ಪೌಲೊ ಕೊಹಿಲೊ
Paulo Coelho | |
---|---|
ಜನನ | Rio de Janeiro, ಬ್ರೆಜಿಲ್ | ಆಗಸ್ಟ್ ೨೪, ೧೯೪೭
ವೃತ್ತಿ | Novelist, lyricist, musician |
ಭಾಷೆ | Portuguese |
ರಾಷ್ಟ್ರೀಯತೆ | Brazilian |
ಪ್ರಕಾರ/ಶೈಲಿ | Drama, Self-improvement, Psychology |
ಪ್ರಮುಖ ಕೆಲಸ(ಗಳು) | The Alchemist , Brida |
ಪ್ರಭಾವಗಳು |
ಜನನ: ಆಗಸ್ಟ್ 24, 1947 (೨೪/೦೮/೧೯೪೭) (66ವರ್ಷ)
ಜನ್ಮಸ್ಥಳ: ರಿಯೋ ಡಿಜನೈರೋ, ಬ್ರೆಜಿಲ್
ವೃತ್ತಿ : ಸಾಹಿತಿ, ಕಾದಂಬರಿಕಾರ, ಕವಿ,ಚಿತ್ರಸಾಹಿತಿ
ಪೌಲೊ ಕೊಹಿಲೊPaulo coelho ಬ್ರೆಜಿಲ್ ಮೂಲದ ಪೋರ್ಚುಗೀಸ್, ಸ್ಪಾನಿಷ್ ಹಾಗೂ ಆಂಗ್ಲ ಭಾಷೆಗಳ ವಿಶ್ವಪ್ರಸಿದ್ಧ ಸಾಹಿತಿ, ಇವರು ಬ್ರೆಜಿಲ್ ದೇಶದ ರಿಯೋಡಿಜನೈರೋ ನಗರದಲ್ಲಿ (೨೪/೦೮/೧೯೪೭) ರಲ್ಲಿ ಜನಿಸಿದರು. ಪೌಲೊ ಕೊಹಿಲೊ ವಿಶ್ವದ ಆತ್ಯಂತ ಜನಪ್ರಿಯ ಸಾಹಿತಿಗಳಲೊಬ್ಬರು.
ಬಾಲ್ಯ
ಪೌಲೊ ಕೊಹಿಲೊರವರು ಬಾಲ್ಯದಲ್ಲಿ ಸದಾ ಅನ್ಯಮನಸ್ಕರಾಗಿದ್ದು ಪೋಷಕರಿಗೆ ತಲೆನೋವಾಗಿದ್ದರು, ಇವರಿಂದ ಬೇಸತ್ತಿದ್ದ ಪೋಷಕರು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದರು, ೨೦ವರ್ಷಗಳ ತರುವಾಯ ಅಲ್ಲಿಂದ ಬಿಡುಗಡೆಗೊಂಡ ಪೌಲೊ, ಹಿಪ್ಪಿಗಳಡೆಗೆ ಆಕರ್ಷಿತರಾಗಿದ್ದರು, ೧೯೬೫ರಿಂದ ೧೯೭೪ರವರೆಗೆ ಚಿತ್ರಗೀತೆಗಳನ್ನು ಬರೆಯುವುದರ ಮೂಲಕ ಪ್ರಸಿದ್ಧರಾಗಿದ್ದರು.
ವೃತ್ತಿ ಜೀವನ
೧೯೭೪ರಲ್ಲಿ ಬ್ರೆಜಿಲ್ ನ ಮಿಲಿಟರಿ ಸರಕಾರವು ಸಂಶಯಾಸ್ಪದ ಕಾರಣಗಳಿಗೆ ಇವರನ್ನು ಬಂಧಿಸಿತ್ತು. ೧೯೮೨ರಲ್ಲಿ ಪೌಲೊ ಕೊಹಿಲೊರ ಮೊದಲ ಕೃತಿ ಹೆಲ್ ಆರ್ಚೀಸ್ ಬಿಡುಗಡೆಯಾಯಿತು,ಇದು ಓದುಗರ ಗಮನಸೆಳೆಯುವಲ್ಲಿ ವಿಫಲವಾಯಿತು, ೧೯೮೬ರಲ್ಲಿ ತಮ್ಮ ಜೀವನಾನುಭವಗಳಿಂದ ಆಧಾರಿತವಾದ ದಿ ಪಿಲ್ಗ್ರಿಮೇಜ್ ಹಾಗೂ ದಿ ಅಲ್ ಕೆಮಿಸ್ಟ್ ಅನ್ನು ಬರೆದ ಪೌಲೊ ಅಪಾರ ಜನಮನ್ನಣೆಗಳಿಸಿದರು.
