸಾಂಪ್ರದಾಯಿಕ ಚೀನೀ ಗಿಡಮೂಲಿಕೆ ಔಷಧದ ಪಾಕವಿಧಾನಗಳನ್ನು ಹೊಂದಿರುವ ಮೊದಲ ಚೀನೀ "ಐಷಾರಾಮಿ ಚರ್ಮದ ಆರೈಕೆ ಬ್ರಾಂಡ್" ಎಂದು ಬಯಾಂಕಲಾ ಹೇಳಿಕೊಂಡಿದೆ.[೪] ಬ್ರ್ಯಾಂಡ್ ಪರಿಕಲ್ಪನೆಯು ಚೀನೀ ಸಸ್ಯಶಾಸ್ತ್ರ ಸಾಂಪ್ರದಾಯಿಕವಾಗಿ ಬಳಸಲಾಗುವ ೫ ಪದಾರ್ಥಗಳನ್ನು ಒಳಗೊಂಡಿದೆ. ಈ ಬ್ರಾಂಡ್ ಅನ್ನು ದಕ್ಷಿಣ ಚೀನಾ ಗುವಾಂಗ್ಝೌನಲ್ಲಿ ತಯಾರಿಸಲಾಗುತ್ತದೆ ಮತ್ತು ಕೆಲವು ಉತ್ಪನ್ನಗಳನ್ನು ಚೀನಾದಲ್ಲಿ ಸಾವಯವ ಎಂದು ಪ್ರಮಾಣೀಕರಿಸಲಾಗಿದೆ.[೫] ಸಾಂಪ್ರದಾಯಿಕ ಚೈನೀಸ್ ಲೂನರ್ ಕ್ಯಾಲೆಂಡರ್ ಪ್ರಕಾರ ಪ್ರತಿ ಉತ್ಪನ್ನವನ್ನು ಹಳದಿ ನದಿಯ ಮೂಲದಿಂದ ಶುದ್ಧ ನೀರನ್ನು ಬಳಸಿ ರೂಪಿಸಲಾಗಿದೆ ಎಂದು ಝಿಮ್ಮರ್ಮ್ಯಾನ್ ಹೇಳುತ್ತಾರೆ.[೩]

ಉಲ್ಲೇಖಗಳು[ಬದಲಾಯಿಸಿ]

  1. Huang, Hung (15 February 2012). "ChinaFile: Beauty Brands Back from the Dead". Women's Wear Daily. Retrieved 7 May 2012.
  2. "Chinese skincare products embrace the wisdom of the ages". The China Biz. 5 January 2011. Archived from the original on 13 August 2016. Retrieved 7 May 2012.
  3. ೩.೦ ೩.೧ "Chinese skincare products embrace the wisdom of the ages". The China Biz. 5 January 2011. Archived from the original on 13 August 2016. Retrieved 7 May 2012."Chinese skincare products embrace the wisdom of the ages". The China Biz. 5 January 2011. Archived from the original Archived 2016-08-13 ವೇಬ್ಯಾಕ್ ಮೆಷಿನ್ ನಲ್ಲಿ. on 13 August 2016. Retrieved 7 May 2012.
  4. Huang, Hung (15 February 2012). "ChinaFile: Beauty Brands Back from the Dead". Women's Wear Daily. Retrieved 7 May 2012.Huang, Hung (15 February 2012). "ChinaFile: Beauty Brands Back from the Dead". Women's Wear Daily. Retrieved 7 May 2012.
  5. "Local brands going Chic". Beijing Today. 21 October 2011. Archived from the original on 27 July 2012. Retrieved 7 May 2012.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]