ಫಾಸ್ಟ್‌ಟ್ರ್ಯಾಕ್
This article is outdated.(January 2008) |
ಫಾಸ್ಟ್‌ಟ್ರ್ಯಾಕ್ ಒಂದು ಪೀರ್-ಟು-ಪೀರ್ (P2P) ಪ್ರೋಟೊಕಾಲ್(ವಿಧಿ-ನಿರ್ಧಾರಕ-ವ್ಯವಸ್ಥೆ) ಆಗಿದೆ. ಇದನ್ನು ಕಜಾ, ಗ್ರಾಕ್‌ಸ್ಟರ್, ಐಮೆಶ್ ಮತ್ತು ಮೋರ್ಫೆಯಸ್ ಫೈಲ್ ಹಂಚಿಕೆ ಪ್ರೋಗ್ರಾಂಗಳು ಬಳಸುತ್ತಿದ್ದವು. ಫಾಸ್ಟ್‌ಟ್ರ್ಯಾಕ್ 2003ರಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಫೈಲ್ ಹಂಚಿಕೆ ಜಾಲವಾಗಿದೆ. ಅಲ್ಲದೇ ಇದನ್ನು ಮುಖ್ಯವಾಗಿ ಸಂಗೀತ mp3 ಫೈಲ್‌ಗಳನ್ನು ಹಂಚಿಕೊಳ್ಳಲು ಬಳಸಲಾಗುತ್ತಿತ್ತು. ಈ ಜಾಲವು 2003ರಲ್ಲಿ ಸರಿಸುಮಾರು 2.4 ದಶಲಕ್ಷ ಮಂದಿ ಸಮಕಾಲೀನ ಬಳಕೆದಾರರನ್ನು ಹೊಂದಿತ್ತು. ಬಳಕೆದಾರರ ಈ ಒಟ್ಟು ಸಂಖ್ಯೆಯು ನ್ಯಾಪ್‌ಸ್ಟರ್ ಅದರ ಅತ್ಯಂತ ಯಶಸ್ಸಿನ ಕಾಲದಲ್ಲಿ ಹೊಂದಿದ್ದ ಬಳಕೆದಾರರ ಸಂಖ್ಯೆಗಿಂತಲೂ ಹೆಚ್ಚಾಗಿತ್ತು ಎಂದು ಅಂದಾಜಿಸಲಾಗಿದೆ.
ಇತಿಹಾಸ
[ಬದಲಾಯಿಸಿ]ಫಾಸ್ಟ್‌ಟ್ರ್ಯಾಕ್ ಪ್ರೋಟೊಕಾಲ್ ಮತ್ತು ಕಜಾ ಇವೆರಡನ್ನೂ ಜಾನ್ ಟ್ಯಾಲಿನ್ ಮುಖಂಡತ್ವದ ಬ್ಲೂಮೂನ್ ಇಂಟರ್ಯಾಕ್ಟಿವ್‌ನ ಎಸ್ಟೋನಿಯನ್ ಪ್ರೋಗ್ರಾಮರ್‌ಗಳು ರಚಿಸಿ,ಅಭಿವೃದ್ಧಿಪಡಿಸಿದರು, ಅದೇ ತಂಡವು ನಂತರ ಸ್ಕೈಪ್ಅನ್ನೂ ರಚಿಸಿತು. ಇದನ್ನು ಸ್ವೀಡನ್‌ನ ನಿಕ್ಲಾಸ್ ಜೆನ್‌ಸ್ಟ್ರಾಮ್ ಮತ್ತು ಡೆನ್ಮಾರ್ಕ್‌ನ ಜಾನುಸ್ ಫ್ರಿಸ್‌ಗೆ ಮಾರಾಟ ಮಾಡಿದ ನಂತರ, 2001ರ ಮಾರ್ಚ್‌ನಲ್ಲಿ ಇದನ್ನು ಅವರ ಡಚ್ ಕಂಪನಿ ಕನ್ಸ್ಯೂಮರ್ ಎಂಪವರ್ಮೆಂಟ್‌ಗೆ ಪರಿಚಯಿಸಲಾಯಿತು. ಇದು P2P ಜಾಲಗಳ ಮೊದಲ ಪೀಳಿಗೆಯ ಕೊನೆಯಲ್ಲಿ ಕಂಡುಬಂದಿತು, ಆ ವರ್ಷದ ಜುಲೈನಲ್ಲಿ ನ್ಯಾಪ್‌ಸ್ಟರ್ ಮುಚ್ಚಲ್ಪಟ್ಟಿತು.
