ಪುಸ್ತಕದ ರಕ್ಷಾಕವಚ

ವಿಕಿಪೀಡಿಯ ಇಂದ
Jump to navigation Jump to search

ಪುಸ್ತಕದ ರಕ್ಷಾಕವಚ ಎಂದರೆ ಒಂದು ಪುಸ್ತಕದ ಪುಟಗಳನ್ನು ಒಟ್ಟಾಗಿ ಕಟ್ಟಲು ಬಳಸಲಾದ ಯಾವುದೇ ರಕ್ಷಣಾತ್ಮಕ ಹೊದಿಕೆ. ಗಟ್ಟಿರಟ್ಟುಗಳು ಮತ್ತು ಕಾಗದಕವಚಗಳ ನಡುವಿನ ಪರಿಚಿತ ವ್ಯತ್ಯಾಸವನ್ನು ಮೀರಿ, ಮತ್ತಷ್ಟು ಪರ್ಯಾಯಗಳು ಮತ್ತು ಸೇರ್ಪಡಿಕೆಗಳಿವೆ, ಉದಾಹರಣೆಗೆ ಧೂಳು ಹೊದಿಕೆಗಳು, ಉಂಗುರ ರಟ್ಟು ಮತ್ತು ಹತ್ತೊಂಭತ್ತನೇ ಶತಮಾನದ ಪೇಪರ್-ಬೋರ್ಡ್ ಹಾಗೂ ಕೈರಟ್ಟಿನ ಸಾಂಪ್ರದಾಯಿಕ ಪ್ರಕಾರಗಳಂತಹ ಹೆಚ್ಚು ಹಳೆಯ ರೂಪಗಳು.

ಇತಿಹಾಸ[ಬದಲಾಯಿಸಿ]

ಹತ್ತೊಂಭತ್ತನೇ ಶತಮಾನದ ಮೊದಲಾರ್ಧಕ್ಕಿಂತ ಮೊದಲು, ಪುಸ್ತಕಗಳನ್ನು ಕೈಯಿಂದ ಕಟ್ಟಲಾಗುತ್ತಿತ್ತು, ಐಷಾರಾಮಿ ಮಧ್ಯಕಾಲೀನ ಹಸ್ತಪ್ರತಿಗಳ ವಿಷಯದಲ್ಲಿ ಚಿನ್ನ, ಬೆಳ್ಳಿ ಮತ್ತು ರತ್ನಗಳಂತಹ ವಸ್ತುಗಳನ್ನು ಬಳಸಲಾಗುತ್ತಿತ್ತು. ನೂರಾರು ವರ್ಷಗಳವರೆಗೆ, ಪುಸ್ತಕದ ರಕ್ಷಾಹೊದಿಕೆಗಳು ದುಬಾರಿಯಾಗಿ ಮುದ್ರಿತ ಅಥವಾ ಕೈಯಿಂದ ತಯಾರಿಸಿದ ಪುಟಗಳಿಗೆ ರಕ್ಷಣಾತ್ಮಕ ಸಾಧನವಾಗಿ, ಮತ್ತು ಅವುಗಳ ಸಾಂಸ್ಕೃತಿಕ ಅಧಿಕಾರಕ್ಕೆ ಅಲಂಕಾರಿಕ ಮೆಚ್ಚಿಕೆಯಾಗಿ ಕಾರ್ಯನಿರ್ವಹಿಸಿದ್ದವು. ೧೮೨೦ರ ದಶಕದಲ್ಲಿ ಪುಸ್ತಕಕ್ಕೆ ಹೇಗೆ ಹೊದಿಕೆ ನೀಡಬಹುದು ಎಂಬ ಬಗ್ಗೆ ದೊಡ್ಡ ಬದಲಾವಣೆಗಳು ಆಗಲು ಆರಂಭವಾಯಿತು. ಕ್ರಮೇಣವಾಗಿ ಯಾಂತ್ರಿಕ ಪುಸ್ತಕ ಕಟ್ಟುವಿಕೆಗೆ ತಂತ್ರಗಳನ್ನು ಪರಿಚಯಿಸಲಾಯಿತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]