ಪ್ರವಾಸಿಗರ ತಾಣವಾದ ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]

ಶಿಲ್ಪಕಲೆಯ ತಾಣವಾದ ಬೇಲೂರು
ಕರುನಾಡ ಐತಿಹಾಸಿಕ ಸ್ಠಳವಾದ ಹಂಪಿ
ಬಾದಾಮಿ
ಕರಾವಳಿಯ ತೀರ, ಗೋಕರ್ಣ

ಕಲೆ, ಸಾಹಿತ್ಯ- ಸಂಸ್ಕೃತಿಯ ತವರಾದ ಕರ್ನಾಟಕ ಸಮೃದ್ಧವಾದ ನಾಡು. ಸಂಪದ್ಭರಿತ ಕಾಡು, ಧುಮ್ಮಿಕ್ಕಿ ಹರಿವ ಜಲಪಾತ, ಮನಸೆಳೆವ ಕರಾವಳಿ ತೀರ, ಮನಸ್ಸಿಗೆ ಮುದ ನೀಡುವ ಪಕ್ಷಿಧಾಮ, ಕಲಾ ಶ್ರೀಮಂತಿಕೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪೆ, ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳ ನಡುವೆ ಸಾವಿರಾರು ದುರ್ಗಗಳು- ಗುಡಿ ಗೋಪುರಗಳು.. ಏನಿಲ್ಲ ನಮ್ಮೀ ಶ್ರೀಮಂತ ಕರುನಾಡಿನಲ್ಲಿ. ರಾಜ್ಯದ ಪ್ರವಾಸಿ ತಾನಣಗಳಿಗೆ ಭೀಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ೨೦೧೨ನೇ ಸಾಲಿಗೆ ಹೋಲಿಸಿದರೆ ೨೦೧೩ನೇ ಸಾಲಿನಲ್ಲಿ ದೇಶೀ ಪ್ರವಾಸಿಗರ ಸಂಖ್ಯೆ ಶೇ.೬ರಷ್ಟು ಹಾಗೂ ವಿದೇಶೀ ಪ್ರವಾಸಿಗರ ಸಂಖ್ಯೆ ಶೇ.೩ರಷ್ಟು ಹೆಚ್ಚಳವಾಗಿದ್ದು, ಕರ್ನಾಟಕವು ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವ ದಿನ ದೂರವಿಲ್ಲ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ರಾಜ್ಯದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ದೇಶೀಯ ಪ್ರವಾಸಿಗರ ಆಕರ್ಷಣೆಯಲ್ಲಿ ಕರ್ನಾತಕ ನಾಲ್ಕನೇ ಸ್ಥಾನದಲ್ಲಿದ್ದರೆ, ವಿದೇಶಿ ಪ್ರವಾಸಿಗರ ಆಕರ್ಷಣೆಯಲ್ಲಿ ಒಂಬತ್ತನೆ ಸ್ಥಾನದಲ್ಲಿದೆ. ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕರ್ನಾತಕ ಬಹುತೇಕ ಯಶಸ್ವಿಯಾಗಿದೆ. ಹಂಪಿ, ಪಟ್ಟದಕಲ್ಲು, ಗೋಕರ್ಣ, ಬೇಲೂರು, ಹಳೆಬೇಡು, ಉಡುಪಿ, ಬಾದಾಮಿ, ಮೈಸೂರು, ಮದಿಕೇರಿ ಸೇರಿದಂತೆ ಹಲವು ತಾಣಗಳು ಪ್ರವಾಸಿಗರ ಮನ ಸೆಳೆದಿದೆ.