ಒಟ್ಟು ಮೂರು ಫಾಸ್ಟ್‌ಟ್ರ್ಯಾಕ್-ಆಧಾರಿತ ಜಾಲಗಳಿವೆ. ಅಲ್ಲದೇ ಅವು ಪ್ರೋಟೊಕಾಲ್‌ನ ಪರಸ್ಪರ ವಿರುದ್ಧವಾದ ಆವೃತ್ತಿಗಳನ್ನು ಬಳಸುತ್ತವೆ. ಈ ಪ್ರತಿಯೊಂದರ ಹೆಚ್ಚು ಪ್ರಸಿದ್ಧ ಗ್ರಾಹಕರೆಂದರೆ ಕಜಾ (ಮತ್ತು ಅದರ ಮಾರ್ಪಾಡುಗಳು, ಗ್ರಾಕ್‍ಸ್ಟರ್ ಮತ್ತು ಐಮೆಶ್.
ಕಜಾ ಮತ್ತು ಶರ್ಮಾನ್ ನೆಟ್ವರ್ಕ್ಸ್ ನಡುವಿನ ಹಲವಾರು ದಾವೆಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ಕಜಾವನ್ನು ಗಮನಿಸಿ.
ತಂತ್ರಜ್ಞಾನ
[ಬದಲಾಯಿಸಿ]ವಿಸ್ತೃತಗೊಳ್ಳುವಿಕೆಯನ್ನು ಸುಧಾರಿಸಲು ಫಾಸ್ಟ್‌ಟ್ರ್ಯಾಕ್ ಸೂಪರ್‌ನೋಡ್‌ಗಳನ್ನು ಬಳಸುತ್ತದೆ.
ಹಲವಾರು ಮೂಲಗಳಿಂದ ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಡುವುದಕ್ಕಾಗಿ, ಫಾಸ್ಟ್‌ಟ್ರ್ಯಾಕ್ UUಹ್ಯಾಶ್ ಹ್ಯಾಶಿಂಗ್ ಆಲ್ಗರಿದಮ್(ಗಣನೆ)ಅನ್ನು ಬಳಸುತ್ತದೆ. UUಹ್ಯಾಶ್ ಸಣ್ಣ ಕಂಪ್ಯೂಟರ್‌ಗಳಲ್ಲೂ ಅತಿ ಕಡಿಮೆ ಸಮಯದಲ್ಲಿ ಅತ್ಯಂತ ದೊಡ್ಡ ಫೈಲ್‌ಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಡುತ್ತದೆ. ಆದರೆ ಇದು ಫೈಲ್‌ಗಳನ್ನು ಪರಿಶೀಲಿಸದೆ ಹೆಚ್ಚಿನ ತಪ್ಪಾಗುವಂತೆ ಮಾಡುತ್ತದೆ. ಇದನ್ನು ಹೆಚ್ಚಿನವರು ಮತ್ತು RIAA ಈ ಜಾಲದಲ್ಲಿ ದೋಷಯುಕ್ತ ಮತ್ತು ನಕಲಿ ಫೈಲ್‌ಗಳನ್ನು ಹರಡಲು ಬಳಸಿಕೊಂಡರು.[ಸೂಕ್ತ ಉಲ್ಲೇಖನ ಬೇಕು]
ಗ್ರಾಹಕರು
