ಪ್ರಖರ್ ಗುಪ್ತ
'ಬಾಲ ಮ್ಯಾಜಿಕ್ ಶೊ ಮಾಂತ್ರಿಕ', ಹಾಗೂ 'ಡಾನ್ಸ್ ಕಲಾಕಾರ', 'ಪ್ರಖರ್ ಗುಪ್ತ', ತನ್ನ ಎಳೆಯ ವಯಸ್ಸಿನಲ್ಲೇ 'ಬಾಲಕರ ರೋಲ್ ಮಾಡೆಲ್,' ಆಗಲಿದ್ದಾನೆ. ಮೂಲತಃ ಉತ್ತರ ಪ್ರದೇಶದ ಫಿರೋಜಾಬಾದ್ ನ ಶಿಕೋಹಾಬಾದ್ ನ ವಾಸಿ, ಪ್ರಖರ್ ಗುಪ್ತ, ಕಾನ್ಪುರದಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದಾನೆ. ಈತ ತನ್ನ ೧೦ ನೇವರ್ಷದ ಪ್ರಾಯದಲ್ಲೇ, ಸುಮಾರು ೨೦೦ ಕ್ಕೂ ಹೆಚ್ಚು ಮ್ಯಾಜಿಕ್ ಶೊ ಹಾಗೂ ನೃತ್ಯ ಪ್ರದರ್ಶನ ಗಳನ್ನು ಕೊಟ್ಟಿರುತ್ತಾನೆ.
ತಂದೆ-ತಾಯಿಗಳು
[ಬದಲಾಯಿಸಿ]ತಂದೆ ’ವಿನೋದ್ ಗುಪ್ತಾ,’ ವೃತ್ತಿಯಲ್ಲಿ ಇಂಜಿನಿಯರ್, ತಾಯಿ, ರಚನಾಗುಪ್ತ. ’ಸ್ವರಾಜ್ ಇಂಡಿಯಾ ಪಬ್ಲಿಕ್ ಸ್ಕೂಲ್ ನಲ್ಲಿ(ಐಸಿಎಸ್ ಇ ಬೋರ್ಡ್), ೭ ನೇ ತರಗತಿಯಲ್ಲಿ, ಕಲಿಯುತ್ತಿರುವ ಪ್ರಖರ್ ಗುಪ್ತ, ’ಮ್ಯಾಜಿಕ್ ಶೊ', ಜೊತೆಗೆ, 'ಡಾನ್ಸ್' ನ್ನೂ ಅಭ್ಯಾಸಮಾಡುತ್ತಿದ್ದಾನೆ. ತಂದೆ-ತಾಯಿಯರು, ವಿದ್ಯಾಭ್ಯಾಸಕ್ಕೆಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಜೊತೆಗೆ ತಮ್ಮ ಮಗನ ಪ್ರೀತಿಯ ಹವ್ಯಾಸಗಳನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾಭ್ಯಾಸದಲ್ಲಿ ಚುರುಕಾಗಿರುವ ಪ್ರಖರ್ ಗುಪ್ತ, ಸರಾಸರಿ, ಶೇ.೮೦% ರಷ್ಟು ಅಂಕಗಳನ್ನು ಗಳಿಸುತ್ತಿದ್ದಾನೆ.
ಪ್ರಥಮ ಪ್ರದರ್ಶನ ಕಾನ್ಪುರದಲ್ಲಿ
[ಬದಲಾಯಿಸಿ]'ಭಯೋತ್ಪಾದಕ ದಾಳಿಗೆ ತುತ್ತಾದ ಜನರ ಸಮೀಪದ ಬಂಧುಗಳಿಗೆ ಧನಸಹಾಯ ಮಾಡುವ ಪರಮೋದ್ದೇಶ'ದಿಂದ 'ಹೆಲ್ಪಿಂಗ್ ಹ್ಯಾಂಡ್ ವೆಲ್ಫೇರ್ ಸೊಸೈಟಿ','ಕಾನ್ಪುರದ ಲಾಲಾ ಲಜ್ಪತ್ರಾಯ್ ಭವನ'ದಲ್ಲಿ ಆಯೋಜಿಸಿದ್ದ ಪ್ರದರ್ಶನಕ್ಕೆ ಸ್ಥಳೀಯ ಜನರ ಪ್ರಚಂಡ ಬೆಂಬಲ ದೊರಕಿತು. 