ಫಿರೋಜ್ ಖಾನ್
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (April 2009) |
thumb|ಫಿರೋಜ್ ಖಾನ್
Feroz Khan | |||||||
---|---|---|---|---|---|---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಬೆಂಗಳೂರು, Karnataka, India | ೨೫ ಸೆಪ್ಟೆಂಬರ್ ೧೯೩೯||||||
ನಿಧನ | 27 April 2009 ಬೆಂಗಳೂರು, Karnataka, India | (aged 69)||||||
ವೃತ್ತಿ | Actor, Editor, Producer, Director | ||||||
ವರ್ಷಗಳು ಸಕ್ರಿಯ | ೧೯೬೦-೨೦೦೭ | ||||||
ಪತಿ/ಪತ್ನಿ | Sundari (೧೯೬೫-೧೯೮೫) | ||||||
|
ಫಿರೋಜ್ ಖಾನ್ (ಹಿಂದಿ: फ़िरोज़ ख़ान, ಉರ್ದು: فیروزخا ಸೆಪ್ಟೆಂಬರ್ ೨೫, ೧೯೩೯ – ೨೭ ಏಪ್ರಿಲ್ ೨೦೦೯) ಭಾರತೀಯ ಹಿಂದಿ ಚಿತ್ರರಂಗ ಉದ್ಯಮದ ನಟ, ಚಿತ್ರ ಸಂಕಲನಕಾರ, ನಿರ್ಮಾಪಕ ಹಾಗು ನಿರ್ದೇಶಕ.ಅವರ ಆಡಂಬರದ ಶೈಲಿ, ಕೌಬಾಯ್ ಇಮೇಜು,ತುಟಿಗಳ ನಡುವೆ ಸದಾಕಾಲ ಉರಿಯುವ ಸಿಗರೇಟು ಹೀಗೆ ಫಿರೋಜ್ ಅವರ ಸ್ಟೈಲು ಇನ್ನಿತರ ಬಾಲಿವುಡ್ ನಟರ ಸಾಂಪ್ರದಾಯಿಕ ಶೈಲಿಯನ್ನೇ ಬದಲಿಸುವಂತೆ ಮಾಡಿತ್ತು. ಇವರನ್ನು ಪೂರ್ವದ ಕ್ಲಿಂಟ್ ಈಸ್ಟ್ ವುಡ್ ಎಂದು ಕರೆಯಲಾಗುತ್ತದೆ ಜೊತೆಗೆ ಇವರು ಚಿತ್ರರಂಗ ಉದ್ಯಮದ ಮಾದರಿಗೆ ಪ್ರತಿಬಿಂಬವಾಗಿದ್ದಾರೆ.[೧][೨][೩]
ಇವರು ೧೯೬೦, ೧೯೭೦ ಹಾಗು ೧೯೮೦ರ ದಶಕಗಳಲ್ಲಿ ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಾವೇ ನಿರ್ದೇಶಿಸಿದ ೧೯೮೦ರ ಯಶಸ್ವೀ ಚಿತ್ರ ಕುರ್ಬಾನಿ ಯಲ್ಲಿನ ತಮ್ಮ ಪಾತ್ರದ ಮೂಲಕ ಭಾರತದ ಮೆಚ್ಚಿನ ನಾಯಕರುಗಳಲ್ಲಿ ಒಬ್ಬರೆನಿಸಿದ್ದಾರೆ. ಖಾನ್ ದಯಾವಾನ್ (೧೯೮೮) ಹಾಗು ಜಾನ್ ಬಾಜ್ (೧೯೮೬) ನಂತಹ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ವಿವಿಧ-ಕ್ಷೇತ್ರಗಳಲ್ಲಿ ವಿಭಿನ್ನ ಸಾಧನೆ ಮಾಡಿದ್ದಾರೆ.[೩][೪] ೧೯೭೦ರಲ್ಲಿ ಆದ್ಮಿ ಔರ್ ಇನ್ಸಾನ್ ಚಿತ್ರಕ್ಕಾಗಿ ಫಿಲಂಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗಳಿಸಿದರು. ಅಲ್ಲದೇ ೨೦೦೦ದಲ್ಲಿ ಜೀವಮಾನದ ಸಾಧನೆಗಾಗಿ ಫಿಲಂಫೇರ್ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಯಿತು.[೫]
ಆರಂಭಿಕ ಜೀವನ
[ಬದಲಾಯಿಸಿ]ಫಿರೋಜ್ ಖಾನ್ ೨೫ ಸೆಪ್ಟೆಂಬರ್ ೧೯೩೯ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ, ಸಾದಿಕ್ ಅಲಿ ಖಾನ್ ತನೋಲಿ, ಆಫ್ಘಾನ್ ಗೆ ಸೇರಿದವರಾದರೆ, ತಾಯಿ ಒಬ್ಬ ಇರಾನಿಯನ್ ಆಗಿದ್ದರು. ಇವರು ಬೆಂಗಳೂರಿನ ಬಿಷಪ್ ಕಾಟನ್ಸ್ ಬಾಯ್ಸ್' ಶಾಲೆ ಹಾಗು St. ಜರ್ಮೈನ್ ಬಾಯ್ಸ್ ಪ್ರೌಢಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು. ಇವರಿಗೆ ಸಂಜಯ್ ಖಾನ್(ಅಬ್ಬಾಸ್ ಖಾನ್), ವಾಣಿಜ್ಯೋದ್ಯಮಿ ಸಮೀರ್ ಖಾನ್ ಹಾಗು ಅಕ್ಬರ್ ಖಾನ್(ನಿರ್ದೇಶಕ) ಎಂಬ ಸಹೋದರರಿದ್ದಾರೆ. ಇವರ ಸಹೋದರಿಯ ಹೆಸರು ದಿಲ್ಶಾದ್ ಬೀಬಿ. ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಪೂರೈಸಿದ ನಂತರ, ಇವರು ಮುಂಬೈಗೆ ಆಗಮಿಸಿ, ಅಲ್ಲಿ ಇವರು ೧೯೬೦ರಲ್ಲಿ ದೀದಿ ಚಿತ್ರದಲ್ಲಿ ಎರಡನೇ ನಾಯಕನ ಪಾತ್ರದ ಮೂಲಕ ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸುತ್ತಾರೆ.
