ಪ್ರಸ್ತಾರ
ಪ್ರಸ್ತಾರ ಎಂದರೆ ಲಘು ಗುರುಗಳನ್ನು ಗುರುತಿಸುವ ಕ್ರಿಯೆ. ಪ್ರಸ್ತಾರ ಎಂದರೆ ಕಾವ್ಯಗಳಲ್ಲಿ ಲಘು ಗುರುಗಳನ್ನು ಗುರುತಿಸುವ ಕೆಲಸ. ಕನ್ನಡದಲ್ಲಿ ಹಲವು ಬಗೆಯ ವೃತ್ತಗಳು, ಛಂದಸ್ಸು, ರಗಳೆ ಮತ್ತು ಇತರ ಬಗೆಗಳಿವೆ. ಅವೆಲ್ಲವನ್ನೂ ಕಾವ್ಯಗಳಿಗೆ ಪ್ರಸ್ತಾರ ಹಾಕುವ ಮೂಲಕವೇ ಕಂಡುಹಿಡೀಯಬಹುದು.
ಮೂಲ
[ಬದಲಾಯಿಸಿ]ಯಾವುದೇ ಪದ್ಯದಲ್ಲಿ ಅಕ್ಷರಗಳನ್ನು ಗುಂಪು ಮಾಡಿ ವಿಂಗಡಿಸಿ, ಅದರ ಛಂದಸ್ಸು ಮತ್ತು ಇತರ ಗುಣಗಳನ್ನು ಗಮನಿಸಬೇಕಾದಾಗ,
ಮಾತ್ರಾಗಣ
[ಬದಲಾಯಿಸಿ]ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.
ಮಾತ್ರೆ
[ಬದಲಾಯಿಸಿ]ಒಂದೇ ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಅಥವಾ ಮಾತ್ರಾ ಎಂದು ಅಳೆಯಲಾಗುವುದು.
ಲಘು
[ಬದಲಾಯಿಸಿ]ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ಎನ್ನುವರು. ಪ್ರಸ್ತಾರ ಮಾಡುವಾಗ, ಎಲ್ಲಾ ಲಘು ಅಕ್ಷರಗಳನ್ನು ( U) ಎಂಬ ಚಿಹ್ನೆ ಬಳಸಿ ಗುರುತಿಸಲಾಗುತ್ತದೆ.
ಗುರು
[ಬದಲಾಯಿಸಿ]ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ಎನ್ನುವರು. ಪ್ರಸ್ತಾರ ಮಾಡುವಾಗ, ಎಲ್ಲಾ ಗುರು ಅಕ್ಷರಗಳನ್ನು ( - )ಎಂಬ ಚಿಹ್ನೆ ಬಳಸಿ ಗುರುತಿಸಲಾಗುತ್ತದೆ.
ಕೆಳಗಿನ ಕಾರಣಗಳಿಂದ ಅಕ್ಷರವು ಗುರು ಎಂದು ಗುರುತಿಸಬಹುದು
[ಬದಲಾಯಿಸಿ]ಲಕ್ಷಣ | ಉದಾಹರಣೆ |
---|---|
ದೀರ್ಘಾಕ್ಷರ | _ U ಶಾಲೆ |
ಒತ್ತಕ್ಷರದ ಹಿಂದಿನ ಅಕ್ಷರ | _ U U U ಒ ತ್ತಿ ನ ಣೆ |
ಅನುಸ್ವಾರದಿಂದ ಕೂಡಿರುವ ಅಕ್ಷರ | _ U U ಬಂ ದ ನು |
ವಿಸರ್ಗದಿಂದ ಕೂಡಿರುವ ಅಕ್ಷರ | _ U ದುಃಖ |
ವ್ಯಂಜನಾಕ್ಷರದಿಂದ ಕೂಡಿದ ಅಕ್ಷರ | U U _ ಮನದೊಳ್ |
ಐ ಸ್ವರವಿರುವ ಅಕ್ಷರ | _ U U ಕೈ ಮು ಗಿ |
ಔ ಸ್ವರವಿರುವ ಅಕ್ಷರ | _ U ಮೌ ನ |
ಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ |
ಅಕ್ಷರವು ಲಘು ಎನಿಸುವ ಲಕ್ಷಣಗಳು
[ಬದಲಾಯಿಸಿ]ಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.