ಬಡಗನಾಡುಸಂಘ ಹಾಸ್ಟೆಲ್, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Badaganadu Sangha Hostel.jpg
'ಮಲ್ಲೇಶ್ವರಂ ನಲ್ಲಿರುವ ಬಡಗನಾಡು ಭವನ'

'ಬಡಗನಾಡು ಸಂಘ'ವು,[೧] ಸಾವಿರಾರು ವಿದ್ಯಾರ್ಥಿಗಳಿಗೆ, ವಸತಿ-ಊಟಗಳ ಸೌಕರ್ಯವನ್ನು ಅತ್ಯಂತ ಕಡಿಮೆಬೆಲೆಯಲ್ಲಿ, ನೀಡುತ್ತಾ ಬಂದಿರುವ ಬ್ರಾಹ್ಮಣ ವಿದ್ಯಾರ್ಥಿನಿಲಯಗಳಲ್ಲೊಂದು. ಈ ಸಂಸ್ಥೆ, ೧೯೪೩ ರಲ್ಲಿ ದಕ್ಷಿಣಬೆಂಗಳೂರಿನ, ಬಸವನಗುಡಿಯ ಯಲ್ಲಿರುವ, ಬೆಣ್ಣೆಗೋವಿಂದಪ್ಪನವರಛತ್ರದಲ್ಲಿ ಪ್ರಾರಂಭವಾಯಿತು. ಅಂದಿನ ಮೈಸೂರಿನ ಅರಸರಾಗಿದ್ದ, ಜಯಚಾಮರಾಜೇಂದ್ರ ಒಡೆಯರ್ರವರಿಂದ ಸ್ಥಳವನ್ನು ಪಡೆದು, ಹಾಲಿ ಇರುವ 'ಕುಮಾರಪಾರ್ಕ್' ಸ್ಥಳದಲ್ಲಿ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಲಾಯಿತು. [೨] ಗ್ರಾಮೀಣಭಾಗದ ವಿಧ್ಯಾರ್ಥಿಗಳಿಗೆ ಬೆಂಗಳೂರಿನಂಥ ಮಹಾನಗರಲ್ಲಿ ವ್ಯಾಸಂಗಮಾಡಲು ಅನುಕೂಲತೆಗಳನ್ನು ಕಲ್ಪಿಸುವುದೇ ಅವರ ಗುರಿಯಾಗಿತ್ತು. ಬಡಗನಾಡುಸಂಘ ಮೊದಲಿನಿಂದಲೂ ವಿದ್ಯಾರ್ಥಿಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು, ಅವರ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಟ್ಟು, ಮನೆಯಿಂದ ದೂರದಲ್ಲಿ ಓದುತ್ತಿರುವ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗಿದೆ. ಶಾಲೆ, ಕಾಲೇಜ್ ಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಬಡಗನಾಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕೊಡುತ್ತಿದ್ದಾರೆ. ಜೀವನದ ಹಲವು ರಂಗಗಳಲ್ಲಿ ಯಶಸ್ಸನ್ನು ಪಡೆದು, ಜನಹಿತಕಾರ್ಯ ಮಾಡುತ್ತಿರುವ, ಬಡಗನಾಡು ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಸನ್ಮಾನಿಸುತ್ತಿದ್ದಾರೆ. ಸಂಘದಲ್ಲಿ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹವನ್ನು ಕೊಡಲಾಗಿದೆ. ಬಡಗನಾಡು ಸಂಘವು ಒಳ್ಳೆಯ ಪುಸ್ತಕ-ಭಂಡಾರ ಇತ್ಯಾದಿಗಳನ್ನು ಹೊಂದಿದೆ. ಜುಲೈ ೨೦೧೩ರಲ್ಲಿ ಸಂಘದ ವಜ್ರಮಹೋತ್ಸವವನ್ನು ಆಚರಿಸಲಾಯಿತು.

ಬಡಗನಾಡು ವಿದ್ಯಾರ್ಥಿಗಳ ವಸತಿಗೃಹ[ಬದಲಾಯಿಸಿ]

ಬೆಂಗಳೂರಿನ ಶೇಷಾದ್ರಿಪುರದ ಕುಮಾರ ಪಾರ್ಕ್ ಬಡಾವಣೆಯಲ್ಲಿ ಕಟ್ಟಲಾಗಿರುವ ಈ ಸಂಸ್ಥೆ, ವಿದ್ಯಾರ್ಥಿಗಳ ವಸತಿಗೃಹ ಸೌಕರ್ಯಕ್ಕೆ, ಮೊದಲಿನಿಂದಲೂ ಹೆಸರುವಾಸಿಯಾದ ಸ್ಥಳ. ಇಲ್ಲಿ ವಾಸ್ತವ್ಯ ಮಾಡಿಕೊಂಡು ವಿದ್ಯಾರ್ಜನೆಮಾಡಿ ಅಭಿವೃದ್ಧಿಹೊಂದಿದ ನೂರಾರು ಜನವಿದ್ಯಾರ್ಥಿಗಳನ್ನು ನಾವು ಗುರುತಿಸಬಹುದು.