ವೃತ್ತಿಜೀವನ
[ಬದಲಾಯಿಸಿ]ಅದರ ಮುಂದಿನ ಐದು ವರ್ಷಗಳ ಕಾಲ, ಅವರು ನಟಿಸಿದ ಎಲ್ಲ ಚಿತ್ರಗಳಲ್ಲೂ ಎರಡನೇ ನಾಯಕನಿಂದ ಹಿಡಿದು ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಲು ಸೀಮಿತಗೊಂಡರು. ೧೯೬೦ ಹಾಗು ೧೯೭೦ರ ಆರಂಭದುದ್ದಕ್ಕೂ, ಕಿರಿಯ ಕಲಾವಿದೆಯರೊಂದಿಗೆ ತಾರೆಗಳಿಗೆದುರಾಗಿ ಕಡಿಮೆ ವೆಚ್ಚದ ರೋಮಾಂಚಕ ಚಿತ್ರಗಳಲ್ಲಿ ನಟಿಸಿದರು. ೧೯೬೨ರಲ್ಲಿ, ಸಿಮಿ ಗರೆವಾಲ್ ಗೆ ಜೊತೆಯಾಗಿ ಟಾರ್ಜನ್ ಗೋಸ್ ಟು ಇಂಡಿಯಾ ಎಂಬ ಇಂಗ್ಲಿಷ್ ಭಾಷೆಯ ಚಿತ್ರದಲ್ಲಿ ಕಾಣಿಸಿಕೊಂಡರು. ೧೯೬೫ರಲ್ಲಿ ಫಣಿ ಮಜೂಮ್ದಾರರ ಊಂಚೆ ಲೋಗ್ ಚಿತ್ರವು ಅವರ ಮೊದಲ ಯಶಸ್ವೀ ಚಿತ್ರವಾಯಿತು. ಇದರಲ್ಲಿ ಅವರು ಪ್ರಸಿದ್ಧ ನಟರುಗಳಾದ ರಾಜ್ ಕುಮಾರ್ ಹಾಗು ಅಶೋಕ್ ಕುಮಾರ್ ಗೆ ಸರಿಸಮನಾಗಿ ನಟಿಸಿದರು; ಚಿತ್ರದಲ್ಲಿ ಗಮನಾರ್ಹ ಸೂಕ್ಷ್ಮ ಸಂವೇದನಾಶೀಲ ಅಭಿನಯ ನೀಡಿದರು.[೬] ಅದೇ ವರ್ಷ, ಮತ್ತೊಮ್ಮೆ, ಸಾಧನಾ ನಾಯಕಿಯಾಗಿ ಅಭಿನಯಿಸಿದ ಭಾವಾತಿರೇಕದ ಸಂಗೀತಪ್ರಧಾನ ಚಿತ್ರ ಆರ್ಜೂ ನಲ್ಲಿ ತ್ಯಾಗಮಯಿ ಪ್ರೇಮಿಯ ಪಾತ್ರನಿರ್ವಹಿಸಿದರು. ಇದರೊಂದಿಗೆ, ಖಾನ್ A-ಪಟ್ಟಿಯ ಎರಡನೇ ನಾಯಕನ ಪಾತ್ರಗಳನ್ನು ನಿರ್ವಹಿಸಲು ಬಡ್ತಿ ಪಡೆದರು. ಆದ್ಮಿ ಔರ್ ಇನ್ಸಾನ್ (೧೯೬೯)ಚಿತ್ರದೊಂದಿಗೆ, ಪೋಷಕ ಪಾತ್ರದ ನಿರ್ವಹಣೆಗಾಗಿ ಖಾನ್ ತಮ್ಮ ಮೊದಲ ಫಿಲಂಫೇರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು. ಇವರು ತಮ್ಮ ನಿಜಜೀವನದ ಸಹೋದರ ಸಂಜಯ್ ಖಾನ್ ರೊಂದಿಗೆ ಯಶಸ್ವೀ ಚಿತ್ರಗಳಾದ ಉಪಾಸನಾ (೧೯೬೭), ಮೇಲಾ (೧೯೭೧), ಹಾಗು ನಾಗಿನ್ ನಲ್ಲಿ(೧೯೭೬) ಕಾಣಿಸಿಕೊಂಡಿದ್ದಾರೆ.
