ಫಿಂಗರ್ ಎಲೆವೆನ್
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (April 2010) |
Finger Eleven | |
---|---|
ಚಿತ್ರ:FingerElevenliveinTempe.jpg | |
ಹಿನ್ನೆಲೆ ಮಾಹಿತಿ | |
ಅಡ್ಡಹೆಸರು | Rainbow Butt Monkeys |
ಮೂಲಸ್ಥಳ | Burlington, Ontario, ಕೆನಡಾ |
ಸಂಗೀತ ಶೈಲಿ | Alternative rock, hard rock, post-grunge |
ಸಕ್ರಿಯ ವರ್ಷಗಳು | 1989–present |
Labels | WindUp |
ಅಧೀಕೃತ ಜಾಲತಾಣ | www.fingereleven.com |
ಸಧ್ಯದ ಸದಸ್ಯರು | Scott Anderson James Black Rick Jackett Sean Anderson Rich Beddoe |
ಮಾಜಿ ಸದಸ್ಯರು | Rob Gommerman |
ಫಿಂಗರ್ ಎಲೆವೆನ್ ಎಂಬುದು 1989ರಲ್ಲಿ ರೂಪಿಸಲಾದ ಒಂಟಾರಿಯೋದ ಬರ್ಲಿಂಗ್‌ಟನ್‌ನಲ್ಲಿರುವ ಕೆನಡಾದ ರಾಕ್ ವಾದ್ಯವೃಂದವಾಗಿದೆ.[೧] ಈ ವಾದ್ಯವೃಂದವನ್ನು ಮೂಲತಃ ರೈನ್‌ಬೋ ಬಟ್ ಮಂಕೀಸ್ ಎಂದು ಕರೆಯಲಾಗುತ್ತಿತ್ತು. ತಮ್ಮ ಸಂಗೀತ ಸಂಪುಟವಾದ ದ ಗ್ರೇಯೆಸ್ಟ್ ಆಫ್ ಬ್ಲ್ಯೂ ಸ್ಕೈಸ್ ನೊಂದಿಗೆ ಪ್ರಧಾನ ವಾಹಿನಿ ಸಂಗೀತದ ಕಡೆಗೆ ದಾಪುಗಾಲಿಟ್ಟಿರುವ ಈ ವೃಂದವು ಇತ್ತೀಚೆಗೆ ಐದು ಸ್ಟುಡಿಯೋ ಸಂಗೀತ ಸಂಪುಟಗಳನ್ನು ಬಿಡುಗಡೆ ಮಾಡಿದೆ. 2003ರ ಸಾಲಿನ ಸ್ವಯಂ-ಅಭಿದಾನಾಂಕಿತ ಸಂಗೀತ ಸಂಪುಟವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ವರ್ಣ/ಗೋಲ್ಡ್ ಸ್ಥಾನಮಾನವನ್ನು ಹಾಗೂ ಕೆನಡಾದಲ್ಲಿ ಪ್ಲಾಟಿನಮ್ ಸ್ಥಾನಮಾನವನ್ನು ಗಳಿಸಿಕೊಟ್ಟಿತು, ವಾದ್ಯವೃಂದಕ್ಕೆ US ಬಹುಪ್ರಸಿದ್ಧ/ಹಾಟ್ 100 ಜನಪ್ರಿಯ ಗೀತೆಗಳ ಪಟ್ಟಿಯಲ್ಲಿ 16ನೆಯ ಸ್ಥಾನವನ್ನು ಮೊತ್ತಮೊದಲು ದೊರಕಿಸಿದ ಏಕಗೀತೆ "ಒನ್ ಥಿಂಗ್ "ನ ಅದ್ಭುತ ಯಶಸ್ಸು ಇದಕ್ಕೆ ಬಹುಪಾಲು ಕಾರಣ. ಈ ವೃಂದದ 2007ರ ಸಾಲಿನ ದೆಮ್ vs. ಯು vs. ಮೀ ಎಂಬ ಸಂಗೀತ ಸಂಪುಟವು ಹಲವು ಜನಪ್ರಿಯ ಗೀತೆಗಳ ಪಟ್ಟಿಯಲ್ಲಿ ಉನ್ನತ ಸ್ಥಾನಗಳಿಗೇರಿದ ಏಕಗೀತೆ "ಪ್ಯಾರಾಲೈಜರ್ "ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು ಕೆನಡಾದ ಬಹುಪ್ರಸಿದ್ಧ/ಹಾಟ್ 100 ಹಾಗೂ US ರಾಕ್ ಜನಪ್ರಿಯ ಗೀತೆಗಳ ಪಟ್ಟಿಗಳೆರಡರಲ್ಲೂ ಸೇರಿದಂತೆ USನ ಬಹುಪ್ರಸಿದ್ಧ/ಹಾಟ್ 100ರ ಪಟ್ಟಿಯಲ್ಲಿ #6ನೆಯ ಸ್ಥಾನವನ್ನು ಹಾಗೂ ಆಸ್ಟ್ರೇಲಿಯಾದ ಏಕಗೀತೆಗಳ ಜನಪ್ರಿಯ ಗೀತೆಗಳ ಪಟ್ಟಿಯಲ್ಲಿ #12ನೆಯ ಸ್ಥಾನವನ್ನು ಕೂಡಾ ತಲುಪಿತ್ತು. ರಾಕ್ ಸಂಗೀತ ಸಂಪುಟಗಳಿಗೆ ವಾರ್ಷಿಕವಾಗಿ ನೀಡುವ ಜುನೋ ಪ್ರಶಸ್ತಿಯನ್ನು 2008ರಲ್ಲಿ ಅವರು ಗಳಿಸಿದ್ದರು.[೨]
ಇತಿಹಾಸ
[ಬದಲಾಯಿಸಿ]ಲೆಟರ್ಸ್ ಫ್ರಮ್ ಚಟ್ನಿ ಮತ್ತು ಟಿಪ್ (1995–1999)
[ಬದಲಾಯಿಸಿ]ಫಿಂಗರ್ ಎಲೆವೆನ್ ವೃಂದವು ಮೊದಲಿಗೆ ತಮ್ಮ ಪ್ರೌಢಶಾಲಾ ಅವಧಿಯಲ್ಲೇ ತಂಡ ಕಟ್ಟಿಕೊಂಡರೂ, ಒಂದು ವಾದ್ಯವೃಂದವಾಗಿ ಅಚಲ ಶ್ರದ್ಧೆಯ ಕೆನಡಿಯನ್ ವಾದ್ಯವೃಂದವೆನಿಸಿಕೊಳ್ಳಬಲ್ಲಂತಹಾ ಸಾಧನೆ ಮಾಡಿದರು. 1990ರಲ್ಲಿ ಅವರು ನಡೆಸಿಕೊಟ್ಟ ಶಾಲೆಯೊಂದರ ಕ್ರಿಸ್‌ಮಸ್ ವಾದ್ಯ/ಗಾನಗೋಷ್ಠಿಯು ಅವರ ಮೊದಲಿಗ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಈ ವಾದ್ಯವೃಂದವನ್ನು ಮೂಲತಃ ರೈನ್‌ಬೋ ಬಟ್ ಮಂಕೀಸ್ ಎಂದು ಕರೆಯಲಾಗುತ್ತಿತ್ತು. 97.7 CHTZ (ಹಿಟ್ಸ್) HTZ FM ರೇಡಿಯೋದ "ದಕ್ಷಿಣ ಒಂಟಾರಿಯೋದ ಅತ್ಯುತ್ತಮ ರಾಕ್ ಸಂಗೀತ " ಎಂಬ ರಾಕ್ ವಾದ್ಯವೃಂದ ಪ್ರತಿಭಾನ್ವೇಷಣ ಸ್ಪರ್ಧೆಯಲ್ಲಿ ಬಹುಮಾನದ ಮೊತ್ತವನ್ನು ಗೆದ್ದ ಸಂದರ್ಭದಲ್ಲಿ ಅವರು ತಮ್ಮ ಮೊತ್ತಮೊದಲ ಪೂರ್ಣ ಪ್ರಮಾಣದ ಸಂಗೀತ ಸಂಪುಟ ಲೆಟರ್ಸ್ ಫ್ರಮ್ ಚಟ್ನಿ (1995)ಅನ್ನು ಬಿಡುಗಡೆ ಮಾಡಿದರು.