ಬಡಗನಾಡು ಭವನ[ಬದಲಾಯಿಸಿ]

ಒಂದು ದಶಕದ ಹಿಂದೆ, ಮಲ್ಲೇಶ್ವರ ಬಡಾವಣೆಯಲ್ಲಿ ದಾನವಾಗಿ ಬಂದ ಜಾಗದಲ್ಲಿ 'ಬಡಗನಾಡು ಭವನ' ನಿರ್ಮಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರದ ಮಧ್ಯಭಾಗದಲ್ಲಿರುವ ಸಂಪಿಗೆ ರಸ್ತೆಯ ೧೬ ನೆಯ ಮತ್ತು ೧೭ ನೆಯ ಕ್ರಾಸ್ ನಲ್ಲಿರುವ ’ಬಡಗನಾಡು ಭವನವನ್ನು’ ಬಡಗನಾಡು ಬಾಂಧವರಿಗೆ ಮದುವೆ, ಉಪನಯನ, ಹಾಗೂ ಇತರೆ ಶುಭಕಾರ್ಯಕ್ರಮಗಳಿಗೆ ಬಾಡಿಗೆಗೆ ಕೊಡಲಾಗುತ್ತದೆ. ಸಂಘದ ಸದಸ್ಯರುಗಳಿಗೆ ರಿಯಾಯಿತಿ ದರದಲ್ಲಿ ಭವನವನ್ನು ನೀಡಲಾಗುತ್ತದೆ.

ವಧೂ-ವರಾನ್ವೇಷಣೆ ಹಾಗೂ ಬ್ರಹ್ಮೋಪದೇಶದ ಸಹಾಯ[ಬದಲಾಯಿಸಿ]

ವಧು-ವರಾನ್ವೇಷಣೆಯ ಸಹಾಯವನ್ನೂ, ಮತ್ತು ವಟುಗಳಿಗೆ ಬ್ರಹ್ಮೋಪದೇಶವನ್ನೂ ಏರ್ಪಾಡುಮಾಡುತ್ತಾರೆ.

ಬಡಗನಾಡು ಪತ್ರಿಕೆ-ಮಾಸಿಕ ಸುದ್ದಿ ಪತ್ರ[ಬದಲಾಯಿಸಿ]

ಚಿತ್ರ:Photobada.jpg
'ಬಡಗನಾಡು ಪತ್ರಿಕೆ'

ಬಡಗನಾಡುಸಂಘ, ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಸಂಘದ ಸದಸ್ಯರಿಗೆ ಮಾಹಿತಿನೀಡುವ ದಿಶೆಯಲ್ಲಿ ಕೆಲಸ ಮಾಡುತ್ತಿದೆ. ಈ ಪತ್ರಿಕೆ ಬಡಗನಾಡು ಸಂಘದ ಸಮಸ್ತವಿಚಾರಗಳನ್ನೂ ಸಂಘದ ಸದಸ್ಯರಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಮುಟ್ಟಿಸುತ್ತಾ ಆವಶ್ಯಕವಾದ ಬದಲಾವಣೆಗೆ ಸ್ಪಂದಿಸುತ್ತಾ, ಸೂಕ್ತಸಲಹೆ ಮಾರ್ಗದರ್ಶನಗಳನ್ನು ಬಡಗನಾಡು ಬಂಧುಗಳಿಂದ ನಿರೀಕ್ಷಿಸುತ್ತಾ ನಡೆದುಕೊಂಡುಬರುತ್ತಿದೆ.

ಬಡಗನಾಡು ಸಂಘದ ವೆಬ್ ಸೈಟ್ ನ ಉದ್ಘಾಟನೆ[ಬದಲಾಯಿಸಿ]

ಸಂಘದ ಅಧ್ಯಕ್ಷರಾದ ಬಿ.ಎಸ್. ರವಿಶಂಕರ್, ೨೦೧೩ ರ, ಸೆಪ್ಟೆಂಬರ್, ೧ ರಂದು 'ಸಂಘದ ವೆಬ್ ಸೈಟ'ನ್ನು ಉದ್ಘಾಟಿಸಿದರು.[೩] ಇದು ಅತ್ಯಂತ ಮಹತ್ವದ ಕೆಲಸವಾಗಿದ್ದು, ಎಲ್ಲ ಚಟುವಟಿಕೆಗಳೂ ಹಾಗೂ ವಿವರಗಳೂ ಬಹಳ ತ್ವರಿತವಾಗಿ ಸದಸ್ಯರಿಗೆಲ್ಲಾ ತಿಳಿಯಪಡಿಸಲು ಇದು ಉತ್ತಮ ಹೆಜ್ಜೆಯಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "The badaganadu sangha.org, About us". Archived from the original on 2016-01-24. Retrieved 2015-11-28.
  2. "ಬಡಗನಾಡು ಸಂಘ ಹಾಸ್ಟೆಲ್ ನ ಚರಿತ್ರೆ ಮತ್ತು ಬೆಳೆದ ಹಾದಿ". Archived from the original on 2019-03-31. Retrieved 2019-03-31.
  3. "ಬೆಂಗಳೂರಿನ ಬಡಗನಾಡು ಸಂಘದ ವೆಬ್ ಸೈಟ್". Archived from the original on 2014-05-16. Retrieved 2014-05-04.