ಇವರು ೧೯೭೧ರಲ್ಲಿ, ಒಬ್ಬ ಯಶಸ್ವೀ ನಿರ್ಮಾಪಕ ಹಾಗು ನಿರ್ದೇಶಕನಾಗುವ ಮೂಲಕ ನಾಯಕನಾಗಿ ತಮ್ಮ ವೃತ್ತಿಜೀವನದಲ್ಲಿ ದೊರೆತ ಅವಕಾಶಗಳನ್ನು ಉತ್ತಮಪಡಿಸಿಕೊಳ್ಳಲು, ಮೊದಲ ಬಾರಿಗೆ ಅಪರಾಧ್ ಎಂಬ ಚಿತ್ರವನ್ನು ನಿರ್ದೇಶಿಸುತ್ತಾರೆ. ಜರ್ಮನಿಯಲ್ಲಿ ಆಟೋ ರೇಸಿಂಗ್ ಅನ್ನು ಚಿತ್ರೀಕರಿಸಿದ ಮೊದಲ ಭಾರತೀಯ ಚಿತ್ರ ಇದಾಗಿದೆ; ಚಿತ್ರದಲ್ಲಿ ಮಮ್ತಾಜ್ ಇವರ ಸಹನಟಿಯಾಗಿದ್ದರು. ಇವರು ೧೯೭೫ರಲ್ಲಿ ಧರ್ಮಾತ್ಮ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ಅದರಲ್ಲಿ ನಟಿಸಿದ್ದಾರೆ. ಇದು ಅಫ್ಘಾನಿಸ್ತಾನದಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರವಾಗಿದೆ. ಜೊತೆಗೆ ನಿರ್ಮಾಪಕ, ನಿರ್ದೇಶಕ ಹಾಗು ನಾಯಕನಾಗಿ ಭಾರಿ ಯಶಸ್ಸು ಗಳಿಸಿದ ಅವರ ಮೊದಲ ಚಿತ್ರವಾಗಿದೆ; ಹಾಗು ಚಿತ್ರದಲ್ಲಿ ನಟಿ ಹೇಮಾಮಾಲಿನಿ ಮೋಹಕ ಪಾತ್ರ,ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.[೭] ಈ ಚಿತ್ರವು, ಹಾಲಿವುಡ್ ಚಿತ್ರ ದಿ ಗಾಡ್ ಫಾದರ್ ನಿಂದ ಸ್ಪೂರ್ತಿ ಪಡೆದಿದೆ.
೧೯೭೦ ಹಾಗು ೧೯೮೦ರ ಉತ್ತರಾರ್ಧದುದ್ದಕ್ಕೂ, ಅವರು ಬಾಲಿವುಡ್ ನ ಅಗ್ರ ನಾಯಕರೆನಿಸಿದ್ದರು. ತಮ್ಮದೇ ಹಲವಾರು ಚಿತ್ರಗಳನ್ನು ನಿರ್ದೇಶಿಸಿ ಅದರಲ್ಲಿ ನಟಿಸಿದ್ದರು. ಭಗತ್ ಧನ್ನಾ ಜಾಟ್ (೧೯೭೪) ಎಂಬ ಪಂಜಾಬಿ ಚಿತ್ರದಲ್ಲೂ ಸಹ ನಟಿಸಿದ್ದಾರೆ. ಆಗ ೧೯೮೦ರಲ್ಲಿ ಜೀನತ್ ಅಮಾನ್ ರೊಂದಿಗೆ ನಟಿಸಿದ ಚಿತ್ರ ಕುರ್ಬಾನಿ ಯು, ಅವರ ವೃತ್ತಿಜೀವನದ ಅತ್ಯಂತ ಯಶಸ್ವೀ ಚಿತ್ರವಾಯಿತು. ಜೊತೆಗೆ ಪ್ರಸಿದ್ಧ ಪಾಕಿಸ್ತಾನಿ ಪಾಪ್ ಗಾಯಕಿ ನಾಜಿಯಾ ಹಸ್ಸನ್ ರನ್ನು ಅವರ ಸ್ಮರಣೀಯ ಗೀತೆ "ಆಪ್ ಜೈಸಾ ಕೋಯಿ" ಹಾಡಿನ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು.[೬] ೧೯೮೬ರಲ್ಲಿ, ಗಲ್ಲಾಪಟ್ಟಿಯಲ್ಲಿ ಯಶಸ್ಸು ಗಳಿಸಿದ ಚಲನಚಿತ್ರ ಜಾನ್ ಬಾಜ್ ನ್ನು ನಿರ್ದೇಶಿಸಿ ಅದರಲ್ಲಿ ನಟಿಸಿದರು.[೮] ಈ ಚಿತ್ರವನ್ನು ಕೆಲವರು ಅತ್ಯುತ್ತಮ ಚಲನಚಿತ್ರವೆಂದು ಪರಿಗಣಿಸುತ್ತಾರೆ, ಚಿತ್ರದಲ್ಲಿ ಬಹುತಾರಾ ಬಳಗವಿದೆ, ಜೊತೆಗೆ ಚಿತ್ರವು ಉತ್ತಮ ಹಾಡುಗಳನ್ನು ಹಾಗು ಅತ್ಯುತ್ತಮ ಛಾಯಾಗ್ರಹಣ ಹೊಂದಿದೆ. ೧೯೯೮ರಲ್ಲಿ, ದಯಾವಾನ್ ಚಿತ್ರವನ್ನು ನಿರ್ದೇಶಿಸಿ ಅದರಲ್ಲಿ ನಟಿಸಿದರು. ಈ ಚಿತ್ರವು ದಕ್ಷಿಣ ಭಾರತದ ನಾಯಗನ್ ಚಿತ್ರದ ರಿಮೇಕ್ ಆಗಿದೆ.(ಮರುಆವೃತ್ತಿ) ಯಾಲ್ಗಾರ್ (೧೯೯೨) ಚಿತ್ರವನ್ನು ನಿರ್ದೇಶಿಸಿ ಅದರಲ್ಲಿ ನಟಿಸಿದ ನಂತರ, ಅವರು ನಟನೆಯಿಂದ ೧೧ ವರ್ಷಗಳ ಕಾಲ ಸುದೀರ್ಘ ವಿರಾಮ ಪಡೆದರು.