೧೫ ವರ್ಷಗಳ ಈಚೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವ ಬಂದಿದೆ. ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಪ್ರವಾಸಿ ತಾಣಗಳಬಗ್ಗೆ ರೋಡ್ ಶೋ ನಡೆಸುವುದು, ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಕಾರ್ಯ ಇತ್ತೀಚಿನ ವರ್ಷಗಳಲ್ಲಿ ಶುರುವಾಗಿದೆ. ಮಾಹಿತಿ ತಂತ್ರಗ್ಯಾನ ಕ್ಷೇತ್ರದಲ್ಲಿ ಆಗಿರುವ ಅಗಾಧ ಬೆಳವಣಿಗೆಯಿಂದಾಗಿ ಬೆಂಗಲೂರು ಅಂತರಾಷ್ತ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. 'ದಕ್ಷಿಣ ಭಾರತದ ಹೆಬ್ಬಾಗಿಲು' ಎಂದೇ ಖ್ಯಾತಿಯಾಗಿರುವ ಬೆಂಗಳೂರಿನಿಂದ ದೇಶ-ವಿದೇಶಗಳ ಪ್ರಮುಖ ನಗರಗಳಿಗೆ ನೇರವಾಗಿ ವಿಮಾನಯಾನ ಸಂಪರ್ಕ ಇದೆ. ವಿಮಾನ, ರೈಲು, ಬಸ್ ಸಂಪರ್ಕ ವ್ಯವಸ್ಥೆಯಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದೆ. ರಾಜ್ಯ ಸರ್ಕಾರದ ಮನವಿ ಮೇರೆಗೆ ವಿದೇಶಾಂಗ ಇಲಾಖೆ ಕೆಲವು ದೆಶಗಳ ಪ್ರವಾಸಿಗರಿಗೆ 'ವೀಸಾ ಆನ್ ಅರೈವಲ್' ಸೌಲಭ್ಯ ಕಲ್ಪಿಸಿಕೊಟ್ಟಿ

ಪ್ರವಾಸಿ ತಾಣಗಳು[ಬದಲಾಯಿಸಿ]

ಹೊಸದಾಗಿ ಗುರುತಿಸಿರುವ ಸುಮಾರು ೭೦ ತಾಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು ೩೧೯ ಪ್ರವಾಸಿ ತಾಣಗಳಿವೆ. ಇವುಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವುದರ ಜೊತೆಗೆ ಮೂಲಸೌಖರ್ಯಗಳನ್ನು ಕಲ್ಪಿಸಿಕೊಡುವ ಉದ್ದೆಶದಿಂದ ಕರ್ನಾಟಕ ಪ್ರವಾಸೋದ್ಯಮ ಉತ್ತೆಜನ ಮಂಡಳಿ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಕೆಲವು ಪ್ರಸಿದ್ಧ ತಾಣಗಳು ಹೀಗಿವೆ:

ಕರಾವಳಿಯ ಕಣ್ಮಣಿ,ಕುಂದಾಪುರ[ಬದಲಾಯಿಸಿ]

ಕುಂದಾಪುರ, ಕುಂದಾಪುರ ತಾಲೂಕಿನ ಪ್ರಮುಖ ಪಟ್ಟಣವಾಗಿದೆ. ಇದು ಉಡುಪಿಯಿಂದ ೩೬ ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ದಿಕ್ಕಿನಲ್ಲಿರುವ ೪೫ ಕಿಲೋಮೀಟರುಗಳಷ್ಟು ದೂರದ ಸಮುದ್ರ ಕಿನಾರೆಯು ಕುಂದಾಪುರ ತಾಲೂಕಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ತಾಲೂಕಿನ ಗಂಗೊಳ್ಳಿಯಲ್ಲಿರುವ ಸೇತುವೆಯು ಉಡುಪಿ ಜಿಲ್ಲೆಯಲ್ಲೇ ಅತೀ ದೊಡ್ಡದು. ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಬೆಳೆಸುವಲ್ಲಿ ಕುಂದಾಪುರದ ಪಾತ್ರ ಬಹಳ ಪ್ರಮುಖ. ಈ ಊರಿನ ಸುತ್ತ ಮುತ್ತ ಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ) ಹೂವಿನಿಂದಾಗಿಯೂ ಬಂದಿದೆಯೆಂದು ಹೇಳುತ್ತಾರೆ. ಇನ್ನು ಕೆಲವರು ಮನೆ ಕಟ್ಟುವ ಸಾಮಗ್ರಿಗಳಲ್ಲಿ ಒಂದಾದ ಕಂಬ (ಕುಂದ) ಎಂಬ ಪದದಿಂದಲೂ ಬಂದಿದೆಯೆಂದು ಹೇಳುತ್ತಾರೆ.

ಶಿಲ್ಪೆಗಳ ಬೀಡು, ಬೇಲೂರು ಮತ್ತು ಹಳೆಬೀಡು[ಬದಲಾಯಿಸಿ]

ಬೇಲೂರು - ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಶಾಸನಗಳ ಪ್ರಕಾರ ಈ ನಗರವನ್ನು ವೇಲಾಪುರಿ ಎಂದೂ ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ. ವರ್ಷ ೨೦೦೫ರಲ್ಲಿ ಆರ್ಖಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದವರು ಶ್ರವಣಬೆಳಗೊಳದ ಗೊಮ್ಮಟನ ಜೊತೆಗೆ ಬೇಲೂರು-ಹಳೇಬೀಡನ್ನೂ ವಿಶ್ವ ಸಂಸ್ಕೃತಿ ನಿಲಯವಾಗಿ ಘೋಷಿಸಲು ನೇಮಿಸಿದ್ದಾರೆ[೨].

