ಫ಼ಾಲೂದಾ
ಗೋಚರ
(ಫಾಲೂದಾ ಇಂದ ಪುನರ್ನಿರ್ದೇಶಿತ)
ಫ಼ಾಲೂದಾ ಭಾರತೀಯ ಉಪಖಂಡದಲ್ಲಿ ಜನಪ್ರಿಯವಿರುವ ಒಂದು ತಂಪು ಪಾನೀಯ. ಸಾಂಪ್ರದಾಯಿಕವಾಗಿ ಅದನ್ನು ಹಾಲು ಅಥವಾ ನೀರಿನ ಜೊತೆಗೆ ಗುಲಾಬಿ ಸಿರಪ್, ಶ್ಯಾವಿಗೆ, ಇಸಬಗೋಲು ಅಥವಾ ಬೇಸಿಲ್ (ಸಬ್ಜಾ) ಬೀಜಗಳು, ಮರಗೆಣಸು ಮತ್ತು ಜೆಲಟಿನ್‍ನ ಚೂರುಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಫ಼ಾಲೂದಾ ಫ಼ಾಲೂದೆಯೆಂದು ಪರಿಚಿತವಿರುವ ಒಂದು ಪರ್ಶಿಯನ್ ಡಿಜ಼ರ್ಟ್‍ನ ಒಂದು ಸ್ವರೂಪ ಮತ್ತು ಮುಘಲ್ ಅವಧಿಯಲ್ಲಿ ಭಾರತಕ್ಕೆ ತರಲಾಯಿತೆಂದು ನಂಬಲಾಗಿದೆ. ಇದಕ್ಕೆ ಬಳಸುವ ಶ್ಯಾವಿಗೆಯನ್ನು ಗೋಧಿಯಿಂದ ತಯಾರಿಸಲಾಗುತ್ತದೆ.