೧೯೯೮ರ ಚಿತ್ರ ಪ್ರೇಮ್ ಅಗ್ಗನ್ ಮೂಲಕ ತಮ್ಮ ಪುತ್ರ ಫರ್ದೀನ್ ಖಾನ್ ರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಆದರೆ, ಚಿತ್ರವು ಗಲ್ಲಾಪಟ್ಟಿಯಲ್ಲಿ ಸೋಲನ್ನು ಕಂಡಿತು. ೨೦೦೩ರಲ್ಲಿ, ನಟನೆಗೆ ಹಿಂದಿರುಗುವ ಮೂಲಕ ಜಾನಶೀನ್ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಚಿತ್ರದಲ್ಲಿ ಅವರ ಪುತ್ರ ಫರ್ದೀನ್ ಸಹ ನಟಿಸಿದ್ದಾರೆ. ಅವರು ತಮ್ಮ ಚಿತ್ರಗಳಲ್ಲಿ ಪ್ರಾಣಿಗಳ ಪ್ರದರ್ಶನವನ್ನು ಬಳಸುತ್ತಿದ್ದರು-ಜಾನಶೀನ್ ಚಿತ್ರದಲ್ಲಿ ಒಂದು ಚಿಂಪಾಂಜಿ ಹಾಗು ಸಿಂಹವನ್ನು ಬಳಸಿದ್ದರು-ಆದರೆ ಪೀಪಲ್ ಫಾರ್ ಅನಿಮಲ್ಸ್(PFA) ಹರಿಯಾಣದ [೧] Archived 2007-08-24 at Archive.is ಅಧ್ಯಕ್ಷ ನರೇಶ್ ಕದ್ಯನ್, ಇದೊಂದು ಪ್ರಾಣಿ ಹಿಂಸೆಯೆಂದು ಪರಿಗಣಿಸಿ ಫರಿದಾಬಾದ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದರ ಜೊತೆಗೆ ನಿರ್ಮಾಪಕ, ನಿರ್ದೇಶಕ, ಹಾಗು ನಟರ ವಿರುದ್ಧ ಕಾನೂನು ಕ್ರಮಕ್ಕಾಗಿ ದೂರು ನೀಡಿದರು.
ತಮ್ಮ ಪುತ್ರನ ಜೊತೆಗೆ ಮತ್ತೊಮ್ಮೆ ಏಕ್ ಖಿಲಾಡಿ ಏಕ್ ಹಸಿನಾ (೨೦೦೫) ಚಿತ್ರದಲ್ಲಿ ಮತ್ತೊಮ್ಮೆ ನಟಿಸಿದರು, ಅಲ್ಲದೇ ವೆಲ್ಕಂ (೨೦೦೭)ಚಿತ್ರವು ಅವರ ಕಡೆಯ ಚಲನಚಿತ್ರವಾಯಿತು.
ತಮ್ಮ ವಿಶಿಷ್ಟ ಶೈಲಿಯ ಮೂಲಕ ಫಿರೋಜ್ ಖಾನ್ ತಮ್ಮ ಅವಧಿಯ ಎಲ್ಲ ನಾಯಕರನ್ನು ಮೀರಿಸಿದ್ದರು, ಈ ಶೈಲಿಯು ಅವರ ಚಿತ್ರಗಳು ಹಾಗು ಸಂಗೀತದಲ್ಲಿ ಪ್ರತಿಬಿಂಬಿತವಾಗಿದೆ. ಅವರ ಚಿತ್ರಗಳಾದ ಕುರ್ಬಾನಿ ಹಾಗು ಧರ್ಮಾತ್ಮ ಹಿಂದಿ ಚಿತ್ರರಂಗವೇ ಆರಾಧಿಸುವಷ್ಟು ಅಚ್ಚುಮೆಚ್ಚಾಗಿವೆ. ಇವರನ್ನು ಒಬ್ಬ ಸೂಪರ್ ಸ್ಟಾರ್ ಎಂದು ಪರಿಗಣಿಸದಿದ್ದರೂ, ಬರುವ ಹಲವಾರು ವರ್ಷಗಳ ಕಾಲ ಜನಮಾನಸದಲ್ಲಿ ಅಮರರಾಗಿದ್ದಾರೆ.