ಪ್ರಮುಖ ಕೃತಿಗಳು
ದಿ ಆಲ್ ಕೆಮಿಸ್ಟ್ ಪೌಲೊ ಕೊಹಿಲೊರವರ ಅತ್ಯಂತ ಪ್ರಸಿದ್ದ ಕೃತಿಯಾಗಿದ್ದು ಸುಮಾರು ೮೦ ಭಾಷೆಗಳಿಗೆ ಅನುವಾದಗೊಂಡಿದ್ದು , ಸುಮಾರು ೧೫೦ ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿದೆ.
ವೆರೋನಿಕಾ ಡಿಸೈಡ್ಸ್ ಟು ಡೈ, ಬ್ರಿಡಾ, ಇಲೆವನ್ ಮಿನಿಟ್ಸ್, ದಿ ಝಹೀರ್, ದಿ ಡೆವಿಲ್ ಅಂಡ್ ಮಿಸ್ ಪ‌್ಯಮ್ರಾ, ದಿ ವಲ್ಕರಿಯಸ್, ದಿ ಫಿಫ್ತ್ ಮೌಂಟೇನ್ , ಆಂಡ್ ದಿ ವಿನ್ನರ್ ಸ್ಟ್ಯಾಂಡ್ಸ್ ಅಲೋನ್, ಬೈ ದಿ ರಿವರ್ ಪೈಡ್ರಾ ಐ ಸ್ಯಾಟ್ ಡೌನ್ ಅಂಡ್ ವೆಪ್ಟ್, ಮನುಸ್ಕ್ರಿಪ್ಟ್ ಫೌಂಡ್ ಇನ್ ಆಕ್ರಾ ಇವು ಪೌಲೊ ಕೊಹಿಲೊರವರ ಇತರ ಕೃತಿಗಳು, ಅಡಲ್ಟರಿ ಎಂಬ ಪುಸ್ತಕವು ಅಗಸ್ಟ್ ೨೦೧೪ರಲ್ಲಿ ಸ್ಪಾನಿಷ್ ಹಾಗೂ ಆಂಗ್ಲ ಅವೃತ್ತಿಗಳಲ್ಲಿ ಬಿಡುಗಡೆಯಾಗಿದೆ, ಇದೀಗ ಎರಡು ವರ್ಷಗಳ ನಂತರ (೨೦೧೬) ಖ್ಯಾತ ಗೂಢಚಾರಿಣಿ ಮಾತಾ ಹರಿ ಯ ಜೀವನ ಕುರಿತಾದ ಇ ಸ್ಪಿಯಾ (ದಿ ಸ್ಪೈ ಆಂಗ್ಲಭಾಷೆಯಲ್ಲಿ)ಕಾದಂಬರಿಯನ್ನು ಬರೆದಿದ್ದಾರೆ,ಇದರ ಪೋರ್ಚುಗೀಸ್ ಅವೃತ್ತಿ ಸೆಪ್ಟಂಬರ್ ೨೦೧೬ರಲ್ಲಿ , ಸ್ಪ್ಯಾನಿಷ್ ಮತ್ತು ಇಂಗ್ಲೀಷ್ ಅವೃತ್ತಿ ಕ್ರಮವಾಗಿ ನವೆಂಬರ್ ಮತ್ತು ಡಿಸೆಂಬರ್ ೨೦೧೬ರಲ್ಲಿ ಬಿಡುಗಡೆಯಾಗಲಿದೆ