ಬನಾರಸಿ ಸೀರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬನಾರಸಿ ಸೀರೆ[ಬದಲಾಯಿಸಿ]

ಬನಾರಸಿ ಸೀರೆಯು ವಾರಣಾಸಿಯಲ್ಲಿ ಮಾಡುವ ಸೀರೆಯಾಗಿದ್ದು.ಇದನ್ನು ಬೆನಾರಸ್‍ಅಥವಾ ಬನಾರಸ್‍ಎಂದೂಕರೆಯುತ್ತಾರೆ.ಬನಾರಸಿ ಸೀರೆಗಳು ಭಾರತದಅತ್ಯುತ್ತಮ ಸೀರೆ.ಅದನ್ನುಚಿನ್ನ ಮತ್ತು ಬೆಳ್ಳಿ ಬಣ್ಣದ ಬ್ರೊಕೇಡ್‍ಅಥವಾಜರಿಯಿಂದತಯಾರಿಸುತ್ತಾರೆ.ಉತ್ತಮರೇಷ್ಮೆ ಮತ್ತುಐಷಾರಾಮಿಕಸೂತಿಗೆಇದುಹೆಸರುವಾಸಿಯಾಗಿದೆ.ಸೀರೆಗಳು ನುಣ್ಣಗೆ ನೇಯ್ದ ರೇಷ್ಮೆಗಳಿಂದ ತಯಾರಿಸಲ್ಪಟ್ಟಿರುತ್ತದೆಮತ್ತು ಸಂಕೀರ್ಣವಾದ ವಿನ್ಯಾಸದಿಂದಅಲಂಕರಿಸಲ್ಪಟ್ಟಿರುತ್ತದೆ.ಮತ್ತು ಈ ರೀತಿಯಾಗಿತಯಾರಿಸಲ್ಪಡುವುದರಿಂದತುಲನಾತ್ಮಕವಾಗಿ ಭಾರವಾಗಿರುತ್ತದೆ.[೧] ಇದರ ವಿಶೇಷ ಗುಣಲಕ್ಷಣ ಮೊಘಲ್ ಸ್ಪೂರ್ತಿ ವಿನ್ಯಾಸಸ ಹೊಂದಿದೆ. ಸಂಕೀರ್ಣವಾದ ಒಳಾಂಗಣ ಹೂವಿನ ಮತ್ತು ಪೋಲಿಯೇಟ್ ಚಿತ್ರಗಳು ಹಾಗೂ ಹೊರಭಾಗದಲ್ಲಿಜಾಲ್ಲಾರ್ ಎಂಬ ನೇರವಾದ ಎಲೆಗಳ ಸುರುಳಿ ವಿನ್ಯಾಸ ಸೀರೆಯ ಅಂಚಿನಲ್ಲಿರುವದು ಈ ಸೀರೆಯ ವಿಶೇಷತೆಯಾಗಿದೆ.[೨] ಒಂದು ಬನಾರಸಿ ಸೀರೆಯ ವಿನ್ಯಾಸ ಮತ್ತು ನಮೂನೆಯನ್ನುತಯಾರಿಸಲು 15 ದಿನಗಳವರೆಗೆ ಅಥವಾಒಂದು ತಿಂಗಳ ಸಮಯ ಮಿತಿಯನ್ನು ತೆಗೆದುಕೊಳ್ಳುತ್ತದೆ. ಮತ್ತು ಕೆಲವೊಮ್ಮೆ ಹೆಚ್ಚಿನ ವಿನ್ಯಾಸಗಳಿಗೆ ಆರು ತಿಂಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಬನಾರಸಿ ಸೀರೆಯನ್ನು ಹೆಚ್ಚಾಗಿ ಭಾರತೀಯ ಮಹಿಳೆಯರು ಪ್ರಮುಖ ಸಂದರ್ಭದಲ್ಲಿಧರಿಸುತ್ತಾರೆ.ಉದಾಹರಣೆಗೆ ಮದುವೆ ಮತ್ತು ಹಬ್ಬದ ಸಂದರ್ಭಗಳಲ್ಲಿ ಧರಿಸುತ್ತಾರೆ. ಇವು ಆಭರಣಗಳಿಗೆ ಪೂರಕವಾಗಿದೆ.

