ಪ್ರತಿಪದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರತಿಪದೆ (ಪಾಡ್ಯ, ಪಾಡ್ಯಮಿ, ಪ್ರಥಮಾ) ಎಂಬುವುದು ಹಿಂದೂ ಪಂಚಾಂಗದ ಪಕ್ಷದಲ್ಲಿನ ಮೊದಲ ದಿನವನ್ನು ಸೂಚಿಸುತ್ತದೆ. ಪ್ರತಿ ತಿಂಗಳು ಎರಡು ಪ್ರತಿಪದೆ ದಿನಗಳನ್ನು ಹೊಂದಿರುತ್ತದೆ, ಒಂದು ಶುಕ್ಲಪಕ್ಷದ ಮೊದಲನೆಯ ದಿನ, ಇನ್ನೊಂದು ಕೃಷ್ಣಪಕ್ಷದ ಮೊದಲನೆಯ ದಿನ. ಹಾಗಾಗಿ ಪ್ರತಿಪದೆಯು ಪ್ರತಿ ತಿಂಗಳ ಮೊದಲನೇ ಹಾಗೂ ಹದಿನಾರನೇ ದಿನದಂದು ಬರುತ್ತದೆ.

ಹಬ್ಬಗಳು[ಬದಲಾಯಿಸಿ]

  • ಗುಡಿ ಪಾಡ್ವ, ಇದು ಚೈತ್ರ ಶುಕ್ಲ ಪ್ರತಿಪದೆಗೆ ಮರಾಠಿ ಹೆಸರಾಗಿದೆ. ಇದನ್ನು ಚೈತ್ರಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಇದು ಚಾಂದ್ರ ಸೌರ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭವನ್ನು ಗುರುತಿಸುತ್ತದೆ.
  • ಗೋವರ್ಧನ ಪೂಜೆ, ಒಂದು ಉತ್ತರ ಭಾರತೀಯ ಹಬ್ಬವಾಗಿದ್ದು, ಕಾರ್ತಿಕ ಮಾಸದಲ್ಲಿ ಪ್ರತಿಪದೆಯಂದು ಬರುತ್ತದೆ.
  • ಬಲಿಪಾಡ್ಯಮಿಯು, ಒಂದು ದಕ್ಷಿಣ ಭಾರತೀಯ ಹಾಗೂ ಮಹಾರಾಷ್ಟ್ರದ ಹಬ್ಬವಾಗಿದೆ. ಇದು ಕೂಡ ಕಾರ್ತಿಕಮಾಸದಲ್ಲಿ ಪ್ರತಿಪದೆಯಂದು ಬರುತ್ತದೆ.
  • ಯುಗಾದಿ, ಅಥವಾ ಚೈತ್ರ ಶುದ್ಧ ಪಾಡ್ಯಮಿ. ಇದನ್ನು ಚೈತ್ರಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಇದು ಚಾಂದ್ರ ಸೌರ ಹಿಂದೂ ಶಾಲಿವಾಹನ ಶಕ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭವನ್ನು ಗುರುತಿಸುತ್ತದೆ.