1996ರಲ್ಲಿ ಕೋಅಲಿಷನ್ ಎಂಟರ್‌ಟೇನ್‌ಮೆಂಟ್ (ಸಾರಾಹ್ ಪರ್ಹಮ್‌ರೊಂದಿಗೆ ರಾಬ್ ಲ್ಯಾನ್ನಿ & ಎರಿಕ್ ಲಾರೆನ್ಸ್) ತಂಡದೊಂದಿಗೆ ಸಹಯೋಗಗೊಳ್ಳುವ ಮೂಲಕ ನವೀನ ನಿರ್ವಹಣಾ ತಂಡವೊಂದನ್ನು ಈ ವೃಂದದವರು ಕಂಡುಕೊಂಡರು. ಅವರು ತಮ್ಮ ಸಂಗೀತದ ರೀತಿಯು ಬದಲಾಗುತ್ತಿದೆ ಹಾಗೂ ಅದರಲ್ಲಿ ಇನ್ನಷ್ಟು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಭಾವಿಸಿದಾಗ "ರೈನ್‌ಬೋ ಬಟ್ ಮಂಕೀಸ್ " ವೃಂದವು "ಫಿಂಗರ್ ಎಲೆವೆನ್ " ಆಯಿತು. ಟಿಪ್ ಎಂಬ ಸಂಗೀತ ಸಂಪುಟದ ಗೀತೆ "ಥಿನ್ ಸ್ಪಿರಿಟ್ಸ್ "ನ ಹಿಂದಿನದೊಂದು ಆವೃತ್ತಿಯಿಂದ ಫಿಂಗರ್ ಎಲೆವೆನ್ ಎಂಬ ಹೆಸರನ್ನು ಕಂಡುಕೊಂಡಿದ್ದರು. ಸ್ಕಾಟ್ ಆಂಡರ್‌ಸನ್ ಅದನ್ನು ಹೀಗೆಂದು ವರ್ಣಿಸುತ್ತಾನೆ : "ಎಲ್ಲವೂ ನಿಮ್ಮನ್ನು ಒಂದು ದಿಕ್ಕಿನೆಡೆಗೆ ಸೆಳೆದುಕೊಂಡು ಹೋಗುತ್ತಿರುವಾಗ ನಿಮ್ಮ ಅಂತಃಪ್ರೇರಣೆಯು ನಿಮ್ಮನ್ನು ಮತ್ತೊಂದೆಡೆಗೆ ಸೆಳೆಯುತ್ತದೆ ಅದೇ ಹನ್ನೊಂದನೆಯ ಬೆರಳು/ಫಿಂಗರ್ ಎಲೆವೆನ್ , ನಾನು ಅದನ್ನು ನನ್ನ ಕಲ್ಪನೆಯಿಂದ ಹೊರಹಾಕಲೇ ಆಗಲಿಲ್ಗ."
ಅವರ ಟಿಪ್ ಎಂಬ ಅದ್ವಿತೀಯ ಸಂಗೀತ ಸಂಪುಟವನ್ನು, 1997ರಲ್ಲಿ ಕೆನಡಾದಲ್ಲಿ ಮರ್ಕ್ಯೂರಿ ರೆಕಾರ್ಡ್ಸ್ ಲಾಂಛನದಡಿಯಲ್ಲಿ ಬಿಡುಗಡೆ ಮಾಡಿದರು ಹಾಗೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೈಂಡ್‌ಅಪ್ ರೆಕಾರ್ಡ್ಸ್‌ನ ಲಾಂಛನದಡಿಯಲ್ಲಿ 1998ರಲ್ಲಿ ಮರು-ಬಿಡುಗಡೆ ಮಾಡಿದರು. ಇದು ವಾದ್ಯವೃಂದದ ನಾದ/ಧಾಟಿಯಲ್ಲಿನ ಬದಲಾವಣೆಯನ್ನು ಸೂಚಿಸಿದಂತಾಯಿತು. ಟಿಪ್ ಸಂಗೀತ ಸಂಪುಟವನ್ನು ಅರ್ನಾಲ್ಡ್ ಲ್ಯಾನ್ನಿಯವರು (ಅವರ್ ಲೇಡಿ ಪೀಸ್) ನಿರ್ಮಿಸಿದ್ದರು. ಆ ಹೊತ್ತಿಗೆ ಅವರು ಕ್ರೀಡ್ ಮತ್ತು ಫ್ಯೂಯೆಲ್‌ನಂತಹಾ ಇತರೆ ಸಂಗೀತವೃಂದಗಳ ಸಮಸಮಕ್ಕೆ ಎನ್ನುವಂತೆ ಪ್ರವಾಸ ಹಮ್ಮಿಕೊಳ್ಳುವ ಮಟ್ಟಿಗೆ ತಮ್ಮನ್ನು ಸರಿದೂಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ದ ಗ್ರೇಯೆಸ್ಟ್ ಆಫ್ ಬ್ಲ್ಯೂ ಸ್ಕೈಸ್ ಮತ್ತು ಫಿಂಗರ್ ಎಲೆವೆನ್ (2000–2006)
[ಬದಲಾಯಿಸಿ]ಟಿಪ್ ನ ಬಿಡುಗಡೆಯಾದ ಅಲ್ಪ ಸಮಯದಲ್ಲಿಯೇ ಚರ್ಮವಾದ್ಯ ವಾದಕ ರಾಬ್ ಗಾಮರ್‌ಮ್ಯಾನ್‌ರು ವಾದ್ಯವೃಂದವನ್ನು ತೊರೆದ ನಂತರ ಟೊರೊಂಟೋದಲ್ಲಿ ಅನೇಕ ವರ್ಷಗಳ ಹಿಂದೆ ಅಲೈಸ್ ಇನ್ ಚೈನ್ಸ್ ವಾದ್ಯ/ಗಾನಗೋಷ್ಠಿಯೊಂದರಲ್ಲಿ ಜೇಮ್ಸ್ ಬ್ಲ್ಯಾಕ್ ಕಾಕತಾಳೀಯವಾಗಿ ಭೇಟಿಯಾಗಿದ್ದ ರಿಚ್ ಬೆಡ್ಡೋರನ್ನು ಆತನ ಸ್ಥಾನಕ್ಕೆ ನೇಮಿಸಿದರು.
