ಬಂಜರ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Jibhi, Banjar, Himachal Pradesh.png

ಬಂಜರ್ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿನ ಒಂದು ಪಟ್ಟಣ. ತೀರ್ಥನ್ ಕಣಿವೆಯೂ ಬಂಜರ್ ಪ್ರದೇಶದ ಒಂದು ಭಾಗವಾಗಿದ್ದು, ಬಂಜರ್ ಪಟ್ಟಣವು ತೀರ್ಥನ್ ಕಣಿವೆಯಲ್ಲಿನ ಪ್ರಮುಖ ಮಾರುಕಟ್ಟೆಯಾಗಿದೆ. ತೀರ್ಥನ್ ನದಿಯು ಬಂಜರ್‌ನ ಪ್ರಮುಖ ನದಿಯಾಗಿದೆ. ಜೊತೆಗೆ ಇದರ ಉಪನದಿಯಾದ ಪುಷ್ಪಭಾದ್ ಜಿಭಿ ಮೂಲಕ ಜಲೋರಿ ಕಣಿವೆಯಿಂದ ಹರಿಯುತ್ತದೆ. ಈ ಪಟ್ಟಣವು ಈ ಎರಡೂ ನದಿಗಳ ಸಂಗಮದಲ್ಲಿದೆ. 'ಬಂಜರ್ ಮೇಲಾ' ಬಂಜರ್ ಕಣಿವೆಯ ಪ್ರಮುಖ ಜಾತ್ರೆಯಾಗಿದೆ. ಬಂಜರ್‌ನಲ್ಲಿ ಅನೇಕ ಪ್ರವಾಸಿ ತಾಣಗಳಿವೆ, ಅವುಗಳೆಂದರೆ ತೀರ್ಥನ್ ಕಣಿವೆ, ಶೃಂಗ ಋಷಿಯ ಚೆಹ್ನಿ ಕೋಟೆ, ಬಹು ಗ್ರಾಮ, ಜಿಭಿ ಕಣಿವೆ, ಬಾಲು ದೇವಸ್ಥಾನ ಇತ್ಯಾದಿ. 2020 ರಲ್ಲಿ, ತೀರ್ಥನ್ ಕಣಿವೆಯನ್ನು ಹಿಮಾಚಲ ಪ್ರದೇಶದ ಅತ್ಯಂತ ಕಡಿಮೆ ಮೌಲ್ಯ ನೀಡಲಾದ ಪ್ರವಾಸಿ ತಾಣವೆಂದು ಪರಿಗಣಿಸಲಾಗಿದೆ.[https://web.archive.org/web/20201216141627/https://geektoxic.com/delhi-to-tirthan-valley-a-complete-guide-for-the-hidden-himachal/ Archived 2020-12-16 at the Wayback Machine. [4]]

ತೀರ್ಥನ್ ಮತ್ತು ಜಿಭಿ ಕಣಿವೆಗಳು ಬಂಜರ್‌ನ ಎರಡು ಪ್ರಮುಖ ಆಕರ್ಷಣೆಗಳಾಗಿವೆ. ತೀರ್ಥನ್ ಕಣಿವೆಯು ಟ್ರೌಟ್ ಮೀನು ಕಣಿವೆ ಹಾಗೂ ಅದರ ದೈವಿಕ ಸೌಂದರ್ಯಕ್ಕೂ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಪವಿತ್ರ ಸ್ಥಳಗಳಿವೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಬಂಜರ್&oldid=1056677" ಇಂದ ಪಡೆಯಲ್ಪಟ್ಟಿದೆ