ವಿಷಯಕ್ಕೆ ಹೋಗು

ಫಲಕ್ನುಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫಲಕ್ನುಮ ಹೈದರಾಬಾದ್ ತೆಲಂಗಾಣ ಭಾರತದಲ್ಲಿ ಇರುವ ಒಂದು ಅರಮನೆ . ಇದು ಪೈಗಃ ಹೈದರಾಬಾದ್ ರಾಜ್ಯಕ್ಕೆ ಸೇರಿತ್ತು, ಮತ್ತು ನಂತರ ಹೈದರಾಬಾದ್ ನಿಜಾಮರ ಸ್ವತ್ತಾಯಿತು. [] ಇದು ಒಂದು 32-ಎಕರೆ (13 ಹೆ) ಪ್ರದೇಶದಲ್ಲಿ ಫಲಕ್ನುಮದಲ್ಲಿ, ಚಾರ್ಮಿನಾರ್ ಇಂದ 5 ಕಿ.ಮೀ. ದೂರದಲ್ಲಿ ಇದೆ. ಇದು, ಹೈದರಾಬಾದ್ ಪ್ರಧಾನಿಯಾಗಿದ್ದ ಮತ್ತು ಆರನೇ ನಿಜಾಮ್ ಮೀರ್ ಮಹಬೂಬ್ ಅಲಿ ಖಾನ್ ನವಾಬ್ ಬಹದ್ದೂರ್ ಅವರ ಚಿಕ್ಕಪ್ಪ ಮತ್ತು ಭಾವ ಎನಿಸಿಕೊಂಡ ನವಾಬ್ ವಿಕರ್ ಉಲ್ ಉಮ್ರಾ, ನಿರ್ಮಿಸಿದರು. [] ಫಾಲಕ್-ನುಮಾ ಅಥವಾ ಉರ್ದುವಿನಲ್ಲಿ "ಆಕಾಶದ ಕನ್ನಡಿ" ಅಥವಾ "ಆಕಾಶದಂತೆ" ಎಂದರ್ಥ.

ವಿನ್ಯಾಸ

[ಬದಲಾಯಿಸಿ]

ಒಬ್ಬ ಇಂಗ್ಲಿಷ್ ವಾಸ್ತುಶಿಲ್ಪಿಯು ಈ ಅರಮನೆಯ ವಿನ್ಯಾಸ ಮಾಡಿದ್ದರೆ. ಇದರ ನಿರ್ಮಾಣಕ್ಕೆ ಅಡಿಪಾಯ ಸರ್ ವಿಕಾರ್ 3 ಮಾರ್ಚ್ 1884 ಹಾಕಿದರು. ಅವರು ಸಿಕಂದರ್ ಜಾಹ್ ಬಹದ್ದೂರ್, lllನೆ ನಿಜಾಮ ಹೈದರಾಬಾದ್ ಇವರ ಮೊಮ್ಮಗ . ಇದರ ನಿರ್ಮಾಣ ಪೂರ್ಣಗೊಳಿಸಲು ಮತ್ತು ಅರಮನೆಯ ಒಳಗಿನ ವಿನ್ಯಾಸಗಳನ್ನು ಒದಗಿಸಲು ಒಂಬತ್ತು ವರ್ಷ ತೆಗೆದುಕೊಂಡಿತು. ಸರ್ ವಿಕಾರ್ ಡಿಸೆಂಬರ್ 1890 ರಲ್ಲಿ ಫಲಕ್ನುಮ ಅರಮನೆಯ ಗೋಲ್ ಬಾಂಗ್ಲಾ ಮತ್ತು ಜೇನನ ಮಹೇಲ್ಗೆ ಸ್ಥಳಾಂತರಗೊಂಡರು ಮತ್ತು ನಿಕಟವಾಗಿ ಮರ್ದನ ಭಾಗದ ಕೆಲಸದ ಮೇಲ್ವಿಚಾರಣೆ ನೋಡಿಲೊಳ್ಳಲು. ಇದು ಸಂಪೂರ್ಣವಾಗಿ ಇಟಾಲಿಯನ್ ಅಮೃತಶಿಲೆ ಇಂದ ಮಾಡಲಾಗಿದ್ದು 93,971 ಚದರ ಮೀಟರ್ ಪ್ರದೇಶ ಆವರಿಸಿರುತ್ತದೆ.[]


