ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ

ವಿಕಿಪೀಡಿಯ ಇಂದ
Jump to navigation Jump to search

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಭಾರತ ಸರ್ಕಾರದ ಒಂದು ಉಪಕ್ರಮ. ಇದರಲ್ಲಿ ೧೨೦ ಮಿಲಿಯನ್ ೨ ಹೆಕ್ಟೇರ್‌ಗಿಂತ ಕಡಿಮೆ ಜಮೀನನ್ನು ಹೊಂದಿರುವ ಸಣ್ಣ ಮತ್ತು ಅಂಚಿನಲ್ಲಿರುವ ರೈತರು ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ ₹೬,೦೦೦ ರವರೆಗೆ ಪಡೆಯುವರು. ಈ ಉಪಕ್ರಮವನ್ನು ಪೀಯುಷ್ ಗೋಯಲ್ ೧ ಫ಼ೆಬ್ರವರಿ ೨೦೧೯ರಂದು ೨೦೧೯ರ ಮಧ್ಯಂತರ ಕೇಂದ್ರ ಬಜೆಟ್‍ನ ಸಂದರ್ಭದಲ್ಲಿ ಘೋಷಿಸಿದರು.[೧][೨] ಈ ಯೋಜನೆಗೆ ವರ್ಷಕ್ಕೆ ₹75,000 ಕೋಟಿಯಷ್ಟು ವೆಚ್ಚ ತಗಲಲಿದೆ ಮತ್ತು ಡಿಸೆಂಬರ್ ೨೦೧೮ರಿಂದ ಜಾರಿಗೆ ಬರಲಿದೆ. ವರ್ಷಕ್ಕೆ ₹6,000 ಯನ್ನು ಪ್ರತಿ ಅರ್ಹ ರೈತನಿಗೆ ಮೂರು ಕಂತುಗಳಲ್ಲಿ ಪಾವತಿಸಲಾಗುವುದು ಮತ್ತು ಅವರ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಪಾವತಿಸಲಾಗುವುದು.[೩]

ಉಲ್ಲೇಖಗಳು[ಬದಲಾಯಿಸಿ]

  1. "Piyush Goyal announces PM Kisaan Samman Nidhi". CNBC TV18. Retrieved 1 February 2019.
  2. "12 Crore farmers to get benefit". NewsX. Retrieved 1 February 2019.
  3. "Pradhan Mantri Kisan Samman Nidhi scheme Approved". dailyhunt.in. Retrieved 1 February 2019.