ವಿಷಯಕ್ಕೆ ಹೋಗು

ಪೌಲ್ ಡಿ ಬೊಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Paul D. Boyer- 1997 ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಡಿ ಬಾಯರ್ (ಜುಲೈ 31, 1918 – ಜೂನ್ 2, 2018) ನೊಬೆಲ್ ಪ್ರಶಸ್ತಿ-1997.

ಪೌಲ್ ಡಿ ಬೊಯರ್ ಅಮೆರಿಕಾದ ಜೀವರಸಾಯನಶಾಸ್ತ್ರಜ್ಞ ಹಾಗೂ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರಜ್ಞ.

ಬೊಯರ್ ಅವರು ಜುಲೈ ೩೧,೧೯೧೮ರಲ್ಲಿ ಯುನೈಟೆಡ್ ಸ್ಟೇಟ್ಸ್ನ ಪ್ರೊವೊದಲ್ಲಿ ಜನಿಸಿದರು. ಇವರು ಕ್ಯಾಲಿಫೋರ್ನಿಯ ಹಾಗೂ ಲಾಸ್ ಏಂಜಲೀಸ್ನ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇವರು 1997ರಲ್ಲಿ ಜಾನ್ ಇ ಅವರ ಜೊತೆಗೆ ಮಾಡಿದ "ಇಂಜಿನಿಯಂ ಮೆಕ್ಯಾನಿಸಂ ಆಫ್ ಎಡೆನೋಸಿನ್ ಟ್ರೈಫಾಸ್ಫೇಟ್ (ಎಟಿಪಿ)" ಸಂಶೋಧನೆಗಾಗಿ, ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದು ಹಂಚಿಕೊಂಡರು. 2003 ರಲ್ಲಿ ಅವರು ಹ್ಯೂಮನಿಸ್ಟಿಕ್ ಮ್ಯಾನಿಫೆಸ್ಟೋಗೆ ಸಹಿ ಮಾಡಿದ 22 ನೊಬೆಲ್ ಪ್ರಶಸ್ತಿ ವಿಜೇತರುಗಳಲ್ಲಿ ಒಬ್ಬರಾಗಿದ್ದರು. 1959ರಿಂದ1960ರವರೆಗೆ,ಅಮೇರಿಕನ್ ಕೆಮಿಕಲ್ ಸೊಸೈಟಿಯ (ಎಸಿಎಸ್) ಬಯೋಕೆಮಿಸ್ಟ್ರಿ ವಿಭಾಗದ ಅಧ್ಯಕ್ಷರಾಗಿ ಮತ್ತು 1969ರಿಂದ-1970ರವರೆಗೆ ಅಮೆರಿಕಾದ ಸೊಸೈಟಿ ಆಫ್ ಬಯೊಲಾಜಿಕಲ್ ಕೆಮಿಸ್ಟ್ಸ್ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1965ರಲ್ಲಿ ಅವರು ಮಾಲಿಕ್ಯೂಲರ್ ಬಯಾಲಜಿ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ನಿರ್ದೇಶಕರಾದರು. 1981 ರಲ್ಲಿ ಅವರು ಯುಸಿಎಲ್ಎನಲ್ಲಿ ರಿಸರ್ಚ್ ಲೆಕ್ಚರರ್ ಆಗಿ ಸೇವೆಸಲ್ಲಿಸಿದರು.[]

ಪ್ರಶಸ್ತಿಗಳು

[ಬದಲಾಯಿಸಿ]

ಬೊಯೆರ್ ಜೂನ್ 2, 2018 ರಲ್ಲಿ ,ತಮ್ಮ 99 ನೆಯ ವಯಸ್ಸಿನಲ್ಲಿ,ಲಾಸ್ ಏಂಜಲೀಸ್ನಲ್ಲಿ ಉಸಿರಾಟದ ವಿಫಲತೆಯಿಂದಾಗಿ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. https://www.britannica.com/biography/Paul-D-Boyer
  2. http://newsroom.ucla.edu/stories/in-memoriam:-paul-boyer-99-nobel-laureate-in-chemistry
  3. https://www.chemistryworld.com/news/nobel-chemist-paul-boyer-dies-aged-99/3009121.article