[ಬದಲಾಯಿಸಿ]ಫಾಸ್ಟ್‌ಟ್ರ್ಯಾಕ್ ಪ್ರೋಟೊಕಾಲ್ ಗೂಢಲಿಪೀಕರಣವನ್ನು ಬಳಸುತ್ತದೆ ಹಾಗೂ ಇದಕ್ಕೆ ಅದರ ಸೃಷ್ಟಿಕರ್ತರು ಸಾಕ್ಷ್ಯಗಳನ್ನು ಒದಗಿಸಿಲ್ಲ. ಇದರ ಮೊದಲ ಬಳಕೆದಾರರೆಲ್ಲರೂ ಸೀಮಿತ-ಲಭ್ಯ ಮೂಲದ ತಂತ್ರಾಂಶಗಳಾಗಿದ್ದವು. ಆದರೆ ಗೂಢಲಿಪೀಕರಣ ಗಣನೆಯನ್ನು ಆರಂಭಿಸುವ ದತ್ತಾಂಶವನ್ನು ಸ್ಪಷ್ಟವಾಗಿ ಕಳುಹಿಸಲಾಗುತ್ತದೆ ಮತ್ತು ಯಾವುದೇ ಪಬ್ಲಿಕ್ ಕೀ ಗೂಢಲಿಪೀಕರಣವನ್ನು ಬಳಸಲಾಗುವುದಿಲ್ಲ. ಆದ್ದರಿಂದ ತುಲನಾತ್ಮಕವಾಗಿ ರಿವರ್ಸ್ ಇಂಜಿನಿಯರಿಂಗ್ ಹೆಚ್ಚು ಸುಲಭವಾಯಿತು. 2003ರಲ್ಲಿ, ಮುಕ್ತ ಮೂಲದ ಪ್ರೋಗ್ರ್ಯಾಮರ್‌ಗಳು ಪ್ರೋಟೊಕಾಲ್‌ಅನ್ನು ರಿವರ್ಸ್-ಇಂಜಿನಿಯರಿಂಗ್ ಮಾಡುವುದರಲ್ಲಿ ಯಶಸ್ವಿಯಾಗಿ, ಗ್ರಾಹಕ-ಸೂಪರ್‌ಮೋಡ್ ಸಂವಹನ ಸೌಕರ್ಯವನ್ನು ಒದಗಿಸಿದರು. ಆದರೆ ಸೂಪರ್‌ಮೋಡ್-ಸೂಪರ್‌ಮೋಡ್ ಸಂವಹನ ಪ್ರೋಟೊಕಾಲ್ ಬಗ್ಗೆ ತಿಳಿದಿಲ್ಲ.
ಈ ಕೆಳಗಿನ ಪ್ರೋಗ್ರಾಂಗಳು ಫಾಸ್ಟ್‌ಟ್ರ್ಯಾಕ್ ಗ್ರಾಹಕಗಳಾಗಿವೆ:
- ಕಜಾ ಮತ್ತು ಮಾರ್ಪಾಡುಗಳು
- Kಕೀಸಿ (ಇದಕ್ಕೆ gIFT-ಫಾಸ್ಟ್‌ಟ್ರ್ಯಾಕ್ ಪ್ಲಗಿನ್ ಆಗಿರಬೇಕಾಗಿರುತ್ತದೆ)
- ಗ್ರಾಕ್‌ಸ್ಟರ್
- ಐಮೆಶ್
- ಮೋರ್ಫೆಯಸ್ , 2002ರವರೆಗೆ
- ಅಪೋಲ್ಲನ್ - KDE-ಆಧಾರಿತ
- giFT-ಫಾಸ್ಟ್‌ಟ್ರ್ಯಾಕ್ [೧] – giFT ಪ್ಲಗಿನ್
- MLಡಾಂಕಿ - ಮುಕ್ತ ಬಹು-ಆಧಾರದ ಬಹು-ಜಾಲದ ಫೈಲ್ ಹಂಚಿಕೆಯ ಗ್ರಾಹಕ
ಇವನ್ನೂ ಗಮನಿಸಿ
[ಬದಲಾಯಿಸಿ]- ಕ್ಯಾಡ್ ಜಾಲ
- ಓವರ್‌ನೆಟ್
- ಓಪನ್ ಮ್ಯೂಸಿಕ್ ಮಾಡೆಲ್
- ಫೈಲ್ ಹಂಚಿಕೆ ಅನ್ವಯಗಳ ಹೋಲಿಕೆ
ಹೊರಗಿನ ಕೊಂಡಿಗಳು
[ಬದಲಾಯಿಸಿ]- giFT-ಫಾಸ್ಟ್‌ಟ್ರ್ಯಾಕ್ ಹೋಮ್ ಪೇಜ್
- ಡಾಕ್ಯುಮೆಂಟೇಶನ್ ಆಫ್ ದಿ ನೋನ್ ಪಾರ್ಟ್ಸ್ ಆಫ್ ದಿ ಫಾಸ್ಟ್‌ಟ್ರ್ಯಾಕ್ ಪ್ರೋಟೊಕಾಲ್ - giFT-ಫಾಸ್ಟ್‌ಟ್ರ್ಯಾಕ್
