ಪುತ್ರಕಾಮೇಷ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುತ್ರಕಾಮೇಷ್ಟಿ ಒಂದು ಮಗುವನ್ನು ಹೊಂದುವ ಸಲುವಾಗಿ ಹಿಂದೂಧರ್ಮದಲ್ಲಿ ನಡೆಸಲಾಗುವ ಒಂದು ವಿಶೇಷ ಯಜ್ಞ. ಅದು ಒಂದು ಕಾಮ್ಯ ಕರ್ಮ. ರಾಮಾಯಣದಲ್ಲಿ, ವಸಿಷ್ಠ ಋಷಿಯ ಶಿಫಾರಸಿನ ಮೇಲೆ, ಅಯೋಧ್ಯೆಯ ದಶರಥ ರಾಜನು ಯಜುರ್ವೇದದಲ್ಲಿ ನಿಷ್ಣಾತರಾಗಿದ್ದ ಋಷ್ಯಶೃಂಗ ಮುನಿಯ ಮೇಲ್ವಿಚಾರಣೆಯಲ್ಲಿ ಪುತ್ರಕಾಮೇಷ್ಟಿ ಯಜ್ಞವನ್ನು ನೆರವೇರಿಸಿದನು.