ವಿಷಯಕ್ಕೆ ಹೋಗು

ಫ್ರಾನ್ಸ್ ಯೋಸೆಫ್ ಗಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Franz Gall
Franz Joseph Gall
ಜನನ(೧೭೫೮-೦೩-೦೯)೯ ಮಾರ್ಚ್ ೧೭೫೮
ಟೈಫೆನ್ಬ್ರೊನ್, ಬಾಡೆನ್
ಮರಣ22 August 1828(1828-08-22) (aged 70)
ಪ್ಯಾರಿಸ್, ಫ್ರಾನ್ಸ್
ರಾಷ್ಟ್ರೀಯತೆಜರ್ಮನಿ
ಕಾರ್ಯಕ್ಷೇತ್ರನ್ಯೂರೋಅನಾಟಮಿಸ್ಟ್
ಫಿಸಿಯೋಲಾಜಿಸ್ಟ್
ಪ್ರಭಾವಿತರುಸಿಸೇರ್ ಲೋಂಬ್ರೊಸೊ
ಅಲೆಕ್ಸಾಂಡ್ರೆ ಲಕಾಸ್ಸಾಗ್ನೆ
ಜೋಹಾನ್ ಗ್ಯಾಸ್ಪರ್ ಸ್ಪುರ್ಝೈಮ್

ಫ್ರಾಂಜ್ ಜೋಸೆಫ್ ಗಾಲ್ (1758-1828) ದೇಹರಚನಾಶಾಸ್ತ್ರಜ್ಞ, ಜರ್ಮನ್ ದೇಶದವ. ವಿಯೆನ್ನದಲ್ಲಿ ವೈದ್ಯನಾಗಿ ಜೀವನ ನಡೆಸುತ್ತಿದ್ದ.

ತಲೆ ಬುರುಡೆಯ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ ವ್ಯಕ್ತಿಯ ಗುಣಸ್ವಭಾವಗಳನ್ನು ಹೇಳಬಹುದು ಎಂದು ಈತನ ನಂಬಿಕೆ. ಕಪಾಲಸಾಮುದ್ರಿಕೆಯನ್ನು (ಫ್ರೆನಾಲಜಿ) ಕುರಿತು ವಿಯೆನ್ನದಲ್ಲಿ ಈತ ಅನೇಕ ಉಪನ್ಯಾಸಗಳನ್ನು ಕೊಟ್ಟ. ಮತಧರ್ಮಕ್ಕೆ ವಿರುದ್ಧವೆಂಬ ಕಾರಣದಿಂದ ಸರ್ಕಾರ ಇವನ ಭಾಷಣಗಳನ್ನು ಬಹಿಷ್ಕರಿಸಿತು (1802). ಅನಂತರ ಈತ ತನ್ನ ಸಹೋದ್ಯೋಗಿ ಯೋಹಾನ್ ಕ್ಯಾಸ್ಪರ್ ಸ್ಪಜ್ರ್óಹೈಮ್ (1776-1832) ಎಂಬ ಮನಃಶಾಸ್ತ್ರಜ್ಞನೊಂದಿಗೆ ಪ್ಯಾರಿಸ್ಸಿಗೆ ಬಂದು ನೆಲೆಸಿದ (1807). 1810-1819ರ ಕಾಲದಲ್ಲಿ ಈ ಇಬ್ಬರೂ ಕಲೆತು ಪ್ರಕಟಿಸಿದ ಕಪಾಲಸಾಮುದ್ರಿಕಾ ಸಂಬಂಧವಾದ ಗ್ರಂಥಗಳು ಆ ಕಾಲದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದುವು. 1822ರ ಸುಮಾರಿಗೆ ಗಾಲ್ ತನ್ನ ಸಂಶೋಧನೆಗಳಿಂದ, ಅಧ್ಯಯನದಿಂದ, ಪ್ರತಿಭೆಯಿಂದ ಕಪಾಲಸಾಮುದ್ರಿಕಾ ಶಾಸ್ತ್ರಕ್ಕೆ ಒಂದು ರೂಪ ಕೊಟ್ಟ. ಇದನ್ನು ಸ್ಪಜ್ರ್óಹೈಮ್ ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಬಿತ್ತರಿಸಿದ. ಫ್ರೆನಾಲಜಿ ಎಂಬ ಪದವೂ ಈತನ ಸೃಷ್ಟಿಯೇ. ಈಗ ಈ ಶಾಸ್ತ್ರ ಶ್ರದ್ಧೇಯವಲ್ಲವೆಂದು ನಿರ್ಧರಿಸಿದ್ದಾರೆ. ಆದರೂ ಗಾಲ್ ದೇಹ ರಚನೆಯ ಸಂಬಂಧವಾಗಿ ಸ್ಪಷ್ಟಪಡಿಸಿದ ವಿವರಗಳು ನಿರ್ದುಷ್ಟವಾದುವು ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ.,[][][]

ಟಿಪ್ಪಣಿಗಳು

[ಬದಲಾಯಿಸಿ]
  1. Graham, Patrick. (2001) Phrenology [videorecording (DVD)] : revealing the mysteries of the mind . Richmond Hill, Ont. : American Home Treasures.
  2. http://www.encyclopedia.com/topic/Franz_Joseph_Gall.aspx
  3. Miraglia, Biagio G. (1874/2014). A new classification of mental illness based on brain functions. Dialogues in Philosophy, Mental and Neuro Sciences, 7(2):63–67.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.