2000ನೆಯ ಇಸವಿಯಲ್ಲಿ ಫಿಂಗರ್ ಎಲೆವೆನ್ ವೃಂದವು ಮತ್ತೊಮ್ಮೆ ಅರ್ನಾಲ್ಡ್ ಲ್ಯಾನ್ನಿಯವರ ನಿರ್ಮಾಣದ ದ ಗ್ರೇಯೆಸ್ಟ್ ಆಫ್ ಬ್ಲ್ಯೂ ಸ್ಕೈಸ್ ಅನ್ನು ಬಿಡುಗಡೆ ಮಾಡಿದರು. ಈ ಸಂಗೀತ ಸಂಪುಟವು ಅವರ ತವರು ರಾಷ್ಟ್ರದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರುತ್ತಾ ಸ್ವರ್ಣ/ಗೋಲ್ಡ್ ಸ್ಥಾನಮಾನವನ್ನು (50,000 ಪ್ರತಿಗಳ ಮಾರಾಟವಾಗಿತ್ತು) ದೊರಕಿಸಿ ಯಶಸ್ಸನ್ನು ತಂದೊಪ್ಪಿಸಿತ್ತು.
ಈ ವೃಂದದ 2003ರ ಸಾಲಿನ ಬಿಡುಗಡೆಯಾದ ಸ್ವಯಂ-ಅಭಿದಾನಾಂಕಿತ ಸಂಗೀತ ಸಂಪುಟ ಫಿಂಗರ್ ಎಲೆವೆನ್ ಅನ್ನು ಜಾನ್ನಿ Kರವರು ನಿರ್ಮಿಸಿದ್ದರು. ಈ ಸಂಗೀತ ಸಂಪುಟವು ಈ ವಾದ್ಯವೃಂದವನ್ನು ಪ್ರಧಾನ ವಾಹಿನಿ ಸಂಗೀತದೆಡೆಗೆ ಕರೆದೊಯ್ದ ಸುಪ್ತ ಜನಪ್ರಿಯ ಏಕಗೀತೆ "ಒನ್ ಥಿಂಗ್" ಅನ್ನೂ ಒಳಗೊಂಡಿದೆ. ಈ ಗೀತೆಯು ರಾಕ್, ಪಾಪ್ ಹಾಗೂ ಪ್ರಬುದ್ಧರ ರೇಡಿಯೋ ಜನಪ್ರಿಯ ಗೀತೆಗಳ ಪಟ್ಟಿಯಲ್ಲಿ ಜನಪ್ರಿಯ ಗೀತೆಯಾಗಿತ್ತು ; ಈ ಏಕಗೀತೆಯ ಯಶಸ್ಸು ಈ ವಾದ್ಯವೃಂದಕ್ಕೆ ತನ್ನ ಪ್ರಪ್ರಥಮ US ಸ್ವರ್ಣ/ಗೋಲ್ಡ್ ಸಂಗೀತ ಸಂಪುಟ (500,000 ಪ್ರತಿಗಳು ) ಹಾಗೂ ಕೆನಡಾದ ಪ್ಲಾಟಿನಮ್ (100,000 ಪ್ರತಿಗಳು) ಸ್ಥಾನಮಾನಗಳನ್ನು ತಂದುಕೊಟ್ಟಿತು. U.S.ನಲ್ಲಿ "ಒನ್ ಥಿಂಗ್ " ಗೀತೆಯು #16ನೆಯ ಸ್ಥಾನಕ್ಕೆ ತಲುಪಿತಲ್ಲದೇ ಸ್ಕ್ರಬ್ಸ್ , ಸ್ಮಾಲ್‌ವಿಲ್ಲೆ ಮತ್ತು ಥರ್ಡ್ ವಾಚ್ ನಂತಹಾ TV ಸರಣಿಗಳಲ್ಲಿ ಪ್ರದರ್ಶನ ಕಂಡಿತು. ವಿಶ್ವ ಕುಸ್ತಿಪಂದ್ಯಗಳ ಮನರಂಜನಾ ಸಂಸ್ಥೆ/ವರ್ಲ್ಡ್ ರೆಸಲಿಂಗ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯ (WWEಯ) ಜೂನ್ 25, 2007ರ ರಾ ಕಾರ್ಯಕ್ರಮ ದ ಆವೃತ್ತಿಯಲ್ಲಿ ಜೂನ್ 25ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಕ್ರಿಸ್ ಬೆನಾಯಿಟ್‌ನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಆತನ ಬಗೆಗಿನ ಸ್ಮಾರಕ ವಿಡಿಯೋದಲ್ಲಿ ಇದನ್ನು ಬಳಸಲಾಗಿತ್ತು. ಇವಾನಸೆನ್ಸ್‌ನ ಆಮಿ ಲೀಯವರೊಂದಿಗಿನ ಯುಗಳ ಗೀತೆಯ ಆವೃತ್ತಿಯನ್ನು ಕೂಡಾ 2007ರಲ್ಲಿ ಮುದ್ರಿಸಿಕೊಳ್ಳಲಾಗಿತ್ತು.
2003ರಿಂದ 2005ರವರೆಗಿನ ಅವಧಿಯಲ್ಲಿ ವಾದ್ಯವೃಂದವು ಯುರೋಪ್ , ಆಸ್ಟ್ರೇಲಿಯಾ ಮತ್ತು ಉತ್ತರ ಅಮೇರಿಕಾಗಳಾದ್ಯಂತ ಪ್ರವಾಸ ಕೈಗೊಂಡಿತ್ತು. ಈ ವೃಂದವು ಮಚ್‌ಮ್ಯೂಸಿಕ್ ವಿಡಿಯೋ ಪ್ರಶಸ್ತಿಯನ್ನು ಕೂಡಾ ಗೆದ್ದಿದ್ದಾರೆ.
