ವಿಷಯಕ್ಕೆ ಹೋಗು

ಪ್ರಿಕಾರ್ಡಿಯಲ್ ಕ್ಯಾಚ್ ಸಿಂಡ್ರೋಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಿಕಾರ್ಡಿಯಲ್ ಕ್ಯಾಚ್ ಸಿಂಡ್ರೋಮ್
ಸಮಾನಾರ್ಥಕ ಹೆಸರು/ಗಳುTexidor's twinge
One of the areas more commonly affected in precordial catch syndrome
ವೈದ್ಯಕೀಯ ವಿಭಾಗಗಳುPediatrics, family medicine
ಲಕ್ಷಣಗಳುSharp, stabbing chest pain in a small area
ಕಾಯಿಲೆಯ ಗೋಚರ/ಪ್ರಾರಂಭSudden
ಕಾಲಾವಧಿLess than 3 minutes
ಕಾರಣಗಳುUnclear
ರೋಗನಿರ್ಣಯAngina, pericarditis, pleurisy, chest trauma
ಚಿಕಿತ್ಸೆReassurance
ಮುನ್ಸೂಚನೆGood
ಆವರ್ತನRelatively common

ಪ್ರಿಕಾರ್ಡಿಯಲ್ ಕ್ಯಾಚ್ ಸಿಂಡ್ರೋಮ್ (PCS) ಒಂದು ಗಂಭೀರ ಸ್ಥಿತಿಯಾಗಿದ್ದು, ಇದರಲ್ಲಿ ಎದೆಯಲ್ಲಿ ಚೂಪಾದ ಕಡಿಯುವಿಕೆಯ ನೋವು ಇರುತ್ತದೆ. ಇದು ಸಾಮಾನ್ಯವಾಗಿ ಉಸಿರೆಳೆದುಕೊಳ್ಳುವಾಗ ಕೆಟ್ಟದ್ದಾಗಿ ಪರಿಣಮಿಸುತ್ತದೆ ಮತ್ತು ಸಣ್ಣ ಪ್ರದೇಶದಲ್ಲಿ ಸಂಭವಿಸುತ್ತದೆ. ಇದರ ನೋವು ಸಾಮಾನ್ಯವಾಗಿ ಕೆಲವು ನಿಮಿಷಗಳಿಗಿಂತ ಕಡಿಮೆಯಿರುತ್ತದೆ. ಪರಿಸ್ಥಿತಿಯ ಬಗ್ಗೆ ಕಳವಳಗಳು ಆತಂಕಕ್ಕೆ ಕಾರಣವಾಗಬಹುದು.

ನೋವು ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲದೆ ಗುಣವಾಗುತ್ತದೆ, ಚಿಕಿತ್ಸೆ ಸಾಮಾನ್ಯವಾಗಿ ಧೈರ್ಯ ತುಂಬುವುದರಿಂದ ಫಲಿತಾಂಶ ಒಳ್ಳೆಯದಿರುತ್ತದೆ. ಪ್ರಿಕಾರ್ಡಿಯಲ್ ಕ್ಯಾಚ್ ಸಿಂಡ್ರೋಮ್ ಸಾಮಾನ್ಯವಾಗಿದೆ, ಮತ್ತು ೬ ರಿಂದ ೧೨ ರ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಪುರುಷ ಮತ್ತು ಮಹಿಳೆಯರಲ್ಲೂ ಇದು ಸಮಾನವಾಗಿ ಭಾಧಿಸುತ್ತದೆ ಹಾಗೂ ವಯಸ್ಕರಲ್ಲಿ ಇದು ಕಡಿಮೆಯಾಗಿದೆ. ಇದರ ಉಪಸ್ಥಿತಿಯನ್ನು ಮೊದಲ ಬಾರಿಗೆ ೧೯೯೫ ರಲ್ಲಿ ವಿವರಿಸಲಾಗಿದೆ.[]

ಇತಿಹಾಸ

[ಬದಲಾಯಿಸಿ]

