ಬದ್ರ್ ಯುದ್ಧ
ಹಿಜಿರ 2ನೇ ವರ್ಷ ರಮಳಾನ್ 17ನೇ ದಿವಸ ಇಸ್ಲಾಮಿನ ಅಳಿವು ಉಳಿವಿನ ಬದರ್ ಯುದ್ಧ ನಡೆದ ದಿನ.
#ಯಾರ ನಡುವೆ ಯುದ್ಧ...?
ಅಲ್ಲಾಹನನ್ನು ಮಾತ್ರ ಆರಾಧಿಸುತ್ತಿರುವುದಕ್ಕಾಗಿ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥನೆ ಮತ್ತು ಇಸ್ತಿಗಾಸ ನಡೆಸುತ್ತಿದ್ದಕ್ಕಾಗಿ ಮತ್ತು ಅಲ್ಲಾಹನೆಡೆಗೆ ಜನರನ್ನು ಕರೆಯುತ್ತಿರುವುದಕ್ಕಾಗಿ ಅಮಾನವೀಯವಾಗಿ ಪೀಡಿಸಿದ ಮಕ್ಕಾದ ಕುರೈಷಿ ಮುಶ್ರಿಕ್ ಗಳ ಘೋರ ಪೀಡನೆಗಳನ್ನು ಸಹಿಸಲಾರದೆ ಮಕ್ಕಾದಿಂದ ಮದೀನಾಗೆ ವಲಸೆ ಹೋದ ನಾಯಕ ಪ್ರವಾದಿ ಮಹಮ್ಮದ್ (ಸ.ಅ) ರವರು ಮತ್ತು ಅವರು ತಂದ ಅಲ್ಲಾಹನ ಆಜ್ಞೆ ಗಳನ್ನು ಶಿರಸಾವಹಿಸಿ ಪಾಲಿಸಿ ಜೀವಿಸುತ್ತಿದ್ದ ಮುವಹ್ಹಿಘದ ಗಳಾದ ಮಕ್ಕಾದಿಂದ ವಲಸೆ ಹೋದ ಮುಹಾಜಿರ್ ಹಾಗೂ ಮದೀನಾದ ಅನ್ಸಾರಿಗಳಾದ ಸ್ವಹಾಬಿಗಳನ್ನೊಳಗೊಂಡ ಒಟ್ಟು 313ಮಂದಿಯ ಒಂದು ಸಣ್ಣ ಗುಂಪು ಒಂದು ಭಾಗದಲ್ಲಿ.
ಮತ್ತು
ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹಿಂ(ಅ) ಮತ್ತು ಇಸ್ಮಾಯೀಲ್(ಅ) ಹಾಗೂ ಲಾತ, ಉಝ್ಝ, ಮನಾತ ಗಳಂತಹ ಮಹಾನ್‌ಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಮ್ರ್ ಇಬ್ನ್ ಹಿಶಾಮ್(ಅಬೂ ಜಹಲ್), ಉತ್ಬಾ ಬಿನ್ ರಬೀಅ, ಉಬಯ್ಯ್ ಇಬ್ನ್ ಖಲಫ್ ಮುಂತಾದ ದುರಹಂಕಾರಿ ನಾಯಕರನ್ನೊಳಗೊಂಡ ಮದಿರೆ ಮತ್ತು ಹೆಂಗಳೆಯರ ದಾಸರಾಗಿದ್ದ ಸುಮಾರು 950 ಮಂದಿ ಮಕ್ಕಾದ ಕುರೈಷ್ ಮುಶ್ರಿಕ್‌ಗಳು ಮತ್ತೊಂದು ಭಾಗದಲ್ಲಿ. ಇವರ ಮಧ್ಯೆ ಆಗಿತ್ತು ಯುದ್ಧ.
#ಯಾಕಾಗಿ ಯುದ್ಧ...?
- ಮುಸ್ಲಿಮರ ಪಕ್ಷದಲ್ಲಿ:
ನೈಜ ಸೃಷ್ಟಿಕರ್ತನನ್ನು ಆರಾಧಿಸಿ ತೌಹೀದ್ ಅನುಸರಿಸಿ ಜೀವಿಸುವ ಸಲುವಾಗಿ. ವಿಶ್ವಾಸ ಸಂರಕ್ಷಣೆಗಾಗಿ.
- ಮುಶ್ರಿಕರ ಪಕ್ಷದಲ್ಲಿ:
ಮಕ್ಕಾದಿಂದ ಹೊರದಬ್ಬಲ್ಪಟ್ಟು ನೆರೆಯ ಮದೀನಾದಲ್ಲಿ ಆಶ್ರಯ ಪಡೆದ ಒಂದು ಪೀಡಿತ ಸಮೂಹವನ್ನು ಮರ್ದಿಸಿ ತಮ್ಮ ದುರಹಂಕಾರಿ ನಾಯಕರ ಪ್ರತಿಷ್ಟೆ ಕಾಪಾಡಲು ಹಾಗೂ ಮಹಮ್ಮದರು(ಸ.ಅ) ಸುಳ್ಳಾಗಿಸಿದ ತಮ್ಮ ಆರಾಧ್ಯರ ಘನತೆ ಕಾಪಾಡಲು.
