ಪುರುಷರತ್ನ ಲೇಹ

From ವಿಕಿಪೀಡಿಯ
Jump to navigation Jump to search

ಪುರುಷರತ್ನ ಲೇಹ(ಯುನಾನಿ)[edit]

ಧಾತು ಪುಷ್ಟಿ ಮಾಡಿ, ನರಗಳಿಗೆ ಬಲವನ್ನು ನೀಡುತ್ತದೆ. ಇಂದ್ರಿಯವನ್ನು ಧೃಢಗೊಳಿಸಿ, ದೇಹಕ್ಕೆ ಶಕ್ತಿ ಮತ್ತು ಸುಂದರ ವರ್ಣವನ್ನು ಕೊಡುತ್ತದೆ. ಅತಿ ಮೂತ್ರವನ್ನು ಹೋಗಲಾಡಿಸಿ, ಆಯಾಸ, ಸಂಕಟ, ನಿಶ್ಯಕ್ತಿ, ಕಾಲು-ಕೈ ಸೆಳೆತ ವಾಸಿಮಾಡುತ್ತದೆ.

ಪುರುಷರತ್ನಲೇಹ[edit]

ದೇಹ ಪುಷ್ಟಿ, ವೀರ್ಯ ವೃದ್ಧಿ, ಶರೀರಕ್ಕೆ ಕಾಂತಿ ಮತ್ತು ಜೀವನದಲ್ಲಿ ಅತ್ಯಂತ ತೃಪ್ತಿಗಾಗಿ (ಯುನಾನಿ ಔಷಧಿ) ಪುರುಷರತ್ನ 20 ಗ್ರಾಂ ಅಕ್ರೋಟು 30 ಗ್ರಾಂ, ಸೊನಾಮುಖಿ, ಗಸೆಗಸೆ, ಪಿಸ್ತಾ, ಬಾದಾಮಿ, ಲಾಮಂಚ, ಏಲಕ್ಕಿ, ವಂಷಲೋಚನ, ಸಾಲಾಮಿಷ್ರಿ, ಹುಣಸೆ ನಾರು, ನೀರುಕೊಳವಳಿಕೆ ಬೀಜ, ಬಿಳಿ ಗುಲಗಂಜಿ, ಅಶ್ವಗಂಧ, ಜಾಲಿ ಅಂಟು, ದಾಳಿಂಬೆ ಸೊಪ್ಪು, ದೊಡ್ಡತಂಗಡಿ ಚೆಕ್ಕೆ, ಕುಂಕುಮ ಕೇಸರಿ, ತಲಾ 10-10 ಗ್ರಾಂ ಉತ್ತಮವಾದ ಕಸ್ತೂರಿ 20 ಗ್ರಾಂ, ಬೆಳ್ಳಿವರಕು 10ಗ್ರಾಂ, ಇವೆಲ್ಲವನ್ನು ಚೆನ್ನಾಗಿ ಕುಟ್ಟಿ, ಚೂರ್ಣ ಮಾಡಿಕೊಳ್ಳವುದು. ಈ ಚೂರ್ಣಕ್ಕೆ 120 ಗ್ರಾಂ ಹಸುವಿನ ತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ, ಲೇಹ ಮಾಡಿಕೊಳ್ಳುವುದು. ಈ ಲೇಹಕ್ಕೆ 350 ಗ್ರಾಂ ಶುದ್ಧ ಜೇನು ತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ, ಶುÀಭ್ರವಾದ ಮತ್ತು ತೇವವಿಲ್ಲದ ಮಣ್ಣಿನ ಅಥವಾ ಪಿಂಗಾಣಿ, ಜಾಡಿಯಲ್ಲಿ ಹಾಕಿ ಭದ್ರವಾಗಿ ಬಿರಡೆ ಹಾಕುವುದು. ಒಂದು ವಾರ ಬಿಟ್ಟು, ಪ್ರತಿದಿವಸ 2-5 ಗ್ರಾಂ 40 ದಿವಸ ತಿನ್ನುವುದು. ಹುಳಿ, ಚಲ್ದಿ ಪದಾರ್ಥಗಳ ಸೇವನೆ ವರ್ಜಿಸಿ. ಪುಷ್ಟಿಕರವಾದ ಆಹಾರ, ಹಣ್ಣು ಹಂಪಲು, ಸೇವಿಸಿ ನಿರ್ಮಲ ಚಿತ್ತದಿಂದಿರುವುದು. ಈ ಲೇಹದ ಸೇವನೆಯಿಂದ ಅಸಾಧ್ಯ ಶಕ್ತಿ ಪಡೆದು ಸಂತೃಪ್ತಿ ಜೀವನ ನಡೆಸಲು ಸಾಧ್ಯವಾಗುವುದು.