ದೆಮ್ vs. ಯು vs. ಮೀ ಮತ್ತು ಲೈಫ್ ಟರ್ನ್ಸ್ ಎಲೆಕ್ಟ್ರಿಕ್ (2007–ಪ್ರಸ್ತುತ)
[ಬದಲಾಯಿಸಿ]ಮತ್ತೊಮ್ಮೆ ಜಾನ್ನಿ Kರವರೇ ನಿರ್ಮಿಸಿದ ಫಿಂಗರ್ ಎಲೆವೆನ್‌ನ ದೆಮ್ vs. ಯು vs. ಮೀ ಎಂಬ ಶೀರ್ಷಿಕೆಯ ಐದನೆಯ ಸ್ಟುಡಿಯೋ ಸಂಗೀತ ಸಂಪುಟವನ್ನು ಮಾರ್ಚ್ 6, 2007ರಂದು ಬಿಡುಗಡೆ ಮಾಡಲಾಯಿತು. ಇದರಲ್ಲಿನ ಮೊದಲ ಏಕಗೀತೆಯು "ಪ್ಯಾರಾಲೈಜರ್ " ಆಗಿದ್ದು, ಈ ಗೀತೆಯು ವಾದ್ಯವೃಂದದ ಇದುವರೆಗಿನ ಅತ್ಯಂತ ಯಶಸ್ವಿ ಏಕಗೀತೆಯಾಗಿ ಸಾವಕಾಶವಾಗಿ ಮಾರ್ಪಟ್ಟಿತ್ತಲ್ಲದೇ, ವೃಂದದ ವೃತ್ತಿಜೀವನದ ಮೊತ್ತಮೊದಲ U.S.ನ ಬಹುಪ್ರಸಿದ್ಧ/ಹಾಟ್ 100 ಗೀತೆಗಳ ಪಟ್ಟಿಯಲ್ಲಿನ ಅಗ್ರ ಹತ್ತು ಜನಪ್ರಿಯ ಗೀತೆಗಳೊಳಗಿನ ಸ್ಥಾನವನ್ನು ನವೆಂಬರ್ 2007ರಲ್ಲಿ ಪಡೆಯಿತು ಹಾಗೂ ಕೆನಡಾ ಮತ್ತು U.S.ನ ರಾಕ್ ಜನಪ್ರಿಯ ಗೀತೆಗಳ ಪಟ್ಟಿಗಳೆರಡರಲ್ಲೂ #1ನೆಯ ಸ್ಥಾನಕ್ಕೆ ತಲುಪಿತು. ಈ ಸಂಗೀತ ಸಂಪುಟದಲ್ಲಿ "ಫಾಲಿಂಗ್ ಆನ್ ", "ಐ ವಿಲ್ ಕೀಪ್ ಯುವರ್ ಮೆಮೋರಿ ವೇಗ್ " ಮತ್ತು "ಟಾಕಿಂಗ್ ಟು ದ ವಾಲ್ಸ್ "ಗಳಂತಹಾ ಏಕಗೀತೆಗಳೂ ಇವೆ.
ಮಾರ್ಚ್ 14, 2007ರಂದು ಈ ವಾದ್ಯವೃಂದವು ಜೆ ಲೆನೋರೊಂದಿಗೆ ದ ಟುನೈಟ್ ಷೋ ಕಾರ್ಯಕ್ರಮ ದಲ್ಲಿ "ಪ್ಯಾರಾಲೈಜರ್ "ಅನ್ನು ಪ್ರದರ್ಶಿಸಿತು ಹಾಗೂ ಮತ್ತೊಮ್ಮೆ ಸರಿಯಾಗಿ ಹತ್ತು ತಿಂಗಳ ನಂತರ ಏಕಗೀತೆಯ ದೀರ್ಘಕಾಲೀನ ಯಶಸ್ಸಿನ ಪುರಾವೆಯೆಂಬಂತೆ ಜನವರಿ 9, 2008ರಂದು ಪ್ರದರ್ಶಿಸಲಾಯಿತು. ಅವರು 2007ರ NHL ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮದಲ್ಲಿ ಜೂನ್ 14, 2007ರಂದು ಇದರ ಗಾಯನ ನಡೆಸಿಕೊಟ್ಟರು.
ಆಗಸ್ಟ್ 24, 2007ರಂದು ಅವರು NJಯ ಕ್ಯಾಮ್‌ಡೆನ್‌ನ USS ನ್ಯೂ ಜೆರ್ಸಿ ಎಂಬ ನಿವೃತ್ತಿಯಾದ ಭಾರೀ ಸಮರನೌಕೆಯ ಮೇಲೆ "ಭಾರೀ ಸಮರ ನೌಕೆಯ ಮೇಲಿನ ವಾದ್ಯವೃಂದ " ಎಂಬ ಪ್ರಚಾರದ ವಾದ್ಯ/ಗಾನಗೋಷ್ಠಿಯೊಂದನ್ನು ನಡೆಸಿಕೊಟ್ಟರು ಈ ವಾದ್ಯ/ಗಾನಗೋಷ್ಠಿಗೆ ಫಿಲಡೆಲ್ಫಿಯಾ ರೇಡಿಯೋ ಕೇಂದ್ರ WMMRವು ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು.
ಡಿಸೆಂಬರ್ 4, 2007ರಂದು ಈ ವಾದ್ಯವೃಂದದ ಅದುವರೆಗಿನ ಸಂಪೂರ್ಣ ವೃತ್ತಿಜೀವನದ ಮಹತ್ವದ ಕ್ಷಣಗಳ ವಿಡಿಯೋ ದೃಶ್ಯಾವಳಿಯನ್ನು ಒಳಗೊಂಡ ಅಸ್-vs-ದೆನ್-vs-ನೌ ಎಂಬ DVDಯನ್ನು ಬಿಡುಗಡೆ ಮಾಡಿದರು.
