ಪಾಲ್ ಯೊಹಾನ್ ಲುಡ್ವಿಗ್ ವಾನ್ ಹೇಯ್ಸ್
ವಾನ್ ಹೇಯ್ಸ್ ಅವರ ಚಿತ್ರ | |
ಜನನ: | |
---|---|
ಜನನ ಸ್ಥಳ: | ಬೆರ್ಲಿನ್, ಜರ್ಮನಿ |
ನಿಧನ: | April 2, 1914 | (aged 84)
ವೃತ್ತಿ: | ಸಾಹಿತಿ |
ರಾಷ್ಟ್ರೀಯತೆ: | ಜರ್ಮನಿ |
ಪ್ರಶಸ್ತಿಗಳು: | ಸಾಹಿತ್ಯದ ನೊಬೆಲ್ ಪ್ರಶಸ್ತಿ (1910) |
ಪಾಲ್ ಯೊಹಾನ್ ಲುಡ್ವಿಗ್ ವಾನ್ ಹೇಯ್ಸ್
(೧೮೩೦-೧೯೧೪)
ಜರ್ಮನಿಯ ಸುಪ್ರಸಿದ್ಧ ಕಾದಂಬರಿಕಾರ. ಗಯಟೆಯ ನಂತರ ಜರ್ಮನಿಯು ಕಂಡ ಮಹಾನ್ ಸಾಹಿತಿ, ಹಾಗೂ ಬಹುಮುಖ ಪ್ರತಿಭೆಯ ಸಾಹಿತಿಯೆಂದರೆ, 'ಪಾಲ್ ವಾನ್ ಹೇಯ್ಸ್,' ಎಂದು ವಿಶೇಷಜ್ಞರ ಅಭಿಮತ. ಇವರ ತಂದೆ ಪ್ರೊಫೆಸರ್ ಆಗಿದ್ದರು.
'ಪಾಲ್ ಯೊಹಾನ್ ಲುಡ್ವಿಗ್ ವಾನ್ ಹೇಯ್ಸ್' ರವರು, ಪ್ರತಿಪಾದಿಸಿದ ನಿಲುವು
[ಬದಲಾಯಿಸಿ]೧೯೧೦ ರ 'ನೋಬೆಲ್ ಪ್ರಶಸ್ತಿ ವಿಜೇತ, ' ಕಿಂಡರ್ ಡರ್ ವೆಲ್ಟ್' (ಜಗತ್ತಿನ ಮಕ್ಕಳು) ಎಂಬ ಪ್ರಸಿದ್ಧಕೃತಿಯನ್ನು ರಚಿಸಿದ್ದಾರೆ. ಹಲವಾರು ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ. 'ಪಾಲ್ ಹೇಯ್ಸ್' ಸುಮಾರು ೬೦ ನಾಟಕಗಳನ್ನು ನೂರಾರು ಕವಿತೆಗಳನ್ನೂ ಇಟ್ಯಾಲಿಯನ್ ಭಾಷೆಯಿಂದ ಜರ್ಮನ್ ಭಾಷೆಗೆ ಅನುವಾದಿಸಿ, ಅವನ್ನು ಪ್ರಕಟಿಸಿದ್ದಾರೆ. 'ಪಾಲ್ ಹಾಯ್ಸ್' ನೋಬೆಲ್ ಪ್ರಶಸ್ತಿದೊರೆತಾಗ ಅವರಿಗೆ ೮೦ ವರ್ಷ ವಯಸ್ಸಾಗಿತ್ತು. 'ಪಾಲ್ ಹೇಯ್ಸ್' ಭಾಷಾ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ದೀರ್ಘಕಾಲ ಇಟಲಿದೇಶದಲ್ಲಿ ಪ್ರವಾಸಿಯಾಗಿ ಉಳಿದಿದ್ದರು. ೧೮೫೪ ರಲ್ಲಿ 'ಬವೇರಿಯ' ದ ಅರಸರನ್ನು 'ಮ್ಯುನಿಚ್' ಗೆ ಕರೆಸಿದಾಗ 'ಪಾಲ್ ಹೇಯ್ಸ್ ' ರವರಿಗೆ ಉಂಬಳಿಯೊಂದನ್ನು ನೀಡಿ ಗೌರವಿಸಿದ್ದ. ಮುಂದೆ 'ಪಾಲ್ ಹೇಯ್ಸ್' ರು ಇಟಲಿಯಲ್ಲೇ ವಾಸ್ತವ್ಯಹೂಡಿ, ಕೃತಿರಚನೆಮಾಡುತ್ತಾ ಇತರ ಕವಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.