'ಪ್ರಖರ್ ಗುಪ್ತ,' ತನ್ನ ಮೊಟ್ಟಮೊದಲ ಪ್ರದರ್ಶನದಲ್ಲೇ,'ಟ್ರೋಫಿ'ಗೆದ್ದು ತನ್ನ ಕೌಶಲ್ಯವನ್ನು ಖಚಿತಪಡಿಸಿಕೊಂಡ ಉತ್ಸಾಹ ಮರೆಯಲಾರದ್ದೆಂದು ನೆನೆಸಿಕೊಳ್ಳುತ್ತಾನೆ. ಬಾಲ್ಯದಲ್ಲಿ ಅವನ ಒಲವು 'ಡಾನ್ಸ್'ನತ್ತ ಇದ್ದನ್ನು ಕಂಡು, ತಂದೆತಾಯಿಯರು, ಅದರಲ್ಲಿ ಪರಿಶ್ರಮಗೊಳ್ಳಲು ಪ್ರೇರೇಪಿಸಿದರು. ಸ್ಥಳೀಯ ಮ್ಯಾಜಿಕ್ ಮಾಂತ್ರಿಕ, 'ಅಬ್ದುಲ್ ಜಬ್ಬಾರ್' ಪ್ರದರ್ಶಿಸಿದ ಮ್ಯಾಜಿಕ್ ತಂತ್ರಗಳು ಬಾಲ ಪ್ರಖರ್ ಗುಪ್ತ ನಲ್ಲಿ ಹುದುಗಿದ್ದ ಚೇತನವನ್ನು ಜಾಗೃತಗೊಳಿಸಿತು. 'ಪ್ರಖರ್ ಗುಪ್ತ' ಅವರನ್ನೇ ಗುರುವಾಗಿ ಸ್ವೀಕರಿಸಿ, ಅವರಿಂದ ವಿದ್ಯೆ-ಕಲಿತು, ಕಾನ್ಪುರದಲ್ಲಿ ಕೊಟ್ಟ ಮೊದಲ ಪ್ರದರ್ಶನ ಜನರ ಮೆಚ್ಚುಗೆಗಳಿಸಿದ್ದಲ್ಲದೆ, 'ಟ್ರೋಫಿ'ಯನ್ನು ತಮ್ಮದಾಗಿರಿಸಿಕೊಂಡ ಅನುಭವ ಅನನ್ಯವಾದದ್ದು.
ಪ್ರಶಸ್ತಿಗಳ ಸಂಖ್ಯೆ
[ಬದಲಾಯಿಸಿ]೧೦ ವರ್ಷದ ಚಿಕ್ಕ ಬಾಲಕ, ಈತನಕ ಗಳಿಸಿರುವ ಟ್ರೋಫಿಗಳು, ಹಾಗೂ ಸ್ಮರಣಿಕೆಗಳು, ಒಟ್ಟು, ೧೬೨. ಬಾಲಪ್ರತಿಭೆಯನ್ನು ಶ್ಲಾಘಿಸಿದವರು ಹಲವರು. ಅವರಲ್ಲಿ ಪ್ರಮುಖರು, ಬಾಲಿವುಡ್ ನಟ, 'ರಝ ಮುರಾದ್', ಕಲ್ಲಿದ್ದಲು ಸಚಿವ, 'ಪ್ರಕಾಶ್ ಜೈಸ್ವಾಲ್', ಸುಪ್ರಸಿದ್ಧ ಕಮೆಡಿಯನ್, 'ರಾಜುಶ್ರಿವಾಸ್ತವ್', ಝೀ ಸರೆಗಮದ 'ವಿನಿತ ಸಿಂಗ್', ಲಿಟಲ್ ಚಾಂಪಿಯನ್, 'ಹೇಮಂತ್ ಬ್ರಿಜ್ವಾಸಿ', ಲೇಖನಗಳು 'ಟೈಮ್ಸ್ ಆಫ್ ಇಂಡಿಯ' ಮತ್ತು 'ದೈನಿಕ್ ಜಾಗರಣ್', ಮೊದಲಾದ 'ದಿನಪತ್ರಿಕೆ' ಗಳಲ್ಲಿ ಪ್ರಕಟಗೊಂಡಿವೆ.
ಟೆಲಿವಿಶನ್ ಚಾನಲ್ ನಲ್ಲೂ 'ಮ್ಯಾಜಿಕ್ ಶೊ' ಪ್ರಸಾರವಾಗುವ ಸಾಧ್ಯತೆಗಳಿವೆ
[ಬದಲಾಯಿಸಿ]ಬಾಲ ಪ್ರತಿಭೆಗಳಿಗೆ ಸಹಜವಾಗಿ, ಇಂದಿನ ದಿನಗಳಲ್ಲಿ ಮಂಚವನ್ನು ಒದಗಿಸುತ್ತಿರುವ ಹಲವಾರು ಟೆಲಿವಿಶನ್ ಚಾನೆಲ್ ಗಳಿವೆ. ಅವುಗಳಲ್ಲಿ ಒಂದು ಚಾನೆಲ್ ಪ್ರಖರ್ ಗುಪ್ತನ ಕೈಚಳಕ ಮತ್ತು ನೃತ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಸಮಯ ಒದಗಿಬಂದಾಗ ಅವು ಮಂಚದಮೇಲೆ ಪ್ರದರ್ಶನಕಾಣುವ ಸಾಧ್ಯತೆಗಳಿವೆ.