ಪಿಟೀಲು ವೆಂಕಟಗಿರಿಯಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೯೨೨-೨೦೧೩)

'ವಿದ್ವಾನ್. ವೆಂಕಟಗಿರಿಯಪ್ಪ' ನವರು, ಒಬ್ಬ ಅತ್ಯುತ್ತಮ ಪಿಟೀಲು ವಾದಕ. ಸುಮಾರು ೭ ದಶಕಗಳ ಕಾಲ ಪಿಟೀಲು ನುಡಿಸುವ ಮೂಲಕ ಕೇಳುಗರ ಮನಗೆದ್ದ ವ್ಯಕ್ತಿ ವಾದನ ನಿಪುಣ, ಸಂಗೀತವನ್ನು ಚೆನ್ನಾಗಿ ಅಭ್ಯಾಸ ಮಾಡಿದರೂ ಅವರಿಗೆ ಪಕ್ಕವಾದ್ಯಗಳನ್ನು ನುಡಿಸುದರಲ್ಲಿ ಅತಿ ಆಸಕ್ತಿಯಿತ್ತು ಕರ್ನಾಟಕ ಶಾಸ್ತ್ರಿಯ ಸಂಗೀತ ಶೈಲಿಯ ಪಿಟೀಲು ವಾದನದಲ್ಲಿ ನಿಷ್ಣಾತರು. ಹಳೆಯ ತಲೆಮಾರಿನ ಕರ್ನಾಟಕ ಸಂಗೀತ ಪ್ರಿಯರಿಗೆ ಪಿಟೀಲು ವಾದಕ, ಎಂ. ವೆಂಕಟಗಿರಿಯಪ್ಪ ಅವರ ಹೆಸರು ಚಿರಪರಿಚಿತ. ಆಕಾಶವಾಣಿ ಕಲಾವಿದ ಪಕ್ಕವಾದ್ಯಗಳಲ್ಲಿ ಮೇರು ಕಲಾವಿದರಿಗೆ 'ಸಾಥ್‌' ನೀಡುವುದರಲ್ಲಿಯೇ ಹೆಚ್ಚು ತೃಪ್ತಿ ಕಂಡ ಅವರು ಆಕಾಶವಾಣಿ ಕಲಾವಿದರಾಗಿಯೂ ಗಮನಾರ್ಹ ಸೇವೆಸಲ್ಲಿದ್ದಾರೆ.

ಬಾಲ್ಯ, ಹಾಗು ಮನೆಯ ಪರಿಸರ[ಬದಲಾಯಿಸಿ]

೧೯೨೨ ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವೆಂಕಟಗಿರಿಯಪ್ಪ ನವರ ತಂದೆ, 'ಸಿ. ಮುನಿಯಪ್ಪ', ಭಜನೆ ಮತ್ತು ಕೀರ್ತನೆಗಳನ್ನು ಹಾಡುತ್ತಿದ್ದರು. ಹತ್ತರ ಹರೆಯದಲ್ಲಿಯೇ ಪಿಟೀಲು ಹಿಡಿದವರು. ಬೆಂಗಳೂರಿನವರು ಮನೆಯಲ್ಲೇ ಸಂಗಿತಮಯ ವಾತಾವರಣ ವಿತ್ತು. ಕರ್ನಟಕ ಸಂಗೀತವನ್ನು ಶಿಸ್ತುಬದ್ಧವಾಗಿ ಸೋದರಮಾವ, 'ನಂಜುಂಡಯ್ಯ' ನವರ ಬಳಿ ಕಲಿತರು. ಮುನಿಸ್ವಾಮಿ ಶೆಟ್ಟಿ, ವಿದ್ವಾನ್ ಪಿ. ಭುವನೇಶ್ವರಯ್ಯ , ಮೊದಲಾದ ಹಿರಿಯ ಕಲಾವಿದರ ಬಳಿ ಪಿಟೀಲು ವಾದನ ತರಪೇತಿಗಳಿಸಿ, ಉತ್ತಮ ಕಲಾವಿದರಾಗಿ ರೂಪುಗೊಂಡರು. ೮ ನೆ ತರಗತಿಯ ವರೆಗೆ ಓದಿದ್ದರು. ಸಂಗೀತಕ್ಕೆ ಮನಸೋತರು ೪ ಮಕ್ಕಳು ಸಂಗೀತದಲ್ಲಿ ಸಾಧನೆಮಾಡಿ ಹಲವಾರು ವೇದಿಕೆಗಳಲ್ಲಿ ತಮ್ಮ ಸಂಗೀತ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ.