#ಮಕ್ಕಾದ ಮುಶ್ರಿಕ್ ಗಳ ಸೇನಾಬಲ: - 100 ಕುದುರೆಗಳು - 170 ಒಂಟೆಗಳು
#ಮುಸ್ಲಿಮರ ಸೇನಾ ಬಲ: - 2 ಕುದುರೆಗಳು - 70 ಒಂಟೆಗಳು
#ಫಲಿತಾಂಶ: ಮುಸ್ಲಿಮರ ವಿಜಯ.
- 70 ಮುಶ್ರಿಕ್ ಗಳು ಕೊಲ್ಲಲ್ಪಟ್ಟರು ಅನೇಕರು ಯುದ್ಧ ಕೈದಿಗಳಾಗಿ ಬಂಧಿಸಲ್ಪಟ್ಟರು.
- ಮುಸ್ಲಿಮ್ ಪಕ್ಷದಲ್ಲಿ 14 ಸಹಾಬಿಗಳು ಹುತಾತ್ಮರಾದರು.
#ಯಾರು ಬದರಿಗಳು:-
ಅಲ್ಲಾಹನ ದೀನ್ ಸಂರಕ್ಷಣೆಗಾಗಿ ನಾಯಕನ ಆಜ್ಞೆ ಯನ್ನು ಪಾಲಿಸಿ ಉಡಲು ಸರಿಯಾದ ವಸ್ತ್ರವಿಲ್ಲದ ಕೈಯಲ್ಲಿ ಆಯಿಧವಿಲ್ಲದ ಸುಡುವ ಮರಳುಗಾಡಿನ ಹೊಯಿಗೆಯಲ್ಲಿ ಬರಿಗಾಲಲ್ಲಿ ಬರಿಹೊಟ್ಟೆಯಲ್ಲಿ ಪ್ರಯಾಣಿಸಿ ಬದರ್ ಯುದ್ಧ ಭೂಮಿಯನ್ನು ತಲುಪಿದವರು. ಇವರಲ್ಲಿ ಇದ್ದ ಆಯುಧ ಒಂದೇ ಅದು ತಖ್ವ. ಏನೇ ಆದರೂ ಅಲ್ಲಾಹನ ಮೇಲೆ ದೃಢವಿಶ್ವಾಸದಿಂದ ಭರವಸೆಯಿಟ್ಟು ಮುನ್ನುಗ್ಗುವ ಅಚಂಚಲ ಈಮಾನ್. ಇವರು ಮರಳಿ ತಮ್ಮ ತಮ್ಮ ಮನೆಗೆ ಹಿಂದಿರುಗುವ ಆಸೆ ಇಟ್ಟು ಹೊರಟು ಬಂದವರಲ್ಲ. ಇಸ್ಲಾಮಿಗಾಗಿ ತಮ್ಮ ಮನೆ, ತೋಟ, ಮಡದಿ, ಮಕ್ಕಳು ಹೀಗೆ ಲೋಕದ ಸರ್ವ ಸುಖಾಡಂಭರಗಳನ್ನು ತ್ಯಜಿಸಿ ಬಂದ ತ್ಯಾಗಿಗಳು ಇವರು. ಇವರ ತ್ಯಾಗ ಮತ್ತು ಸಹನೆಯಿಂದಾಗಿ ಅಲ್ಲಾಹನ ಸಹಾಯವು ಒದಗಿಬಂತು.
ಅಲ್ಲಾಹನು ಪವಿತ್ರ ಕುರ್'ಆನಿ ನಲ್ಲಿ ಹೇಳುತ್ತಾನೆ,
ನೀವು ನಿಮ್ಮ ಪ್ರಭುವಿನೊಂದಿಗೆ ಸಹಾಯವನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಸಾವಿರ ಮಲಕ್ ಗಳನ್ನು ಎಡೆಬಿಡದೆ ಕಳುಹಿಸುವ ಮೂಲಕ ನಾನು ನಿಮಗೆ ಸಹಾಯ ಮಾಡುವೆನು ಎಂದು ಅವನು ನಿಮಗೆ ಉತ್ತರವಿತ್ತನು.