- ಬೋರ್ಡ್ವಾಚ್ ಇಂಟರ್ವ್ಯೂ ವಿದ್ ನಿಕ್ಲಾಸ್ ಜೆನ್ಸ್ಟ್ರಮ್ Archived 2004-08-03 ವೇಬ್ಯಾಕ್ ಮೆಷಿನ್ ನಲ್ಲಿ., ಜುಲೈ 17, 2003
- FTವಾಲ್ Archived 2010-10-21 ವೇಬ್ಯಾಕ್ ಮೆಷಿನ್ ನಲ್ಲಿ. - ಫಾಸ್ಟ್-ಟ್ರ್ಯಾಕ್ ಪ್ರೋಟೊಕಾಲ್‌ಅನ್ನು ನಿರ್ಬಂಧಿಸಲು ಫೈರ್ವಾಲ್ ಮಾಡುವ ಒಂದು ವಿಧಾನ.
- ಅಡ್ವಾನ್ಸ್ಡ್ ಪೀರ್-ಬೇಸ್ಡ್ ಟೆಕ್ನಾಲಜಿ ಬ್ಯುಸಿನೆಸ್ ಮಾಡೆಲ್ಸ್ Archived 2004-07-07 ವೇಬ್ಯಾಕ್ ಮೆಷಿನ್ ನಲ್ಲಿ. . ಘೋಸೆಮಜುಮ್ದರ್, ಶುಮಾನ್. MIT ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್, 2002.
- ಮ್ಯೂಸಿಕ್ ಡೌನ್ಲೋಡ್ಸ್: ಪೈರೇಟ್ಸ್ ಆರ್ ಕಸ್ಟಮರ್ಸ್? Archived 2006-06-30 ವೇಬ್ಯಾಕ್ ಮೆಷಿನ್ ನಲ್ಲಿ. . ಸಿಲ್ವರ್ಥೋರ್ನ್, ಸಿಯಾನ್. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ವರ್ಕಿಂಗ್ ನಾಲೆಡ್ಜ್, 2004.
- ಹೌ ಓವರ್ಪೀರ್ ವಾಸ್ ಏಬಲ್ ಟು ಕರಪ್ಟ್ ಡೇಟಾ ಆನ್ ದಿ ಫಾಸ್ಟ್‌ಟ್ರ್ಯಾಕ್ ನೆಟ್ವರ್ಕ್ Archived 2007-09-26 ವೇಬ್ಯಾಕ್ ಮೆಷಿನ್ ನಲ್ಲಿ.
- Articles with hatnote templates targeting a nonexistent page
- Wikipedia articles in need of updating from January 2008
- Articles with invalid date parameter in template
- All Wikipedia articles in need of updating
- Articles with unsourced statements from September 2010
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಫೈಲ್ ಹಂಚಿಕೆಯ ಜಾಲಗಳು