ವಿಷಯಕ್ಕೆ ಹೋಗು

ಪುಣೆ ಮೆಟ್ರೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಣೆ ಮೆಟ್ರೋ (ಮರಾಠಿ: पुणे मेट्रो) ಎಂಬುದು ಮೆಟ್ರೋ ರೈಲು ಆಧಾರಿತ ತ್ವರಿತ ಸಾರಿಗೆ ವ್ಯವಸ್ಥೆಯಾಗಿದೆ, ಇದು ಭಾರತದ ಪುಣೆ ನಗರಕ್ಕೆ ಸೇವೆ ಸಲ್ಲಿಸುತ್ತದೆ. ಇದು ರೂ.೧೧೪.೨೦ ಶತಕೋಟಿ (US $ ೧.೭೩ ಶತಕೋಟಿ) ವೆಚ್ಚ ಎಂದು ಅಂದಾಜಿಸಲಾಗಿದೆ. ೨೦೧೬ ರ ಡಿಸೆಂಬರ್ ೭ ರಂದು ಮಹಾರಾಷ್ಟ್ರ ಸರಕಾರ ಈ ಯೋಜನೆಯಲ್ಲಿ ಅನುಮೋದನೆಯನ್ನು ನೀಡಿತು, ಆದರೆ ನಗರ ಅಭಿವೃದ್ಧಿ ಸಚಿವಾಲಯ ಈಗಾಗಲೇ ಈ ಯೋಜನೆಯ ಅನುಮೋದನೆಯನ್ನು ನೀಡಿತ್ತು. ೨೦೧೬ ರ ಡಿಸೆಂಬರ್ ೭ ರಂದು ಕೇಂದ್ರ ಸಚಿವ ಸಂಪುಟವು ಯೋಜನೆಯ ಅನುಮೋದನೆಯನ್ನು ನೀಡಿತು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಿದಾಗ ೨೦೧೬ ರ ಡಿಸೆಂಬರ್ ೨೪ ರಂದು ಅಡಿಪಾಯ ಹಾಕಿದರು. ಯೋಜನೆಯು ೨೦೨೧ ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಮರಾಠಿ:पुणे मेट्रो

ನಕ್ಷೆ

[ಬದಲಾಯಿಸಿ]
Pune Metro route map
Pune Metro route map

ವಿವರಣೆ

[ಬದಲಾಯಿಸಿ]
ಹಂತ ಮಾರ್ಗ ನಿಲ್ದಾಣ ದೂರ

(ಕಿ.ಮಿ)

Opening date
ಮೊದಲನೆ

ಹಂತ

ಮಾರ್ಗ 

ಪಿಂಪರಿ ಸ್ವರ್ಗೇಟ್  ೧೬.೫೯ ೨೦೨೧
ಮಾರ್ಗ

ವನಾಜ್ ರಾಂವಾಡಿ ೧೪.೬೬೫ ೨೦೨೧
ಎರಡನೆ

ಹಂತ

ಮಾರ್ಗ ೩  ಡೆಕ್ಕನ್ ಜಿಂಕಾನ ಬುನ್ದ್ ಗಾರ್ಡನ್ ೧೧ ೨೦೨೧
ಮಾರ್ಗ ೪  ಎ.ಎಸ್.ಐ ಹಿಂಜವಾಡಿ ೧೮ ೨೦೨೧

ಟಿಕೆಟ್ ದರಗಳು

[ಬದಲಾಯಿಸಿ]

ನಿರಿಕ್ಷಿತ ದರಗಳು:-

ಅಂತರ(ಕಿ.ಮಿ) ದರ (ರೂ.)
೨ ರ ವರೆಗೆ
೨-೪ ೧೦
೪-೬ ೧೧
೬-೯ ೧೪
೯-೧೨ ೧೫
೧೨-೧೫ ೧೬
೧೫-೧೮ ೧೭
೧೮-೨೧ ೧೯
೨೧-೨೪ ೨೦
೨೪-೨೭ ೨೧
೨೭-೩೦ ೨೨
೩೦ ಕ್ಕಿಂತ ಅಧಿಕ ೨೩

ಪ್ರಾಜೆಕ್ಟ್ ಸ್ಥಿತಿ

[ಬದಲಾಯಿಸಿ]

ಈ ಯೋಜನೆಯ ಮೊದಲನೆಯ ಹಂತವನ್ನು ೨೦೧೬ ರ ಡಿಸೆಂಬರ್ ೭ ರಂದು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿತು.

ಮಹಾರಾಷ್ಟ್ರ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ಈ ನಗರಕ್ಕೆ ಭೇಟಿ ನೀಡಿದರು ಮತ್ತು ಯೋಜನೆಯನ್ನು ೨೦೧೬ ರ ಡಿಸೆಂಬರ್ ೧೪ ರಂದು ಪ್ರಾರಂಭಿಸಿದರು. ರೈಲ್ವೆ ಮಾರ್ಗ ನಿರ್ಮಾಣದ ಸಮಯದಲ್ಲಿ ನೆಲದ ಮೇಲೆ ಎದುರಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಯೋಜಿತ ಯೋಜನೆಯ ಸೈಟ್ ಸಮೀಕ್ಷೆ ಪ್ರಗತಿಯಲ್ಲಿದೆ.

ಇವುಗಳನ್ನು ಸಹ ನೋಡಿ

[ಬದಲಾಯಿಸಿ]