ಪಿನ್ಟ್ರೆಸ್ಟ್
ಸಂಸ್ಥಾಪಕ(ರು) | Paul Sciarra, Evan Sharp, and Ben Silbermann |
---|---|
ಮುಖ್ಯ ಕಾರ್ಯಾಲಯ | San Francisco, California[೧] |
ಪಿನ್ಟ್ರೆಸ್ಟ್ ಎಂಬುದು ಒಂದು ಫೊಟೊ ಹಂಚಿಕೆ ಮಾಡುವ ವೆಬ್‌ಸೈಟ್ ಅನ್ನು ನಡೆಸುವ ಒಂದು ವೆಬ್ ಮತ್ತು ಮೊಬೈಲ್
ಅಪ್ಲಿಕೇಶನ್ ಕಂಪನಿ. ಈ ವೆಬ್‌ಸೈಟ್ ಅನ್ನು ಉಪಯೊಗಿಸಲು ದಾಖಲು ಮಾಡಬೇಕು. ಈ ಸೈಟ್ ಸ್ಠಾಪಿಸಿದವರು. ಬೆನ್ ಸಿಲ್ಬೆರ್ಮಾನ್,ಪಾಲ್ ಸ್ಕಿಯಾರ ಮತ್ತು ಇವೆನ್ ಶಾರ್ಪ್.
ಉಪಯೊಗಗಳು
[ಬದಲಾಯಿಸಿ]ಪಿನ್ಟ್ರೆಸ್ಟ್ ಉಚಿತ ವೆಬ್‌ಸೈಟ್, ಆದರೆ ಅದನ್ನು ಉಪಯೊಗಿಸಲು ದಾಖಲು ಮಾಡಬೇಕು. ಬಳೆಕೆದಾರರು ಚಿತ್ರಗಳನ್ನು ಮತ್ತು ಇತರ ಮಾಧ್ಯಮ ವಿಷಯಗಳನ್ನು (ವಿಡಿಯೊಗಳು) 'ಪಿನ್ ಬೊರ್ಡ್ಸ್' ಎಂದು ಕರೆಯಲು ಪಡುವ ಸಂಗ್ರಹಣೆಗಳಲ್ಲಿ ಅಪ್ಲೋಡ್ ಮಾಡಬಹುದು. ಈ ಚಿತ್ರಗಳನ್ನು 'ಪಿನ್ಸ್' ಎಂದು ಕರೆಯುತ್ತಾರೆ. ಬಳೆಕೆದಾರರು ವೈಯಕ್ತಿಕ ಪಿನ್ಸ್ ಗಳನ್ನು 'ಪಿನ್ ಇಟ್' ಬಟನ್ ಮೂಲಕ ತಮ್ಮ ಬೊರ್ಡ್ಸ್ ಗಳಲ್ಲಿ ಉಳಿಸಬಹುದು. ಬಳಕೆದಾರರು ಹೊಸ ಬೋರ್ಡ್ಸ್ ಸೃಷ್ಟಿಸಬಹುದು ಮತ್ತು ಇತರ ಬಳೆಕೆದಾರರೊಂದಿಗೆ ಸಂಭಾಷಣೆ ಮಾಡಬಹುದು. ಇದರ ಮೂಲಕ ಪ್ರತಿಯೋಂದು 'ಪಿನ್ ಫ಼್ಹೀಡ್' ವೈಯಕ್ತಿಕ ಮತ್ತು ವಿಶೇಷವಾಗಿದೆ. 'ಪಿನ್ ಇಟ್' ಬಟನ್ ಮೂಲಕ ಪಿನ್ಟ್ರೆಸ್ಟ್ ನಲ್ಲಿ ಇಲ್ಲದ ವಿಷಯಗಳನ್ನು ಸಹ ಅಪ್ಲೋಡ್ ಮಾಡಬಹುದು. 'ಸೆಂಡ್' ಬಟನ್ ಮೂಲಕ ಇತರ ಪಿನ್ಟ್ರೆಸ್ಟ್ ಬಳೆಕೆದಾರರಿಗೆ ಮತ್ತು ಇಮೇಲ್ ಖಾತೆಗಳಿಗು ಕಳಿಸಬಹುದು. ಆರಂಭದಲ್ಲಿ ದಾಖಲೆ ಮಾಡಾಬೇಕಾದರೆ ಮುಂಚೆಯ ದಾಖಲೆ ಮಾಡಿದ ತಮ್ಮ ಗೆಳೆಯರಿಂದ ಆಮಂತ್ರಣವನ್ನು ಪಡೆಯಬೇಕಾಗಿತ್ತು. ಅಥವಾ ಅವರು ಆಮಂತ್ರಣವನ್ನು ಪಡೆಯಲು ಪಿನ್ಟ್ರೆಸ್ಟ್ ವೆಬ್‌ಸೈಟ್ ರವರಿಗೆ ವಿನಂತಿ ಮಾಡಬೇಕಾಗಿತ್ತು. ದಾಖಲೆಯನ್ನು ಫೇಸ್ಬುಕ್ ಅಥವಾ ಟ್ವಿಟರ್ ಪ್ರೊಫೈಲ್ ಹೊಂದಿಗೆ ಲಿಂಕ್ ಮಾಡುವದರ ಮೂಲಕ ಕೂಡ ಸೃಷ್ಟಿಸಬಹುದು. ಪಿನ್ಟ್ರೆಸ್ಟ್ ವಿಷಯಗಳನ್ನು ಅವರು ಉತ್ಪಾದಿಸುವುದಿಲ್ಲ, ಇವರು ವಿಷಯಗಳನ್ನು ಕಂಪೈಲ್ ಮಾಡಿ ಬಳೆಕೆದಾರರಿಗೆ ಒಂದೆ ಸ್ಥಳದಲ್ಲಿ ದೊರೆಯುತ್ತದೆ.