ಮೇ ೨೦೦೬ರಲ್ಲಿ, ಫಿರೋಜ್ ಖಾನ್, ತಮ್ಮ ಸಹೋದರನ ತಾಜ್ ಮಹಲ್ ಚಿತ್ರದ ಪ್ರಚಾರಕ್ಕಾಗಿ ಪಾಕಿಸ್ತಾನಕ್ಕೆ ಹೋದಾಗ, ಅಂದಿನ ಅಧ್ಯಕ್ಷ ಪರ್ವೇಜ್ ಮುಷರ್ರಫ್ ರಿಂದ ಸಂದೇಹಕ್ಕೊಳಗಾಗಿ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟಿದ್ದರು. ಮುಷರ್ರಫ್ ಗೆ ಸಲ್ಲಿಸಲಾದ ಇಂಟೆಲಿಜೆನ್ಸ್ ವರದಿಯಲ್ಲಿ, ಖಾನ್ ಮದ್ಯಪಾನ ಮಾಡಿ ಪಾಕಿಸ್ತಾನಿ ಗಾಯಕ ಹಾಗು ನಿರೂಪಕ ಫಖ್ರ್-ಎ-ಆಲಂರನ್ನು ಅವಮಾನಿಸಿ, ಅವರ ದೇಶವನ್ನು ಈ ರೀತಿಯಾಗಿ ಮೂದಲಿಸಿದ್ದರೆಂದು ಹೇಳಲಾಗಿದೆ:
"ನಾನೊಬ್ಬ ಹೆಮ್ಮೆಯ ಭಾರತೀಯ. ಭಾರತ ಒಂದು ಜಾತ್ಯತೀತ ರಾಷ್ಟ್ರ. ಇಲ್ಲಿನ ಮುಸ್ಲಿಮರು ಪಾಕಿಸ್ತಾನಕ್ಕಿಂತ ಭಿನ್ನವಾಗಿ,ಸಾಕಷ್ಟು ಪ್ರಗತಿ ಹೊಂದುತ್ತಿದ್ದಾರೆ. ನಮ್ಮ ಅಧ್ಯಕ್ಷರು ಒಬ್ಬ ಮುಸ್ಲಿಂ ಹಾಗು ನಮ್ಮ ಪ್ರಧಾನಿ ಒಬ್ಬ ಸಿಖ್. ಇಸ್ಲಾಂ ಧರ್ಮದ ಹೆಸರಿನಲ್ಲಿ ಪಾಕಿಸ್ತಾನದ ರಚನೆಯಾಗಿದೆ, ಆದರೆ ನೋಡಿ ಇಲ್ಲಿ ಹೇಗೆ ಮುಸ್ಲಿಮರು ಹೇಗೆ ಮುಸ್ಲಿಮರನ್ನೇ ಕೊಲ್ಲುತ್ತಿದ್ದಾರೆ."
ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಹಾಗು ವಿದೇಶಿ ರಾಯಭಾರಿ ಕಚೇರಿಗಳು, ಈ ಘಟನೆಯ ಬಳಿಕ ಫಿರೋಜ್ ಅವರಿಗೆ ಯಾವ ಕಾರಣಕ್ಕೂ ವೀಸಾ ನೀಡಬಾರದೆಂದು ಆದೇಶ ನೀಡಿದವು.[೯]
ವೈಯಕ್ತಿಕ ಜೀವನ
[ಬದಲಾಯಿಸಿ]ಫಿರೋಜ್ ಖಾನ್‌ರಿಗೆ ಫರ್ದೀನ್ ಖಾನ್ಎಂಬ ಹೆಸರಿನ ಒಬ್ಬ ಪುತ್ರರಿದ್ದಾರೆ, ಈತ ಬಾಲಿವುಡ್‌ನ ಮಾಜಿ ನಟಿ ಮುಮ್ತಾಜ್ ಅವರ ಪುತ್ರಿ ನತಾಶಾ ಮಾಧ್ವಾನಿಯನ್ನು ವರಿಸಿದ್ದಾರೆ. ಇವರ ಪುತ್ರಿ ಲೈಲಾ ಖಾನ್ ಫರ್ಹಾನ್ ಫರ್ನೀಚರ್ ವಾಲಾರನ್ನು ವರಿಸಿದ್ದಾಳೆ. ಲೈಲಾ ಈ ಮುಂಚೆ ರಾಷ್ಟ್ರ ಮಟ್ಟದ ಟೆನ್ನಿಸ್ ಆಟಗಾರ ರೋಹಿತ್ ರಾಜ್ಪಾಲ್ ರನ್ನು ಮದುವೆಯಾಗಿದ್ದರು, ಆದರೆ ಅವರಿಂದ ವಿಚ್ಛೇದನ ಪಡೆದು ೨೦೧೦ರಲ್ಲಿ ಫರ್ನೀಚರ್ ವಾಲರನ್ನು ಮದುವೆಯಾಗಿದ್ದಾರೆ. ಫರ್ದೀನ್ ಹಾಗು ಫರ್ಹಾನ್‌ರ ನಡುವೆ ಭಿನ್ನಾಭಿಪ್ರಾಯಗಳಿದ್ದು ಅದು ನೈಟ್‌ಕ್ಲಬ್ ಒಂದರಲ್ಲಿ ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ಹೋದರೂ ತದನಂತರ ತಮ್ಮ ನಡುವಿನ ವೈಷಮ್ಯವನ್ನು ಬಗೆಹರಿಸಿಕೊಂಡು ಒಬ್ಬರನ್ನೊಬ್ಬರು ಹೊಂದಾಣಿಕೆ ಮಾಡಿಕೊಂಡಿದ್ದರು.