೧೮೯೩ ರಲ್ಲಿ ಫ್ರೆಂಚ್ ಕಾರ್ಡಿಯಾಲಜಿಸ್ಟ್, ಹೆನ್ರಿ ಹಚಾರ್ಡ್ ಅವರು ಈ ಸಿಂಡ್ರೋಮ್ ನ್ನು "ಪ್ರೆಕಾರ್ಡಿಲ್ಜಿ" ಎಂದು ಕರೆದಿದ್ದಾರೆ (ಲ್ಯಾಟಿನ್ ಭಾಷೆಯಲ್ಲಿ "ಪ್ರೆಕಾರ್ಡಿಯಾ" ಅಂದರೆ "ಹೃದಯದ ಮುಂಚೆ" ಎಂಬರ್ಥದಿಂದ) ಅಥವಾ "ಸಿಂಡ್ರೊಮ್ ಡೆ ಹಚಾರ್ಡ್" ("ಹಚರ್ಡ್ ಸಿಂಡ್ರೋಮ್ "). ೧೯೫೫ ರಲ್ಲಿ ಚಿಕಾಗೊದ ಮೈಕೆಲ್ ರೀಸ್ ಆಸ್ಪತ್ರೆಯಲ್ಲಿ ಮಿಲ್ಲರ್ ಮತ್ತು ಟೆಕ್ಸಿಡೋರ್ ಹಚಾರ್ಡ್ ಸಿಂಡ್ರೋಮ್ ನ್ನು ಹೆಚ್ಚು ಆಳವಾಗಿ ಅಧ್ಯಯನ ಮಾಡಿದರು. ಅವರು ೧೦ ರೋಗಿಗಳಲ್ಲಿ ಈ ಸ್ಥಿತಿಯನ್ನು ವರದಿ ಮಾಡಿದರು, ಮತ್ತು ಅದರಲ್ಲಿ ಒಬ್ಬರು ಮಿಲ್ಲರ್ ಅವರೇ ಆಗಿದ್ದರು.[] ೧೯೭೮ ರಲ್ಲಿ, ಸ್ಪಾರ್ರೊ ಮತ್ತು ಬರ್ಡ್ ಅವರು ೪೫ ಆರೋಗ್ಯವಂತ ರೋಗಿಗಳು ಈ ಸ್ಥಿತಿಯಿಂದ ಆಗಾಗ್ಗೆ ಬಳಲಿದರೆಂದು ವರದಿ ಮಾಡಿದ್ದರು. ೧೯೮೧ ರಲ್ಲಿ ಪಿಕರಿಂಗ್ ಮತ್ತು ೧೯೮೯ ರಲ್ಲಿ ರೆನಾಲ್ಡ್ಸ್, PCS ನ್ನು ಅಮೇರಿಕನ್ ಮಕ್ಕಳಲ್ಲಿ ಅಧ್ಯಯನ ನಡೆಸಿದರು. ಇವುಗಳೆಲ್ಲ ಸೇರಿ PCS ಬಗ್ಗೆ ಇಂಗ್ಲೀಷ್ ನಲ್ಲಿ ಸಾಹಿತ್ಯ ಲಭ್ಯವಿದೆ.

ಚಿಹ್ನೆಗಳು ಮತ್ತು ರೋಗಲಕ್ಷಣಗಳು

[ಬದಲಾಯಿಸಿ]

