ಪ್ರದೀಪ್ ಈಶ್ವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರದೀಪ್ ಈಶ್ವರ್

ಶಾಸಕರು, ಕರ್ನಾಟಕ ವಿಧಾನಸಭೆ
ಹಾಲಿ
ಅಧಿಕಾರ ಸ್ವೀಕಾರ 
2023
ಮುಖ್ಯಮಂತ್ರಿ ಸಿದ್ದರಾಮಯ್ಯ
ಪೂರ್ವಾಧಿಕಾರಿ ಡಾ. ಕೆ. ಸುಧಾಕರ್
ಮತಕ್ಷೇತ್ರ ಚಿಕ್ಕಬಳ್ಳಾಪುರ
ವೈಯಕ್ತಿಕ ಮಾಹಿತಿ
ಜನನ 1985
ಪೆರೆಸಂದ್ರ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ವೃತ್ತಿ ರಾಜಕಾರಣಿ

ಪೆರೆಸಂದ್ರ ಪ್ರದೀಪ್‌ ಈಶ್ವರ್‌ ಅಯ್ಯರ್‌ ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಪ್ರಸ್ತುತ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ ಹಾಗೂ ಅವರು ಪರಿಶ್ರಮ ನೀಟ್ ಅಕಾಡೆಮಿಯ ಸಂಸ್ಥಾಪಕರು.

ವೈಯಕ್ತಿಕ ಜೀವನ[ಬದಲಾಯಿಸಿ]

1985 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ಜನಿಸಿದ ಇವರು, ಬಾಲ್ಯದಲ್ಲಿಯೇ ತಮ್ಮ ಹೆತ್ತವರನ್ನು ಕಳೆದುಕೊಂಡರು. ಬಳಿಕ, ತುಮಕೂರಿನ ಸಿದ್ಧಗಂಗಾ ಮಠದ ಆಶ್ರಯದಲ್ಲಿ ಬೆಳೆದ ಅವರು, ಅಲ್ಲೇ ಶಾಲಾ ಶಿಕ್ಷಣವನ್ನು ಪಡೆದರು.

ಕೆಲ ವರ್ಷಗಳ ಬಳಿಕ ಚಿಕ್ಕಬಳ್ಳಾಪುರಕ್ಕೆ ಮರಳಿದ ಇವರು, ಅಲ್ಲಿನ ಮಕ್ಕಳಿಗೆ ಪಾಠ ಮಾಡಲು ಶುರು ಮಾಡಿದರು. ಕೆಲವು ಕಡೆಗಳಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಿದರು. ಅದೇ ಸಮಯದಲ್ಲಿ ಸ್ಥಳೀಯ ಮಾಧ್ಯಮವೊಂದರಲ್ಲಿ ನಿರೂಪಕರಾಗಿ ಸೇರಿದ ಪ್ರದೀಪ್ ಈಶ್ವರ್, ‘ಲೈಫ್ ಈಸ್ ಬ್ಯೂಟಿಫುಲ್’ ಕಾರ್ಯಕ್ರಮವನ್ನು ನಡೆಸಿಕೊಟ್ಟರು.[೧] ಆ ಕಾರ್ಯಕ್ರಮದ ತುಣುಕಗಳನ್ನೇ ಸೇರಿಸಿ, ಅದನ್ನು ಪುಸ್ತಕ ರೂಪದಲ್ಲಿ ಅವರು ಹೊರತಂದಿದ್ದಾರೆ. [೨]

ವೃತ್ತಿ ಜೀವನ[ಬದಲಾಯಿಸಿ]

ಊರಿನಲ್ಲಿಯೇ ಇದ್ದು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಪ್ರದೀಪ್ ಈಶ್ವರ್, 2018ರಲ್ಲಿ ಪರಿಶ್ರಮ ನೀಟ್ ಅಕಾಡೆಮಿಯನ್ನು ಸ್ಥಾಪಿಸಿದರು.[೩] ಜೀವಶಾಸ್ತ್ರ ವಿಷಯವನ್ನು ಕಲಿಸುವ ಇವರು, ಇತರ ಉಪನ್ಯಾಸಕರೊಂದಿಗೆ, ಬೆಂಗಳೂರಿನಲ್ಲಿ ಈ ನೀಟ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ.

ರಾಜಕೀಯ ಜೀವನ[ಬದಲಾಯಿಸಿ]

ಒಬಿಸಿ ಬಲಿಜ ಸಮುದಾಯದವರಾದ ಪ್ರದೀಪ್‌ ಈಶ್ವರ್‌, 2016ರಲ್ಲಿ ದೇವನಹಳ್ಳಿ ಸಮೀಪದ ವಿಜಯಪುರವನ್ನು ತಾಲೂಕು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಅದು ವಿಫಲವಾಯಿತು. ಬಳಿಕ ಅವರು ಸ್ಥಳೀಯ ಟಿವಿ ಚಾನೆಲ್‌ ಒಂದರಲ್ಲಿ ನಿರೂಪಕರಾದರು. 2018ರಲ್ಲಿ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದ ಪ್ರದೀಪ್ ಈಶ್ವರ್, ವಿಧಾನಸಭಾ ಚುನಾವಣೆಯಲ್ಲಿ ಅಂದು ಶಾಸಕರಾಗಿದ್ದ ಡಾ. ಕೆ ಸುಧಾಕರ್‌ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ ವಿ ನವೀನ್‌ ಕಿರಣ್‌ ಪರ ಭರ್ಜರಿ ಪ್ರಚಾರ ಮಾಡಿ ಗಮನಸೆಳೆದಿದ್ದ ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಆದರೆ, ಸುಧಾಕರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಳಿಕ, 2023ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದ ಪ್ರದೀಪ್‌, ಹಿಂದಿನ ಆಡಳಿತ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ಅವರ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಉಲ್ಲೇಖಗಳು[ಬದಲಾಯಿಸಿ]



  1. https://thefederal.com/states/south/karnataka/pradeep-eshwar-karnatakas-neet-coach-turned-mla-and-giant-killer-scores-high/
  2. https://www.amazon.in/Life-beautiful-Pradeep-eshwar/dp/B078Z9VSCW
  3. https://udayavani.com/neet-brochure.pdf