ಇತಿಹಾಸ[ಬದಲಾಯಿಸಿ]

ಸಾಂಪ್ರದಾಯಿಕ ಬನಾರಸಿ ಸೀರೆಗೆ ಚಿನ್ನದ ಬ್ರೊಕೇಡ್ ರಾನ್ಛ ಫಿಚ್ ( 1583 – 91) ಹತ್ತಿ ಬಟ್ಟೆಯಉದ್ಯಮದಅಭಿವೃದ್ಧಿ ಹೊಂದುತ್ತಿರುವಕ್ಷೇತ್ರವಾಗಿ ಬನಾರಸ್‍ಅನ್ನು ವರ್ಣಿಸುತ್ತಾನೆ. ಬನಾರಸಿನ ಬ್ರೊಕೇಡ್ ಮತ್ತುಜರಿ ಜವಳಿಗಳ ಉಲ್ಲೇಖವು 19 ನೇ ಶತಮಾನದಲ್ಲಿಕಂಡು ಬಂದಿದೆ. 1603 ರಕ್ಷಾಮದ ಸಮಯದಲ್ಲಿಗುಜರಾತಿನರೇಷ್ಮೆ ನೇಕಾರರು ವಲಸೆ ಬಂದಾಗರೇಷ್ಮೆ ಬ್ರೊಕೇಡ್ ನೇಯ್ಗೆ ಹದಿನೇಳನೇ ಶತಮಾನದಲ್ಲಿ ಬನಾರಸಿನಲ್ಲಿ ಪ್ರಾರಂಭವಾಯಿತು ಮತ್ತು 18 ನೇ ಮತ್ತು 19 ನೇ ಶತಮಾನದಲ್ಲಿಉತ್ಕøಷ್ಟತೆಗೆ ಬೆಳೆಯಿತು. 14 ನೇ ಶತಮಾನದ ಮೊಘಲ್‍ಅವಧಿಯಲ್ಲಿಚಿನ್ನದ ಮತ್ತು ಬೆಳ್ಳಿಯ ಎಳೆಗಳನ್ನು ಬಳಸಿಕೊಂಡು ಸಂಕೀರ್ಣವಾದ ವಿನ್ಯಾಸಗಳೊಂದಿಗೆ ಬ್ರೊಕೇಡ್ ನೇಯ್ಗೆ ಬನಾರಸಿ ಸೀರೆಯ ವಿಶೇಷತೆಯಾಗಿ ಮಾರ್ಪಟ್ಟಿತು. ಸಾಂಪ್ರದಾಯಿಕ ಬನಾರಸಿ ಸೀರೆಯು ಕಠಿಣವಾದ ಕೆಲಸ ಮತ್ತುರೇಷ್ಮೆಯನ್ನು ಬಳಸಿಕೊಂಡು ಕೌಶಲ್ಯಪೂರ್ಣ ಕೆಲಸದಿಂದ ಮಾಡಲಾಗುತ್ತಿದೆ. ಸಾರತಯಾರಿಕೆಯುಗೋರಕ್ಪುರ್, ಚಂದೌಲಿ, ಜೌನ್ಪುರ್, ಮತ್ತುಅಜಮ್‍ಘರ್ ಜಿಲ್ಲೆಗಳನ್ನು ಒಳಗೊಂಡು ವಾರಣಾಸಿಯ ಸುತ್ತಲಿನ ಕೈಮಗ್ಗ ರೇಷ್ಮೆಉದ್ಯಮಿಯೊಂದಿಗೆ ನೇರಅಥವಾ ಪರೋಕ್ಷವಾಗಿ ಸಂಬಂಧಿಸಿದ 12 ದಶಲಕ್ಷಜನರಿಗೆ ಬಟ್ಟೆಉದ್ಯಮವಾಗಿದೆ. ಭೌಗೋಳಿಕ ಸೂಚನೆ ರೇಷ್ಮೆ ಕೈಮಗ್ಗಗಳು ವಾರಣಾಸಿ ಬನಾರಸಿ ರೇಷ್ಮೆಕೈಗಾರಿಕೆಯಉದ್ಯಮವು ಬನಾರಸಿ ರೇಷ್ಮೆ ಸೀರೆಗಳನ್ನು ಉತ್ಪಾದಿಸುವ ಯಾತ್ರಿಕೃತ ಘಟಕಗಳಿಂದ ವೇಗವಾಗಿ ಬೆಳೆಯುತ್ತಿದೆ. ಮಾರುಕಟ್ಟೆಸ್ಪರ್ಧೆ ಮತ್ತುಅಗ್ಗದ ವೆಚ್ಚದ ಸ್ಪರ್ಧೆಯಕಾರಣ ಭಾರೀ ನಷ್ಟವನ್ನುಉಂಟುಮಾಡಿದೆ.ಮತ್ತೊಂದು ಸ್ಪರ್ಧೆಯ ಮೂಲವೆಂದರೆರೇಷ್ಮೆಗೆಕಡಿಮೆ ಸಂಶ್ಲೇಷಿತ ಪರ್ಯಾಯಗಳಿಂದ ಮಾಡಲ್ಪಟ್ಟ ಸೀರೆಗಳು.