[ಅಲ್-ಅನ್ಫಾಲ್ : 9]
#
ಅಬೂ ಜಹಲ್ ಕೂಡ ಯುದ್ಧಕ್ಕೆ ಹೊರಡುವ ಮುನ್ನ ಪವಿತ್ರ ಕ'ಅಬಾಲಯದ ಬಟ್ಟೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಳಿದುಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಹದೀಸ್ ಗಳಲ್ಲಿ ಕಾಣಬಹುದಾಗಿದೆ. ಇನ್ನು ಮಕ್ಕಾ ಮುಶ್ರಿಕ್ ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಸಹಾಯ ಅಭ್ಯರ್ಥಿಸಿದ್ದಾಗಿಯೂ ಆನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್ ಆನ್ ಹೇಳುತ್ತೆ.
ಬದರ್ ಯುದ್ಧದಲ್ಲಿ ಯುದ್ಧ ಮಾಡಿ ಹುತಾತ್ಮ(ಶಹೀದ್) ರಾದವರಿಗೋ ಇಲ್ಲವೇ ಯುದ್ಧಮಾಡಿದವರಿಗೋ ಯಾರಿಗೂ ಸ್ವತಃ ಅವರವರನ್ನೇ ರಕ್ಷೆ ಮಾಡಲು ಸಾಧ್ಯವಾಗಿಲ್ಲ. ಎಲ್ಲರೂ ಅಲ್ಲಾಹನ ಮೇಲೆ ಭರವಸೆ ಇಟ್ಟು ಜೀವದ ಹಂಗು ತೊರೆದು ಹೋರಾಡಿದರು. ಅವರ ಸಂತ್ಯಸಂಧತೆ ಮತ್ತು ನೇತೃತ್ವದ ಅನುಸರಣೆ ಹಾಗೂ ತಖ್ವ ಅವರಿಗೆ ವಿಜಯ ನೀಡಿತೇ ವಿನಃ ಅವರ ಪರಾಕ್ರಮವಂತೂ ಖಂಡಿತಾ ಅಲ್ಲ. ಎಲ್ಲರ ಸಂಕಷ್ಟಗಳನ್ನು ದೂರೀಕರಿಸಲು ಅಲ್ಲಾಹನಿಗೆ ಮಾತ್ರವೇ ಸಾಧ್ಯವಿರುವುದು. ಇದರಿಂದ ನಾವು ಅಲ್ಲಾಹನ ಸಹಾಯವೊಂದಿದ್ದರೆ ಕಷ್ಟಗಳು ಸಮುದ್ರದಷ್ಟಿದ್ದರೂ ಈಜಿ ಬರಬಹುದು ಎಂಬ ನೀತಿಯನ್ನು ಪಡೆಯಬೇಕೇ ಹೊರತು ಇಂದು ನಮ್ಮ ನಡುವೆ ಕೆಲವರು ಮಾಡುವಹಾಗೆ ಅಲ್ಲಾಹನ ಶಿಫತ್ ಗಳನ್ನು ಬದರಿಗಳ ಮೇಲೆ ಹೇಳುವುದಕ್ಕಲ್ಲ.
ದಲ್ಲಿ ಪಾಲ್ಗೊಂಡ ಬದರಿಗಳಿಗೆ ಅಲ್ಲಾಹನ ಬಳಿ ತುಂಬಾ ಮಹತ್ವದ ಪದವಿಯಿದೆ. ಆದರೂ ಕೂಡ ಇವರ ನಂತರ ಬಂದವರು ಯಾರೂ ಕೂಡ ಬದರಿಗಳೊಂದಿಗೆ ಪ್ರಾರ್ಥಿಸಿಲ್ಲ, ಇಸ್ತಿಗಾಸ ನಡೆಸಿಲ್ಲ,
"ನಬಿಯೇ ಹೇಳಿರಿ: ನಾನು ನನ್ನ ಸಂರಕ್ಷಕನನ್ನು ಮಾತ್ರ ಕರೆದು ಪ್ರಾರ್ಥಿಸುವೆನು. ಅವನೊಂದಿಗೆ ನಾನು ಬೇರೆ ಯಾರನ್ನೂ ಕೂಡ ಸಹಭಾಗಿಯಾಗಿ ಮಾಡಲಾರೆನು."
[ಪವಿತ್ರ ಕುರ್‌ಆನ್ - 72/70]
ಪವಿತ್ರ ಕುರ್'ಆನಿನ ಈ ಕರೆಗೆ ಓ...ಗೊಟ್ಟವರಾಗಿದ್ದಾರೆ ಬದರಿಗಳು. ಆದುದರಿಂದ ನಾವು ಅವರು ಬಿಟ್ಟುಹೋದ ಪಾದಹೆಜ್ಜೆಗಳನ್ನು ಅನುಸರಿಸಬೇಕಾಗಿದೆ. ಕಷ್ಟದಲ್ಲೂ ಸುಖದಲ್ಲೂ ಸ್ತುತಿ