ವ್ಯಾಪಾರ ಪುಟಗಳು
[ಬದಲಾಯಿಸಿ]ವ್ಯಪಾರಗಲು ತಮ್ಮ ಪುಟಗಳನ್ನು ಪಿನ್ಟ್ರೆಸ್ಟ್ ಅಲ್ಲಿ ಸೃಷ್ಟಿಸಿ ಮತ್ತು ಅದರ ಮೂಲಕ ತಮ್ಮ ವ್ಯಪಾರವನ್ನು ಪ್ರಚಾರ ಮಾಡಲು ಅವಕಾಶ ನೀಡಿದೆ. ಬಳಕೆದಾರರು ಕಂಪನಿಯ ವೆಬ್‌ಸೈಟ್ ಬ್ರೌಸ್ ಮಾಡುವುದರಕಿಂತ ಕಂಪನಿಯ 'ಪಿನ್ ಬೊರ್ಡ್' ಬ್ರೌಸ್ ಮಾಡುತಿದ್ದರು. ಇದರ ಮೂಲಕ ಪ್ರಚಾರ ಮಾಡುತ್ತಿದ್ದ ಕಂಪನಿಗಳ ವಸ್ತುಗಳ ಮಾರಾಟ ಹೆಚ್ಚಾಯಿತು. ವ್ಯಾಪಾರ ಪುಟಗಳಲ್ಲಿ ವಿವಿಧ ಡೇಟಾ, ವಿಷಯಗಳು ಮತ್ತು ವಸ್ತುಗಳ ಬೆಲೆ, ಚಲನಚಿತ್ರಗಳ ರೇಟಿಂಗ್ ಮುಂತಾದ ಮಾಹಿತಿಗಳನ್ನು ಸೇರಿಸಿಕಳ್ಳಬಹುದು.
ಜನಸಂಖ್ಯೆ
[ಬದಲಾಯಿಸಿ]ಜಾಗತಿಕವಾಗಿ, ಮಹಿಳೆಯರಲ್ಲಿ ಅತಿ ಖ್ಯಾತವಾಗಿದೆ. ೨೦೧೨ ರ ಸಮಾಚಾರದ ಪ್ರಕಾರ ಒಟಿನ ಬಳೆಕೆದಾರರಲ್ಲಿ ೮೩% ಮಹಿಳೆಯರಾಗಿದ್ದರು. ಬಳೆಕೆದಾರರ ವಯಸ್ಸು ಗುಂಪು ೩೫-೪೪.