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]- ಅತ್ಯುತ್ತಮ ಚೊಚ್ಚಿಲ ಪ್ರದರ್ಶನಕ್ಕಾಗಿ ಫಿಲಂಫೇರ್ ಪ್ರಶಸ್ತಿ: vbbcbcb(೧೯೬೦)
- ಆದ್ಮಿ ಔರ್ ಇನ್ಸಾನ್ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಫಿಲಂಫೇರ್ ಪ್ರಶಸ್ತಿ (೧೯೭೦)
- ಇಂಟರ್ನ್ಯಾಷನಲ್ ಕ್ರೂಕ್ (೧೯೭೪) ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಎಂದು ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ
- ೨೦೦೧ರಲ್ಲಿ ಜೀವಮಾನದ ಸಾಧನೆಗಾಗಿ ಫಿಲಂಫೇರ್ ಪ್ರಶಸ್ತಿ[೧೦]
ಜಾನಶೀನ್(೨೦೦೩)ಚಿತ್ರಕ್ಕಾಗಿ ಅತ್ಯುತ್ತಮ ಖಳನಾಯಕ ಎಂದು ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ[೧೧]
- ೨೦೦೮ರಲ್ಲಿ ಜೀವಮಾನದ ಸಾಧನೆಗಾಗಿ ಜೀ ಸಿನೆ ಪ್ರಶಸ್ತಿ
- ೨೦೦೯ರಲ್ಲಿ ಮ್ಯಾಕ್ಸ್ ಸ್ಟಾರ್ ಡಸ್ಟ್ ಪ್ರಶಸ್ತಿಗಳಲ್ಲಿ "ಚಿತ್ರರಂಗದ ಹೆಮ್ಮೆ' ಬಿರುದು.[೧೨][೧೩]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]- ದೀದಿ (೧೯೬೦)
- ಮೇ ಶಾದಿ ಕರ್ನೆ ಚಲಾ (೧೯೬೨)
- ಟಾರ್ಜಾನ್ ಗೋಸ್ ಟು ಇಂಡಿಯಾ (೧೯೬೨) ... ಪ್ರಿನ್ಸ್ ರಘು ಕುಮಾರ್
- ಬಹುರಾಣಿ (೧೯೬೩) ... ವಿಕ್ರಂ
- ಸುಹಾಗನ್ (೧೯೬೪) ... ಶಂಕರ್
- ಚಾರ್ ದೆರ್ವೇಶ್ (೧೯೬೪) ... ಕಮರ್ ಭಕ್ತ್
- ತೀಸ್ರ ಕೌನ್ (೧೯೬೫)
- ಊಂಚೆ ಲೋಗ್ (೧೯೬೫) ... ರಜನಿಕಾಂತ್
- ಏಕ್ ಸಪೇರಾ ಏಕ್ ಲೂಟೇರಾ (೧೯೬೫) ... ಮೋಹನ್/ವಿಜಯ್ ಪ್ರತಾಪ್ ಸಿಂಗ್
- ಆರ್ಜೂ (೧೯೬೫) ... ರಮೇಶ್
- ತಸ್ವೀರ್ (೧೯೬೬)
- ಮೇ ವಹಿ ಹೂ (೧೯೬೬) ... ವಿಜಯ್
- ವೊಹ್ ಕೋಯಿ ಔರ್ ಹೋಗಾ (೧೯೬೭)
- ರಾತ್ ಔರ್ ದಿನ್ (೧೯೬೭) ... ದಿಲೀಪ್
- CID ೯೦೯ (೧೯೬೭)
- ಔರತ್ (೧೯೬೭)
- ಆಗ್ (೧೯೬೭) ... ಶಂಕರ್
- ಪ್ಯಾಸಿ ಶಾಮ್ (೧೯೬೯) ... ಅಶೋಕ್
- ಆದ್ಮಿ ಔರ್ ಇನ್ಸಾನ್ (೧೯೬೯) ... ಜೈ ಕಿಶನ್/J.K.
