ವಿಷಯಕ್ಕೆ ಹೋಗು

ಪುಟಾಣಿ ಸಫಾರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಟಾಣಿ ಸಫಾರಿ ರವೀಂದ್ರ ವೆಂಶಿ ನಿರ್ದೇಶಿಸಿದ 2017 ರ ಕನ್ನಡ ಭಾಷೆಯ ಮಕ್ಕಳ ಚಲನಚಿತ್ರವಾಗಿದೆ. ಇದರಲ್ಲಿ ಮಾಸ್ಟರ್ ರಾಕಿನ್, ಮಾಸ್ಟರ್ ರಾಜೀವ್, ಮನೀಶ್, ಸಹನಾಶ್ರೀ, ಕೈಲಾಶ್ ಬೇಬಿ ಮಾನಸ, ಬೇಬಿ ಬೃಂದಾ, ಮಾಸ್ಟರ್ ಭುವನ್ ಹಿರೇಗೌಡರ್, ಸಂತೋಷ್ ದಾವಣಗೆರೆ, ಮಾರ್ತೇಶ್, ಎಂಕೆ ಜಗದೀಶ್, ಹರೀಶ್ ಕುಂದೂರು, ಮಿರ್ಲೆ ಮಂಜು, ಆಲ್ ದಿ ಬೆಸ್ಟ್ ಖಾದರ್, ವಿಜಯ ಹೆಗ್ಗೋಡು ಮತ್ತು ಸುಲೋಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. . ಹಿನ್ನೆಲೆ ಸಂಗೀತವನ್ನು ವೀರ್ ಸಮರ್ಥ್ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಜೀವನ್ ಗೌಡ ಅವರ ಛಾಯಾಗ್ರಹಣವಿದೆ. ಚಲನಚಿತ್ರವನ್ನು ವಿಮರ್ಶಕರು [೧] ಮತ್ತು ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸಿದರು, ಚಲನಚಿತ್ರ ಮತ್ತು ಅದರ ನಟರು ಹೊಗಳಿಕೆ ಗಳಿಸಿದರು, ಹೌಸ್‌ಫುಲ್ ಪ್ರದರ್ಶನಗಳು ನಡೆದು ಇದನ್ನು "ಸೂಪರ್ ಹಿಟ್" ಎಂದು ಘೋಷಿಸಲಾಯಿತು.

ಕಥಾವಸ್ತು

[ಬದಲಾಯಿಸಿ]

ಪುಟಾಣಿ ಸಫಾರಿ ವಿಭಿನ್ನ ಪರಿಸರದಲ್ಲಿ ಬೆಳೆದ ಇಬ್ಬರು ಪುಟ್ಟ ಹುಡುಗರ ಕಥೆಯಾಗಿದೆ. ಇದು ಕಾಡಿನ ಅಪಾಯಗಳನ್ನು ಜಯಿಸಲು ಅವರ ಹೋರಾಟದ ಬಗ್ಗೆ ಇದೆ. ರೋಹಿತನು ನಗರದಲ್ಲಿ ವಾಸಿಸುವ ಮಗು. ಅವನ ಪೋಷಕರು ಅವನಿಗೆ ಎಲ್ಲಾ ಸಂಪತ್ತನ್ನು ಕೊಟ್ಟಿದ್ದು ಅವನು ಎಷ್ಟು ಅದೃಷ್ಟಶಾಲಿ ಎಂದು ಅರಿತುಕೊಳ್ಳಬೇಕೆಂದು ಬಯಸುತ್ತಾರೆ. ರೋಹಿತ್ ಉತ್ತಮ ಶಿಕ್ಷಣ ಪಡೆದು ನಗರದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಕ್ಲಾಸ್ ಟಾಪರ್ ಆಗಬೇಕೆಂಬುದು ರೋಹಿತ್ ಪೋಷಕರ ಆಸೆ. ಆದರೆ ರೋಹಿತ್ ಯಾವಾಗಲೂ ಟಿವಿ ನೋಡುವುದರಲ್ಲಿ ಮತ್ತು ಸ್ನೇಹಿತರೊಂದಿಗೆ ಆಟವಾಡುವುದರಲ್ಲಿರುತ್ತಾನೆ. ಮತ್ತೊಮ್ಮೆ ಕ್ಲಾಸ್ ಟಾಪರ್ ಆದರೆ ಕಾಡು ಪ್ರಾಣಿಗಳ ಸಫಾರಿಗೆ ಕರೆದುಕೊಂಡು ಹೋಗಬೇಕು ಎಂದು ರೋಹಿತ್ ಚೌಕಾಸಿ ಮಾಡುತ್ತಾನೆ.