PCS ಸ್ಥಿರ ಗುಣಲಕ್ಷಣಗಳನ್ನು ಹೊಂದಿದೆ. ಇದರ ಲಕ್ಷಣಗಳು ಎದೆಯ ಎಡಭಾಗದಲ್ಲಿ ಮುಂಭಾಗದ ಎದೆಯಲ್ಲಿ ಹಠಾತ್ ನೋವಿನಿಂದ ಪ್ರಾರಂಭವಾಗುತ್ತದೆ. ನೋವು ಸ್ಥಳೀಕರಿಸಲ್ಪಡುತ್ತದೆ ಮತ್ತು ಹೃದಯಾಘಾತ ನೋವಿನಂತೆ ವಿಕಿರಣಗೊಳ್ಳುವುದಿಲ್ಲ. ಉಸಿರೆಳೆದುಕೊಳ್ಳುವಾಗ ಮತ್ತು ಉಸಿರು ಬಿಡಬೇಕಾದರೆ, ಆಗಾಗ್ಗೆ ನೋವು ತೀವ್ರಗೊಳ್ಳಬಹುದು. ಚಲಿಸುವಿಕೆಯೂ ನೋವನ್ನು ತೀವ್ರಗೊಳಿಸುತ್ತದೆ. ವಿಶಿಷ್ಟವಾಗಿ ಇದು ರೋಗಿಯನ್ನು ಸ್ಥಳದಲ್ಲಿ ತಟಸ್ಥ ಮಾಡಲು ಮತ್ತು ಆ ಕಂತಿನ ನೋವು ಹಾದುಹೋಗುವವರೆಗೆ ಆಳವಾಗಿ ಉಸಿರಾಡಲೂ ಕಾರಣವಾಗುತ್ತದೆ. ಒಂದು ಕಂತು ಸಾಮಾನ್ಯವಾಗಿ ಎರಡು ಸೆಕುಂಡುಗಳಿಂದ ಮೂರು ನಿಮಿಷಗಳವರೆಗೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ೧ ಗಂಟೆವರೆಗೂ ಇರಬಹುದು. ಈ ನೋವಿನ ಸಂಚಿಕೆಯ ಆವರ್ತನವು ರೋಗಿಯಿಂದ ರೋಗಿಗೆ ಬದಲಾಗುತ್ತದೆ, ಕೆಲವೊಮ್ಮೆ ಪ್ರತಿದಿನ, ದಿನದಲ್ಲಿ ಅನೇಕ ಬಾರಿ, ಅಥವಾ ವಾರಗಳು, ತಿಂಗಳುಗಳು ಅಥವಾ ವರ್ಷಗಳಲ್ಲಿ ಕೂಡಾ ಈ ನೋವು ಹರಡಬಹುದು. PCS ಕೆಲವು ಸ್ನಾಯುಗಳ ಗುಂಪಿನ ಸ್ಥಳೀಯ ಸೆಡೆತ ಎಂದು ನಂಬಲಾಗಿದೆ. ನೋವಿನ ತೀವ್ರತೆಯು ಮಂದವಾದ ಸಣ್ಣ ನೋವಿನಿಂದ, ತೀಕ್ಷ್ಣವಾದ ತೀವ್ರವಾದ ನೋವಿಗೆ, ಕೆಲವು ಕ್ಷಣಗಳ ಅಸ್ಪಷ್ಟ ದೃಷ್ಠಿಗೆ ಅಥವಾ ಉಸಿರಾಟದ ತೊಂದರೆಗೂ ಕಾರಣವಾಗಬಹುದು.

ಕಾರಣಗಳು

[ಬದಲಾಯಿಸಿ]

ಕೆಲವೊಂದು ಕಾರಣಗಳು ಅಸ್ಪಷ್ಟವಾಗಿವೆ. ನೋವು ಎದೆಗೋಡೆಯಿಂದ ಅಥವಾ ಇಂಟರ್ಕೊಸ್ಟಲ್ ನರಗಳ ಕಿರಿಕಿರಿಯಿಂದಲೂ ಇರಬಹುದು ಎಂದು ಕೆಲವರು ನಂಬುತ್ತಾರೆ. ಮಾನಸಿಕ ಒತ್ತಡ ಕೂಡಾ ಅಪಾಯಕಾರಿ ಅಂಶಗಳಲ್ಲೊಂದು, ಎದೆ ನೋವೇ ಕಾರಣವಲ್ಲ. ರೋಗದ ಪತ್ತೆಹಚ್ಚುವಿಕೆ ರೋಗಲಕ್ಷಣಗಳನ್ನು ಆಧರಿಸಿದೆ. ರೋಗಲಕ್ಷಣಗಳನ್ನು ಉಂಟುಮಾಡುವ ಇತರ ಕಾರಣಗಳೆಂದರೆ, ಆಂಜಿನಾ, ಪೆರಿಕಾರ್ಡಿಟಿಸ್, ಪ್ಲೂರುಸಿಸ್ ಮತ್ತು ಎದೆಯ ಆಘಾತ.[]