2009ರಲ್ಲಿ ಉತ್ತರ ಪ್ರದೇಶದ ನೇಯ್ಗೆ ಸಂಘಗಳು, ಬನಾರಸ್ ಬ್ರೊಕೇಡ್ ಸೀರೆ ಸಂಸ್ಥೆಗಳು ಭೌಗೋಳಿಕ ಸೂಚನೆಯ ಹಕ್ಕನ್ನು ಪಡೆದುಕೊಂಡವು.ಇದು ಭೌದ್ಧಿಕ ಆಸ್ತಿ ಹಕ್ಕಾಗಿದೆ.ಇದುಒಂದು ನಿರ್ದಿಷ್ಟ ಪ್ರದೇಶದಲ್ಲಿ ಹುಟ್ಟಿಕೊಂಡಿದೆಎಂದುಗುರುತಿಸಲಾಗಿದೆ.ನಿರ್ದಿಷ್ಟಗುಣಮಟ್ಟಖ್ಯಾತಿಅಥವಾಉತ್ಪನ್ನದಇತರ ಲಕ್ಷಣಗಳು ಅದರ ಭೌಗೋಳಿಕ ಮೂಲಕ್ಕೆ ಮೂಲಭೂತವಾಗಿಕಾರಣವಾಗಿದೆ.ಜೆ.ಐ ಪ್ರಮಾಣಪತ್ರದ ಪ್ರಕಾರ ಬನಾರಸಿ ಉತ್ಪನ್ನಗಳು ನಾಲ್ಕು ಹಂತದಲ್ಲಿದೆ. • ರೇಷ್ಮೆ ಸೀರೆಗಳು • ಜವಳಿ ವಸ್ತುಗಳು • ಬಟ್ಟೆಯಕಸೂತಿ ವಿನ್ಯಾಸ • ಗುಣಮಟ್ಟದ ಬಟ್ಟೆಗಳು ಮುಖ್ಯವಾಗಿದೆ. 2007ರ ಜುಲೈನಲ್ಲಿಜೈನ ನಿರ್ದೇಶಕ ಕೈಗಾರಿಕೆಗಳು ( ಪೂರ್ವ ವಲಯ ), ಕೈ ಮಗ್ಗ, ಮತ್ತು ಜವಳಿ ಉದ್ಯಮದ ನಿರ್ದೇಶನ, ಬನಾರಸ್ ಬಂಕರ್ ಸಮಿತಿ, ಹ್ಯೂಮನ್ ವೆಲ್ಫೇರಸೋಸಿಯೇಶನ್ , ನೈನ್ ಸಂಸ್ಥೆಗಳು, ಉತ್ತರ ಪ್ರದೇಶ ಕೈ ಮಗ್ಗ ಬಟ್ಟೆಗಳ ಮಾರುಕಟ್ಟೆ ಸಹಕಾರ ಸಂಘ, ಪೂರ್ವರಫ್ತುದಾರರ ಸಂಘ, ಬನಾರಸಿ ವಸ್ತ್ರಾಉದ್ಯೋಗ ಸಂಘ, ಬನಾರಸ್ ಹಾಥ್‍ಕಾರ್ಗಾ ವಿಕಾಸ್ ಸಮಿತಿ ಮತ್ತುಆದರ್ಶ್ ಸಿಲ್ಕ್ ಬಂಕರ್ ಸಹಕಾರಿ ಸಮಿತಿ, ಭಾರತ ಸರ್ಕಾರದಚೆನ್ನೈ ಮೂಲದ ಭೌಗೋಳಿಕ ಸೂಚನಾ ರಿಜಿಸರಿಗೆ ಅನ್ವಯಿಸಿದೆ. ವಿಧಗಳು