ದೆಮ್ vs. ಯು vs. ಮೀ ಆಲ್ಬಂ ಗೆ U.S.ನಲ್ಲಿ ಸ್ವರ್ಣ/ಗೋಲ್ಡ್ ಮಾನ್ಯತೆಯ ಪ್ರಮಾಣಪತ್ರವನ್ನು ಮಾರ್ಚ್ 2008ರಲ್ಲಿ ನೀಡಲಾಯಿತು. ಈ ವಾದ್ಯವೃಂದವು ದೆಮ್ vs. ಯು vs. ಮೀ ಆಲ್ಬಂ ನ ಬಿಡುಗಡೆಯಾದ ನಂತರ ವ್ಯಾಪಕವಾದ ಬಿರುಸಿನ ಪ್ರವಾಸಗಳನ್ನು ಕೈಗೊಂಡು ಬಹುತೇಕ ನವೀನ ಗೀತೆಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಇಷ್ಟು ಮಾತ್ರವಲ್ಲದೇ ವೃಂದದವರು ತಮ್ಮ ಕಾರ್ಯಕ್ರಮದ ಕೊನೆಯ ಹೊತ್ತಿಗೆ ಪ್ಯಾರಾಲೈಜರ್ , ಫ್ರಾನ್ಜ್ ಫರ್ಡಿನೆಂಡ್‌ರ ಟೇಕ್ ಮೀ ಔಟ್ , ಲೆಡ್ ಜೆಪ್ಪೆಲಿನ್‌ರ ಟ್ರಾಂಪಲ್‌ಡ್ ಅಂಡರ್ ಫೂಟ್ ಮತ್ತು ಪಿಂಕ್ ಫ್ಲಾಯ್ಡ್‌ನ ಅನದರ್ ಬ್ರಿಕ್ ಇನ್ ದ ವಾಲ್‌ಗಳನ್ನು ಒಳಗೊಂಡ ಮಿಶ್ರ ಗೀತೆಯನ್ನು ಪ್ರದರ್ಶಿಸುತ್ತಿದ್ದರು.
ಈ ವಾದ್ಯವೃಂದದವರು ಏಪ್ರಿಲ್ 11, 2008ರಂದು ನೆವಾಡಾದ ಲಾಸ್ ವೇಗಾಸ್‌ನಲ್ಲಿ ನಡೆದ ಮಿಸ್ USA 2008 ಸೌಂದರ್ಯಸ್ಪರ್ಧೆಯ ಕಾರ್ಯಕ್ರಮದಲ್ಲಿ "ಪ್ಯಾರಾಲೈಜರ್ " ಗೀತೆಯನ್ನು ನಡೆಸಿಕೊಟ್ಟರು.[೩]
ದೆಮ್ vs. ಯು vs. ಮೀ ಆಲ್ಬಂ ವು 2008ರ ವರ್ಷದ ರಾಕ್ ಸಂಗೀತ ಸಂಪುಟಕ್ಕೆ ನೀಡುವ ಜುನೋ ಪ್ರಶಸ್ತಿಯನ್ನು ಪಡೆದುಕೊಂಡಿತು. ವಾದ್ಯವೃಂದದವರು ಕ್ಯಾಲ್ಗೆರಿ ಯುತ್ ಆರ್ಕೆಸ್ಟ್ರಾ ತಂಡದೊಂದಿಗೆ ಏಪ್ರಿಲ್ 6, 2008ರಂದು ಆಲ್ಬರ್ಟಾದ ಕ್ಯಾಲ್ಗೆರಿಯಲ್ಲಿ ನಡೆದ ಜುನೋ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತ್ಯಕ್ಷ ಪ್ರದರ್ಶನ ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು.
ವೃಂದದವರು NY ನಗರದಲ್ಲಿ ಸ್ಟೀವ್ ವಿಲ್ಕೋಸ್ ಷೋ ಟೂರ್ ಪ್ರವಾಸ ಕಾರ್ಯಕ್ರಮದ ಕೊನೆಗೆ ಟಾಕಿಂಗ್ ಟು ದ ವಾಲ್ಸ್, ಒನ್ ಥಿಂಗ್ & ಪ್ಯಾರಾಲೈಜರ್ ಗೀತೆಗಳ ಗಾಯನವನ್ನು ನಡೆಸಿಕೊಟ್ಟರು.
ಈ ವಾದ್ಯವೃಂದವು ಜರ್ಮನಿಯಲ್ಲಿ ರಾಕ್ ಐಯಾಮ್/ಆಮ್ ರಿಂಗ್, ಮತ್ತು ರಾಕ್ ಐಯಾಮ್ ಪಾರ್ಕ್ ಕಾರ್ಯಕ್ರಮಗಳು ಮತ್ತು ಇಂಗ್ಲೆಂಡ್‌ನಲ್ಲಿನ ಡೌನ್‌ಲೋಡ್ ಫೆಸ್ಟಿವಲ್ 2008 ಉತ್ಸವವೂ ಸೇರಿದಂತೆ ಬೇಸಿಗೆಯ ಅವಧಿಯಲ್ಲಿ ಐರೋಪ್ಯ ಪ್ರವಾಸವನ್ನು ಯೋಜಿಸಿತ್ತು. ಆದರೆ ಸ್ಕಾಟ್‌ರ ಕುತ್ತಿಗೆಯಲ್ಲಿ ಉಳುಕು ಉಂಟಾದುದರಿಂದ ಅವುಗಳನ್ನು ರದ್ದುಗೊಳಿಸಲಾಯಿತು.
ವಾದ್ಯವೃಂದವು ಲಂಡನ್‌ನ ಹ್ಯಾಮರ್‌ಸ್ಮಿತ್ ಅಪೋಲೋದಲ್ಲಿನ ಒಂದು ದಿನದ ಕಾರ್ಯಕ್ರಮವೂ ಸೇರಿದಂತೆ ಕಿಡ್ ರಾಕ್ ತಂಡಕ್ಕೆ ಬೆಂಬಲವಾಗಿ ಡಿಸೆಂಬರ್ 2008ರಲ್ಲಿ ಯುರೋಪ್ ಪ್ರವಾಸವನ್ನು ಕೈಗೊಂಡಿತ್ತು.