ಇತಿಹಾಸ
[ಬದಲಾಯಿಸಿ]ಈ ವೆಬ್‌ಸೈಟ್ ನ ಅಭಿವೃಧಿ ಡಿಸೆಂಬರ್ ೨೦೦೯ ರಲ್ಲಿ ಶುರುವಾಯಿತು. ವೆಬ್‌ಸೈಟ್ ಬಿಡುಗಡೆಯಾಗಿ ೯ ತಿಂಗಳಲ್ಲಿ ೧೦,೦೦೦ ಬಳಕೆದಾರರು ಇದ್ದರು. ಸಿಲ್ಬೆರ್ಮಾನ್ ಮತ್ತು ಕೆಲವು ಪ್ರೋಗ್ರಾಮರ್ಗಳು ೨೦೧೧ ರ ತಂಕ ಒಂದು ಚಿಕ್ಕ ಅಪಾರ್ಟ್ಮೆಂಟ್ ರಿಂದ ಕಾರ್ಯ ನಡೆಸುತ್ತಿದ್ದರು. ೨೦೧೧ ಮಾರ್ಚ್ ರಲ್ಲಿ ಐಫೋನ್ ಆಪ್ ಬಿಡುಗಡೆಯ ಮೂಲಕ ಡೌನ್ಲೋಡ್ ಹೆಚ್ಚಾಗಿದೆ. ೧೬ ಆಗೆಸ್ಟ್ ೨೦೧೧ ರಲ್ಲಿ, ಟೈಮ್ ಪತ್ರಿಕೆಯ '50 Best Websites of 2011'[೨] ಪಟ್ಟಿಯಲ್ಲಿ ಪಿನ್ಟ್ರೆಟ್ ಸೇರಿತು. 'ಇಟ್ ವೈಸ್ ಡೇಟಾ' ಪ್ರಕಾರ ಡಿಸೆಂಬರ್ ೨೦೧೧ರಲ್ಲಿ, ಟಾಪ್ ೧೦ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಯಿತು, ಒಂದು ವಾರದಲ್ಲಿ ೧೧ ಮಿಲಿಯನ್ ಜನ ವೆಬ್‌ಸೈಟ್ ಗೆ ಭೇಟಿ ನೀಡಿದರು.[೩] ಜಾನುವೆರಿ ೨೦೧೨ ರಲ್ಲಿ, 'ಕಾಮ್ ಸ್ಕೋರ್' ಪ್ರಕಾರ ೧೧.೭ ಮಿಲಿಯನ್ ಬಳಕೆದಾರರು ಇದ್ದರು.
ಕಾನೂನು ಸ್ಧಿತಿ
[ಬದಲಾಯಿಸಿ]ಫೆಬ್ರವರಿ ೨೦೧೨ರಲ್ಲಿ,ಛಾಯಾಗ್ರಾಹಕರು ಮತ್ತು ವಕೀಲರಾದ ಕರ್ಸ್ಟನ್ ಕೊವಲ್ಸ್ಕಿರವರು ಕೃತಿಸ್ವಾಮ್ಯ ವ್ಯಾಖ್ಯಾನ ಸಂಬಂಧಿಸಿದ ಒಂದು ಬ್ಲಾಗ್ ಬರೆದರು ಮತ್ತು ಈ ಸಂಸ್ಥೆಯೂ ಕಾನೂನಿನ ನೀತಿ-ನಿಯಮಗಳನ್ನು ಪಾಲಿಸುತ್ತದೆ.ಈ ಪೋಸ್ಟು ಪಿನ್ಟ್ರಸ್ಟ ಸಂಸ್ಥೆಯ ಕಾನೂನು ಸ್ಥಿತಿಗೆ ಕೊಡುಗೆ ತಂದುಕೊಟ್ಟಿದೆ.ಫೆಬ್ರವರಿ ೨೦೧೨ರಲ್ಲಿ,ಮೆಟಾ ಟ್ಯಾಗ್ ಎಂಬುದನ್ನು ಪಿನ್ಟ್ರಸ್ಟ್ ಸಂಸ್ಥೆಯು ಬಿಡುಗಡೆ ಮಾಡಿತು.ಮೆಟಾ ಟ್ಯಾಗಿನ ಉಪಯೋಗವೇನೆಂದರೆ ವೆಬ್‌ಸೈಟ್‌ಗೆ ಸೇರಿಸುವ ಮುನ್ನ ಆಯ್ಕೆ ಮಾಡುವ ಅವಕಾಶ ಕೊಡುತ್ತದೆ.