ಸಿದ್ದೇಶ ಅರಣ್ಯದಲ್ಲಿ ಬುಡಕಟ್ಟಿನಲ್ಲಿ ಜನಿಸಿದ ಮಗು, ಶಾಲೆಗೆ ಹೋಗಬೇಕು ಮತ್ತು ಓದಬೇಕು ಎಂಬ ಮಹತ್ವಾಕಾಂಕ್ಷೆ ಅವನಿಗೆ. ಆದರೆ ಅವನ ಹೆತ್ತವರು ಅವನನ್ನು ನಂಬುವುದಿಲ್ಲ. ಸಿದ್ದೇಶನ ತಾಯಿ ಅವನನ್ನು ಶಾಲೆಯ ಬಳಿ ಪೇರಲ ಮಾರಲು ನಿಮಿತ್ತ ಕಳುಹಿಸುತ್ತಾಳೆ. ವಿದ್ಯಾರ್ಥಿಯೊಬ್ಬನಿಗೆ ಓದಲು ಮತ್ತು ಬರೆಯಲು ಕಲಿಸಲು ಸಿದ್ದೇಶನು ಪೇರಲವನ್ನು ನೀಡುತ್ತಾನೆ. ಅವನ ತಾಯಿ ಅವನ ಸ್ವಂತ ಕಲಿಯುವ ಸಾಮರ್ಥ್ಯವನ್ನು ಗಮನಿಸಿ ಶಾಲೆಗೆ ಸೇರಿಸಲು ಪ್ರಯತ್ನಿಸುತ್ತಾಳೆ. ಆದರೆ ಆಕೆಯ ಪತಿ ಆಕೆಯ ಉಳಿತಾಯವನ್ನು ಕಸಿದುಕೊಂಡು ಕುಡಿತಕ್ಕೆ ಖರ್ಚು ಮಾಡುತ್ತಾನೆ. ಇದನ್ನು ತಿಳಿದ ಬಡ ಸಿದ್ದೇಶ್ ತನ್ನ ಕಣ್ಣೀರನ್ನು ಮರೆಮಾಡಲು ಕಾಡಿಗೆ ಓಡುತ್ತಾನೆ.

ರೋಹಿತ್ ಮತ್ತು ಅವನ ಪೋಷಕರು ಅರಣ್ಯಕ್ಕೆ ಸಫಾರಿಗೆಂದು ಬಂದಾಗ ಒಂದು ಆನೆ ಅವರ ಮೇಲೆ ದಾಳಿ ಮಾಡುತ್ತದೆ. ರೋಹಿತ್ ತನ್ನ ಹೆತ್ತವರಿಂದ ಬೇರ್ಪಟ್ಟು ಪರ್ವತದ ಇಳಿಜಾರಿನಲ್ಲಿ ಬಿದ್ದು, ತಲೆಗೆ ಪೆಟ್ಟಾಗಿ ಎಚ್ಚರ ತಪ್ಪುತ್ತಾನೆ. ಸಿದ್ದೇಶನಿಗೆ ರೋಹಿತ್‌ ಸಿಕ್ಕು ಅವರು ತಮ್ಮ ಸಫಾರಿಯಲ್ಲಿ ಸಾಹಸಗಳನ್ನು ಮಾಡುತ್ತಾರೆ. ಜೀವನವೆಂದರೇನು ಎನ್ನುವುದನ್ನು ಅರಣ್ಯ ದೇವತೆಯೇ ಹೇಳಿಕೊಟ್ಟಂತೆ ಆಗುತ್ತದೆ.

ಪಾತ್ರವರ್ಗ

[ಬದಲಾಯಿಸಿ]
 • ಮಣಿ
 • ಪ್ರತಿಭಾ ಪಾತ್ರದಲ್ಲಿ ಸಹನಾಶ್ರೀ
 • ಡೇರ್ ಡೆವಿಲ್ ಮಾಲಿಂಗ ಪಾತ್ರದಲ್ಲಿ ಕೈಲಾಶ್ ಟಿವಿ
 • ರೋಹಿತ್ ಪಾತ್ರದಲ್ಲಿ ಮಾಸ್ಟರ್ ರಾಜೀವ್ ಪ್ರಥಮ್
 • ಸಿದ್ದೇಶನಾಗಿ ಮಾಸ್ಟರ್ ರಾಕಿನ್ ಕೃಷ್ಣ
 • ಮಾರಪ್ಪನಾಗಿ ಆಲ್ ದಿ ಬೆಸ್ಟ್ ಖದರ್
 • ಮುನಿಯಮ್ಮ ಪಾತ್ರದಲ್ಲಿ ವಿಜಯಾ ನೀನಾಸಂ ಹೆಗ್ಗೋಡು
 • ಕಾಮ್ರೇಡ್ ಹರೀಶ್ ಪಾತ್ರದಲ್ಲಿ ಜಗದೀಶ್ ಎಂ.ಕೆ
 • ಸರೋಜಾ ಪಾತ್ರದಲ್ಲಿ ಸ್ವಾತಿ ಶಿವಮೊಗ್ಗ
 • ಚೈತ್ರ ಪಾತ್ರದಲ್ಲಿ ಬೇಬಿ ಮಾನಸ
 • ವಿಶಾಲಾ ಪಾತ್ರದಲ್ಲಿ ಬೇಬಿ ಬೃಂದಾ
 • ನಿಂಗಮ್ಮನಾಗಿ ಸುಲೋಚನಾ
 • ಮುನಿಯಾಗಿ ಸಂತೋಷ್ ದಾವಣಗೆರೆ
 • ಮಲ್ಯನಾಗಿ ಮಾರ್ತೇಶ್
 • ಮಾದೇವನಾಗಿ ಶಿವಾನಂದ್
 • ಭರಮನಾಗಿ ಮಿರ್ಲೆ ಮಂಜುನಾಥ್
 • ಭರಮನಾಗಿ ವೆಂಕಟೇಶ್ ಬಾಬು