ವಾದ್ಯವೃಂದವು ತಮ್ಮ ಆರನೆಯ ಸ್ಟುಡಿಯೋ ಸಂಗೀತ ಸಂಪುಟವನ್ನು ರೂಪುಗೊಳಿಸುವುದಕ್ಕೆ ಸ್ಟುಡಿಯೋದಲ್ಲಿ 2010ರ ವರ್ಷದ ಆದಿಯಲ್ಲಿಯೇ ಕಾರ್ಯಪ್ರವೃತ್ತವಾಯಿತು.[೪] ಈ ವಾದ್ಯವೃಂದವು ತಮ್ಮ ಆರನೆಯ ಸಂಗೀತ ಸಂಪುಟದ ಹೆಸರು/ಶೀರ್ಷಿಕೆಯು ಅಧಿಕೃತವಾಗಿ ಲೈಫ್ ಟರ್ನ್ಸ್ ಎಲೆಕ್ಟ್ರಿಕ್ ಆಗಿರುವುದೆಂದು ಜುಲೈ 30ರಂದು ಘೋಷಿಸಿದ್ದರು, ಅದನ್ನು Oct 5, 2010ರಂದು ಬಿಡುಗಡೆ ಮಾಡಲಾಯಿತು. ಈ ಸಂಗೀತ ಸಂಪುಟದ ಮೊದಲ ಏಕಗೀತೆ "ಲಿವಿಂಗ್ ಇನ್ ಎ ಡ್ರೀಮ್ "ಅನ್ನು ಜುಲೈ 20, 2010ರಂದು ಐಟ್ಯೂನ್ಸ್‌ನಲ್ಲಿ ಬಿಡುಗಡೆ ಮಾಡಿದರು.[೫] ವಾದ್ಯವೃಂದವು ನವೆಂಬರ್ 30, 2010ರಂದು ಲೈಫ್ ಟರ್ನ್ಸ್ ಎಲೆಕ್ಟ್ರಿಕ್ ಆಲ್ಬಂ ನ ಎರಡನೆಯ ಏಕಗೀತೆಯು "ವಾಟೆವರ್ ಡಸನ್‌ಟ್ ಕಿಲ್ ಮಿ" ಆಗಲಿರುವುದೆಂದು ಘೋಷಿಸಿತು. "ವಾಟೆವರ್ ಡಸನ್‌ಟ್ ಕಿಲ್ ಮಿ " ಸಂಗೀತ ವಿಡಿಯೋದ ಬಿಡುಗಡೆ ದಿನಾಂಕವು ಜನವರಿ 13, 2011 ಆಗಿತ್ತು ಇದರ ನಿರ್ಮಾಣದ ಹೊಣೆಯನ್ನು ರಿಯಾಕ್ಟಿವ್ ಪಿಕ್ಚರ್ಸ್ ಸಂಸ್ಥೆಯು ವಹಿಸಿಕೊಂಡಿತ್ತು.[೬] ಈ ವಿಡಿಯೋವನ್ನು ಆಲೊನ್ ಐಸೋಸಿಯಾನುರವರು ನಿರ್ದೇಶಿಸಿದ್ದರೆ ಕಲಾನಿರ್ದೇಶನದ ಹೊಣೆಯನ್ನು ರಾಷೆಲ್ಲೆ ಸ್ಕಾರ್ಫೋರವರು ವಹಿಸಿದ್ದರು.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]- ಫ್ಲೋರಿಡಾದಲ್ಲಿನ ಯೂನಿವರ್ಸಲ್ ಸ್ಟುಡಿಯೋಸ್‌ನ ರಾಲ್ಲರ್‌ಕೋಸ್ಟರ್ ಸಾರ್ವಜನಿಕ ಆಟಿಕೆಯಲ್ಲಿ "ಹಾಲಿವುಡ್ ರಿಪ್ ರೈಡ್ ರಾಕಿಟ್ "ನಲ್ಲಿ "ಪ್ಯಾರಾಲೈಜರ್ "ಅನ್ನು ಸೇರಿಸಲಾಗಿದೆ.
ಆಟಗಳು
[ಬದಲಾಯಿಸಿ]- "ಗುಡ್ ಟೈಮ್ಸ್ ", "ಅದರ್ ಲೈಟ್ " ಮತ್ತು "ಕಾನ್‌ವರ್ಸೇಷನ್ಸ್ " ಗೀತೆಗಳನ್ನು ಗೇಮ್‌ಕ್ಯೂಬ್ ಆಟ 1080° ಅವಾಲಾಂಕೇನಲ್ಲಿ ಅಳವಡಿಸಲಾಗಿದೆ.
- "ಗುಡ್ ಟೈಮ್ಸ್ " ಗೀತೆಯು SSX 3ಯ ಧ್ವನಿಪಥದಲ್ಲಿದೆ.
- "ಸ್ಟೇ ಇನ್ ಷಾಡೋ " ಗೀತೆಯು Burnout 3: Takedownಯ ಧ್ವನಿಪಥದಲ್ಲಿದೆ.
- DS ಆವೃತ್ತಿಯೂ ಸೇರಿದಂತೆ ರಾಕ್ ರೆವೊಲ್ಯೂಷನ್‌ನಲ್ಲಿ "ಪ್ಯಾರಾಲೈಜರ್ " ಗೀತೆಯು ನುಡಿಸಬಲ್ಲ ಗೀತೆಯಾಗಿದೆ.
- DSನ ಭಾಗವಾಗಿ ಬರಲಿರುವ Guitar Hero: Modern Hitsನಲ್ಲಿ ಕೂಡಾ "ಪ್ಯಾರಾಲೈಜರ್ "ಅನ್ನು ಅಳವಡಿಸಲಾಗಿದೆ.[೭]
- ಬ್ಯಾಂಡ್ ಹೀರೋದಲ್ಲಿ "ಪ್ಯಾರಾಲೈಜರ್ " ಒಂದು ನುಡಿಸಬಲ್ಲ ಗೀತೆಯಾಗಿದೆ.
- ರಾಕ್ ಬ್ಯಾಂಡ್ ನೆಟ್‌ವರ್ಕ್ ಸಂಸ್ಥೆಯ ಮೂಲಕ "ಪ್ಯಾರಾಲೈಜರ್ " ಗೀತೆಯು ರಾಕ್ ವಾದ್ಯವೃಂದದಲ್ಲಿ ಒಂದು ನುಡಿಸಬಲ್ಲ ಗೀತೆಯಾಗಿದೆ.
ಚಲನಚಿತ್ರ ಮತ್ತು ಕಿರುತೆರೆ
[ಬದಲಾಯಿಸಿ]- ಈ ವಾದ್ಯವೃಂದವು WWEಯ ಜನಪ್ರಿಯತಾರೆ ಸೂಪರ್‌ಸ್ಟಾರ್ ಕೇನ್‌ರಿಗಾಗಿ "ಸ್ಲೋ ಕೆಮಿಕಲ್ " ಎಂಬ ಗೀತೆಯನ್ನು 2002ರಲ್ಲಿ ಮುದ್ರಿಸಿತು. ವಿಶ್ವ ಕುಸ್ತಿಪಂದ್ಯ ಮನರಂಜನೆ/ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯ ಹಲವು ಪ್ರದರ್ಶನಗಳಲ್ಲಿ ಹಾಗೂ DVDಗಳಲ್ಲಿ "ಒನ್ ಥಿಂಗ್ " ಗೀತೆಯನ್ನು ಹಲವು ಬಾರಿ ಬಳಸಿಕೊಳ್ಳಲಾಗಿದೆ.