ಪಕ್ಕವಾದ್ಯದಲ್ಲಿ ಆಸಕ್ತ[ಬದಲಾಯಿಸಿ]

ಪಕ್ಕವಾಧ್ಯ ನುಡಿಸುವುದು ಬಹಳ ಪ್ರಿಯವಾಗಿತ್ತು. ಅದರಲ್ಲೇ ಹೆಸರುಮಾಡಿದರು. ಟಿ. ಆರ್ ಮಹಾಲಿಂಗಂ, ಚಿಂತನಪಲ್ಲಿ ರಾಮಚಂದ್ರರಾವ್,ಪಲ್ಲವಿ ಚಂದ್ರಪ್ಪ, ಪಿ. ಭುವನೆಶ್ವರಯ್ಯ, ಹೊನ್ನಪ್ಪ ಭಾಗವತರ್, ದೇಶಿಕಾಚಾರ್,ಮುಂತಾದ ಮೇರು ಕಲಾಕಾರರ ಸಂಗೀತಕ್ಕೆ ಪಿಟೀಲು ಪಕ್ಕವಾದ್ಯ ನುಡಿಸಿ ಹೆಸರಾದರು. ನೃತ್ಯಪಟುಗಳಾಗಿದ್ದ 'ಯು. ಆರ್. ಕೃಷ್ಣರಾವ್', 'ಉಷಾ ದಾತಾರ್', ನೃತ್ಯಗಳಿಗೆ ಪಿಟೀಲು ನುಡಿಸಿದರು. ೭೦ ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಅಪರೂಪದ ವಾದ್ಯ ಪ್ರವೀಣ, ಪಿಟೀಲು ಅವರಿಗೆ ಬಲು ಪ್ರಿಯವಾಯಿತು. ಕೋಲಾರ, ಮೈಸೂರು ಬಳ್ಳಾರಿ, ರಾಯಚೂರು, ಶಿವಮೊಗ್ಗ,ಚಿಕ್ಕಬಳ್ಳಾಪುರ ತುಮಕೂರು ಶೃಂಗೇರಿ ಧರ್ಮ ಸ್ಥಳ, ನಂಜನಗೂಡು, ಮೇಲುಕೋಟೆ ತಿರುಪತಿ, ತಮಿಳು ನಾಡು, ಆಂಧ್ರ ಪ್ರದೇಶ, ಚೆನ್ನೈ, ಕೇರಳ, ದೆಹಲಿ ಮುಂಬಯಿ, ಕಲ್ಕತ್ತದಲ್ಲಿ ಸಿಂಗಪುರ, ಮಲೇಶಿಯ,ಹಾಂಕಾಂಗ್, ಕೌಲಾಲಾಂಪುರ, ಪ್ಯಾರಿಸ್, ನಗರಗಳಲ್ಲಿ ಜರುಗಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಹಲವು ಶಿಷ್ಯರು[ಬದಲಾಯಿಸಿ]

ಮೃದು ಮಾತಿನ, ಸಂಕೋಚ ಸ್ವಭಾವದ ವೆಂಕಟಗಿರಿಯಪ್ಪ ೮೦ ರ ಹರೆಯದಲ್ಲೂ ಶಿಷ್ಯರಿಗೆ ವಯಲಿನ್ ವಾದ್ಯದ ಪಾಠವನ್ನು ಹೇಳಿಕೊಡುತ್ತಿದ್ದರು. ಸಂಗೀತ ಕಛೇರಿಗಳನ್ನು ನೋಡಲು ಅದೇ ಉತ್ಸಾಹದೊಂದಿಗೆ ತೆರಳುತ್ತಿದ್ದರು. ಅವರ ಶಿಷ್ಯರಲ್ಲಿ ಪ್ರಮುಖರಾಗಿರುವ, ಸಿ. ರಾಮದಾಸ, ಕಾಂಭೋಜಿ, ಎಮ್. ಆನಂದ್, ಕಾಶಿನಾಥ್ ಮೊದಲಾದವರು ಉನ್ನತ ಸಾಧನೆ ಮಾಡಿ, ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಹೆಸರುಮಾಡಿದ್ದಾರೆ.

ಪ್ರಶಸ್ತಿ, ಬಿರುದುಗಳು[ಬದಲಾಯಿಸಿ]

  • ಸೋಸಲೆ ವಾದಿರಾಜ ಮಠದಿಂದ 'ವಾದನ ಕಲಾ ನಿಪುಣ'
  • ಚಿಂತಾಮಣಿ ಗಾಯನ ಸಮಾಜ, 'ನಾದ ಚಿಂತಾಮಣಿ' ಬಿರುದು,
  • ಬೆಂಗಳೂರಿನ ಪ್ರತಿಷ್ಥಿತ ಗಾಯನ ಸಮಾಜದ ೩೨ ನೆಯ ಸಂಗೀತ ಸಮ್ಮೇಳನ ದಲ್ಲಿ ವರ್ಷದ ಕಲಾವಿದ ಸನ್ಮಾನಿತರು
  • ಪ್ರತಿಷ್ಥಿತ 'ಕರ್ನಾಟಕ ಕಲಾಶ್ರಿ'

ಮರಣ[ಬದಲಾಯಿಸಿ]

ವಿದ್ವಾನ್. ವೆಂಕಟಗಿರಿಯಪ್ಪನವರು, ಎಂದೂ ಪ್ರಚಾರ ಬಯಸದ, ಮುಖ್ಯವಾಹಿನಿಯಲ್ಲಿ ಮಿಂಚಿದವರೂ ಅಲ್ಲ . ತಮ್ಮ ೯೧ ರ ವಯಸ್ಸಿನಲ್ಲಿ ಅವರು, ೨೦೧೩ ರ, ಅಕ್ಟೋಬರ್, ೧೭ ರಂದು ನಿಧನರಾದರು.