ಫ಼ೆಟಾ ಚೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ಼ೆಟಾ ಚೀಸ್ ಗ್ರೀಸ್‍ನಲ್ಲಿ ಕುರಿಯ ಹಾಲು, ಅಥವಾ ಕುರಿ ಮತ್ತು ಆಡಿನ ಹಾಲಿನ ಮಿಶ್ರಣದಿಂದ ತಯಾರಿಸಲಾದ, ಉಪ್ಪುನೀರಿನಲ್ಲಿ ಪಕ್ವಗೊಳಿಸಲಾದ ಒಂದು ಕರ್ಡ್ ಬಿಳಿ ಗಿಣ್ಣು. ಅದು ಸಾಮಾನ್ಯವಾಗಿ ತುಂಡುಗಳಲ್ಲಿ ಉತ್ಪಾದಿಸಲಾದ ಒಂದು ಪುಡಿಪುಡಿಯಾಗುವ ಮಾಗಿದ ಗಿಣ್ಣು ಮತ್ತು ಕೊಂಚ ಕಣಕಣವಾಗಿರುವ ರಚನೆಯನ್ನು ಹೊಂದಿರುತ್ತದೆ. ಫ಼ೆಟಾ ಚೀಸ್ಅನ್ನು ಒಂದು ಮೇಜು ಗಿಣ್ಣಾಗಿ, ಜೊತೆಗೆ ಸ್ಯಾಲಡ್‍ಗಳು ಮತ್ತು ಪೇಸ್ಟ್ರಿಗಳಲ್ಲಿ ಬಳಸಲಾಗುತ್ತದೆ.