- ಮಾರ್ವೆಲ್ ಫಿಲ್ಮ್‌ಸ್ ಸಂಸ್ಥೆಯ/ಕೌತುಕಪೂರ್ಣ ಚಲನಚಿತ್ರಗಳ ಧ್ವನಿಪಥಗಳಲ್ಲಿ ವಾದ್ಯವೃಂದದ ಹಲವು ಗೀತೆಗಳನ್ನು ಅಳವಡಿಸಲಾಗಿದೆ. "ಸ್ಲೋ ಕೆಮಿಕಲ್ " ಗೀತೆಯನ್ನು ದ ಪನಿಷರ್ ಚಿತ್ರ ದ ಧ್ವನಿಪಥದಲ್ಲಿ ಅಳವಡಿಸಲಾಗಿದ್ದರೆ, "ಸ್ಯಾಡ್ ಎಕ್ಸ್‌ಚೇಂಜ್ " ಗೀತೆಯನ್ನು 2003ರ ಡೇರ್ ಡೆವಿಲ್ ಚಿತ್ರ ದ ಧ್ವನಿಪಥದಲ್ಲಿ ಹಾಗೂ "ಥೌಸೆಂಡ್ ಮೈಲ್ ವಿಷ್ " ಗೀತೆಯ ಎಲೆಕ್ಟ್ರಾ 2005ರ ಚಲನಚಿತ್ರ ಎಲೆಕ್ಟ್ರಾ ದ ಕೃತಜ್ಞತೆಗಳ ಹಿನ್ನೆಲೆಯಲ್ಲಿ ಎಲೆಕ್ಟ್ರಾ ಮಿಕ್ಸ್ ಆವೃತ್ತಿಯನ್ನು ಅಳವಡಿಸಲಾಗಿತ್ತು.
- "ಫಸ್ಟ್ ಟೈಮ್ ", "ಸ್ಟೇ ಅಂಡ್ ಡ್ರೌನ್ " ಮತ್ತು "ಡ್ರಾಗ್ ಯೂ ಡೌನ್ " ಇವೆಲ್ಲಾ ಗೀತೆಗಳನ್ನು ಡ್ರಾಗನ್ ಬಾಲ್ Z ಚಲನಚಿತ್ರಗಳಾದ ಲಾರ್ಡ್ ಸ್ಲಗ್ ಮತ್ತು ಕೂಲರ್ಸ್ ರಿವೆಂಜ್ ಗಳಲ್ಲಿ ಅಳವಡಿಸಲಾಗಿದೆ.
- "ಒನ್ ಥಿಂಗ್ " ಗೀತೆಯನ್ನು ಸ್ಕ್ರಬ್ಸ್ ನ "ಮೈ ಫಾಲ್ಟ್" ಎಂಬ ಪ್ರಕರಣದಲ್ಲಿ ಹಾಗೂ ಸ್ಮಾಲ್‌ವಿಲ್ಲೆ ಮತ್ತು ಥರ್ಡ್ ವಾಚ್ ಗಳ ಪ್ರಕರಣಗಳಲ್ಲಿಯೂ ಬಳಸಿಕೊಳ್ಳಲಾಗಿತ್ತು. ಅಲ್ಪ ಕಾಲವಷ್ಟೇ ಚಾಲ್ತಿಯಲ್ಲಿದ್ದ TV ಸರಣಿ ಲೈಫ್ ಆಸ್ ವಿ ನೋ ಇಟ್ ನ ಆರನೇ ಪ್ರಕರಣ "ನ್ಯಾಚುರಲ್ ಡಿಸಾಸ್ಟರ್"ನ ಕೊನೆಯಲ್ಲಿ "ಒನ್ ಥಿಂಗ್ " ಗೀತೆಯನ್ನು ಅಳವಡಿಸಲಾಗಿತ್ತು.
- "ಡ್ರಾಗ್ ಯೂ ಡೌನ್ " ಗೀತೆಯನ್ನು ಜಾನ್ ಡೋರ ದೂರದರ್ಶನ ಕಾರ್ಯಕ್ರಮ ಸರಣಿಯ ಪ್ರಕರಣವೊಂದರಲ್ಲಿ ಅಳವಡಿಸಲಾಗಿತ್ತು.
- "ಗಾಸಿಪ್ ಗರ್ಲ್" ಕಾರ್ಯಕ್ರಮದ ಮೊದಲ ಪ್ರಸಾರಾವಧಿಯ "ಆಲ್ ಎಬೌಟ್ ಮೈ ಬ್ರದರ್ " ಎಂಬ 16ನೆಯ ಪ್ರಕರಣದಲ್ಲಿ "ಪ್ಯಾರಾಲೈಜರ್ " ಗೀತೆಯನ್ನು ಅಳವಡಿಸಲಾಗಿತ್ತು.
- ಕಪ್ಪಾ ಟಾವ್ ಚಿತ್ರದ ಪೂರ್ವ ಪ್ರದರ್ಶನದ ಔತಣಕೂಟದಲ್ಲಿ ಗ್ರೀಕ್‌ನ ಪ್ರಾಯೋಗಿಕ ಪ್ರಕರಣದಲ್ಲಿ ಹಿನ್ನೆಲೆಯಲ್ಲಿ "ಪ್ಯಾರಾಲೈಜರ್ " ಗೀತೆಯನ್ನು ಅಳವಡಿಸಲಾಗಿತ್ತು.
- "ಸಫೋಕೇಟ್ " ಗೀತೆಯು "ಸ್ಕ್ರೀಮ್ 3" ಚಿತ್ರದ ಧ್ವನಿಪಥದಲ್ಲಿ ಕಾಣಿಸಿಕೊಂಡಿದೆ.
- "ಸ್ಟೇ ಇನ್ ಷಾಡೋ " ಗೀತೆಯು ಸ್ಟ್ಯಾಂಡ್ ಇನ್ ಷಾಡೋ ಎಂದು ತಪ್ಪಾಗಿ ಹೆಸರಿಸಲಾಗಿದ್ದ ದ ಟೆಕ್ಸಾಸ್ ಚೈನ್‌ಸಾ ಮ್ಯಾಸೇಕರ್/ಸಾಕ್ರೇ ಚಿತ್ರದ 2003ರ ರೀಮೇಕ್ ಆವೃತ್ತಿಯ ಧ್ವನಿಪಥದಲ್ಲಿ ಕಾಣಿಸಿಕೊಂಡಿತ್ತು. ಮಾತ್ರವಲ್ಲದೇ ಇದನ್ನು 16ನೆಯ ಗೀತೆಯೆಂದು ಸೂಚಿಸಲಾಗಿದ್ದರೂ ಇದು ವಾಸ್ತವವಾಗಿ ಸಂಗೀತ ಸಂಪುಟದಲ್ಲಿನ 15ನೆಯ ಗೀತೆಯಾಗಿದೆ.