ಅರಮನೆ ಚೇಳಿನ ಆಕಾರದಲ್ಲಿ ನಿರ್ಮಿಸಲಾಯಿತು ಮತ್ತು ಅದರ ಎರಡು ಕೊಂಡಿಗಳನ್ನು ಹೋಲುವಂತೆ ಉತ್ತರ ದಿಕ್ಕಿಗೆ ಎರಡು ರೆಕ್ಕೆಗಳು ವ್ಯಾಪಿಸಿದೆ. ಮಧ್ಯ ಭಾಗವನ್ನು ಮುಖ್ಯ ಕಟ್ಟಡ ಮತ್ತು ಅಡಿಗೆ ಕೋಣೆ ಆವರಿಸಿದೆ, ಗೋಲ್ ಬಾಂಗ್ಲಾ, ಜೇನನ ಮಹೇಲ್, ಮತ್ತು ಜನಾನ ಕ್ವಾರ್ಟರ್ಸ್ ದಕ್ಷಿಣಕ್ಕೆ ಆವರಿಸಿಕೊಂಡಿದೆ. ನವಾಬ್ ಅವರು ಒಬ್ಬ ಹುರುಪಿನ ಪ್ರವಾಸಿಗರಾಗಿದ್ದರು, ಮತ್ತು ಅದು ಅವರ ವಾಸ್ತುಶಿಲ್ಪದಲ್ಲಿ ಪ್ರಭಾವಬೀರಿದೆ.

ಫಲಕ್ನುಮ ಅರಮನೆ ಇಟಾಲಿಯನ್ ಮತ್ತು ಟ್ಯೂಡರ್ ವಾಸ್ತುಶಿಲ್ಪದ ಒಂದು ಅಪರೂಪದ ಮಿಶ್ರಣವಾಗಿದೆ. ಇದರ ಬಣ್ಣ ಲೇಪಿತ ಗಾಜಿನ ಕಿಟಕಿಗಳಿಂದ ಬಣ್ಣದ ಒಂದು ಸ್ಪೆಕ್ಟ್ರಮ್ ಕೋಣೆಗಳ ಒಳಗೆ ಚೆಲ್ಲುತ್ತದೆ.

ಇತಿಹಾಸ

[ಬದಲಾಯಿಸಿ]