ತಾಂತ್ರಿಕ ಸಿಬ್ಬಂದಿ

[ಬದಲಾಯಿಸಿ]
 • ಛಾಯಾಗ್ರಹಣ: ಜೀವನಗೌಡ
 • ಸಂಗೀತ: ವೀರ್ ಸಮರ್ಥ್
 • ಸಾಹಿತ್ಯ: ಯೋಗರಾಜ್ ಭಟ್
 • ನಿರ್ದೇಶನ ವಿಭಾಗ: ಹರೀಶ್ ರಾಜ್ ಕುಂದೂರು, ರತ್ನತನಯ ಪಾಟೀಲ್, ಮಹೇಶ್ ಕೊರಟಗೆರೆ
 • ಸಂಕಲನ: ಸಿ.ರವಿಚಂದ್ರನ್
 • ಮೇಕಪ್: ಮಾದೇವ
 • ನಿರ್ಮಾಣ ನಿಯಂತ್ರಣ: ಪರಮ ಗುಬ್ಬಿ
 • ಸಹ ನಿರ್ಮಾಪಕರು: ಜಿ.ಮಂಜುನಾಥ, ಎಂ.ಕೆ.ಜಗದೀಶ್
 • ನಿರ್ಮಾಪಕ: ಬಿಎಸ್ ಚಂದ್ರಶೇಖರ್
 • ಲೇಖಕ-ನಿರ್ದೇಶಕ: ರವೀಂದ್ರ ವೆಂಶಿ

ನಿರ್ಮಾಣ

[ಬದಲಾಯಿಸಿ]

ಪ್ರಧಾನ ಛಾಯಾಗ್ರಹಣವು ಸೆಪ್ಟೆಂಬರ್ 2016 ರ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು . ಸ್ಲಂ ದೃಶ್ಯಗಳು, ರೋಹಿತ್ ಅವರ ಬೆಂಗಳೂರು ನಗರದ ದೃಶ್ಯಗಳನ್ನು ಸುಮಾರು ಒಂದು ವಾರದಲ್ಲಿ ಪೂರ್ಣಗೊಳಿಸಲಾಯಿತು ಮತ್ತು ನಂತರ ಒಂದು ವಾರದ ವಿರಾಮದ ನಂತರ, ಎರಡನೇ ಶೆಡ್ಯೂಲ್ ಸಿದ್ದಾಪುರ ಮತ್ತು ಶಿರಸಿಯಲ್ಲಿ 22 ದಿನಗಳ ಕಾಲ ಪ್ರಾರಂಭವಾಯಿತು. ಆ ನಂತರ ಬೆಂಗಳೂರಿನಲ್ಲಿ ಉಳಿದ ಚಿತ್ರೀಕರಣ ಮುಗಿದಿದೆ.

ಹಿನ್ನೆಲೆಸಂಗೀತ

[ಬದಲಾಯಿಸಿ]

ಚಿತ್ರದ ಸಂಗೀತವನ್ನು ವೀರ್ ಸಮರ್ಥ್ ಸಂಯೋಜಿಸಿದ್ದಾರೆ. [೨]

ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರರುಸಮಯ
1."ಬೈತೀರಾ ಬರೀ ಬೈತೀರಾ"ಅರ್ಣವ್ ವೀರ ಸಮರ್ಥ, ಶ್ರೇಯಸ್ ವೀರ ಸಮರ್ಥ, M. R. ನೀಹಾರಿಕಾ, ಸಿರಿ ರಾಮಚಂದ್ರ4:20 minutes

ಉಲ್ಲೇಖಗಳು

[ಬದಲಾಯಿಸಿ]
 1. "Putani Safari(2017)". Prajavani.
 2. "Putani-safari(2017)Kannada Songs". 123Musiq. Archived from the original on 2017-08-05. Retrieved 2021-12-28.

 

ಬಾಹ್ಯ ಕೊಂಡಿಗಳು

[ಬದಲಾಯಿಸಿ]