- CSI: ಮಿಯಾಮಿ ಕಾರ್ಯಕ್ರಮದ ಎರಡನೇ ಪ್ರಸಾರಾವಧಿಯ "ಇನ್‌ವೇಷನ್ " ಎಂಬ ಶೀರ್ಷಿಕೆಯ ಕಾರ್ಯಕ್ರಮದ 16ನೆಯ ಪ್ರಕರಣದಲ್ಲಿ ಆರೋಪಿಯನ್ನು ತನಿಖಾ ಪ್ರಶ್ನೋತ್ತರಗಳಿಗೆ ಒಳಪಡಿಸುತ್ತಿರುವ ಸನ್ನಿವೇಶದಲ್ಲಿ ಕಡಲಲೆ ಹಲಗೆ/ತೇಲು ತೆಪ್ಪದ ಮಾರಾಟದಂಗಡಿಯ ಹಿನ್ನೆಲೆಯಲ್ಲಿ "ಕಾಂಪ್ಲಿಕೇಟೆಡ್ ಕ್ವಶ್ಚನ್ಸ್ " ಗೀತೆಯನ್ನು ವಿಶಿಷ್ಟವಾಗಿ ನುಡಿಸಲಾಗಿತ್ತು.
- "ಲಿವಿಂಗ್ ಇನ್ ಎ ಡ್ರೀಮ್ " 2011ರ WWEಯ ರಾಯಲ್ ರಂಬಲ್ ಹಣಾಹಣಿಯ ಅಧಿಕೃತ ವಿಷಯಸೂಚಿ ಗೀತೆ ಎಂದು ಹೆಸರಿಸಲಾಗಿತ್ತು.
ಸದಸ್ಯರು
[ಬದಲಾಯಿಸಿ]- ಸ್ಕಾಟ್ ಆಂಡರ್‌ಸನ್ - ಪ್ರಧಾನ ಗಾಯಕ
- ಜೇಮ್ಸ್ ಬ್ಲ್ಯಾಕ್ - ಗಿಟಾರ್ ವಾದಕ
- ರಿಕ್ ಜ್ಯಾಕೆಟ್ - ಗಿಟಾರ್ ವಾದಕ
- ಸೀನ್ ಆಂಡರ್‌ಸನ್ - ಮಂದ್ರಸ್ಥಾಯಿಯ ಗಾಯಕ
- ರಿಚ್ ಬೆಡ್ಡೋ - ಚರ್ಮವಾದ್ಯಗಾರ, ತಾಳವಾದ್ಯಗಾರ
ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]- ಲೆಟರ್ಸ್ ಫ್ರಮ್ ಚಟ್ನಿ (1995ರಲ್ಲಿ ರೈನ್‌ಬೋ ಬಟ್ ಮಂಕೀಸ್ ಎಂಬ ಹೆಸರಿನಿಂದ)
- ಟಿಪ್ (1997, ಹಾಗೂ 1998ರಲ್ಲಿ ವೈಂಡ್-ಅಪ್‌ನಿಂದ ಮರು-ಬಿಡುಗಡೆ)
- ದ ಗ್ರೇಯೆಸ್ಟ್ ಆಫ್ ಬ್ಲ್ಯೂ ಸ್ಕೈಸ್ (2000)
- ಫಿಂಗರ್ ಎಲೆವೆನ್ (2003)
- ದೆಮ್ vs. ಯು vs. ಮೀ (2007)
- ಲೈಫ್ ಟರ್ನ್ಸ್ ಎಲೆಕ್ಟ್ರಿಕ್ (2010)
ಇವನ್ನೂ ಗಮನಿಸಿ
[ಬದಲಾಯಿಸಿ]- ಕೆನಡಿಯನ್ ರಾಕ್ ಸಂಗೀತ
- ಕೆನಡಾದ ಸಂಗೀತ
ಉಲ್ಲೇಖಗಳು
[ಬದಲಾಯಿಸಿ]- ↑ Sharpe-Young, Garry. "MusicMight Biography". Archived from the original on 2011-08-22. Retrieved 2008-10-05.
- ↑ ಫಿಂಗರ್ ಎಲೆವೆನ್ ಜೂನೋ ಪ್ರಶಸ್ತಿಯನ್ನು ಗೆದ್ದಿತು http://junoawards.ca/08_nominees_cat.php?id=2327[ಶಾಶ್ವತವಾಗಿ ಮಡಿದ ಕೊಂಡಿ]
- ↑ "Heather Mills, Rob Schneider, Joey Fatone, Kristian Alfonso, Amanda Beard, Christian Siriano, Shawne Merriman, Ken Paves, Kelly Carlson, and George Wayne to Judge 2008 Miss USA Pageant On NBC April 11th/Finger Eleven Will Perform Their Hit Song "Paralyzer" During the Live Telecast from Las Vegas" (Press release). Miss Universe Organization. 2008-03-31. Archived from the original on 2008-08-07. Retrieved 2011-04-28.
- ↑ "Finger Eleven Hit The Studio For New Album |". Rawkpit.com. 2010-01-27. Retrieved 2011-03-02.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Official Site | New Album "Life Turns Electric"". Finger Eleven. Retrieved 2011-03-02.
- ↑ "reactive pictures |". reactivpictures.com. 2011-04-22. Retrieved 2011-04-22.
- ↑ Kollar, Phillip (2008-12-26). "ESRB Leaks Guitar Hero Modern Hits for DS: News from 1UP.com". 1UP.com. Archived from the original on 2009-02-26. Retrieved 2008-12-26.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ಜಾಲತಾಣ
- #1 ಅಭಿಮಾನಿಗಳ ಜಾಲತಾಣ Archived 2011-07-07 ವೇಬ್ಯಾಕ್ ಮೆಷಿನ್ ನಲ್ಲಿ.
- ಫೋರಮ್ ಜಾಲತಾಣ/ಸಂದೇಶ ಮಂಡಳಿ ಜಾಲತಾಣ Archived 2011-07-11 ವೇಬ್ಯಾಕ್ ಮೆಷಿನ್ ನಲ್ಲಿ.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- Articles with invalid date parameter in template
- Articles needing additional references from April 2010
- All articles needing additional references
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hCards
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 1990ರ ದಶಕದ ಸಂಗೀತ ತಂಡಗಳು
- 2000ರ ದಶಕದ ಸಂಗೀತ ತಂಡಗಳು
- ಜೂನೋ ಪ್ರಶಸ್ತಿ ವಿಜೇತರುಗಳು
- 1989ರಲ್ಲಿ ಸ್ಥಾಪನೆಯಾದ ಸಂಗೀತದ ತಂಡಗಳು
- ಸಂಗೀತಮಯ ಪಂಚಮೇಳತಂಡಗಳು
- ಕೆನಡಾದ ಪೋಸ್ಟ್-ಗ್ರಂಜೆ ತಂಡಗಳು
- ಪಾಶ್ಚಾತ್ಯ ಸಂಗೀತಗಾರರು