೨೦೦೯ ಪಿಂಟರೆಸ್ಟ್ ಸಂಸ್ಥೆಯನ್ನು ಸ್ತಾಪಿಸಲಾಯಿತು. ಈ ಸಂಸ್ಥೆಯನ್ನು ಸ್ಥಾಪಿಸಿದವರು ಬೆನ್ ಸಿಲ್ವೆರ್ ಮೆನ್ನ್. ಇವನ್ ಶಾರ್ಪ್ ಮತ್ತು ಪಾಲ್ ಸ್ಕಿಯಾರ.ಈ ಸಂಸ್ಥೆಯ ಮೊದಲ ಮಾದರಿಯನ್ನು ಮಾರ್ಚ್ ೨೦೧೦ರಲ್ಲಿ ಬಿಡುಗಡೆ ಮಾಡಲಾಯಿತು.ಈ ಮಾದರಿಯು ಸಹ ಉದ್ಯೋಗಿಗಳಿಗೆ ಮತ್ತು ಕುಟುಂಬಗಳಿಗೆ ಪರಿಚಯಿಸಲಾಯಿತು.ಈ ಸಂಸ್ಥೆಗೆ ಬಹಳಷ್ಟು ಹೂಡಿಕೆದಾರರು ಸಹಾಯವನ್ನು ಮಾಡಿದರು.ಫ಼ರ್ಸ್ಟ್ ಮಾರ್ಕ್ ಕ್ಯಾಪಿಟಲ್,ಜ್ಯಾಕ್ ಅಬ್ರಹಾಂ,ಮೈಕೆಲ್ ಬಿರ್ಬ್,ಸ್ಕಾಟ್ ಶಾನ್ ಫಿಶರ್,ಕೆವಿನ್ ಮತ್ತು ಹಾರ್ಟಿ,ಬ್ರಿಯಾನ್ ಎಸ್ ಕೊಹೆನ್, ಮೊದಲಾದವರು ಪಿನ್ಟ್ರೆಸ್ಟ್ ಸಂಸ್ಥೆಗೆ ಹೂಡಿಕೆಯನ್ನು ಮಾಡಿದರು. ಇವರ ಸಹಾಯದಿಂದ ಕಂಪನಿಯ ಬೆಳವಣೆಗೆಗೆ ಸಹಾಯವಾಯಿತು.ಆರಭದಲ್ಲಿ ಈ ಸಂಸ್ಥೆಯೂ ಸೋಲನ್ನು ಕಂಡರು,ನಂತರ ಹಲವಾರು ಗೆಲುವನ್ನು ಕಂಡಿತು.ಜನರಿಗೆ ಈ ಸಂಸ್ಥೆಯ ಮೇಲೆ ನಂಬಿಕೆ ಮತ್ತು ಮೂಡಿತು. ಈ ಸಂಸ್ಥೆಯಿಂದ ಹಲವಾರು ಜನರಿಗೆ ಉದ್ಯೋಗ ದೊರಕಿತು.ರಾಜ್ಯದ ಹಾಗೂ ದೇಶದ ನಿರುದ್ಯೋಗ ತೊಂದರೆಗೆ,ಈ ಸಂಸ್ಥೆಯು ಸಣ್ಣ ಪ್ರಮಾಣದಲ್ಲಿ ಸಹಾಯಮಾಡಿತು. ಈ ಸಂಸ್ಥೆಯ ಮುಕಾಂತರ ಹಲವಾರು ಚಿಲ್ಲರೆ ವ್ಯಾಪಾರಿಗಳು ಜಾಹೀರಾತನ್ನು ವ್ಯಕ್ತಪಡಿಸಿದರು.ಪಿನ್ಟ್ರೆಸ್ಟ್ ಕಂಪನಿಯ ಮುಖಾಂತರ ಹಲವಾರು ಗ್ರಾಹಕರಿಗೆ ಬಹಳಷ್ಟು ಉಪಯೋಗವಾಯಿತು.೨೦೧೨ರ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಿನ್ಟ್ರೆಸ್ಟ್ ಸಂಸ್ಥೆಯು ಮುಖ್ಯವಾದ ಪಾತ್ರವನ್ನು ಹೊಂದಿತ್ತು.ಜೂನ್ ೨೦೧೫ರಲ್ಲಿ, ಪಿನ್ಟ್ರೆಸ್ಟ್ ತನ್ನ ಮೊಬೈಲ್ ಅಪ್ಲಿಕೇಶನಲ್ಲಿ "ಖರೀದಿ" ಎಂಬ ಗುಂಡಿಯನ್ನು ಸೇರಿಸಿತು.
ಪ್ರಶಸ್ತಿಗಳು
[ಬದಲಾಯಿಸಿ]೨೦೧೧ರಲ್ಲಿ,ಪಿನ್ಟ್ರೆಸ್ಟ್ ಸಂಸ್ಥೆಯು ಅತ್ಯುತ್ತಮ "ಹೊಸ ಆರಂಭಿಕ ಕಂಪನಿ" ಎಂಬ ಬಿರುದನ್ನು ಪಡೆಸಿತು.೨೦೧೨ರ ವೆಬ್ಬಿ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಮತ್ತು ದೃಶ್ಯ ವಿನ್ಯಾಸ್ ಪ್ರಶಸ್ತಿಗಳನ್ನು ಪಡೆದಿದೆ.ಹೀಗೆ ಹಲವಾರು ಪ್ರಶಸ್ತಿಗಳನ್ನು ಈ ಸಂಸ್ಥೆಯೂ ಪಡೆದಿದೆ.
ತಾಂತ್ರಿಕ
[ಬದಲಾಯಿಸಿ]ಪಿನ್ಟ್ರೆಸ್ಟ್ ಜಾಂಗೊ ಎಂಬ ವೆಬ್ ಅಪ್ಲಿಕೆಷನ್ ಫ್ರೇಮ್ ವರ್ಕ್ ಸಹಾಯದ ಮೂಲಕ ಬರೆಯಲಾಗಿದೆ. ಇದು ಪೈಥಾನ್ ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನು ಉಪಯೋಗಿಸುತ್ತದೆ.