ಇದು ಸರ್ ವಿಕಾರ್ (ಹೈದರಾಬಾದ್ ಮತ್ತು ಬೇರಾರ್ ಪ್ರಧಾನಿ) ಅವರ ಖಾಸಗಿ ನಿವಾಸವಾಗಿ ಅರಮನೆ ಬಳಸಲಾಗುತ್ತದೆ ಮತ್ತು ಅರಮನೆ 1897-1898 ಸುಮಾರು ಹೈದರಾಬಾದ್ 6 ನಿಜಾಮ್ ಹಸ್ತಾಂತರಿಸಿದರು ಮತ್ತು ನಂತರ ಅರಮನೆಯನ್ನು ಹೊಸ ಮಾಲೀಕರಿಗೆ ಹಸ್ತಾಂತರಿಸಲಾಯಿತು . ಸರ್ ವಿಕಾರ್, ಹೈದರಾಬಾದ್ ಪ್ರಧಾನಿ ಅಲ್ಲದೆ ಪೈಗಃ ದ ಆಮೀರ್ ಕೂಡ ಆಗಿದ್ದರು ಅಲ್ಲದೆ ಅವರು ಮೂರನೇ ನಿಜಾಮ್ರ ಮೊಮ್ಮಗ ಕೂಡ ಆಗಿದ್ದರು. ಅವರು ಯುವರಾಣಿ ಜಹಂದಾರ್ ಉನ್ನಿಸ ಬೇಗಂ ಸಾಹಿಬ ಅವರನ್ನು ಮದುವೆಯಾಗಿದ್ದರು ಮತ್ತು ರಾಣಿಯವರನ್ನು ಲೇಡಿ ವಿಕರ್ ಉಲ್ ಉಮ್ರಾ ಎಂದು ಕೂಡ ಕರೆಯಲಾಗುತ್ತಿತ್ತು ಮತ್ತು ಇವರು ನವಾಬ್ ಆಫ್ಜ್ಯಲ್ ಉಲ್ ದೌಲ ಬಹದ್ದೂರ್ 5ನೆ ನಿಜಾಮರ ಮಗಳಾಗಿದ್ದರು ಮತ್ತು ನವಾಬ್ ಮಿರ್ ಮೆಹಬೂಬ್ ಅಲಿ ಕಹ್ನ್ ಬಹದ್ದೂರ್ 6ನೆ ನಿಜಾಮರ ಅಕ್ಕ ಆಗಿದ್ದರು.

ಸರ್ ವಿಕರ್ ಉಲ್ ಊಮ್ರ ಬಹದ್ದೂರ್ ಅವರ ಮುದ್ರೆ "ವೋ" ,ಪೀಠೋಪಕರಣಗಳ ಮೇಲೆ, ಗೋಡೆಗಳು ಮತ್ತು ಅರಮನೆಯ ಸೀಲಿಂಗ್ ಮೇಲೆ ಕಾಣಬಹುದು.

