ವಿಷಯಕ್ಕೆ ಹೋಗು

ಫ್ರೆಡರಿಕ್ ಅಬೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರೆಡರಿಕ್ ಆಗಸ್ಟಸ್ ಅಬೆಲ್ ಆಂಗ್ಲ ರಸಾಯನಶಾಸ್ತ್ರಜ್ಞ. ೧೮೨೭ ಜುಲೈ ೧೭ರಂದು ಲಂಡನ್ನಿನಲ್ಲಿ ಜನಿಸಿದರು.

ವಿದ್ಯಾಭ್ಯಾಸ

[ಬದಲಾಯಿಸಿ]

ಜೋಹಾನ್ ಲಿಯೋಪೋಲ್ಡ್ ಅವರ ಮಗನಾಗಿ ಜನಿಸಿದ ಅಬೆಲ್,ರಸಾಯನಶಾಸ್ತ್ರವನ್ನು ರಾಯಲ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಷನ್ನಲ್ಲಿ ಅಧ್ಯಯನ ಮಾಡಿದರು ಮತ್ತು ೧೮೪೫ರಲ್ಲಿ ರಾಯಲ್ ಕಾಲೇಜ್ ಆಫ್ ಕೆಮಿಸ್ಟ್ರಿಯಲ್ಲಿ ಎ.ಡಬ್ಲ್ಯೂ.ವೋನ್ ಹೋಫ್ಮನ್ ಅವರ ೨೬ ಮೂಲ ವಿಧ್ಯಾರ್ಥಿಗಳಲ್ಲಿ ಒಬ್ಬರಾದರು. ೧೮೫೨ರಲ್ಲಿ ಮಿಲಿಟರಿ ಅಕಾಡೆಮಿಯಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡರು. []

ವೃತ್ತಿಜೀವನ

[ಬದಲಾಯಿಸಿ]

೧೮೫೪ರಿಂದ ೧೮೮೮ರವರೆಗೆ ರಾಯಲ್ ಆರ್ಸೆನಲ್ನ ಕೆಮಿಕಲ್ ಎಸ್ಟಾಬ್ಲಿಶ್ಮೆಂಟ್ನಲ್ಲಿ ರಕ್ಷಣೆಯ ರಸಾಯನಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಮೂರು ವರ್ಷಗಳ ನಂತರ ವಾರ್ ಡಿಪಾರ್ಟ್ಮೆಂಟ್ಗೆ ರಸಾಯನಶಾಸ್ತ್ರಜ್ಞರಾಗಿ ಹಾಗೂ ಸರ್ಕಾರದ ರಾಸಾಯನಿಕ ರೆಫರಿಯಾಗಿ ನೇಮಕವಾದರು.ನಂತರ ಸ್ಪೋಟಕಗಳ ರಸಾಯನಶಾಸ್ತ್ರದೊಂದಿಗೆ ಹೆಚ್ಚಿನ ಕೆಲಸವನ್ನು ಮಾಡಿದರು.

ವೈಯಕ್ತಿಕಜೀವನ

[ಬದಲಾಯಿಸಿ]

ಅಬೆಲ್ ತನ್ನ ಮೊದಲ ಹೆಂಡತಿಯಾದ ಸಾರಾ ಬ್ಲಾಂಚ್ ಅವರ ಮರಣದ ನಂತರ ಎರಡನೆ ಬಾರಿ ಗಿಲ್ಯೆಟ್ಟಾ ಡೆ ಲಾ ಫೆಯಿಲ್ಲಡೆಯನ್ನು ವಿವಾಹವಾದರು.[].

ಪುಸ್ತಕಗಳು

[ಬದಲಾಯಿಸಿ]
  • ದಿ ಮಾಡರ್ನ್ ಹಿಸ್ಟರಿ ಆಫ್ ಗನ್ ಪೌಡರ್ (೧೮೬೬).
  • ಗನ್-ಕಾಟನ್ (೧೮೬೬).
  • ಓನ್ ಎಕ್ಸ್ಪ್ಲೋಸಿವ್ ಏಜೆಂಟ್ಸ್ (೧೮೭೨).
  • ರಿಸರ್ಚ್ ಇನ್ ಎಕ್ಸ್ಪ್ಲೋಸಿವ್ಸ್ (೧೮೭೫).
  • ಇಲೆಕ್ಟ್ರಿಸಿಟಿ ಅಪ್ಲೈಡ್ ಟು ಎಕ್ಸ್ಪ್ಲೋಸಿವ್ ಪರ್ಪಸಸ್ (೧೮೯೮).

ಅಬೆಲ್ ಸೆಪ್ಟೆಂಬರ್ ೬,೧೯೦೨ರಂದು ಲಂಡನ್ನಿನ ವೈಟ್ ಕೋರ್ಟ್ ಹಾಲ್ನಲ್ಲಿ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. https://www.britannica.com/biography/Frederick-Augustus-Abel
  2. "ಆರ್ಕೈವ್ ನಕಲು". Archived from the original on 2017-10-29. Retrieved 2018-12-23.
  3. https://www.npg.org.uk/collections/search/person/mp00007/sir-frederick-augustus-abel-1st-bt