'ಪಾಲ್ ಯೊಹಾನ್ ಲುಡ್ವಿಗ್ ವಾನ್ ಹೇಯ್ಸ್', ರವರ ಸಾಹಿತ್ಯ ದೃಷ್ಟಿಕೋನ
[ಬದಲಾಯಿಸಿ]ತಮ್ಮ ಕಾದಂಬರಿಯ ವಸ್ತು, ರಾಜಕೀಯ ಅಥವಾ ಸಾಮಾಜಿಕ ದೃಷ್ಟಿಳನ್ನು ಬಿಟ್ಟು, ಪ್ರಾಕೃತಿಕ ಮತ್ತು ನೈತಿಕ ಅಂಶಗಳಿಗೆ ಒತ್ತುಕೊಡಬೇಕೆಂದು ಸಾರಿಹೇಳಿದರು. ಮನುಷ್ಯ ಸಮಾಜದ ಅಂಗಗಳಿಂದ ಕಡಿವಾಣಕ್ಕೊಳಗಾಗದೆ ಪ್ರಕೃತಿ ಒಪ್ಪಿಸಿಕೊಂಡ ಸ್ವತಂತ್ರ್ಯ ಚೇತನನಾಗಬೇಕು ಇನ್ನುವುದೇ ' ಪಾಲ್ ಹೇಯ್ಸ್ ' ರವರ ನಿಲುವಾಗಿತ್ತು. ಈ ತತ್ವ ಅವರ ಸುಪ್ರಸಿದ್ಧ ಕಾದಂಬರಿ, ' ಕಿಂಡರ್ ಡರ್ ವೆಲ್ಟ್' [ಜಗತ್ತಿನ ಮಕ್ಕಳು]ಯಲ್ಲಿ, ' ಪ್ರತಿಬಿಂಬಿತವಾಗಿದೆ. ಅವರು ಬರೆದ ೧೨೦ ಕಿರು-ಕಾದಂಬರಿಗಳಲ್ಲೂ ಇದೇ ಸಿದ್ಧಾಂತ ವ್ಯಕ್ತವಾಗಿದೆ.
ಇಂದಿನ ಓದುಗರ ಆಸಕ್ತಿಗಳು
[ಬದಲಾಯಿಸಿ]ಜಗತ್ತಿನ ಜನ ಈಗ, ಅವರು ರಚಿಸಿದ 'ಜಗತ್ತಿನ ಮಕ್ಕಳು', ಮತ್ತು ಅವರು ರಚಿಸಿದ ಬೆರೆಳೆಣಿಕೆಯ ಕೆಲವು ಕಾದಂಬರಿಗಳು ಹಾಗೂ ಅನುವಾದಿತ ಕಾದಂಬರಿಗಳನ್ನು ಮಾತ್ರ ಹೆಚ್ಚಾಗಿ ಓದುತ್ತಾರೆ. ಗ್ರಂಥಾಲಯದಲ್ಲಿ ಅಧ್ಯಯನ ಮಾಡುವ, ಅಧ್ಯಯನಶೀಲರು, ವಿಧ್ಯಾರ್ಥಿಗಳು ಮುಂತಾದವರು ಮಾತ್ರ ' ಪಾಲ್ ಹೇಯ್ಸ್ ' ರಚಿತ, ನಾಟಕಗಳು, ಸ್ವಂತ ಕವಿತೆಗಳು, ಮತ್ತು ನೂರಾರು ಕಿರು-ಕಾದಂಬರಿಗಳನ್ನು ಓದುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]