ಫಲಕ್ನುಮ ಅರಮನೆ ನಿರ್ಮಿಸಿ ನಲವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಮೀರ್ ಮತ್ತು ಪೈಗಃ ಸರ್ ವಿಕರ್ ಉಲ್ ಉಮ್ರಾ ಒದಗಿಸಲ್ಪಟ್ಟಿದ್ದು ಮತ್ತು ಇದನ್ನು ಪೂರ್ಣಗೊಳಿಸಲು ಸರ್ ವಿಕಾರ್ ಅವರ ಎಸ್ಟೇಟ್ ಮತ್ತು ಆದಾಯ 15 ಗನ್ ಸೆಲ್ಯೂಟ್ ಹೊಂದುವಷ್ಟಿದ್ದರು ಅವರ ಕನಸಿನ ಯೋಜನೆಯನ್ನು ಪೂರ್ಣಗೊಳಿಸಲು (ಪೈಗಃ ಒಂದು ರಾಜ್ಯದ ಒಳಗೊಂದು ರಾಜ್ಯ ಎಂದು ಅದರ ಸಂಪೂರ್ಣ ಗಾತ್ರ, ಸಂಪತ್ತು ಮತ್ತು ಆದಾಯ ಆಧಾರಿಸಿ ಕರೆಯುತ್ತಿದ್ದರು) ಹಣಕ್ಕಾಗಿ ಬ್ಯಾಂಕ್ ಬಂಗಾಳದಲ್ಲಿ ಸಾಲ ಮಾಡಬೇಕಾಯಿತು . 1897 ರ ವಸಂತಕಾಲದಲ್ಲಿ ಮೆಹಬೂಬ್ ಅಲಿ ಪಾಶಾ ನಿಜಾಮ್ VI ನೇ ಅರಮನೆಗೆ ಆಹ್ವಾನಿಸಲಾಯಿತು ನಿಜಾಮ್ ಅರಮನೆಯನ್ನು ಎಷ್ಟು ಇಷ್ಟಪಟ್ಟರೆಂದರೆ ಇದು ಅವರ ಹಿರಿಯ ಸಹೋದರಿ ಲೇಡಿ ವಿಕಾರ್ ನಿವಾಸವಾಗಿದ್ದರಿಂದ ಅಲ್ಲೇ ಉಳಿಯಲು ನಿರ್ಧರಿಸಿದರು. ಅವರು ಒಂದು ವಾರ ಇರಬೇಕಾದವರು ಹದಿನೈದು ದಿನದವರೆಗೂ ಮುಂದೂಡಿದರು ಮತ್ತು ನಂತರ ಅದು ಒಂದು ತಿಂಗಳಾಯಿತು ಮತ್ತು ನಂತರ ಅಂತಿಮವಾಗಿ ಸರ್ ವಿಕರ್ ಅವರು ಸಾರ್ವಭೌಮರು ಅರಮನೆ ಇಷ್ಟಪಟ್ಟಿದ್ದರೆ ಅದನ್ನು ನಝರ್ (ನಿವೇದನೆ) ಎಂದು ಇದು ನೀಡಿ ಗೌರವಿಸಿದರು. ನಿಜಾಮ್ ಅದನ್ನು ಇಷ್ಟಪಟ್ಟರು ಅವರು ತೂಕದ ಮನುಷ್ಯರಾದರಿಂದ , ರಾಜಕುಟುಂಬದ ಮೂಲಗಳ ಪ್ರಕಾರ ಅವರು ಸರ್ ವಿಕಾರ್ ಅವರಿಗೆ ಗಣನೀಯ ಮೊತ್ತದ ಹಣ ನೀಡಿದರೆಂದು ಹೇಳಲಾಗುತ್ತದೆ. ಆದಾಗ್ಯೂ ಪೈಗಃ ಕುಟುಂಬದ ಸದಸ್ಯರು ಸುಮಾರು 20 ಲಕ್ಷ ಹಣ ಕೊಟ್ಟರೆಂದು ಹೇಳುತ್ತಾರೆ ಮತ್ತು ಉಳಿದವುಗಳನ್ನು ನಝರ್ ಅಥವಾ ನಿವೇದನೆ ಎಂದು ಸ್ವೀಕರಿಸಲಾಯಿತು. ಇದನ್ನು ನಿಜಾಮ್ ಅವರು ರಾಜ ಅತಿಥಿ ಗೃಹವಾಗಿ ಉಪಯೋಗಿಸುತ್ತಿದ್ದರು ಕಾರಣ ಇದು ಇಡೀ ನಗರದ ಒಂದು ಸುಂದರ ದೃಷ್ಟಿಕೋನ ಹೊಂದಿತ್ತು.

ಫಲಕ್ನುಮ 1950 ನಂತರ ಸ್ತಬ್ದವಾಯಿತು. ಕಟ್ಟಕಡೆಯ ಮುಖ್ಯ ಅತಿಥಿ ಭಾರತದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ಅವರು 1951ರಲ್ಲಿ ಉಳಿದುಕೊಂಡಿದ್ದರು. ಅರಮನೆ ನಂತರ ಹೆಚ್ಚಾಗಿ ಮುಚ್ಚಲಾಯಿತು ಮತ್ತು ಇದು ಹೊಟೇಲ್ ತಾಜ್ ಗ್ರೂಪ್ ಭೋಗ್ಯಕ್ಕೆ ನೀಡಲಾಯಿತು ನಂತರ ಒಂದು ದೊಡ್ಡ ಪುನಃಸ್ಥಾಪನೆಗೆ ಒಳಗಾಯಿತು. ಅದರ ಮೂಲ ಭವ್ಯತೆಯನ್ನು ಪುನಃ ಜವಾಬ್ದಾರಿಯನ್ನು H.H ಪ್ರಿನ್ಸೆಸ್ ಎಸ್ರ ಜಃ, H.E.H ಹೈದರಾಬಾದ್ VIlIನೇ ನಿಜಾಮರ ಮೊದಲ ಪತ್ನಿ ನೇತೃತ್ವವನ್ನು ವಹಿಸಿದರು .