ಬನಾರಸಿ ಸೀರೆಯ ಮುಖ್ಯ ಪ್ರಭೇದಗಳು[ಬದಲಾಯಿಸಿ]

  • ಶುದ್ಧರೇಷ್ಮೆ (ಹತ್ತಿ)
  • ಆರ್ಗಾರ್ಸಾ (ಕೋರಾ)
  • ಜರಿ
  • ರೇಷ್ಮೆ ಸೀರೆ

ಪರಿಸರ ಕಾಳಜಿ[ಬದಲಾಯಿಸಿ]

ಗಂಗಾನದಿಯ ಮಾಲಿನ್ಯವನ್ನುಉಂಟುಮಾಡುವರಾಸಾಯನಿಕ ವರ್ಣದ್ರವ್ಯಗಳನ್ನು ವ್ಯಾಪಾರದಲ್ಲಿ ಹೆಚ್ಚಿನ ಸಂಖ್ಯೆಯರೇಷ್ಮೆ ಬಣ್ಣತಯಾರಿಕಾ ಘಟಕಗಳು ಬಳಸುವುದರಿಂದ ನೈಸರ್ಗಿಕ ವರ್ಣಗಳಿಗೆ ಸ್ಥಳಾಂತರಿಸಲು ಒಂದು ಚಲನೆ ನಡೆಯುತ್ತಿದೆ.ಇಂಡಿಯನ್‍ಇನ್ಸ್ಟಿಟ್ಯೂಟ್‍ಆಫ್‍ಟೆಕ್ನಾಲಜಿಯ ಸಂಶೋಧನಾತಂಡವು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ್ರಾವಣ ಹೊರತೆಗೆಯುವ ಮತ್ತುಎಂಜೈ ಮ್ಯಾಟಿಕ್ ಹೊರತೆಗೆಯುವ ಯಂತ್ರಗಳನ್ನು ಬಳಸುತ್ತಿದೆ. ಹೂವುಗಳು ಮತ್ತು ಹಣ್ಣುಗಳು, ಅಕೇಶಿಯಾ, ಬಟಿಯಾ (ಪ್ಯಾಲಾಶ್), ಮ್ಯಾಡ್ಚರ್, ಮಾರಿಗೋಲ್ಡ್ ಮತ್ತು ದಾಳಿಂಬೆ(ಅನಾರ್) ಯಿಂದ ಬಣ್ಣತೆಗೆಯುವಕಾರ್ಯ ನಡೆಸುತ್ತಿದೆ. ಇದರಿಂದ ಪರಿಸರ ಹಾನಿಯಾಗುವುದಿಲ್ಲ.[೩]

ಉಲ್ಲೇಖಗಳು[ಬದಲಾಯಿಸಿ]

  1. https://kannada.boldsky.com/beauty/make-up/2013/traditional-indian-bridal-sarees-004982.html
  2. https://brainly.in/question/2582155
  3. https://kn.wikipedia.org/wiki/%E0%B2%A6%E0%B2%BE%E0%B2%B3%E0%B2%BF%E0%B2%82%E0%B2%AC%E0%B3%86