ಚಿಕಿತ್ಸೆ

[ಬದಲಾಯಿಸಿ]

PCS ಗಾಗಿ ಯಾವುದೇ ದೊಡ್ಡ ಚಿಕಿತ್ಸೆಯಿಲ್ಲ, ಆದಾಗ್ಯೂ, PCS ಅಪಾಯಕಾರಿ ಅಥವಾ ಜೀವ ಬೆದರಿಕೆಯೆಂದು ನಂಬಲಾಗಿಲ್ಲ. ಈ ಎದೆನೋವು, ಹೃದಯಾಘಾತಕ್ಕೆ ಅಥವಾ ಇತರ ಗಂಭೀರ ಸ್ಥಿತಿಯ ಸೂಚಕವಾಗಿದೆಯೆಂದು PCS ಬಗ್ಗೆ ಕೆಲವರು ಅನಗತ್ಯವಾಗಿ ಭಯ ಪಡುತ್ತಾರೆ. ಪರಿಸ್ಥಿತಿಯು ಅಪಾಯಕಾರಿ ಅಥವಾ ಜೀವ ಬೆದರಿಕೆಯಾಗಿಲ್ಲದ ಕಾರಣ, ಔಷಧಿಗಳನ್ನು ತೆಗೆದುಕೊಳ್ಳಬೇಕಾದ ಕಾರಣವಿಲ್ಲ. ಆದರೂ ಕೆಲವು ರೋಗಿಗಳು ದೈಹಿಕ ವ್ಯಾಯಾಮದಂತಹ ಕೆಲವು ಸಾಮಾನ್ಯ ಚಟುವಟಿಕೆಗಳಿಗೆ ಒತ್ತುಕೊಡುತ್ತಾರೆ, ಕೆಲವೊಮ್ಮೆ ಇಂತಹ ಚಟುವಟಿಕೆಗಳು ನೋವನ್ನು ಉತ್ಪ್ರೇಕ್ಷೆ ಮಾಡಬಹುದು.

ಪರಿಹಾರ ತಿಳಿದಿಲ್ಲವಾದರೂ, ಕೆಲವು ರೋಗಿಗಳು ನಿಧಾನವಾಗಿ ಉಸಿರಾಡುವ ಮತ್ತು ಸ್ವಲ್ಪ ಕಾಲ ತಮ್ಮ ಉಸಿರನ್ನು ಹಿಡಿತದಲ್ಲಿಟ್ಟುಕೊಂಡು ಸರಿಹೋಗುತ್ತಾರೆ. ಅಲ್ಲದೆ, ಮೊಣಕೈಗಳನ್ನು ಎತ್ತುತ್ತಾ, ನಿಧಾನವಾಗಿ ಸ್ವಸ್ಥಾನದಲ್ಲಿಡುವಾಗ ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿ ನೀರಿನ ಅಂಶ ಜಾಸ್ತಿಯಿದ್ದಾಗ, ಈ ಸಂಚಿಕೆಗಳ ಆವರ್ತನ ಕಡಿಮೆಯಾಗುತ್ತದೆ ಮತ್ತು ಐಬುಪ್ರೊಫೇನ್ ಸಹ ಇದಕ್ಕೆ ಸಹಾಯ ಮಾಡಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. https://healthguidenet.com/conditions/precordial-catch-syndrome/
  2. https://jamanetwork.com/journals/jama/article-abstract/303272
  3. https://www.healthline.com/health/precordial-catch-syndrome