ಒಂದು ಐಷಾರಾಮಿ ಹೋಟೆಲ್ ನವೀಕರಣ

[ಬದಲಾಯಿಸಿ]

2000 ರಲ್ಲಿ ತಾಜ್ ಹೊಟೇಲ್ ನವೀಕರಿಸುವ ಮತ್ತು ಅರಮನೆಯ ಕಾಪಾಡುವ ಆರಂಭಿಸಿದರು.ನವೀಕರಿಸಲಾಯಿತು ಹೋಟೆಲ್ ನವೆಂಬರ್ 2010 ರಲ್ಲಿ ಪ್ರಾರಂಭವಾಯಿತು,ಕೊಠಡಿಗಳು ಮತ್ತು ಕೋಣೆಗಳು ಅಲಂಕೃತ ಪೀಠೋಪಕರಣ, ಕರಕುಶಲ ತಪೆಸ್ತ್ರಿಎಸ್ ಮತ್ತು ಫ್ರಾನ್ಸ್ ನಿಂದ ಅಂಚುಳ್ಳ ಅಲಂಕರಿಸಲಾಗಿತ್ತು..[] ಒಳಾಂಗಣ ಇಂಗ್ಲಿಷ್ ಮತ್ತು ವೆನಿಸ್ ಗೊಂಚಲು ಮತ್ತು ಸಂಕೀರ್ಣವಾದ ಹಸಿಚಿತ್ರಗಳಲ್ಲಿ, ಮತ್ತು ವರ್ಣಚಿತ್ರಗಳು, ಮೂರ್ತಿಗಳು, ಪೀಠೋಪಕರಣ, ಹಸ್ತಪ್ರತಿಗಳು ಮತ್ತು ಪುಸ್ತಕಗಳು ಅಪರೂಪದ ಕಲಾಕೃತಿಗಳನ್ನು ಹೊರಾಂಗಣ ಮಹಡಿಯ ಹೊಂದಿವೆ. ಅರಮನೆಯಲ್ಲಿ 101 ಆಸನಗಳುಳ್ಳ ಊಟದ ಹಾಲ್, ವಿಶ್ವದ ದೊಡ್ಡ, ಮತ್ತು ದರ್ಬಾರ್ ಹಾಲ್ ಪರಿಗಣಿಸಲಾಗುತ್ತದೆ ಸಂಕೀರ್ಣ ಕೆತ್ತಿದ ಮರದ ಛಾವಣಿಗಳು, ನೆಲದ ಅಂತಸ್ತುಗಳು, ಆಕ್ರೋಡು ಪೀಠೋಪಕರಣ ಮತ್ತು ಕರಕುಶಲ ಕನ್ನಡಿಗಳು ಅಲಂಕರಿಸಿ ಹೊಂದಿದೆ. []

ಉಲ್ಲೇಖಗಳು

[ಬದಲಾಯಿಸಿ]
  1. Business Standard. "Affairs of state". Business-standard.com. Retrieved Sep 30, 2016. {{cite web}}: |author= has generic name (help)
  2. "Falaknuma Palace". Archived from the original on ಮಾರ್ಚ್ 16, 2008. Retrieved Sep 30, 2016.
  3. "About Taj Falaknuma Palace". cleartrip.com. Retrieved Sep 30, 2016.
  4. "Ratan Tata to meet K Rosaiah on November 7 - Money - DNA". Dnaindia.com. 2010-10-31. Retrieved Sep 30, 2016.
  5. Cook, Sharell. "Falaknuma Palace Hyderabad Opens as a Luxury Taj Hotel". Archived from the original on ನವೆಂಬರ್ 5, 2013. Retrieved Sep 30, 2016.
"https://kn.wikipedia.org/w/index.php?title=ಫಲಕ್ನುಮ&oldid=1125539" ಇಂದ ಪಡೆಯಲ್ಪಟ್ಟಿದೆ