ವಿಷಯಕ್ಕೆ ಹೋಗು

ಪಿಂಡಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಿಂಡಾರಿಗಳು ೧೭ ರಿಂದ ೧೯ನೇ ಶತಮಾನದ ಪೂರ್ವಾರ್ಧದಲ್ಲಿ ಭಾರತೀಯ ಉಪಖಂಡದಲ್ಲಿದ್ದ ಮುಸ್ಲಿಮ್ ಧರ್ಮದ ಅಕ್ರಮ ಸೇನಾ ಲೂಟಿಕೋರರು ಮತ್ತು ಅನ್ವೇಷಕರು. ಆರಂಭದಲ್ಲಿ, ಇವರು ಮೊಘಲ್ ಸೇನೆ, ನಂತರ ಮರಾಠಾ ಸೇನೆಯ ಜೊತೆಗಿದ್ದರು. ಅಂತಿಮವಾಗಿ ಇವರು ಸ್ವತಂತ್ರವಾಗಿ ಇದ್ದರು ಮತ್ತು ೧೮೧೭-೧೮ರ ಪಿಂಡಾರಿ ಯುದ್ಧದಲ್ಲಿ ಹೊರದೂಡಲ್ಪಟ್ಟರು.[೧] ಅವರು ವೇತನರಹಿತರಾಗಿದ್ದರು ಮತ್ತು ಯುದ್ಧದಲ್ಲಿ ಲೂಟಿಮಾಡಿದ ವಸ್ತುಗಳೇ ಅವರ ಸಂಪೂರ್ಣ ವೇತನವಾಗಿತ್ತು. ಇವರು ಕುದುರೆ ಸವಾರರು, ಪದಾತಿ ದಳಗಳಾಗಿದ್ದು, ಭಾಗಶಃ ಶಸ್ತ್ರಸಜ್ಜಿತರಾಗಿರುತ್ತಿದ್ದರು. ಇವರು ತಾವು ಜೊತೆಗೂಡಿದ್ದ ಸೇನೆಗೆ ಲಾಭವಾಗಲು ಅವ್ಯವಸ್ಥೆ ಸೃಷ್ಟಿಸುವುದು ಮತ್ತು ಶತ್ರು ಸ್ಥಾನಗಳ ಬಗ್ಗೆ ಸುದ್ದಿ ಒದಗಿಸುತ್ತಿದ್ದರು. ಇವರ ಬಗ್ಗೆ ಅತ್ಯಂತ ಮುಂಚಿನ ಉಲ್ಲೇಖ ಔರಂಗಜೇಬ್‍ನ ದಖ್ಖನದ ದಂಡಯಾತ್ರೆಯಲ್ಲಿ ಕಂಡುಬರುತ್ತದೆ, ಆದರೆ ಮೊಘಲ್ ಸಾಮ್ರಾಜ್ಯದ ವಿರುದ್ಧ ಮರಾಠರ ಸಶಸ್ತ್ರ ಕಾರ್ಯಾಚರಣೆಯೊಂದಿಗೆ ಅವರ ಪಾತ್ರ ವಿಸ್ತರಿಸಿತು. ಶತ್ರು ಪ್ರಾಂತ್ಯಗಳಲ್ಲಿ ಅವರ ಕ್ಷಿಪ್ರ ಮತ್ತು ಅವ್ಯವಸ್ಥಿತ ನುಗ್ಗುವಿಕೆಯನ್ನು ಪರಿಗಣಿಸಿದರೆ, ಅವರು ಶತ್ರುಗಳ ವಿರುದ್ಧ ಬಹಳ ಪರಿಣಾಮಕಾರಿಯಾಗಿದ್ದರು ಎಂದು ಹೇಳಬಹುದು. ಆದರೆ ಮಿತ್ರಸೇನೆಗಳ ವಿರುದ್ಧವೂ ಬಹಳ ಗಂಭೀರ ದುರ್ಬಳಕೆಗಳನ್ನು ಮಾಡಿದರು, ಉದಾಹರಣೆಗೆ ೧೭೯೧ರಲ್ಲಿನ ಶೃಂಗೇರಿ ಶಾರದಾಪೀಠದ ಮೇಲಿನ ದಾಳಿ.

ಉಲ್ಲೇಖಗಳು

[ಬದಲಾಯಿಸಿ]
  1. Pindari: Indian History, Encyclopaedia Britannica

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಪಿಂಡಾರಿ&oldid=1197348" ಇಂದ ಪಡೆಯಲ್ಪಟ್ಟಿದೆ