ಫ್ರಾನ್ಸಿಸ್ಕೊ ಡ ಆಲ್ಮೇಡ
ಗೋಚರ
ಫ್ರಾನ್ಸಿಸ್ಕೊ ಡಿ ಆಲ್ಮೇಡ | |
---|---|
Born | Francisco de Almeida ca. 1450 |
Died | ಮಾರ್ಚ್ 01, 1510 (ವಯಸ್ಸು ೫೯–೬೦) Table Bay, Cape of Good Hope |
Nationality | ಪೋರ್ಚುಗೀಸ್ |
Occupations | Soldier, explorer, viceroy of Portuguese India |
Known for | Establishment of Portuguese naval hegemony in the Indian Ocean. |
ಫ್ರಾನ್ಸಿಸ್ಕೊ ಡಿ ಆಲ್ಮೇಡ(ಜನನ ಪ್ರ.ಶ. ೧೪೫೦ ಲಿಸ್ಬನ್; ಮರಣ:ಮಾರ್ಚ್ ೧, ೧೫೧೦ ಟೇಬಲ್ ಬೇ,ಕೇಪ್ ಆಫ್ ಗುಡ್‍ಹೋಪ್),ಪೋರ್ಚುಗಲ್ಲಿನ ಸೇನಾನಾಯಕ. ಭಾರತದ ಪೋರ್ಚುಗೀಸ್ ಪ್ರದೇಶಗಳ ಪ್ರಥಮ ವೈಸ್ರಾಯ್ (೧೫೦೫). ಶ್ರೀಮಂತ ಕುಟುಂಬಕ್ಕೆ ಸೇರಿದವ. ಮೊಂಬಾಸಾವನ್ನು ಗೆದ್ದು, ಕೊಚ್ಚಿನ್ನಿಗೆ ಬಂದು ತಲುಪಿದ. ಅಂಜದೀವ್ ಮತ್ತು ಈಜಿಪ್ಷಿಯನ್ ಹಡಗುಗಳ ಪಡೆಗಳನ್ನು ಡಿಯೋ ಎಂಬಲ್ಲಿ ಸಂಪುರ್ಣವಾಗಿ ನಾಶಗೊಳಿಸಿದ (೧೫೦೯). ೧೫೦೯ನೆಯ ಡಿಸೆಂಬರ್ ತಿಂಗಳಿನಲ್ಲಿ ಮೂರು ನೌಕೆಗಳೊಡನೆ ಯುರೋಪಿ ಗೆ ಹೊರಟು ನಡುವೆ ಸಾಲ್ದಾನಾ ಕೊಲ್ಲಿಯಲ್ಲಿ ತಂಗಿದ. ಇಲ್ಲಿ ಹಾಟೆಂಟಾಟರ ಸಂಗಡ ಯುದ್ಧಮಾಡಿ ಕೊಲೆಗೀಡಾದ. ಈತನ ಜೊತೆಯಲ್ಲಿ ೬೫ ಜನ ಪೋರ್ಚುಗೀಸರೂ ಮಡಿದರು. ಮಾರನೆಯ ದಿನ ಈತನ ಶವ ಸಿಕ್ಕಿತು. ಕೊಲೆಯಾದ ಸ್ಥಳದಲ್ಲಿಯೇ ಈತನ ಸಮಾಧಿಯನ್ನೂ ಮಾಡಲಾಯಿತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Story of Almeida, by Ian D. Colvin, The Baldwin Project Archived 2014-02-03 ವೇಬ್ಯಾಕ್ ಮೆಷಿನ್ ನಲ್ಲಿ.
- Paul Lunde, The coming of the Portuguese, 2006, Saudi Aramco World Archived 2011-08-21 ವೇಬ್ಯಾಕ್ ಮೆಷಿನ್ ನಲ್ಲಿ.
- Knot of Stone: the day that changed South Africa's History, 2011, by Nicolaas Vergunst, Arena Books, UK Archived 2012-03-24 ವೇಬ್ಯಾಕ್ ಮೆಷಿನ್ ನಲ್ಲಿ.