- ಸಫರ್ (೧೯೭೦) ... ಶೇಖರ್ ಕಪೂರ್
- ಮೇಲಾ (೧೯೭೧)
- ಏಕ್ ಪಹೇಲಿ (೧೯೭೧) ... ಸುಧೀರ್
- ಉಪಾಸನಾ (೧೯೭೧)
- ಅಪರಾಧ್ (೧೯೭೨) ... ರಾಮ್ ಖಾನಾ
- ಕಷ್ಮಕಶ್ (೧೯೭೩)
- ಕಿಸಾನ್ ಔರ್ ಭಗವಾನ್ (೧೯೭೪)
- ಖೋಟೆ ಸಿಕ್ಕೆ (೧೯೭೪) ... ಕುದುರೆ ಸವಾರ
- ಗೀತಾ ಮೇರಾ ನಾಮ್ (೧೯೭೪)
- ಭಗತ್ ಧನ್ನಾ ಜಾಟ್ (೧೯೭೪) ... ರಾಮು
- ಅಂಜಾನ್ ರಾಹೆ (೧೯೭೪) ... ಆನಂದ್
- ಇಂಟರ್ನ್ಯಾಷನಲ್ ಕ್ರೂಕ್ (೧೯೭೪) ... SP ರಾಜೇಶ್
- ರಾಣಿ ಔರ್ ಲಾಲ್ ಪರಿ (೧೯೭೫) ... ಗಲಿವರ್
- ಕಾಲ ಸೋನಾ (೧೯೭೫) ... ರಾಕೇಶ್
- ಆ ಜಾ ಸನಂ (೧೯೭೫) ... ಡಾ. ಸತೀಶ್
- ಧರ್ಮಾತ್ಮಾ (೧೯೭೫) .... ರಣಬೀರ್
- ಶರಾಫತ್ ಚೋಡ್ ದಿ ಮೈನೆ (೧೯೭೬)
- ಕಬೀಲ (೧೯೭೬)
- ಶಂಕರ್ ಶಂಬು (೧೯೭೬) ...ಶಂಬು
- ನಾಗಿನ್ (೧೯೭೬) ... ರಾಜ್
- ಜಾದು ಟೋನಾ (೧೯೭೭) ... ಡಾ. ಕೈಲಾಶ್
- ದರಿಂದಾ (೧೯೭೭)
- ಚುನೋತಿ (೧೯೮೦)
- ಕುರ್ಬಾನಿ (೧೯೮೦) ... ರಾಜೇಶ್ ಕುಮಾರ್/ಕೈಲಾಶ್ ನಾಥ್
- ಖೂನ್ ಔರ್ ಪಾನಿ (೧೯೮೧)
- ಕಚ್ಚೆ ಹೀರೆ (೧೯೮೨) ... ಕಮಲ್ ಸಿಂಗ್ ರ ಸಹೋದರನ ಮಗ
- ಜಾನ್ ಬಾಜ್ (೧೯೮೬) ... ಇನ್ಸ್ಪೆಕ್ಟರ್ ರಾಜೇಶ್ ಸಿಂಗ್
- ದಯಾವಾನ್ (೧೯೮೮) ... ಶಂಕರ್ ವಾಘ್ಮಾರೆ
- ಮೀತ್ ಮೇರೆ ಮನ್ ಕಾ (೧೯೯೧)
- ಯಾಲ್ಗಾರ್ (೧೯೯೨) ... ರಾಜೇಶ್ ಅಶ್ವಿನಿ ಕುಮಾರ್
- ಪ್ರೇಂ ಅಗನ್ (೧೯೯೮) ...
- ಜಾನಶೀನ್ (೨೦೦೩) ... ಸಾಬ ಕರಿಂ ಷಾ
- ಚಿತಪ್ಪ (೨೦೦೫) ... ರಾಮನ್
- ಏಕ್ ಕಿಲಾಡಿ ಏಕ್ ಹಸೀನಾ (೨೦೦೫) .... ಜಹಂಗೀರ್ ಖಾನ್(ಅತಿಥಿ ಪಾತ್ರ)
- ಓಂ ಶಾಂತಿ ಓಂ (೨೦೦೭) ... ಸ್ವಪಾತ್ರದಲ್ಲಿ (ಅತಿಥಿ ನಟ)
- ವೆಲ್ಕಮ್ (೨೦೦೭) ... ರಣಬೀರ್ ಧನರಾಜ್ ಜಾಕ(RDX)
ನಿಧನ ಹಾಗು ಅಂತ್ಯಕ್ರಿಯೆ
[ಬದಲಾಯಿಸಿ]ಇವರು ಕ್ಯಾನ್ಸರ್ ನೊಂದಿಗೆ ಹೋರಾಟ ನಡೆಸಿ ಏಪ್ರಿಲ್ ೨೭ ೨೦೦೯ರಲ್ಲಿ ನಿಧನರಾದರು. ತಮ್ಮ ಅನಾರೋಗ್ಯದ ಸಮಯದಲ್ಲಿ ಬೆಂಗಳೂರಿನಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯಲು ಹಿಂದಿರುಗಿದರು.
ದೇಹವನ್ನು ಇವರ ಅಚ್ಚುಮೆಚ್ಚಿನ ತಾಣ ಬೆಂಗಳೂರಿನಲ್ಲಿ, ಹೊಸೂರು ರಸ್ತೆಯ ಶಿಯಾ ಕಬ್ರಿಸ್ತಾನದಲ್ಲಿ ಅವರ ತಾಯಿಯ ಸಮಾಧಿಯ ಪಕ್ಕದಲ್ಲಿಯೇ ಸಮಾಧಿ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಅವರ ಹತ್ತಿರದ ಸಂಬಂಧಿಗಳು, ಆಪ್ತ ಸ್ನೇಹಿತರು ಹಾಗು ಭಾರತೀಯ ಚಿತ್ರರಂಗದ ಖ್ಯಾತನಾಮರನ್ನೊಳಗೊಂಡಂತೆ ಸಾವಿರಾರು ಜನ ಭಾಗವಹಿಸಿದ್ದರು. ಅವರ ಪ್ರಭಾವಶಾಲಿ ವ್ಯಕ್ತಿತ್ವ, ಹಾಗು ಚಿತ್ರರಂಗದಲ್ಲಿನ ವೈಶಿಷ್ಟ್ಯಕ್ಕೆ ಇಂದಿಗೂ ಸ್ಮರಣೀಯರಾಗಿದ್ದಾರೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ "Feroz Khan". London: The Daily Telegraph. 27 April 2009.