ಉತ್ತರ ಕರ್ನಾಟಕದ್ಲ್ಲಿರುವ,ಬಾದಾಮಿ[ಬದಲಾಯಿಸಿ]

ಚಾಲುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ. ಇಡಿಯ ಭಾರತದ ಚರಿತ್ರೆ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ ಚಾಲುಕ್ಯರ ಬಾದಾಮಿಯು ಸರ್ವಥಾ ಪ್ರೇಕ್ಷಣೀಯ, ಸರ್ವಥಾ ಆದರಣೀಯ.


ಸೌಂದರ್ಯದ ತಾಣ, ಜೋಗ ಜಲಪಾತ[ಬದಲಾಯಿಸಿ]

ಜೋಗ್ ಜಲಪಾತ,ಭಾರತದಲ್ಲೇ ಅತಿ ಎತ್ತರದ ಜಲಪಾತ.ಶರಾವತಿಯು ೮೨೯ ಅಡಿ ಇಂದ ಭೋರ್ಗರೆಯುವ ದೃಶ್ಯ ನೋಡಲು ನಿಜ್ಜಕ್ಕೂ ಎರಡು ಕಣ್ಣುಗಳು ಸಾಲದು.ಕವಿ ಮೂಗೂರು ಮಲ್ಲಪ್ಪನವರು ಹೇಳಿರುವ ಹಾಗೆ ಇರೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡಲೇ ಬೇಕು .

ಉದ್ಯೋಗಾವಕಾಶ[ಬದಲಾಯಿಸಿ]

ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯಿಂದಾಗಿ ತೆರಿಗೆ ಮೂಲಕ ರಾಜ್ಯದ ಬೊಕ್ಕಸಕ್ಕೆ ಸಂಪನ್ಮೂಲ ಸಂಗ್ರಹವಾಗುತ್ತಿರುವ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿದೆ. ಪ್ರವಾಸಿ ವಾಹನಗಳಿಗೆ ಚೆಕ್ಪೋಸ್ಟಲ್ಲಿ ನೇರವಾಗಿ ತೆರಿಗೆ ವಿಧಿಸಲಾಗುತ್ತಿದೆ. ಇನ್ನು ಪ್ರವಾಸಿಗರು ಉಳಿದುಕೊಳ್ಳುವ ಹೋಟೆಲ್ಗಳಿಗೆ ಮನರಂಜನಾ ತೆರಿಗೆಗಳಿಂದ ಸಂಪನ್ಮೂಲ ಸಂಗ್ರಹವಾಗಿತ್ತಿದೆ. ಸಂಪನ್ಮೂಲ ಸಂಗ್ರಹದ ಜೊತೆಗೆ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಸಾಕಷ್ಟು ಉದ್ಯೋಗಾವಕಾಶಗಲು ಸೃಷ್ಟಿಯಾಗುತ್ತಿದೆ. ಆಟೋ, ಟ್ಯಾಕ್ಸಿ, ಚಾಲಕರಿಂದ ಹಿಡಿದು ಹೋಟೆಲ್, ವಿಮಾನ ನಿಲ್ದಾಣಗಳಿಗೂ ಬೇಡಿಕೆ ಹೆಚ್ಚಾಗಿದೆ. ಕೆಲಸದ ಒತ್ತಡದಿಂದಾಗಿ ವಿಶ್ರಾಂತಿ ಬಯಸುವ ಜನ ವರ್ಷಕ್ಕೆ ೨-೩ ಬಾರಿಯಾದರೂ ಪ್ರವಾಸಿ ತಾಣ್ಗಳಿಗೆ ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಕ್ಷೇತ್ರ ವೇಗವಾಗಿ ಬೆಳೆಯುವುದಕ್ಕೆ ಈ ಎಲ್ಲಾ ಅಂಶಗಳು ಕಾರಣವಾಗಿವೆ ಎಂದರೆ ತಪ್ಪಾಗಲಾರದು.

ಉಲ್ಲೇಖ[ಬದಲಾಯಿಸಿ]

  1. https://groups.google.com/d/topic/mathssciencestf/X41AnHcUQRs‎
  2. https://groups.google.com/forum/#!topic/mathssciencestf/X41AnHcUQRs