..one of Bollywood's biggest stars; with his swagger and tough-guy styling he was compared to American leading men like Clint Eastwood or Steve McQueen.
- ↑ ಬಾಲಿವುಡ್ ನಲ್ಲಿ ನಿರ್ಣಾಯಕ ಶೈಲಿಯನ್ನು ರೂಪಿಸಿದ ವಿಶಿಷ್ಟ ವ್ಯಕ್ತಿ ಫಿರೋಜ್ ಖಾನ್ ರ ಶವಸಂಸ್ಕಾರ ನಡೆಸಲಾಯಿತು. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ.
- ↑ ೩.೦ ೩.೧ 'ಫಿರೋಜ್ ಖಾನ್ ಭಾರತೀಯ ಸ್ಟೈಲ್ ನ ಪ್ರತಿಬಿಂಬವಾಗಿದ್ದರು' ಬೆಂಗಳೂರಿನಲ್ಲಿ R G ವಿಜಯಸಾರಥಿ ಹೇಳಿಕೆ Rediff.com, ೨೭ ಏಪ್ರಿಲ್ ೨೦೦೯.
- ↑ ೪.೦ ೪.೧ ಬಾಲಿವುಡ್ ನಟ ಫಿರೋಜ್ ಖಾನ್ ನಿಧನ BBC ನ್ಯೂಸ್, ಸೋಮವಾರ, ೨೭ ಏಪ್ರಿಲ್ ೨೦೦೯
- ↑ ಬಾಲಿವುಡ್ ನ ಸ್ಟೈಲ್ ಪ್ರತಿಬಿಂಬ ಫಿರೋಜ್ ಖಾನ್ ನಿಧನ ದಿ ಇಕನಾಮಿಕ್ ಟೈಮ್ಸ್, ೨೭ ಏಪ್ರಿಲ್ ೨೦೦೯
- ↑ ೬.೦ ೬.೧ ಫಿರೋಜ್ ಖಾನ್ ಜೀವನದಲ್ಲಿ ರಾಜನಂತೆ ಬಾಳಿದರು ದಿ ಟೈಮ್ಸ್ ಆಫ್ ಇಂಡಿಯಾ ೨೭ ಏಪ್ರಿಲ್ ೨೦೦೯.
- ↑ ನನ್ನನ್ನು ಮಗು ಎಂದು ಕರೆದ ಏಕೈಕ ವ್ಯಕ್ತಿ ಫಿರೋಜ್ ಖಾನ್: ಹೇಮಾ ಮಾಲಿನಿ Archived 2009-04-30 ವೇಬ್ಯಾಕ್ ಮೆಷಿನ್ ನಲ್ಲಿ., ಹಿಂದುಸ್ತಾನ್ ಟೈಮ್ಸ್ , ೨೮ ಏಪ್ರಿಲ್ ೨೦೦೯.
- ↑ "Far removed from Feroz's films". The Hindu. Chennai, India. 1 December 2003. Archived from the original on 6 ಡಿಸೆಂಬರ್ 2003. Retrieved 14 ಜನವರಿ 2011.
- ↑ http://www.dnaindia.com/world/report_musharraf-says-no-entry-to-feroz_1030084
- ↑ "Lifetime Achievement (Popular)". Filmfare Awards. Archived from the original on 12 ಫೆಬ್ರವರಿ 2008. Retrieved 14 December 2010.
- ↑ "ಮೊದಲ ಫಿಲಂಫೇರ್ ಪ್ರಶಸ್ತಿಗಳು 1953" (PDF). Archived from the original (PDF) on 2009-06-12. Retrieved 2011-01-14.
- ↑ "ಆರ್ಕೈವ್ ನಕಲು". Archived from the original on 2011-08-12. Retrieved 2011-01-14.
- ↑ http://www.bollywoodhungama.com/features/2009/02/16/4855/index.html
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles needing additional references from April 2009
- All articles needing additional references
- Articles with hatnote templates targeting a nonexistent page
- Webarchive template archiveis links
- 1939ರಲ್ಲಿ ಜನಿಸಿದವರು
- 2009ರಲ್ಲಿ ನಿಧನರಾದವರು
- ಭಾರತೀಯ ಮುಸ್ಲಿಮರು
- ಫಿಲ್ಮ್ಫೇರ್ ಪ್ರಶಸ್ತಿ ವಿಜೇತರು
- ಹಿಂದಿ ಚಲನಚಿತ್ರ ನಟರು
- ಭಾರತೀಯ ನಟರು
- ಭಾರತೀಯ ಚಲನಚಿತ್ರ ನಟರು
- ಭಾರತೀಯ ಕಿರುತೆರೆ ನಟರು
- ಭಾರತೀಯ ಟಿವಿ ನಿರೂಪಕರು
- ಆಫ್ಘಾನ್ ಮೂಲದ ಭಾರತೀಯ ಜನರು
- ಇರಾನಿಯನ್ ಮೂಲದ ಭಾರತೀಯ ಜನರು
- ಚಲನಚಿತ್ರ ನಟರು